Thursday, October 24, 2013

ದೃಷ್ಟಿ

ಸತ್ಯದ
ಹಾಸಿಗೆಯಲ್ಲಿ
ಮಲಗಿದವ
ಸುಳ್ಳ ಕೆರೆಗೆ
ಹೋಗಿ ಮಿಂದು ಬಂದ
ಕೆರೆಯ ನೀರು ಶುಚಿಯಾಯಿತು
by ಹರೀಶ್ ಶೆಟ್ಟಿ,ಶಿರ್ವ

________________
ನಿನ್ನಲ್ಲಿ ತುಂಬಾ ಅಹಂ
ಎಂದು ಸ್ನೇಹ ತೊರೆದು ನಡೆದ,
ಅಹಂ ತೊರೆದು
ಸ್ನೇಹಕ್ಕಾಗಿ ಪುನಃ ಕೈ ಚಾಚಿದೆ,
ಅವನು ಕೈ ನೀಡಲಿಲ್ಲ,
ನನ್ನಲ್ಲಿದ್ದ ಅಹಂ
ನಾನು ಅವನಲ್ಲಿ ಕಂಡೆ
by ಹರೀಶ್ ಶೆಟ್ಟಿ, ಶಿರ್ವ

_______________
ಹೂಗಳಲ್ಲಿ ಪರಿಮಳವಿತ್ತು
ಅವನಿಗೆ ನೆಗಡಿ
by ಹರೀಶ್ ಶೆಟ್ಟಿ, ಶಿರ್ವ

_______________
ಅವನು ಬುದ್ಧಿಜೀವಿ,
ಗಾಂಭೀರ್ಯ ಅವನ ಒಡವೆ
ಮಾತನ್ನು ತಿರುಚುವುದು
ಅವನ ಜನ್ಮಸಿದ್ಧ ಅಧಿಕಾರ
ವಸ್ತು ವಿಷಯದಲ್ಲಿ ನ್ಯೂನತೆ
ಹುಡುಕುವುದು ಅವನ ಧರ್ಮ
by ಹರೀಶ್ ಶೆಟ್ಟಿ, ಶಿರ್ವ

________________
ದೀಪಾವಳಿಗೆ
ಮನೆ ಸ್ವಚ್ಛಗೊಳಿಸುವಾಗ
ಅಮ್ಮನಿಗೆ ಅವಳ ಪತ್ರದ ಗಂಟು ಸಿಕ್ಕಿತು,
ತೆಗೆದು ಕಸದ ಬುಟ್ಟಿಗೆ ಹಾಕಿದಳು,
ನಾನು ನೋಡಿಯೂ ನೋಡದ ಹಾಗೆ ಮಾಡಿದೆ,
ಅಮ್ಮ ನನ್ನ ಮುಖ ನೋಡಿ
ಅದನ್ನು ಕಸದ ಬುಟ್ಟಿಯಿಂದ ತೆಗೆದು
ಪುನಃ ಗಂಟು ಕಟ್ಟಿದಳು
by ಹರೀಶ್ ಶೆಟ್ಟಿ, ಶಿರ್ವ
   

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...