Tuesday, December 17, 2013

ಯಾವುದೇ ಸಾಗರ


!!ಯಾವುದೇ ಸಾಗರ
ಹೃದಯ  ರಂಜಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ
ಯಾವುದೇ ಸಾಗರ
ಹೃದಯ ರಂಜಿಸುವುದಿಲ್ಲ!!

!!ನಾನೊಂದು ಯಾವುದೇ ಕಲ್ಲಲ್ಲ
ಮನುಷ್ಯನಾಗಿದ್ದೇನೆ
ಹೇಗೆ ಹೇಳಲಿ
ಕಷ್ಟದಿಂದ ಹೆದರುವುದಿಲ್ಲ!!
ಯಾವುದೇ ಸಾಗರ
ಹೃದಯ ರಂಜಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

!!ನಿನ್ನೆಯಂದು ಎಲ್ಲರಿದ್ದರೂ
ಪ್ರವಾಸದಲಿ ಒಟ್ಟಿಗೆ
ಇಂದು ಯಾರೂ
ಹಾದಿ ತೋರಿಸುವುದಿಲ್ಲ!!
ಯಾವುದೇ ಸಾಗರ
ಹೃದಯ ರಂಜಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

!!ಜೀವನದ ಕನ್ನಡಿಯನ್ನು
ಮುರಿಯಿರಿ
ಇದರಲ್ಲಿ ಈಗ ಏನೂ
ಕಂಡು ಬರುವುದಿಲ್ಲ!!
ಯಾವುದೇ ಸಾಗರ
ಹೃದಯ ರಂಜಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

ಮೂಲ : ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ನೌಶಾದ್
ಚಿತ್ರ : ದಿಲ್ ದಿಯಾ ದರ್ದ್ ಲಿಯಾ


Koi sagar, dil ko behlata nahin,
Koi sagar, dil ko behlata nahin,
Baykhudi mein bhi, qarar aata nahin,
Koi sagar, dil ko behlata nahin,

Main, koi, pathar nahin,
insaan hoon, Kaise kehdoon,
Ghum se ghabrata nahin,

Koi sagar, dil ko behlata nahin,
Baykhudi mein bhi, qarar aata nahin,

Kal tu sab thhey, karavan ke, saath saath,
Kal tu sab they, karavan ke, saath saath,
Aaj koi, raha dikhlata nahin,

Koi sagar, dil ko behlata nahin,
Baykhudi mein bhi, qarar aata nahin,

Zindagi keh, aainay ko, tod doo,
Zindagi keh, aainay ko, tod doo,
Es mein aab, kuch bhi, nazar aata nahin,

Koi sagar, dil ko behlata nahin,
Baykhudi mein bhi, qarar aata nahin,
Koi sagar, dil ko behlata nahin
http://www.youtube.com/watch?v=4BFWC8Cl1QM

2 comments:

  1. ರಫೀ ಸಾಬ್ ಯಾವಾಗಲೂ ಉತ್ತುಂಗವೇ, ನಿಮ್ಮ ಈ ಭಾವಾನುವಾದ ಓದಿದ ನಂತರ ನನಗೆ ಶ್ರೀಯುತ. ಶಕೀಲ್ ಬದಯೂನ್ವಿ ಅವರ ಇತರ ರಚನೆಗಳನ್ನು ಓದುವ ಬಯಕೆ ತೀವ್ರವಾಯಿತು.

    ಈ ಚಿತ್ರಕ್ಕೆ ದ್ವಾರಕಾ ದಿವೇಚ ಅವರ ಛಾಯಾಗ್ರಹಣವಿತ್ತು.

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...