Thursday, November 21, 2013

ಈ ಕಣಿವೆ ಈ ಪರಿಸರ

ಈ ಕಣಿವೆ ಈ ಪರಿಸರ
ಕರೆಯುತ್ತಿದೆ ನಿನ್ನನ್ನು-೨
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಹಂಬಲಿಸುತ್ತಿದೆ ಅರಳಿದ ಹೂವು
ಅಧರ ಸ್ಪರ್ಶಿಸಲು
ತಂಪು ತಂಪು ತಂಗಾಳಿ
ಕರೆಯುತ್ತಿದೆ ನಿನ್ನನ್ನು
ಮೌನದ  ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ....

ನಿನ್ನ ಕೇಶದಿಂದ
ಸುಗಂಧದ ದಾನ ತೆಗೆದುಕೊಳ್ಳಲು
ತೇಲುವ ಮೇಘಗಳು
ಕರೆಯುತ್ತಿದೆ ನಿನ್ನನ್ನು
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಸುಂದರ ಸುಕೋಮಲ ಪಾದಗಳನ್ನು
ನೋಡಿದ ಕ್ಷಣದಿಂದ
ಝರಿಯ ಮೋಹಕ ಅಂದ
ಕರೆಯುತ್ತಿದೆ ನಿನ್ನನ್ನು
ಮೌನದ  ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ನನ್ನ ಕೇಳಬೇಡ
ಇವರ ಮಾತಾದರೂ ಕೇಳು ನೀನು
ಪ್ರತಿಯೊಂದು ಹೃದಯದ ಹರಕೆ
ಕರೆಯುತ್ತಿದೆ ನಿನ್ನನ್ನು
ಮೌನದ ಧ್ವನಿ
ಕರೆಯುತ್ತಿದೆ ನಿನ್ನನ್ನು
ಈ ಕಣಿವೆ ಈ ಪರಿಸರ.....

ಈ ಕಣಿವೆ ಈ ಪರಿಸರ.....

ಮೂಲ : ಸಾಹಿರ್ ಲುದ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಆಜ್ ಔರ್ ಕಲ್
ये वादियाँ ये फ़िज़ाएं बुला रही हैं तुम्हे \- २
खामोशियों की सदाएं बुला रही हैं तुम्हे 
ये वादियाँ ये फ़िज़ाएँ बुला रही हैं तुम्हे 

तुमहारी ज़ुल्फों से खुशबू की भीख लेने को 
झुकी झुकी सी घटाएं बुला रही हैं तुम्हे 
खामोशियों की सदाएँ ... 

हसीं चम्पाई पैरों को जबसे देखा है 
नदी की मस्त अदाएं बुला रही हैं तुम्हे 
खामोशियों की सदाएँ ... 

मेरा कहा ना सुनो दिल की बात तो सुनलो 
हर एक दिल की दुआएँ बुला रही हैं तुम्हे 
खामोशियों की सदाएं बुला रही हैं तुम्हे 

ये वादियाँ ये फ़िज़ाएँ बुला रही हैं तुम्हे ... 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...