Tuesday, October 8, 2013

ಅರಿವಿರಲಿ ನಿನಗೆ

ಅರಿವಿರಲಿ ನಿನಗೆ 
ನಾನಿಲ್ಲದಿದ್ದರೂ 
ನಿನಗೆ ಜೀವಿಸಲಿದೆಯೆಂದು 

ಅರಿವಿರಲಿ ನಿನಗೆ 
ನಾನಿಲ್ಲದಿದ್ದರೂ 
ಅಡುಗೆ ಮನೆ ಒಲೆ ಉರಿಯುತ್ತಿರಬೇಕೆಂದು 

ಅರಿವಿರಲಿ ನಿನಗೆ 
ನಾನಿಲ್ಲದಿದ್ದರೂ 
ಈ ಕಪಟ ಪ್ರಪಂಚವನ್ನು ಎದುರಿಸಲಿದೆಯೆಂದು

ಅರಿವಿರಲಿ ನಿನಗೆ
ನಾನಿಲ್ಲದಿದ್ದರೂ
ಮಕ್ಕಳ ಭವಿಷ್ಯ ನಿರ್ಮಿಸಲಿದೆಯೆಂದು

ಅರಿವಿರಲಿ ನಿನಗೆ
ನಾನಿಲ್ಲದಿದ್ದರೂ
ಜೀವನದ ಕಷ್ಟ ಸುಖಗಳನ್ನು ಅನುಭವಿಸಲೆ ಬೇಕೆಂದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...