Saturday, 19 October, 2013

ನಾನೆಂದೂ ದ್ರೋಹ ಬಗೆಯಲಿಲ್ಲ

!!ನಾನೆಂದೂ ದ್ರೋಹ ಬಗೆಯಲಿಲ್ಲ
ಆದರೆ ನನ್ನಿಂದ ನಿಷ್ಠೆ ನಿಭಾಯಿಸಲಾಗಲಿಲ್ಲ 
ನನಗೆ ಸಿಕ್ಕಿತ್ತು ಅದರ ಸಜೆ
ನನ್ನಿಂದೆಂದೂ ಅಂತಹ ತಪ್ಪು ಮಾಡಲಾಗಲಿಲ್ಲ!!

!!ಎಷ್ಟೊಂದು ಒಂಟಿಯಾಗಿತ್ತು ಆ ಹಾದಿ
ನಾನದರಲಿ
ಈ ತನಕ ಒಬ್ಬನೇ ಸಾಗುತ್ತಿದ್ದೆ
ನಿನ್ನಿಂದ ಅಗಲಿ ಸಹ
ಓ ಅರಿವಿಲ್ಲದವಳೇ
ನಿನ್ನದೆ ದುಃಖದಲಿ ಉರಿಯುತ್ತಿದ್ದೆ
ನೀ ಮಾಡಿದ ಆ ಅನ್ಯಾಯ
ನನ್ನಿಂದ ಅಂತಹ ಅಪರಾಧ ಮಾಡಲಾಗಲಿಲ್ಲ!!
ನಾನೆಂದೂ ದ್ರೋಹ ಬಗೆಯಲಿಲ್ಲ.....

!!ನೀನು ನೋಡಿದ್ದು ಕೇಳಿದ್ದು
ಸತ್ಯವಾಗಿತ್ತು ಆದರೆ
ಎಷ್ಟು ಸತ್ಯವಾಗಿತ್ತೆಂದು
ಇದ್ಯಾರಿಗೆ ತಿಳಿದಿದೆ
ನಾನು ನಿನಗೆ ವಂಚಿಸಿದ್ದ
ಅಥವಾ ನೀನೆ ಮೋಸಕ್ಕೊಳಗಾದೆಯೋ
ಈ ಪ್ರೀತಿಯಲಿ ಸತ್ಯ ಸುಳ್ಳಿನ
ನಿನಗೆ ನ್ಯಾಯ ಮಾಡಲಾಗಲಿಲ್ಲ!!
ನಾನೆಂದೂ ದ್ರೋಹ ಬಗೆಯಲಿಲ್ಲ.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಶಾಲಿಮಾರ್

Chorus: Jingala La La Jhum..
kishore: Hum Bewafa Hargiz Na The Par Hum Wafa Kar Na Sake
humko Mili Uski Saza Hum Jo Khata Kar Na Sake
hum Bewafa Hargiz Na The, Par Hum Wafa Kar Na Sake
chorus: Phur.. Phur.. Phuur..


kishore: Kitni Akeli Thin Woh Raahen Hum Jinpe Ab Tak Akele Chalte Rahe
tujhse Bichhad Ke Bhi O Bekhabar Tere Hi Gum Mein Jalte Rahe
tune Kiya Jo Shikwa Hum Woh Gila Kar Na Sake
hum Bewafa Hargiz Na Thhe Par Hum Wafa Kar Na Sake
chorus: Phur.. Phur .. Phur..

kishore: Tumne Jo Dekha Suna Sach Tha Magar, Kitna Tha Sach Yeh Kisko Patah
jaane Tumhe Maine Koi Dhoka Diya Jaane Tumhe Koi Dhoka Hua
is Pyar Mein Sach Jhooth Ka Tum Faisla Kar Na Sake
hum Bewafa Hargiz Na The Par Hum Wafa Kar Na Sake (chorus Sings In Between)
chorus: Jingala La La..phur Phur Phur
www.youtube.com/watch?v=BzX-jM1gufU

2 comments:

  1. ಮತ್ತೊಂದು ಉತ್ತಮ ಭಾವಾನುವಾದ.ಈ ಚಿತ್ರಕ್ಕೆ ಹಾರ್ವೇ ಜೆನ್ಕಿಸ್ ಛಾಯಾಗ್ರಹಣವಿತ್ತು

    ReplyDelete
  2. ತುಂಬಾ ಧನ್ಯವಾದಗಳು ಬದರಿ ಸರ್

    ReplyDelete