Thursday, November 28, 2013

ನಾನಿರಲಿ ಇರದಿರಲಿ

!!ನಾನಿರಲಿ ಇರದಿರಲಿ
ಸುಗಂಧ ಬೀರುತ್ತಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!

!!ವಾತಾವರಣ ಯಾವುದೇ ಇರಲಿ
ಈ ಹೂದೋಟದಲಿ
ಆಕರ್ಷಕ ಬಣ್ಣ ತುಂಬುವೆ
ಪ್ರೀತಿಯ ಪರಿಮಳ
ಹೀಗೆಯೇ ಕೇಶದಿಂದ ಹಾರುವುದು
ಶರತ್ಕಾಲ ಅಲ್ಲದೆ ವಸಂತವಿರಲಿ
ಹೀಗೆಯೇ ನಲಿದು ಅರಳುತ್ತಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ......

!!ಮರೆಯಾಗಿರುವೆ ಹೀಗೆ ನಾನು
ಏನು ಮಿಲನ ಏನು ಅಗಲಿಕೆ
ನೆನಪಿಲ್ಲ ನನಗೆ
ಹೃದಯದ ಗಲ್ಲಿಗೆ ಬಂದ ನಂತರ
ಕೇವಲ ಹೃದಯದ ನೆಲ
ನೆನಪಿದೆ ನನಗೆ
ಇದೇ ಭೂಮಿಯಲಿ ನಾನಿರುವೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ......

!!ನಾನಿಲ್ಲದಾಗ
ನನ್ನ ಬೂದಿಯ ಮೇಲೆ
ನೀನು ನಿಲ್ಲುವೆ ನಡೆದಾಡುವಾಗ
ಅಶ್ರುಗಳಿಂದ ತೇವಗೊಂಡಿದ
ಚಂದಿರ ರಾತ್ರಿಯಲಿ
ಒಂದು ದ್ವನಿಯಂತೆ ಕೇಳುವೆ
ನಡೆದಾಡುವಾಗ
ಅಲ್ಲಿ ಎಲ್ಲಿಯೋ
ನಾನು ಸಿಗುವೆ ನಿನಗೆ
ಹೂವ ಮೊಗ್ಗಾಗಿ
ತಂಗಾಳಿಯಾಗಿ
ನಿಷ್ಠೆಯ ಹೂದೋಟದಲಿ!!
ನಾನಿರಲಿ ……

ಮೂಲ : ಮಜರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ರೋಶನ್
ಚಿತ್ರ : ಮಮತಾ
rahe naa rahe ham, mahakaa karege ban ke kali, ban ke sabaa, baage vafaa me mausam koi ho is chaman me rag banake rahege in fizaa me chaahat ki khushabu, yun hi zulfo se udegi, khizaayo yaa bahaare yunhi jhumate, yuhin jhumate aur khilate rahege, ban ke kali ban ke sabaa baage vafaa me rahe naa rahe ham khoye ham aise kyaa hai milanaa kyaa bichhadanaa nahi hai, yaad hamako guche me dil ke jab se aaye sirf dil ki zami hai, yaad hamako isi sarazami, isi sarazami pe ham to rahege, ban ke kali ban ke sabaa baage vafaa me rahe naa rahe ham jab ham na hoge tab hamaari khaak pe tum rukoge chalate chalate ashko se bhigi chaadani me ik sadaa si sunoge chalate chalate vahi pe kahi, vahi pe kahi ham tumase milege, ban ke kali ban ke sabaa baage vafaa me rahe naa rahe ham, mahakaa karege

1 comment:

  1. ಮಜರೂಹ್ ಸುಲ್ತಾನ್ಪುರಿಯವರ ಮೂಲ ಸಾಹಿತ್ಯಕ್ಕೆ ಒಳ್ಳೆಯ ಭಾವಾನುವಾದ.
    "ಹೂವ ಮೊಗ್ಗಾಗಿ
    ತಂಗಾಳಿಯಾಗಿ"

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...