Thursday, 12 December, 2013

ನಿನ್ನ ದೃಷ್ಟಿ ಅರಿತುಕೊಂಡಿದೆ

!!ನಿನ್ನ ದೃಷ್ಟಿ ಅರಿತುಕೊಂಡಿದೆ
ಪ್ರೀತಿಯ ಯೋಗ್ಯ ನಾನೆಂದು
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು!!

!!ಹೌದು ನನಗೆ ಒಪ್ಪಿಗೆಯಿದೆ
ನಿನ್ನ ಈ ನಿರ್ಧಾರ-೨
ಹೇಳುತ್ತಿದೆ ಪ್ರತಿಯೊಂದು ನೋಟ
ಧನ್ಯವಾದ ಸಾಹೇಬರ
ನಗುತ್ತಲೇ ತನ್ನ ಜೀವನದಲಿ
ಸೇರಿಸಿದೆ ನನ್ನನ್ನು ಬಂದು!!
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು
ನಿನ್ನ ದೃಷ್ಟಿ ಅರಿತುಕೊಂಡಿದೆ

!!ನಾನು ನಿನ್ನ ಗಮ್ಯವಾಗಿರುವೆ
ನನ್ನ ಗಮ್ಯ ನೀನಾಗಿರುವೆ-೨
ಯಾಕೆ ನಾನು ಬಿರುಗಾಳಿಗೆ ಹೆದರಲಿ
ನನ್ನ ಕಿನಾರೆ ನೀನಾಗಿರುವೆ
ಯಾರಾದರೂ ಬಿರುಗಾಳಿಗೆ ಹೇಳಲಿ
ನನಗೆ ಕಿನಾರೆ ಸಿಕ್ಕಿದೆಯೆಂದು!!
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು
ನಿನ್ನ ದೃಷ್ಟಿ ಅರಿತುಕೊಂಡಿದೆ

!!ನನ್ನ ಹೃದಯದಕ್ಕೆ ಸೋಕಿದೆ
ಛಾಯೆ ನಿನ್ನ ನೆರಳಿನ -೨
ಎಲ್ಲೆಡೆ ಕೇಳುತ್ತಿದೆ
ನೂರಾರು ಶಹನಾಯಿ ವಾದನ
ಎರಡು ಜಗತ್ತಿನ ಖುಷಿ
ಸಿಕ್ಕಿದೆ ನನಗಿಂದು!!
ನಿನ್ನ ದೃಷ್ಟಿ ಅರಿತುಕೊಂಡಿದೆ
ಪ್ರೀತಿಯ ಯೋಗ್ಯ ನಾನೆಂದು
ಹೃದಯದ ಮಿಡಿತ ನಿಲ್ಲು
ಸಿಕ್ಕಿತು ಗಮ್ಯ ನನಗಿಂದು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಅನ್ ಪಡ್
aapki nazro ne samjha, pyar ke kabil mujhe
dil ki ae dhadkan thaher ja, mil gayi manzil mujhe
aapki nazro ne samjha

ji hame manzoor hai, aapka ye faisla
ji hame manzoor hai, aapka ye faisla
kah rahi hai har nazar, banda-parvar shukriya
hanske apni zindagi me, kar liya shamil mujhe
dil ki ae dhadkan thaher ja, mil gayi manzil mujhe
aapki nazro ne samjha

aapki manzil hun mai, meri manzil aap hai
aapki manzil hun mai, meri manzil aap hai
kyon mai toofa se daru, mera sahil aap hai
koi tufano se kah de, mil gaya sahil mujhe
dil ki ae dhadkan thaher ja, mil gayi manzil mujhe
aapki nazro ne samjha

pad gai dil par mere, aapki parchhaiya
pad gai dil par mere, aapki parchhaiya
har taraf bajne lagi, saikdo shahnaiyaa
do jahaa ki aaj khushiyan, ho gayi haasil mujhe
aapki nazro ne samjha, pyar ke kabil mujhe
dil ki ae dhadkan thaher ja, mil gayi manzil mujhe
aapki nazro ne samjha
http://www.youtube.com/watch?v=5OFXheimGm4

No comments:

Post a Comment