Saturday, 16 November, 2013

ವಿದಾಯ ಸಚಿನ್

ಯಾಕೋ ಮನಸ್ಸಿಂದು 
ತುಂಬಾ ಬೇಸರದಲಿ,
ಇನ್ನು ನೋಡಲಿಕ್ಕೆ 
ಇಲ್ಲ ಅವನ ಆ ಅಪ್ರತಿಮ ಆಟ
ಎಷ್ಟು ಮಹಾನ ಆಟಗಾರ 
ಆದರೆ ಮಾತಲ್ಲಿ 
ಎಷ್ಟೊಂದು ವಿನಯ
ಎಷ್ಟು ಸರಳತೆ 
ಕಣ್ಣಿಂದ ತನ್ನಂತಾನೆ 
ಕಣ್ಣೀರ ಸುರಿಮಳೆ 
ಹನಿ ಹನಿ
ಹನಿ ಹನಿ
ನಿಲ್ಲುವುದೇ ಇಲ್ಲ
ಯಾಕೋ ಹೃದಯ ಭಾರ ಭಾರ
ವಿದಾಯ ಸಚಿನ್
ಜಯ ಜಯ ಕ್ರಿಕೆಟ್ ಆಟ
ಬಾನಬಯಲನೇರಿತಲ್ಲಿ ನೋಡು ಹಾರುತ್ತಿದೆ ನಿನ್ನ ಬಾವುಟ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment