Tuesday, November 26, 2013

ಮನುಷ್ಯ ಏನನ್ನು ಹೇಳುತ್ತಾನೋ

ಕೆಲವೊಮ್ಮೆ ಯೋಚಿಸುತ್ತೇನೆ
ನಾನೇನೋ ಹೇಳಬೇಕೆಂದು
ಕೆಲವೊಮ್ಮೆ ಯೋಚಿಸುತ್ತೇನೆ
ನಾನು ಮೌನವಾಗಿರುವೆಯೆಂದು

!!ಮನುಷ್ಯ ಏನನ್ನು ಹೇಳುತ್ತಾನೋ
ಮನುಷ್ಯ ಏನನ್ನು ಕೇಳುತ್ತಾನೋ
ಜೀವನ ಪರ್ಯಂತ ಆ ಧ್ವನಿ
ಅವನನ್ನು ಹಿಂಬಾಲಿಸುತ್ತದೆ
ಮನುಷ್ಯ ಏನನ್ನು ಕೊಡುತ್ತಾನೋ
ಮನುಷ್ಯ ಏನನ್ನು ತೆಗೆದುಕೊಳ್ಳುತ್ತಾನೋ
ಜೀವನ ಪರ್ಯಂತ ಆ ಪ್ರಾರ್ಥನೆ
ಅವನನ್ನು ಹಿಂಬಾಲಿಸುತ್ತದೆ!!

!!ಯಾವುದೇ ಇರಲಿ
ಎಲ್ಲ ಕನಸು ಸತ್ಯವಾಗಿರುವುದಿಲ್ಲ
ಅತಿ ಪ್ರೇಮ ಎಂದೂ ಒಳ್ಳೆಯದಲ್ಲ
ಎಂದಾದರೂ ಕೈ ಬಿಡಬೇಕಾದರೆ ಕಷ್ಟವಾಗುವುದು
ಪ್ರೀತಿಯ ಸಂಬಂಧ ಮುರಿದರೆ
ಪ್ರೀತಿಯ ಹಾದಿ ಮರೆತರೆ
ಹಾದಿಯಲಿ ನಂತರ
ನಿಷ್ಠೆ ಹಿಂಬಾಲಿಸುತ್ತದೆ!!
ಮನುಷ್ಯ ಏನನ್ನು.....

!!ಕೆಲವೊಮ್ಮೆ ಮನಸ್ಸು
ಬಿಸಿಲ ಕಾರಣ ಹಾತೊರೆಯುತ್ತದೆ
ಕೆಲವೊಮ್ಮೆ ನಂತರ
ನಲಿದು ಮಳೆ ಸುರಿಯುತ್ತದೆ
ಒಂದೇ ಕ್ಷಣದಲಿ
ಈ ವಾತಾವರಣ ಬದಲಾಗುವುದು
ದಾಹ ಎಂದೂ ತೀರುದಿಲ್ಲ
ಒಂದು ಹನಿಯೂ ಸಿಗುವುದಿಲ್ಲ
ಮತ್ತೆ ಕೆಲವೊಮ್ಮೆ
ಸುಂದರ ಮೇಘ ಹಿಂಬಾಲಿಸುತ್ತದೆ!!
ಮನುಷ್ಯ ಏನನ್ನು.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೆಲಾಲ್
ಚಿತ್ರ: ಮಜಬೂರ್

कभी सोचता हूँ के मैं कुछ कहू
कभी सोचता हूँ के मैं चूप रहू

आदमी जो कहता हैं, आदमी जो सुनता हैं
जिंदगीभर वो सदाये पीछा करती हैं
आदमी जो देता हैं, आदमी जो लेता हैं
जिंदगीभर वो दुवायें पीछा करती हैं

कोई भी हो हर ख्वाब तो सच्चा नहीं होता
बहोत ज़्यादा प्यार भी अच्छा नहीं होता
कभी दामन छुड़ाना हो तो मुश्किल हो
प्यार के रिश्तें टूटे तो, प्यार के रस्ते छूटे तो
रास्ते में फिर वफ़ायें पीछा करती हैं

कभी कभी मन धूप के कारण तरसता हैं
कभी कभी फिर झूम के सावन बरसता हैं
पलक झपकें यहा मौसम बदल जाये
प्यास कभी मिटती नही, एक बूँद भी मिलती नही
और कभी रिमझिम घटायें पीछा करती हैं
www.youtube.com/watch?v=-ArgZa-UsAM

1 comment:

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...