Thursday, 31 October, 2013

ಆಚರಿಸುವ ಬನ್ನಿ ದೀಪಾವಳಿ

ಆಚರಿಸುವ ಬನ್ನಿ ದೀಪಾವಳಿ-೨ 
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ 
ಆಚರಿಸುವ ಬನ್ನಿ ದೀಪಾವಳಿ-೨ 
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ 
ದೀಪಾವಳಿ....

ಶ್ರದ್ಧೆಯ ದೀಪ ಭಕ್ತಿಯ ಜ್ಯೋತಿ 
ಸತ್ಯ ಪ್ರೇಮದ ಈ ದೀಪ್ತಿ ಬೆಳಗಲಿ 
ಆಚರಿಸುವ ಬನ್ನಿ ದೀಪಾವಳಿ-೨ 
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ 

ಅಮೃತ ನನ್ನ ಸಾಯಿಯ ವಾಣಿಯಲಿ
ಮರುಳಾದೆ ನಾನು ಸಾಯಿಯ ಧ್ಯಾನದಲಿ
ಪ್ರಾಚಿನ ವೇದದ ಅಸ್ತಿತ್ವ ಈ ದ್ವಾರಕಮಾಯಿಯಲಿ
ಆಚರಿಸುವ ಬನ್ನಿ ದೀಪಾವಳಿ-೨
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ

ಆಚರಿಸುವ ಬನ್ನಿ ದೀಪಾವಳಿ-೨
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ
ಆಚರಿಸುವ ಬನ್ನಿ ದೀಪಾವಳಿ-೨
ಮಾಯೆಯ ನೀರಿದೆ ನನ್ನ ಸಾಯಿಯ ಕೈಯಲ್ಲಿ
ದೀಪಾವಳಿ....

ಮೂಲ/ಸಂಗೀತ : ಪಾಂಡುರಂಗ ದಿಕ್ಷಿತ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಂಸ್ಲೆ
ಚಿತ್ರ : ಶಿರಡಿ ಕೆ ಸಾಯಿಬಾಬಾdipawali manai suhani
dipawali manai suhani
mere saai ke hatho me jadu ka pani
dipawali manai suhani
dipawali manai suhani
mere baba ke hatho me jadu ka pani
dipawali dipawali

shradha ka deepak bhakti ki jyoti
shradha ka deepak bhakti ki jyoti
satya prem ki jalati nishani
satya prem ki jalati nishani
dipawali manai suhani
dipawali manai suhani
mere baba ke hatho me jadu ka pani
dipawali manai suhani
dipawali

mere sai ki amrit wani
mere sai ki amrit wani
mai to bhai re sai ki diwani
mai to bhai re sai ki diwani
dwarka bhai ye ved purani
o dwarka bhai ye ved purani

dipawali manai suhani
dipawali manai suhani
mere saai ke hatho me jadu ka pani
dipawali manai suhani
dipawali manai suhani
mere baba ke hatho me jadu ka pani
dipawali dipawali

ಆಶಾವಾದದ ಹಣತೆ

ಒಂದು 
ಕತ್ತಲ ಜೀವನಕ್ಕೆ 
ನೀನೊಂದು 
ಆಶಾವಾದದ ಹಣತೆಯಾಗು 
by ಹರೀಶ್ ಶೆಟ್ಟಿ,ಶಿರ್ವ

ವಿಪರ್ಯಾಸ

ಗೆಳತಿ...
ವಿಪರ್ಯಾಸ 
ಏನೆಂದರೆ 
ನಿನ್ನನ್ನು ಮರೆಯಬೇಕೆಂದು 
ನಾನು ಮಾಡುವ 
ಪ್ರತಿ ಪ್ರಯತ್ನದಿಂದ 
ನಿನ್ನ ನೆನಪು 
ದಿನ ಪ್ರತಿದಿನ 
ಏರುತ ಹೋಗುತ್ತಿದೆ 
by ಹರೀಶ್ ಶೆಟ್ಟಿ,ಶಿರ್ವ

ಅಂತರಾತ್ಮ

ಗೆಳತಿ... 
ಪದೇ ಪದೇ 
ನಿನ್ನ ನೆನಪು ಹುಟ್ಟಿಸುವ 
ನಿನ್ನ ಪ್ರೇಮ ಪತ್ರಗಳನ್ನೆಲ್ಲ 
ಸುಟ್ಟು ಬಿಟ್ಟೆ,
ಪತ್ರಗಳು ಬೂದಿಯಾಗಿ 
ಬೆಂಕಿಯೂ ಶಾಂತವಾಯಿತು 
ಆದರೆ 
ನನ್ನ ಅಂತರಾತ್ಮ ಜ್ವಲಿಸುತಿತ್ತು 
by ಹರೀಶ್ ಶೆಟ್ಟಿ,ಶಿರ್ವ

Wednesday, 30 October, 2013

ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ

ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ
ನಿನ್ನ ನೆನಪನ್ನು ನಾನು ವಧುವಿನಂತೆ ಸಿಂಗರಿಸಿ 
ನಾನಿಡುವೆ ಹೃದಯದಲ್ಲಿರಿಸಿ 
ಬೇಸರಿಸದಿರು ಪ್ರೇಯಸಿ

ನಾಳೆ ನಿನ್ನ ಈ ಅಂದ ಪರಕೀಯಾಗಬಹುದು 
ಆದರೆ ಆ ನೋಟ ನನ್ನ ಸ್ವಪ್ನದಲ್ಲಿರುವುದು 
ಹೂವಿನ ಪಾಲಕಿಯಲ್ಲಿ ನೀನು ಹೊರಡುವೆ 
ಆದರೆ ಸುಗಂಧ ನನ್ನ ಉಸಿರಲ್ಲಿರುವುದು
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ಈಗಲೂ ನಿನ್ನ ಗುಲಾಬಿ ಅಧರದ ಮೊಗ್ಗು
ನನ್ನ ಕಲ್ಪನೆಯ ಹೂದೋಟದಲಿ ಹೂವಾಗಿ ಅರಳುತ್ತಿದೆ
ಈಗಲೂ ನಿನ್ನ ಕೇಶ ರಾಶಿಯ ನೆರಳು
ವಿರಹದ ಬಿಸಿಲಲ್ಲಿ ಜತೆಗಾರನಾಗಿದೆ
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ನನ್ನ ಪ್ರೀತಿಯನ್ನು ತಿರಸ್ಕರಿಸು ಬೇಕಾದರೆ
ನಾ ನಿನ್ನಿಂದ ಯಾವುದೇ ವಾದ ಮಾಡಲಾರೆ
ಕಣ್ಣಲ್ಲಿರುತ್ತದೆ ಚಿತ್ರ ನಿನ್ನ
ಇಡೀ ಜೀವನ ನಿನ್ನನ್ನು ಪೂಜಿಸುತಲಿರುವೆ
ನಿನ್ನನ್ನು ಹೃದಯದ ಕಂಡಿಯಲ್ಲಿರಿಸಿ.......

ಮೂಲ : ಹಸರತ್ ಜೈಪುರಿ
ಅನುವಾದ: ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೋಹಮಮ್ದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಬ್ರಹ್ಮಚಾರಿ 


Dil Ke Jharoke Mein Tujko Bithakar
yadoon Ko Teri Maein Dulhan Banakar
rakhoonga Maein Dil Ke Paas
mat Ho Meri Jaan Udaas,
dil Ke Jharoke...

kal Tere Jalwe Paraye Bhi Honge
lekin Jhalak Mere Khwabon Mein Hogi
phoolon Ki Doli Mein Hogi Tu Rukhsat
lekin Mehak Meri Sanson Mein Hogi,
dil Ke Jharoke...

ab Bhi Tere Surkh Hothon Ke Pyale
mere Tassavur Mein Saki Baney Hain
ab Bhi Teri Zulf Ke Mast Saye
birha Ki Dhoop Mein Sathi Baney Hain,
dil Ke Jharoke...

meri Mohabbat Ko Thukra De Chahe
maein Koi Tujhse Na Shikva Karoonga
aankhon Mein Rehti Hai Tasveer Teri
sari Umar Teri Pooja Karoonga,
dil Ke Jharoke...

www.youtube.com/watch?v=eqVOX171kAs

ಭಾಗ್ಯ , ಸರದಿ, ಶ್ರಮ ಕೌಶಲ್ಯ

ಭಾಗ್ಯ 
____
ಅವನು 
ಬೆಳೆಸಿದ 
ಮರದ ಕಟ್ಟಿಗೆಯಿಂದಲೇ 
ಅವನ 
ಶವ ಸಂಸ್ಕಾರ 
__________

ಸರದಿ 
_____
ಮನೆಗೆ ಬಂದ
ನೆಂಟನನ್ನು
ನೋಡಿ
ಮನೆಯಲ್ಲಿ ಓಡಾಡುತ್ತಿದ್ದ
ಕೋಳಿಗಳಲ್ಲಿ ದ್ವಂದ
ಇಂದು ಯಾರ ಸರದಿಯೆಂದು
_________________

ಶ್ರಮ ಕೌಶಲ್ಯ
________
ಅವನ
ಮನೆಯಲ್ಲಿ
ಸಮೃದ್ಧವಾಗಿ ಬೆಳೆದ ಬಸಳೆ ಸೊಪ್ಪು
ಅವನ
ಶ್ರಮ ಕೌಶಲ್ಯದ
ವ್ಯಾಖ್ಯಾನ ಮಾಡುತಿತ್ತು

by ಹರೀಶ್ ಶೆಟ್ಟಿ,ಶಿರ್ವ

Monday, 28 October, 2013

ಯಾರೋ ಹಿಂತಿರುಗಿಸಲಿ

ಸೊಗಸಾದ ಸುಂದರ ದಿನಗಳೆಲ್ಲ
ಅಗಲಿದ ಜತೆ ಆಸರೆವೆಲ್ಲ
ಅಯ್ಯೋ, ಎಲ್ಲೋಯಿತು
ಆಯ್ಯೋ, ಎಲ್ಲೋಯಿತು
ಕಣ್ಣ ಕಾಂತಿಯೆಲ್ಲ
ನನ್ನ ಏಕಾಂತ ರಾತ್ರಿಯ ತಾರೆಗಳೆಲ್ಲ
ಆಯ್ಯೋ, ಎಲ್ಲೋಯಿತು

ಯಾರೋ ಹಿಂತಿರುಗಿಸಲಿ
ನನ್ನ ಕಳೆದೋದ ದಿನಗಳನ್ನು
ಕಳೆದೋದ ದಿನಗಳನ್ನು
ಸುಂದರ ಕ್ಷಣಗಳನ್ನು
ಯಾರೋ ಹಿಂತಿರುಗಿಸಲಿ.....

ನನ್ನ ಕನಸಿನ ಕೋಟೆ
ನನ್ನ ಸ್ವಪ್ನದ ನಗರ
ನಾನ್ಯಾರಿಗಾಗಿ ಕುಡಿದೆ
ಜೀವನದ ಈ ವಿಷವ
ನಾನಿಂದು ಹುಡುಕಲೆಲ್ಲಿ
ಮರೆಯಾದರು ಅವರೆಲ್ಲಿ
ಕಳೆದೋದ ದಿನಗಳನ್ನು.....

ನಾನೊಬ್ಬನೇ ಇರಲಿಲ್ಲ
ಕೆಲವರಿದ್ದರು ಜೊತೆಯಲಿ ನನ್ನ
ಒಂದು ಬಿರುಗಾಳಿಯಂತೆ ಬಂದು
ಕಸಿದೋಯಿತು ಇದ್ದದನ್ನ
ಹೀಗೆಯೂ ದಿನವಿತ್ತು
ನನ್ನ ದಿನವಾಗಿತ್ತು ನನ್ನ
ಕಳೆದೋದ ದಿನಗಳನ್ನು.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು/ಸಂಗೀತ : ಕಿಶೋರ್ ಕುಮಾರ್
ಚಿತ್ರ  : ದೂರ್ ಗಗನ್ ಕಿ ಚಾವು ಮೇ

अलबेले दिन प्यारे
मेरे बिछड़े साथ सहारे
हाय! कहाँ गये
हाय! कहाँ गये
आँखों के उजियारे
मेरी सूनी रात के तारे
हाय! कहाँ गये

कोई लौटा दे मेरे, बीते हुए दिन
बीते हुए दिन वो, प्यारे पल छिन
कोई लौटा दे मेरे...

मेरे ख्वाबों के महल, मेरे सपनों के नगर
पी लिया जिनके लिये मैंने जीवन का ज़हर
आज मैं ढूँढूं कहाँ, खो गये जाने किधर \- २
बीते हुए दिन...

मैं अकेला तो ना था, थे मेरे साथी कई
एक आँधी सी उठी, जो भी था लेके गई
ऐसे भी दिन थे कभी, मेरी दुनिया थी मेरी
बीते हुए दिन...

http://www.youtube.com/watch?v=gOW3P6-RoEw 

ಹೃದಯ ಹಂಬಲಿಸಿ ಕರೆಯುತ್ತಿದೆ

ಮುಕೇಶ್ :
!!ಹೃದಯ ಹಂಬಲಿಸಿ ಕರೆಯುತ್ತಿದೆ
ನೀನೀಗ ಬಂದುಬಿಡು ಎಂದು    
ನೀ ನನ್ನಿಂದ ಕಣ್ಣು ಮುಚ್ಚಾಲೆ ಆಡಬೇಡವೆಂದು
ನಿನಗೆ ನನ್ನಾಣೆ ಬಂದುಬಿಡು ಎಂದು!!-೨

!!ಈ ವಸಂತ
ಎಂತಹ ವಸಂತ ನೀನಿಲ್ಲದೆ
ಹೂ ಅರಳಲಿಲ್ಲ
ಅಂದರೆ ನಿನ್ನನ್ನು ಕಾಯುತ್ತಿದೆ
ಅಂದರೆ ನಿನ್ನನ್ನು ಕಾಯುತ್ತಿದೆ !!-೨
ಹೃದಯ ಹಂಬಲಿಸಿ ಕರೆಯುತ್ತಿದೆ.....

ಲತಾ :
!!ಹೃದಯ ಮಿಡಿತ ನೀಡುತ್ತಿದೆ
ಇದೇ ಭರವಸೆ ಸದಾ
ನಿನ್ನ ನಾನಾಗಿರುವೆಯೆಂದು
ನಿನ್ನ ಬಳಿಯಲ್ಲಿರುವೆ ಸದಾ!!-೨

!!ನಿನ್ನಿಂದಲೇ ನನ್ನ ಜೀವನದ
ಈ ಸಿಂಗಾರ ಇದೆ
ಜೀವಿಸುವೆ ನಾ
ಅಂದರೆ ನನಗೆ ನಿನ್ನಿಂದ ಪ್ರೀತಿ ಇದೆ
ಅಂದರೆ ನನಗೆ ನಿನ್ನಿಂದ ಪ್ರೀತಿ ಇದೆ!!-೨

ಮುಕೇಶ್ :
ಹೃದಯ ಹಂಬಲಿಸಿ ಕರೆಯುತ್ತಿದೆ.....
ಲತಾ :
ಹೃದಯ ಮಿಡಿತ ನೀಡುತ್ತಿದೆ.......

ಮುಕೇಶ್ /ಲತಾ
!!ನಗುತ್ತಿದ್ದ ಪ್ರೀತಿಯ
ಪ್ರಭಾವವಿದೆ ಎಲ್ಲೆಡೆಯೆಲ್ಲ
ನಾವೆಲ್ಲಿದ್ದೇವೆ ಮನಸ್ಸೆಲ್ಲಿದೆ
ಏನೂ ತಿಳಿದಿಲ್ಲ
ಎಲ್ಲಿದೆ ಏನೂ ತಿಳಿದಿಲ್ಲ!!-೨

ಮುಕೇಶ್ :
ಹೃದಯ ಹಂಬಲಿಸಿ ಕರೆಯುತ್ತಿದೆ.....
ಲತಾ :
ಹೃದಯ ಮಿಡಿತ ನೀಡುತ್ತಿದೆ.......

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್/ಲತಾ ಮಂಗೇಶ್ಕರ್
ಸಂಗೀತ :ಸಲೀಲ್ ಚೌಧರಿ
ಚಿತ್ರ : ಮಧುಮತಿ
(Dil tadap tadap ke keh raha hai aa bhee ja
 Too humse aankh na chura, tujhe kasam hai aa bhee ja) - (2)

 (Too nahee toh yeh bahar kya bahar hai
 Gul nahee khile ke teraa intejar hai) - (2)
 Ke teraa intejar hai - (2)
 Dil tadap tadap ke keh raha hai aa bhee ja
 Too humse aankh na chura, tujhe kasam hai aa bhee ja

 (Dil dhadak dhadak ke de raha hai yeh sada
 Tumharee ho chukee hu mai, tumhare pas hu sada) - (2)

 (Tum se meree jindagi ka yeh singar hai
 Jee rahee hu mai ke mujhko tumse pyar hai) - (2)
 Ke mujhko tumse pyar hai - (2)

 Dil tadap tadap ke keh raha hai aa bhee ja
 Too humse aankh na chura, tujhe kasam hai aa bhee ja
 Dil dhadak dhadak ke de raha hai yeh sada
 Tumharee ho chukee hu mai, tumhare pas hu sada

 (Muskurate pyar ka asar hai har kahee
 Ham kahan hain dil kidhar hai kuchh khabar nahee) - (2)
 Kidhar hai kuchh khabar nahee - (2)

 Dil tadap tadap ke keh raha hai aa bhee ja
 Too humse aankh na chura, tujhe kasam hai aa bhee ja
 Dil dhadak dhadak ke de raha hai yeh sada
 Tumharee ho chukee hu mai, tumhare pas hu sada
www.youtube.com/watch?v=te0ZdZ1ndyw

Sunday, 27 October, 2013

ಪ್ರತ್ಯೇಕ ಅಸ್ತಿತ್ವ

ಎಲ್ಲ ನೀನೇ
ಎಂದು ನಿನ್ನ ವಾದ ಆದರೆ
ನಾನ್ಯಾರು ?
-----------------------
ಸಾವಿರಾರು ಪ್ರಕಾರದ
ಹೂಗಳು ಈ ಉದ್ಯಾನದಲಿ
ಪ್ರತಿಯೊಂದು ಹೂವಿನ
ವಿಭಿನ್ನ ಸುಗಂಧ
-----------------------
ಮಣ್ಣಿನಿಂದ ಅಂಕುರಿತ ...
ಸಸಿಗೆ ಏನು
ತಿಳಿದಿದೆ
ಅದರ ಜನ್ಮದ ರಹಸ್ಯ
----------------------
ಹಳೆ ಮರ
ಆದರೆ ಅದರ ಛಾಯೆ
ವ್ಯಾಪಕ
by ಹರೀಶ್ ಶೆಟ್ಟಿ,ಶಿರ್ವ

ಎಲ್ಲ ಕಲಿತೆ ನಾನು

ಎಲ್ಲ ಕಲಿತೆ ನಾನು
ಕಲಿಯಲಿಲ್ಲ ಚಾತುರ್ಯ
ಸತ್ಯ ಇದು ಜಗದವರೇ
ನಾನೊಬ್ಬ ಮಡೆಯ

ಜನವೆಲ್ಲ ಹೇಳಿದರು
ಎಷ್ಟೊಂದು
ಯಾರು ನಮ್ಮವರು
ಯಾರು ಪರಕೀಯರೆಂದು
ಆದರೂ ಮನಸ್ಸ
ವ್ಯಥೆಯಲಿ ಬೆಂದು
ನಿಮ್ಮನ್ನು ಮನರಂಜಿಸಿದೆ
ನಾನು ಬಂದು
ನನ್ನತನದಲಿ ನನ್ನುಸಿರು ಇರಲಿ 
ಎಂಬ ಹಠ ನನ್ನದಯ್ಯ-೨
ಸತ್ಯ ಇದು ಜಗದವರೇ
ನಾನೊಬ್ಬ ಮಡೆಯ

ನೈಜ ಕಪಟ
ಮುಖಗಳ ಕಂಡೆ
ಹೃದಯದಲಿ ನೂರಾರು
ಕಾವಲು ಕಂಡೆ
ವೇದನೆಯಲಿ ಬಳಲುವ
ಹೃದಯದಿಂದ ಕೇಳಿ
ಏನೇನೊ ಮೋಹಕ
ಕನಸು ಕಂಡೆ
ತುಂಡಾದ ಒಂದು ತಾರೆಯ ಮೇಲೆ
ದೃಷ್ಟಿ ಇತ್ತು ನನ್ನದಯ್ಯ-೨
ಸತ್ಯ ಇದು ಜಗದವರೇ
ನಾನೊಬ್ಬ ಮಡೆಯ

ಹೃದಯದ ಪ್ರಪಂಚ
ನಾಶವಾಗುವುದನ್ನು ಕಂಡೆ
ಪ್ರೀತಿಯ ಬಣ್ಣ
ಮಾಯವಾಗುವುದನ್ನು ಕಂಡೆ
ಪ್ರತಿ ಬದುಕುವವನನ್ನು ನಾನು
ಐಶ್ವರ್ಯ ಸಂಪತ್ತುಗೋಸ್ಕರ
ಸಾಯುವುದನ್ನು ಕಂಡೆ
ಪ್ರೀತಿಕ್ಕಾಗಿ ಸಾಯುವವರು
ಭಿಕಾರಿಯಂತೆ ಸಾಯುವರಯ್ಯ-೨
ಸತ್ಯ ಇದು ಜಗದವರೇ
ನಾನೊಬ್ಬ ಮಡೆಯ

ಮೂಲ : ಶೈಲೇಂದ್ರ
ಅನುವಾದ :ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಅನಾರಿ
sab kuchh sikhaa hamane naa sikhi hoshiyaari
sach hai duniyaavaalo ki ham hai anaadi

duniyaa ne kitanaa samajhaayaa
kaun hai apanaa kaun paraayaa
phir bhi dil ki chot chhupaa kar
hamane aapakaa dil bahalaayaa
khud pe mar mitane ki ye zid thi hamaari (2)
sach hai duniyaavaalo ki ham hai anaadi

asali nakali chehare dekhe
dil pe sau sau pahare dekhe
mere dukhate dil se puchho
kyaa kyaa khvaab sunahare dekhe
tutaa jis taare pe nazar thi hamaari (2)
sach hai duniyaavaalo ki ham hai anaadi

dil kaa chaman ujadate dekhaa
pyaara kaa raga utarate dekhaa
hamane har jine vaale ko
dhan daulat pe marate dekhaa
dil pe marane vaale marege bhikhaari (2)
sach hai duniyaavaalo ki ham hai anaadi
http://www.youtube.com/watch?v=OLZoBJxlQBA

Saturday, 26 October, 2013

ಮನಸ್ಸೆಂದೂ ಇದ್ದರೆ ಬೇಸರದಲಿ

!!ಮನಸ್ಸೆಂದೂ ಇದ್ದರೆ ಬೇಸರದಲಿ
ಅದ್ಯಾರೋ ಇರುತ್ತಾರೆ ಸುತ್ತ ಮುತ್ತಲಲಿ!!
ಮನಸ್ಸೆಂದೂ.....

!!ಅಧರ ಮಾತಾಡುವಾಗ ಮೌನದಲಿ
ಉಸಿರು ಚಲಿಸುವಾಗ ವೇಗದಲಿ
ಕಂಗಳು ಕೂಗಿ ಕರೆದಲಿ
ಬಿಸಿ ನಿಟ್ಟುಸಿರು ಬಿಡುವಾಗ ಉಸಿರಲಿ!!
ಮನಸ್ಸೆಂದೂ.........

!!ತೇಲುತ್ತಿರುವಾಗ ಚಿತ್ರಗಳು ಕಂಗಳಲಿ
ನಿನ್ನ ಚಹರೆ ನಿನ್ನ ಯೋಚನೆಯಲಿ
ಕನ್ನಡಿ ಎಂದೂ ನೋಡಿದಾಗ ನನ್ನಲ್ಲಿ
ಇರುತ್ತದೆ ಒಂದು ಮುದ್ದು ಪ್ರಶ್ನೆಯಲಿ!!
ಮನಸ್ಸೆಂದೂ.......

!!ಯಾವುದೇ ವಚನ ನೀಡದಿದ್ದಲ್ಲಿ
ಯಾಕೆ ನಾನಿರುವೆ ನಿನ್ನ ನಿರೀಕ್ಷೆಯಲಿ
ಕಾರಣವಿಲ್ಲದೆ ನೆಮ್ಮದಿ ಸಿಕ್ಕಿದಲಿ
ನೆಮ್ಮದಿ ಇಲ್ಲದಾಗುತ್ತದೆ ಹೃದಯದಲಿ!!
ಮನಸ್ಸೆಂದೂ.......

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ,ಶಾರದ ಪಟೇಲ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಸೀಮಾ
Jab Bhi Yeh Dil Udaas Hota Hai
Jaane Kaun Aas Paas Hota Hai

Hont Chup Chaap Bolte Ho Jab
Saans Kuch Tez Tez Chalti Ho
Aankhen Jab De Rahi Ho Awaazein
Thandi Aanhon Mein Saans Jalti Ho
Thandi Aanhon Mein Saans Jalti Ho..
Jab Bhi Yeh Dil Udaas Hota Hai
Jaane Kaun Aas Paas Hota Hai

Aankh Mein Tairti Hain Tasveerein
Tera Chehra Tera Khayal Liye
Aaine Dekhta Hai Jab Mujhko
Ek Masoom Sa Sawaal Liye
Ek Masoom Sa Sawaal Liye

Jab Bhi Yeh Dil Udaas Hota Hai
Jaane Kaun Aas Paas Hota Hai..

Koyi Vaada Nahi Kiya Lekin
Kyon Tera Intezaar Rehta Hai
Bewajeh Jab Qarar Mil Jaaye
Dil Bada Beqarar Rehta Hai
Dil Bada Beqarar Rehta Haii

Jab Bhi Yeh Dil Udaas Hota Hai
Jaane Kaun Aas Paas Hota Hai...
www.youtube.com/watch?v=FnxXdDnQdck

Friday, 25 October, 2013

ಏಕಾಂಗಿ ಪ್ರಯಾಣ

ಸತತ ನನ್ನ ಪ್ರಯಾಣ 
ಏಕಾಂಗಿ 
ಸಹ ಪಯಣಿಗರ ಕೊರತೆ 
ಹೆಜ್ಜೆ ನಿಲ್ಲುವುದಿಲ್ಲ 
ಸೋತು ಬಿದ್ದಾಗ 
ಕೈ ಕೊಡುವವರು ಯಾರೂ ಇಲ್ಲ 
ಕೆಲವೊಮ್ಮೆ ನನ್ನಿಂದ ಅನಗತ್ಯ ಧೈರ್ಯ 
ಗಾಳಿ ಧೂಳಿನ ವೇಗ 
ಅದರೂ ನಿಲ್ಲಬಾರದೆಂಬ ಹಠ 
ಮುಖವೆಲ್ಲ ಕರಿ 
ಅದರೂ ತನ್ನನ್ನು ಸಾವರಿಸಿ 
ಪುನಃ ಮರು ಪ್ರಯಾಣಕ್ಕೆಸಿದ್ಧ
ಮಧ್ಯದಲ್ಲಿ ಸಿಗುವ 
ಕೆಲವು ಜನರ ಹಿತವಚನ 
ನಿನ್ನಿಂದ ಸಾಧ್ಯವಿಲ್ಲ ಹಿಂತಿರುಗೆಂದು 
ಆದರೆ ಛಲ 
ಗುರಿ ಪಡೆಯಲೇ ಬೇಕೆಂದು 
ತಾಣ ಕಾಣುತ್ತಿಲ್ಲ 
ಎಲ್ಲೆಡೆ ಅಂಧಕಾರ 
ಕೆಲವೊಮ್ಮೆ ಮನಸ್ಸು ವಿಚಲಿತ 
ಆದರೆ ಕಾಲು ಸ್ವಯಂಚಾಲಿತ 
ಮನಸ್ಸಲ್ಲಿ ವಿಶ್ವಾಸ
ಯೋಚಿಸಿದನ್ನು ಪಡೆಯುವೆಯೆಂದು 
ನಿರ್ದಿಷ್ಟ ಸ್ಥಾನಕ್ಕೆ 
ತಲುಪುವೆಯೆಂದು 
by ಹರೀಶ್ ಶೆಟ್ಟಿ, ಶಿರ್ವ

ಇರುವೆ

ಇರುವೆ ನಿನ್ನ ಮನಸ್ಸಲ್ಲೇ ಇರುವೆ 
ಇರುವೆ ನಿನ್ನ ನೆನಪಲ್ಲೇ ಇರುವೆ 
ಸತತ 
ನಿನ್ನನ್ನು 
ಹೀಗೆಯೇ 
ಕಾಡುತ್ತಿರುವೆ 
ಸದಾ ನಿನ್ನಲ್ಲಿಯೇ ಇರುವೆ 
ಹೂವಿನ ರಸ ರುಚಿಸುವ ಈ ಇರುವೆಯ ಹಾಗೆ 
by ಹರೀಶ್ ಶೆಟ್ಟಿ,ಶಿರ್ವ

Thursday, 24 October, 2013

ದೃಷ್ಟಿ

ಸತ್ಯದ
ಹಾಸಿಗೆಯಲ್ಲಿ
ಮಲಗಿದವ
ಸುಳ್ಳ ಕೆರೆಗೆ
ಹೋಗಿ ಮಿಂದು ಬಂದ
ಕೆರೆಯ ನೀರು ಶುಚಿಯಾಯಿತು
by ಹರೀಶ್ ಶೆಟ್ಟಿ,ಶಿರ್ವ

________________
ನಿನ್ನಲ್ಲಿ ತುಂಬಾ ಅಹಂ
ಎಂದು ಸ್ನೇಹ ತೊರೆದು ನಡೆದ,
ಅಹಂ ತೊರೆದು
ಸ್ನೇಹಕ್ಕಾಗಿ ಪುನಃ ಕೈ ಚಾಚಿದೆ,
ಅವನು ಕೈ ನೀಡಲಿಲ್ಲ,
ನನ್ನಲ್ಲಿದ್ದ ಅಹಂ
ನಾನು ಅವನಲ್ಲಿ ಕಂಡೆ
by ಹರೀಶ್ ಶೆಟ್ಟಿ, ಶಿರ್ವ

_______________
ಹೂಗಳಲ್ಲಿ ಪರಿಮಳವಿತ್ತು
ಅವನಿಗೆ ನೆಗಡಿ
by ಹರೀಶ್ ಶೆಟ್ಟಿ, ಶಿರ್ವ

_______________
ಅವನು ಬುದ್ಧಿಜೀವಿ,
ಗಾಂಭೀರ್ಯ ಅವನ ಒಡವೆ
ಮಾತನ್ನು ತಿರುಚುವುದು
ಅವನ ಜನ್ಮಸಿದ್ಧ ಅಧಿಕಾರ
ವಸ್ತು ವಿಷಯದಲ್ಲಿ ನ್ಯೂನತೆ
ಹುಡುಕುವುದು ಅವನ ಧರ್ಮ
by ಹರೀಶ್ ಶೆಟ್ಟಿ, ಶಿರ್ವ

________________
ದೀಪಾವಳಿಗೆ
ಮನೆ ಸ್ವಚ್ಛಗೊಳಿಸುವಾಗ
ಅಮ್ಮನಿಗೆ ಅವಳ ಪತ್ರದ ಗಂಟು ಸಿಕ್ಕಿತು,
ತೆಗೆದು ಕಸದ ಬುಟ್ಟಿಗೆ ಹಾಕಿದಳು,
ನಾನು ನೋಡಿಯೂ ನೋಡದ ಹಾಗೆ ಮಾಡಿದೆ,
ಅಮ್ಮ ನನ್ನ ಮುಖ ನೋಡಿ
ಅದನ್ನು ಕಸದ ಬುಟ್ಟಿಯಿಂದ ತೆಗೆದು
ಪುನಃ ಗಂಟು ಕಟ್ಟಿದಳು
by ಹರೀಶ್ ಶೆಟ್ಟಿ, ಶಿರ್ವ
   

ಶಪಥ ವಚನ ಪ್ರೀತಿ ನಿಷ್ಠೆ

ಮಹಾನ ಗಾಯಕ ಮನ್ನಾ ಡೇ ಇಂದು ನಮ್ಮಿಂದ ಅಗಲಿದರು. ಅವರು ಹಾಡಿದ ನನ್ನ ಒಂದು ಮೆಚ್ಚಿನ ಹಾಡು "ಕಸ್ಮೆ ವಾದೇ ಪ್ಯಾರ್ ವಫಾ ಸಬ್,ಬಾತೇ ಹೈ ಬಾತೊಂಕಾ ಕ್ಯಾ...?, ಕೋಯೀ ಕಿಸೀಕೆ ನಹೀ ಯೇ ಝೂಟೇ,ನಾತೇ ಹೈ ನಾತೊಂಕಾ ಕ್ಯಾ...? ಇದರ ನನ್ನಿಂದ ಒಂದು ಅರ್ಥಾನುವಾದ.
__________________________________________________

ಶಪಥ ವಚನ ಪ್ರೀತಿ ನಿಷ್ಠೆ
ಮಾತುಗಳೆಲ್ಲ
ಮಾತುಗಳಲ್ಲದೆ ಬೇರೇನೂ?
ಯಾರಿಗೂ ಯಾರಿಲ್ಲ
ಸುಳ್ಳು ಸಂಬಂಧಗಳೆಲ್ಲ
ಬರಿ ಸಂಬಂಧಗಳಲ್ಲದೆ ಬೇರೇನೂ?

ಒಂದು ವೇಳೆ
ಮಹಾತ್ಮನಿದ್ದರೂ ನಿನ್ನೆದುರು
ನೀನು ತಪ್ಪಿಸಿಕೊಳ್ಳಲಾರೆ
ನಿನ್ನ ಸ್ವಂತ ರಕ್ತದ ಕುಡಿಯೇ
ನಿನಗೆ ಬೆಂಕಿ ಹಚ್ಚುವರು
ಆಗಸದಲಿ ಹಾರುವವರೂ
ಮಣ್ಣು ಪಾಲಾಗುವರು
ಶಪಥ.......

ಸುಖದಲಿ ನಿನ್ನ
ಜೊತೆ ನೀಡುವರು
ದುಃಖದಲಿ ಮುಖ ತಿರುಗಿಸಿ
ದೂರ ಓಡುವರು
ಜಗದವರು ನಿನ್ನವರಾಗಿ
ನಿನ್ನವೇ ಹೃದಯ ಮುರಿಯುವರು
ಭಗವಂತನಿಗೆ ದ್ರೋಹವೆಸಗುವವರು
ಮನುಷ್ಯನನ್ನೇನು ಬಿಡುವರು
ಶಪಥ.......

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮನ್ನಾ ಡೇ
ಸಂಗೀತ : ಕಲ್ಯಾಣ್ ಜಿ ಆನಂದ್ ಜೀ
ಚಿತ್ರ : ಉಪಕಾರ್

Kasame Vaade Pyaar Vafaa Sab, Baate.N Hai.N Baato.N Kaa Kyaa
Koi Kisii Kaa Nahii.N Ye Jhuuthe, Naate Hai.N Naato.N Kaa Kyaa
Kasame Vaade Pyaar Vafaa Sab, Baate.N Hai.N Baato.N Kaa Kyaa

Hogaa Masiihaa ...
Hogaa Masiihaa Saamane Tere
Phir Bhii Na Tuu Bach Paayegaa
Teraa Apanaa.A.A.A Aa.A.A.A
Tera Apana Khuun Hii Aakhir
Tujhako Aag Lagaayegaa
Aasamaan Me.N ...
Aasamaan Me U.Dane Vaale Mittii Me.N Mil Jaayegaa
Kasame Vaade Pyaar Vafaa Sab, Baate.N Hai.N Baato.N Kaa Kyaa

Sukh Me.N Tere ...
Sukh Me.N Tere Saath Chale.Nge
Dukh Me.N Sab Mukh Mo.De.Nge
Duniyaa Vaale ...
Duniyaa Vaale Tere Banakar
Teraa Hii Dil To.De.Nge
Dete Hai.N ...
Dete Hai.N Bhagavaan Ko Dhokhaa, Inasaa.N Ko Kyaa Chho.De.Nge
Kasame Vaade Pyaar Vafaa Sab, Baate.N Hai.N Baato.N Kaa Kyaa

Wednesday, 23 October, 2013

ಹನಿ ಹನಿ

ದ್ವೇಷದಿಂದ 
ವಿಷ ಹಬ್ಬಿತು ಅವನ ಮೈಯಲ್ಲಿ 
ಯಾರೋ ಪ್ರೀತಿಸು ಎಂದರು 
ಪ್ರೀತಿಯ ಸಾಗರದಲಿ ಹಾರಿದ 
ಹೊರ ಬಂದಾಗ 
ಪ್ರೇಮಾಮೃತ 
ಕುಡಿದು 
ಪಾವನವಾಗಿದ 

by ಹರೀಶ್ ಶೆಟ್ಟಿ,ಶಿರ್ವ
_______________
ಗೂಡಿನಲ್ಲಿದ್ದ 
ಮರಿ ಹಕ್ಕಿಗೆ 
ಮರದ ಕೊಂಬೆಯಲ್ಲಿ ಹೊಸತಾಗಿ 
ಚಿಗುರಿದ ಎಲೆಯ ಗೆಳತನ 
ಕೊಂಬೆಯಿಂದ ಅಗಲಿ 
ಎಲೆ ಬಿದ್ದಾಗ 
ಮರಿ ಹಕ್ಕಿ ವಿಚಲಿತ 

by ಹರೀಶ್ ಶೆಟ್ಟಿ,ಶಿರ್ವ
_______________
ಶೋಚನೀಯ ಅವಸ್ಥೆ 
ಅವಳ,
ಕುಂಕುಮ 
ಕೈಯಿಂದ 
ಜಾರಿ 
ಕೆಳಗೆ ಬಿದ್ದಾಗ

by ಹರೀಶ್ ಶೆಟ್ಟಿ,ಶಿರ್ವ
_______________
ದೀಪಾವಳಿಗೆ 
ಹೊಸತಾಗಿ ಮನೆಗೆ ಬಂದ 
ಕಂದೀಲು ಮತ್ತು ಹಣತೆಗೆ 
ದೇವರ ಮುಂದೆ 
ಬೆಳಗುವ ದೀಪವನ್ನು 
ನೋಡಿ 
ಎಲ್ಲಿಲ್ಲದ ಸಂತೋಷ 
by ಹರೀಶ್ ಶೆಟ್ಟಿ,ಶಿರ್ವ
________________
ಹಬ್ಬ ದೀಪಾವಳಿ, 
ಅವಳು ಬಂದಿದ್ದಳು
ಇನ್ನು 
ಅವಳ ಹೆಜ್ಜೆ ಗುರುತೆ 
ನನ್ನ ಮನೆಯ 
ರಂಗೋಲಿ 
by ಹರೀಶ್ ಶೆಟ್ಟಿ,ಶಿರ್ವ

ಬಾ ಇನಿಯ

ಬಾ ಇನಿಯ
ನಿನ್ನನ್ನು ಪ್ರೀತಿಸುವೆ ನಾ
ಅಪ್ಪಿಕೊಂಡು ಸಂತೈಸುವೆ ನಾ
ಯಾಕೆ ನೀನು
ಇಷ್ಟೊಂದು ಬೇಸರದಲಿ
ಶುಷ್ಕತೆ ಅಧರದಲಿ   
ದಾಹ ಕಂಗಳಲಿ 
ಯಾಕೆ ನೀನು
ಯಾಕೆ ನೀನು
ಬಾ ಇನಿಯ....

ಸುಟ್ಟು ಹೋಗಿದೆ ದೇಹ ಎಷ್ಟೋ
ಇನಿಯ ಇದೇ ಜ್ವಾಲೆಯಲಿ
ಸೋತು ಹೋದ ಈ ಕೈಯನ್ನು
ನೀಡು ನನ್ನ ಕೈಯಲಿ
ಓ...
ನನ್ನ ಸುಖವನ್ನೆಲ್ಲಾ ನೀಡುವೆ ನಿನಗೆ
ನಿನ್ನ ಕಷ್ಟವನೆಲ್ಲಾ ನೀಡು ನನಗೆ
ನಾನೂ ಬದುಕುವೆ
ನೀನೂ ಬದುಕು
ಓ ಓ...
ಬಾ ಇನಿಯ.......

ಇರಲಿ ಬಿಡು
ನಿನ್ನ ಊರಿನ ಈ ಪಥ
ತುಂಬಾ ಕಷ್ಟದಾಯಕ
ಕಣ್ರೆಪ್ಪೆಯಿಂದ ಆಯ್ದುಕೊಳ್ಳುವೆ
ಮುಳ್ಳುಗಳನ್ನು ನಿನ್ನ ಹಾದಿಯ
ಓ ...
ಕೇಶ ಹರಡಿ
ಸೆರಗು ಹಾಸಿ
ಕುಳಿತಿರುವೆ ನಾನು ನಿನಗಾಗಿ
ಓ ಓ ...
ಬಾ ಇನಿಯ.......

ನನ್ನ ಈ ಕಣ್ಣಿಂದ
ಹರಿದೋಗುತ್ತಿದೆ ಈ ಧಾರೆಯ
ಅರಳಿತಲ್ಲೇ ಒಂದು ನಗೆ
ಇನಿಯ ನಿನ್ನ ಪ್ರೀತಿಯ
ಓ ....
ನಾನೇ ಸೋಲಲಿಲ್ಲವೆಂದ ಮೇಲೆ
ನೀನೆ ಸ್ವಲ್ಪ ಯೋಚಿಸು
ಅದೇಕೆ
ಅದೇಕೆ
ಓ ಓ ...
ಬಾ ಇನಿಯ.......

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಬಹಾರೋ ಕೆ ಸಪನೇ

Aaja piya tohe pyaar doon, gori baiyyaan tope vaar doon
Kis liye tu, itna udaas
Sukhe sukhe honth, ankhiyon me pyaas
Kis liye kis liye ho,
Aaja piyaa ..

Jal chuke, hain badan kayi
Piya isii aag mein
Thake hue in haathon ko
Dede mere haath mein
Ho, (sukh mera lele, main dukh tere leloon) -2
Main bhi jiyoon tu bhi jiye ho,
Aaja piya tohe pyaar doon, gori baiyyaan tope vaar doon

Hone de re jo ye julmi hai, path tere gaaon ke
Palkon se chun daloongi main,
Kaante teri raahon ke
Ho, (laat bikhraye chunariya bichhaye) -2
Baithi hoon main tere liye ho,
Aaja piya..

Apni to jab ankhiyon se, bah chali dhaar si
Khil padi bas ek hansi, piya tere pyaar ki
Ho, (main jo nahin haari, saajan zara socho) -2
Kis liye kis liye ho,
Aaja piya..
www.youtube.com/watch?v=E7qp-XaWwR0

Tuesday, 22 October, 2013

ಸಂದೇಶ ಬರುತ್ತದೆ

!!ಸಂದೇಶ ಬರುತ್ತದೆ 
ನೋವು ತರುತ್ತದೆ
ಯಾವುದೇ ಪತ್ರ ಬಂದಾಗ 
ಕೇವಲ ಮಾತೊಂದು
ಮನೆಗ್ಯಾವಾಗ ಬರುವೆಯೆಂದು
ಬರೆ ನೀನ್ಯಾವಾಗ ಬರುವೆಯೆಂದು
ಅಂದರೆ ನಿನ್ನ ವಿನಾಃ ಈ ಮನೆ ಖಾಲಿ ಖಾಲಿ ಇದೆ !!

!!ಒಂದು ಸೌಂದರ್ಯದ ಸಿರಿ
ಒಂದು ಚೆಲುವೆ ಸುಂದರಿ
ನನಗೆ ಪತ್ರ ಬರೆದಿದ್ದಾಳೆ
ನನ್ನಿಂದ ಕೇಳಿದ್ದಾಳೆ
ಯಾರದ್ದೋ ಉಸಿರು
ಯಾರದ್ದೋ ಮಿಡಿತ
ಯಾರದ್ದೋ ಕೈ ಬಳೆ
ಯಾರದ್ದೋ ಕಡಗ
ಯಾರದ್ದೋ ಕಣ್ಣ ಕಾಡಿಗೆ
ಯಾರದ್ದೋ ಹೂ ಮಲ್ಲಿಗೆ
ಸುಗಂಧಿತ ಹಗಲು
ಮೋಹಕ ರಾತ್ರಿ
ಏಕಾಂತ ರಾತ್ರಿಗಳು
ಅಪೂರ್ಣ ಮಾತುಗಳು
ಹಂಬಲಿಸುವ ಬಾಹುಗಳು
ಮತ್ತೆ ಕೇಳಿದೆ ಈ ಕಂಗಾಲಾದ ಕಣ್ಣೆರಡು!!
ಮನೆಗ್ಯಾವಾಗ ಬರುವೆಯೆಂದು
ಬರೆ ನೀನ್ಯಾವಾಗ ಬರುವೆಯೆಂದು
ಅಂದರೆ ನಿನ್ನ ವಿನಾಃ ಈ ಹೃದಯ ಖಾಲಿ  ಖಾಲಿ ಇದೆ

!!ಪ್ರೀತಿ ಮಾಡುವವರು
ನನ್ನ ಮಿತ್ರರೆಲ್ಲರೂ
ನನಗೆ ಬರೆದಿದ್ದಾರೆ
ನನ್ನಿಂದ ಕೇಳಿದ್ದಾರೆ
ನಮ್ಮ ಊರಿನವರು
ನೆರಳು ನೀಡುವ ಮಾವಿನ ಮರಗಳು
ಹಳೆ ಪೀಪಲ್ ಮರಗಳು
ಸುರಿಯುವ ಮೇಘಗಳು
ಹೊಲ ಗದ್ದೆಗಳು
ಹಸಿರು ತೋಟಗಳು
ವಿವಿಧ ಜಾತ್ರೆಗಳು
ನೇತಾಡುವ ಲತೆಗಳು
ಪ್ರೇಮದ ಉಯ್ಯಾಲೆಗಳು
ಸುಗಂಧಿತ ಹೂ ಮಾಲೆಗಳು
ಬಿರಿಯುವ ಮೊಗ್ಗುಗಳು
ಮತ್ತೆ ಕೇಳಿದೆ ಈ ಊರಿನ ಗಲ್ಲಿಗಳು!!
ಮನೆಗ್ಯಾವಾಗ ಬರುವೆಯೆಂದು
ಬರೆ ನೀನ್ಯಾವಾಗ ಬರುವೆಯೆಂದು
ಅಂದರೆ ನಿನ್ನ ವಿನಾಃ ಈ  ಊರೆಲ್ಲ ಖಾಲಿ ಖಾಲಿ ಇದೆ

!!ಕೆಲವೊಮ್ಮೆ ಒಂದು ಮಮತೆಯ
ಪ್ರೀತಿಯ ಗಂಗೆಯ
ಪತ್ರ ಬರುತ್ತದೆ
ಒಟ್ಟಿಗೆ ತರುತ್ತದೆ
ನನ್ನ ದಿನ ಬಾಲ್ಯದ
ಆಟ ಆ ಅಂಗಳದ
ಆ ನೆರಳು ಸೆರಗಿನ
ಆ ಬೊಟ್ಟು ಕಾಡಿಗೆಯ
ಆ ಲಾಲಿ ರಾತ್ರಿಯ
ಆ ಮೃದುತ್ವ ಕೈಯ
ಆ ಆರೈಕೆ ಕಣ್ಣಲ್ಲಿ
ಆ ಚಿಂತೆ ಮಾತಲ್ಲಿ
ಮೇಲಿಂದ ಕೋಪ
ಒಳಗಿಂದ ಮೋಹ
ಮಾಡುತ್ತಾಳೆ ಆ ನನ್ನ ದೇವರು ಅಮ್ಮ
ಇದೇ ಕೇಳುತ್ತಾಳೆ ಪ್ರತಿ ಪತ್ರದಲಿ ನನ್ನಮ್ಮ!!
ಮನೆಗ್ಯಾವಾಗ ಬರುವೆಯೆಂದು
ಬರೆ ನೀನ್ಯಾವಾಗ ಬರುವೆಯೆಂದು
ಅಂದರೆ ನಿನ್ನ ವಿನಾಃ ಈ ಅಂಗಳ ಖಾಲಿ ಖಾಲಿ ಇದೆ 

!!ಹೇ ಬೀಸುವ ತಂಗಾಳಿಯೇ ಹೇಳು
ನನ್ನ ಇಷ್ಟೊಂದು ಕೆಲಸ ಮಾಡುವೇಯಾ
ನನ್ನ ಊರಿಗೆ ಹೋಗು
ನನ್ನ ಗೆಳೆಯರಿಗೆ ವಂದಿಸು
ನನ್ನ ಊರಲ್ಲಿದ್ದ ಆ ಗಲ್ಲಿ
ಆಲ್ಲಿ ಇರುತ್ತಾಳೆ ನನ್ನೊಲವು
ಅವಳಿಗೆ ನನ್ನ ಪ್ರೀತಿಯ ಮುದ್ದು ನೀಡು
ಅಲ್ಲಿ ಸ್ವಲ್ಪ ದೂರದಲ್ಲಿದೆ ನನ್ನ ಮನೆ
ಮನೆಯಲ್ಲಿದ್ದಾಳೆ ನನ್ನ ಮುದಿ ಅಮ್ಮ
ನನ್ನ ಅಮ್ಮನ ಕಾಲನ್ನು ಸ್ಪರ್ಶಿಸು
ಅವಳಿಗೆ ಅವಳ ಮಗನ ಹೆಸರು ಕೊಡು!!

!!ಹೇ ಬೀಸುವ ತಂಗಾಳಿಯೇ ಸ್ವಲ್ಪ
ನನ್ನ ಗೆಳೆಯರಿಗೆ
ನನ್ನ ಒಲವಿಗೆ
ನನ್ನ ತಾಯಿಗೆ ನನ್ನ ಸುದ್ದಿ ಕೊಡು
ಅವರಿಗೆ ಹೋಗಿ ನೀನು ಈ ಸುದ್ದಿ ಕೊಡು
ನಾ ಮರಳಿ ಬರುವೆಯೆಂದು
ನಾ ಮರಳಿ ಬರುವೆಯೆಂದು
ಪುನಃ ನಮ್ಮೂರಿಗೆ
ಅದರ ನೆರಳಿಗೆ
ಅಂದರೆ
ಅಮ್ಮನ ಸೆರಗಿನೊಂದಿಗೆ
ಊರಿನ ಪೀಪಲ್ ಮರದೊಂದಿಗೆ
ಯಾರದ್ದೋ ಕಾಡಿಗೆಯೊಂದಿಗೆ
ಕೊಟ್ಟ ವಚನ ನಾನು ಪೂರ್ಣಗೊಳಿಸುವೆ
ನಾನೊಂದು ದಿನ ಬರುವೆ!!
ನಾನೊಂದು ದಿನ ಬರುವೆ
ನಾನೊಂದು ದಿನ ಬರುವೆ

ಮೂಲ : ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಸೋನು ನಿಗಮ್, ರೂಪ್ ಸಿಂಗ್ ರಾಟೋಡ್
ಸಂಗೀತ : ಅನು ಮಲಿಕ್
ಚಿತ್ರ :ಬಾರ್ಡರ್ 


sandese aate hai hame tadapaate hai
jo chitthi aati hai vo puchhe jaati hai
ki ghar kab aa_oge likho kab aa_oge
ki tum bin ye ghar sunaa sunaa hai

kisi dilavaali ne kisi matavaali ne
hame khat likhaa hai ye hamase puchhaa hai
kisi ki saanso ne kisi ki dhadakan ne
kisi ki chudi ne kisi ke kagan ne
kisi ke kajare ne kisi ke gajare ne
mahakati subaho ne machalati shaamo ne
akeli raato me adhuri baato ne
tarasati baaho ne
aur puchhaa hai tarasi nigaaho ne
ki ghar kab aa_oge likho kab aa_oge
ki tum bin ye dil sunaa sunaa hai
sadese aate hai

muhabbat vaalo ne hamaare yaaro ne
hame ye likhaa hai ki hamase puchhaa hai
hamaare gaavo ne aam ki chhaavo ne
puraane pipal ne barasate baadal ne
khet khaliyaano ne hare maidaano ne
basanti melo ne jhumati belo ne
lachakate jhulo ne dahakate phulo ne
chatakati kaliyo ne
aur puchhaa hai gaav ki galiyo ne
ki ghar kab aa_oge likho kab aa_oge
ki tum bin gaav sunaa sunaa hai
sadese aate hai

kabhi ek mamataa ki pyaar ki gagaa ki
jo chitthi aati hai saath vo laati hai
mere din bachapan ke khel vo aagan ke
vo saayaa aachal kaa vo tikaa kaajal kaa vo
lori raato me vo narami haatho me
vo chaahat aankho me ve chitaa baato me
bigadanaa upar se muhabbat adar se
kare vo devi maan
yahi har khet me puchhe meri maan
ki ghar kab aa_oge
ki tum bin aagan sunaa sunaa hai

ai gujarane vaali havaa bataa
meraa itanaa kaam karegi kyaa
mere gaav jaa mere dosto ko salaam de
mere gaav me hai jo vo gali
jahaa rahati hai meri dilarubaa
use mere pyaar kaa jaam de
vahaa thodi dur hai ghar meraa
mere ghar me hai meri budhi maan
meri maan ke pairo ko chhu use usake bete kaa naam de

ai gujarane vaali havaa zaraa
mere dosto meri dilarubaa meri maan ko meraa payaam de
unhe jaa ke tu ye payaam de
mai vaapas aa_ugaa phir apane gaav me
usi ki chhaav me ki maan ke aanchal se
gaav ki pipal se kisi ke kaajal se
kiyaa jo vaadaa hai vo nibhaa_ugaa
mai ek din aa_ugaa
www.youtube.com/watch?v=uMkPweupmBo S

Monday, 21 October, 2013

ವಾಸ್ತವ

ವಾಸ್ತವ
________

ಪ್ರೇಮ ಕವಿಯೊಬ್ಬ
ಗೃಹ ಕಲಹದ ಆರೋಪದಲ್ಲಿ
ಜೈಲು ಸೇರಿದ
_________

ಅವನು ದಿನ
ಮಂದಿರಕ್ಕೆ ತಪ್ಪದೆ ಹೋಗುತ್ತಿದ್ದ,
ಆದರೆ
ದಿನ ಮಂದಿರದ ಹೊರಗೆ
ಬೇಡುವ ಅಂಗವಿಕಲ ಭಿಕ್ಷುಕನಿಗೆ
ಅವನು ಎಂದೂ ಒಂದು ಪೈಸೆ ಸಹ ಭಿಕ್ಷೆ ನೀಡಲಿಲ್ಲ.
__________

ಅವಳು ವೇಶ್ಯೆ,
ಪ್ರತಿ ತಿಂಗಳು
ಮಕ್ಕಳ ಅನಾಥಾಲಯಕ್ಕೆ
ಅವಳ ಭೇಟಿ,
ಆ ದಿನ  
ಮಕ್ಕಳಿಗೆಲ್ಲ ಉತ್ಸವ
____________

ಅವರು ತುಂಬಾ ಪ್ರಾಮಾಣಿಕ
ಪ್ರಸಿದ್ಧ ಡಾಕ್ಟರ್
ದಿನ ಅವರ ಬಳಿ ಬಡ ರೋಗಿಗಳ ಸಾಲು,
ಅವರ ಫೀಸ್ ಸಹ ತುಂಬಾ ಕಡಿಮೆ,
ಆದರೆ ಶ್ರೀಮಂತರಿಗೆ
ಅವರಿಂದ ಚಿಕತ್ಸೆ
ಪಡೆಯಲು ನಾಚಿಗೆ

by ಹರೀಶ್ ಶೆಟ್ಟಿ,ಶಿರ್ವ 

Sunday, 20 October, 2013

ಆ ಸುಂದರ ಬಾಲ್ಯಕ್ಕೆ

ಗೆಳತಿ.. 
ಬಾ ನಾವು 
ನಮ್ಮ 
ಆ ಸುಂದರ ಬಾಲ್ಯಕ್ಕೆ 
ಹೋಗಿ ಬರೋಣ 
ಸಾಧ್ಯವಾದರೆ 
ಅಲ್ಲಿಂದ 
ಸ್ವಲ್ಪ ನಿನಗೆ 
ಸ್ವಲ್ಪ ನನಗೆ 
ಆನಂದದ ಕ್ಷಣಗಳನ್ನು 
ಕದ್ದು ತರೋಣ 
by ಹರೀಶ್ ಶೆಟ್ಟಿ,ಶಿರ್ವ

Saturday, 19 October, 2013

ನಾನೆಂದೂ ದ್ರೋಹ ಬಗೆಯಲಿಲ್ಲ

!!ನಾನೆಂದೂ ದ್ರೋಹ ಬಗೆಯಲಿಲ್ಲ
ಆದರೆ ನನ್ನಿಂದ ನಿಷ್ಠೆ ನಿಭಾಯಿಸಲಾಗಲಿಲ್ಲ 
ನನಗೆ ಸಿಕ್ಕಿತ್ತು ಅದರ ಸಜೆ
ನನ್ನಿಂದೆಂದೂ ಅಂತಹ ತಪ್ಪು ಮಾಡಲಾಗಲಿಲ್ಲ!!

!!ಎಷ್ಟೊಂದು ಒಂಟಿಯಾಗಿತ್ತು ಆ ಹಾದಿ
ನಾನದರಲಿ
ಈ ತನಕ ಒಬ್ಬನೇ ಸಾಗುತ್ತಿದ್ದೆ
ನಿನ್ನಿಂದ ಅಗಲಿ ಸಹ
ಓ ಅರಿವಿಲ್ಲದವಳೇ
ನಿನ್ನದೆ ದುಃಖದಲಿ ಉರಿಯುತ್ತಿದ್ದೆ
ನೀ ಮಾಡಿದ ಆ ಅನ್ಯಾಯ
ನನ್ನಿಂದ ಅಂತಹ ಅಪರಾಧ ಮಾಡಲಾಗಲಿಲ್ಲ!!
ನಾನೆಂದೂ ದ್ರೋಹ ಬಗೆಯಲಿಲ್ಲ.....

!!ನೀನು ನೋಡಿದ್ದು ಕೇಳಿದ್ದು
ಸತ್ಯವಾಗಿತ್ತು ಆದರೆ
ಎಷ್ಟು ಸತ್ಯವಾಗಿತ್ತೆಂದು
ಇದ್ಯಾರಿಗೆ ತಿಳಿದಿದೆ
ನಾನು ನಿನಗೆ ವಂಚಿಸಿದ್ದ
ಅಥವಾ ನೀನೆ ಮೋಸಕ್ಕೊಳಗಾದೆಯೋ
ಈ ಪ್ರೀತಿಯಲಿ ಸತ್ಯ ಸುಳ್ಳಿನ
ನಿನಗೆ ನ್ಯಾಯ ಮಾಡಲಾಗಲಿಲ್ಲ!!
ನಾನೆಂದೂ ದ್ರೋಹ ಬಗೆಯಲಿಲ್ಲ.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಶಾಲಿಮಾರ್

Chorus: Jingala La La Jhum..
kishore: Hum Bewafa Hargiz Na The Par Hum Wafa Kar Na Sake
humko Mili Uski Saza Hum Jo Khata Kar Na Sake
hum Bewafa Hargiz Na The, Par Hum Wafa Kar Na Sake
chorus: Phur.. Phur.. Phuur..


kishore: Kitni Akeli Thin Woh Raahen Hum Jinpe Ab Tak Akele Chalte Rahe
tujhse Bichhad Ke Bhi O Bekhabar Tere Hi Gum Mein Jalte Rahe
tune Kiya Jo Shikwa Hum Woh Gila Kar Na Sake
hum Bewafa Hargiz Na Thhe Par Hum Wafa Kar Na Sake
chorus: Phur.. Phur .. Phur..

kishore: Tumne Jo Dekha Suna Sach Tha Magar, Kitna Tha Sach Yeh Kisko Patah
jaane Tumhe Maine Koi Dhoka Diya Jaane Tumhe Koi Dhoka Hua
is Pyar Mein Sach Jhooth Ka Tum Faisla Kar Na Sake
hum Bewafa Hargiz Na The Par Hum Wafa Kar Na Sake (chorus Sings In Between)
chorus: Jingala La La..phur Phur Phur
www.youtube.com/watch?v=BzX-jM1gufU

ತೃಪ್ತ ಅತೃಪ್ತ

ಅತೃಪ್ತ ನೀನು 
ಅನ್ಯರಲಿ ದೋಷ ಕಂಡರೆ 
ತೃಪ್ತ ನೀನು 
ಸ್ವತಃ ತನ್ನಲ್ಲಿ ನ್ಯೂನತೆ ಹುಡುಕಿ ಸುಧಾರಿಸಿದರೆ 
by ಹರೀಶ್ ಶೆಟ್ಟಿ, ಶಿರ್ವ

ಪರಿವರ್ತನೆ

ತೊರೆದು ಹೋಗುವೆ ಎಲ್ಲಿ 
ಈ ಜೀವವನ್ನು 
ಇರಲಿದೆ ಮಾನವನಾಗಿ ನಿನಗೆ 
ಈ ದುಷ್ಟ ಜಗತ್ತಲ್ಲಿ 

ಕಣ್ಣೀರ ನಿರೀಕ್ಷೆ ಏಕೆ 
ಬಂಡೆ ಕಲ್ಲಲ್ಲಿ 
ತಲೆ ಅಪ್ಪಳಿಸಿದರೆ 
ಮಿಂದುವೆ ನೀನು ರಕ್ತದಲಿ 

ಐದು ಬೆರಳಲಿ 
ಒಂದನ್ನು ದಿಟ್ಟಿಸಿದರೆ ಇತರರಲಿ 
ನಾಲ್ಕು ಬೆರಳ ಗುರಿ 
ಇರುವುದು ಕೇವಲ ನಿನ್ನಲ್ಲಿ

ಸಲ್ಲದು ಮಾತಾಡಿ 
ಪ್ರಯೋಜನವೇನು 
ಸುಧಾರಿಸಿಕೋ ಸ್ವತಃ ನಿನ್ನನ್ನೇ 
ನಿನ್ನಿಂದಲೇ ಪರಿವರ್ತನೆ ಬರಲಿ ಈ ಜಗತ್ತಲ್ಲಿ 
by ಹರೀಶ್ ಶೆಟ್ಟಿ, ಶಿರ್ವ

Friday, 18 October, 2013

ನನಗಿಷ್ಟು ನೀನು ಪ್ರೀತಿಸದಿರು

ತಲತ್ :
!!ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ
ಹೇಗೆ ಯಾರ ಆಸರೆಯಾಗುವೆ
ಅಂದರೆ ನಾ ಸ್ವತಃ ನಿರಾಶ್ರಿತ ಅಲೆಮಾರಿ!!

ಲತಾ :
!!ಇದಕ್ಕಾಗಿ ನಾ ನಿನ್ನ ಪ್ರೀತಿಸುವೆ
ಅಂದರೆ ನೀನೊಂದು ಮೇಘ ಸೋಮಾರಿ
ಜನುಮ ಜನುಮದಿಂದ ಇರುವೆ ನಿನ್ನ ಜೊತೆ
ಅಂದರೆ ನನ್ನೆಸರು ಜಲದ ಧಾರೆ!!

ತಲತ್ :
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ
ಲತಾ :
ಜನುಮ ಜನುಮದಿಂದ ಇರುವೆ ನಿನ್ನ ಜೊತೆ
ಅಂದರೆ ನನ್ನೆಸರು ಜಲದ ಧಾರೆ

ತಲತ್ :
!!ನನಗೆ ಒಂದು ಸ್ಥಾನದಲಿ ಆರಾಮವಿಲ್ಲ
ನಿಲ್ಲುವುದು ನನ್ನ ಕೆಲಸವಲ್ಲ
ಯಾವಾಗ ತನಕ ನನ್ನ ಜೊತೆ ನೀಡುವೆ ನೀನು
ಅಂದರೆ ನಾನು ದೇಶ ವಿದೇಶದ ಸಂಚಾರಿ!!
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ

ಲತಾ :
!!ಒಹ್ ನೀಲ ಆಗಸದ ಪ್ರೇಮಿಯೇ
ನನ್ನ ಪ್ರೀತಿಯ ನಿನಗೆ ಅರಿವಿಲ್ಲ
ಅಲ್ಲಿಯವರೆಗೂ ನಾ ನಡೆಯುವೆ ನಿನ್ನ ಜೊತೆ
ಸೋತೆಯೆಂದು ನೀನು ಹೇಳುವ ತನಕ ಒಂದು ಸಾರಿ!!
ಇದಕ್ಕಾಗಿ ನಾ ನಿನ್ನ ಪ್ರೀತಿಸುವೆ
ಅಂದರೆ ನೀನೊಂದು ಮೇಘ ಸೋಮಾರಿ

ತಲತ್ :
ಬಯಕೆವಾಗಿತ್ತು ಈ ನಿಸರ್ಗದಲಿ ಸುರಿಯುವೆಯೆಂದು
ಒಂದು ಮೋಹಕ ಮಡಿಲಲ್ಲಿ ಸುರಿಯುವೆಯೆಂದು
ಆದರೆ ಈ ಸುಟ್ಟ ಮಣ್ಣಲ್ಲಿ ನನ್ನನ್ನು
ಭಾಗ್ಯ ತಂದು ಅಪ್ಪಳಿಸಿದೆ ಬಾರಿ ಬಾರಿ!!
ನನಗಿಷ್ಟು ನೀನು ಪ್ರೀತಿಸದಿರು
ಅಂದರೆ ನಾನೊಂದು ಮೇಘ ಸೋಮಾರಿ

ಮೂಲ : ರಾಜಿಂದರ್ ಕೃಷ್ಣ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ತಲತ್ ಮೆಹಮೂದ್, ಲತಾ ಮಂಗೇಶ್ಕರ್
ಸಂಗೀತ :ಸಲಿಲ್ ಚೌಧರಿ
ಚಿತ್ರ : ಛಾಯಾ
ta:
itanaa na mujhase tu pyaar badhaa
ke mai ek baadal aavaaraa
kaise kisi kaa sahaaraa banun
ke mai khud beghar bechaaraa
itanaa na

ta:
mujhe ek jagah aaraam nahi
ruk jaanaa meraa kaam nahi
meraa saath kahaa tak dogi tum
mai desh videsh kaa bajaaraa

la :
is liye tujhase pyaar karu
ke tu ek baadal avaaraa
janam janam se hu saath tere
ke naam meraa jal ki dhaaraa

la:
o nil gagan ke divaane
tu pyaar na meraa pahachaane
mai tab tak saath chalun tere
jab tak na kahe tu mai haaraa

ta:
aramaan thaa gulashan par barasun
ek shokh ke daaman par barasun
afasos jali mitti pe mujhe
taqadir ne meri de maaraa
itanaa na
http://www.youtube.com/watch?v=m4zAWM6ks6o

Wednesday, 16 October, 2013

ಕವಿ ಮನಸ್ಸು ಮರುಳು

ಪುನಃ 
ಮುಂಜಾನೆ ಆಯಿತು 
ಆದರೆ ಸುಳಿವಿಲ್ಲ 
ಎಲ್ಲೋಯಿತು 
ಮನಸ್ಸು 
ಕವಿ ಮರುಳು 

by ಹರೀಶ್ ಶೆಟ್ಟಿ,ಶಿರ್ವ

ಕವಿ 
ಮನಸ್ಸು ಮರುಳೆ 
ರಜೆಯಲ್ಲೂ 
ನೀನು
ಸತತ 
ಕಾರ್ಯನಿರತ 
by ಹರೀಶ್ ಶೆಟ್ಟಿ,ಶಿರ್ವ

ನದಿಯ ಧಾರೆಯಂತೆ 
ಈ ಮನಸ್ಸಿನ 
ಭಾವಗಳು, 
ತಡೆಹಿಡಿಯುವುದು 
ಹೇಗೆ? 
ಹರಿಯ ಬಿಡುವೆ 
by ಹರೀಶ್ ಶೆಟ್ಟಿ,ಶಿರ್ವ

ಕವಿ ಮನಸ್ಸು ಮರುಳೆ 
ನಿನ್ನ ಆಪ್ತ ವಿಷಯ 
ಈ ಉಗಮ ಸೂರ್ಯನ 
ಒಟ್ಟಿಗೆ 
ನಿನ್ನ ದಿನಾರಂಭ 
ಹಾಗು 
ಚಂದ್ರ ತಾರೆಯರ 
ಜೊತೆ ಆಡಿದ 
ನಂತರ 
ನಿನ್ನ ಭಾವಗಳಿಗೆ ಸ್ವಲ್ಪ ವಿಶ್ರಾಮ
by ಹರೀಶ್ ಶೆಟ್ಟಿ, ಶಿರ್ವ

ಕಳೆದೋದ ಕ್ಷಣಗಳ

ಈಗ ವಿದಾಯ ಹೇಳಬೇಡಿ ಮಿತ್ರರೇ
ಯಾರಿಗೊತ್ತು ಮತ್ತೆಲ್ಲಿ ಭೇಟಿಯಾಗುವುದು
ಯಾಕೆಂದರೆ.....

!!ಕಳೆದೋದ ಕ್ಷಣಗಳ
ವೇದನೆಗಳಾದರೂ ಜೊತೆಯಲ್ಲಿರುವುದು
ಕನಸಲ್ಲಾದರೂ
ಎಂದಿಗೂ ಭೇಟಿಯಾಗುವುದು!!

!!ಈ ಒಲವು
ಈ ಮಿಂದಿದ ನಿಸರ್ಗ ವರ್ಣಮಯ
ಈ ಚಹರೆ ಈ ನೋಟಗಳು
ಈ ಯೌವನ ಋತು ಈ ಕಂಪು ಗಾಳಿಯ
ನಾವೆಲ್ಲಿಯೂ ಹೋದರು
ಇದರ ಸುಗಂಧ ಜೊತೆಯಲ್ಲಿರುವುದು!!
ಕಳೆದೋದ ಕ್ಷಣಗಳ.....

!!ಹೂವಿನ ಹಾಗೆ
ಹೃದಯದಲ್ಲಿ ನೆಲೆಸಿ ಇಟ್ಟಿರಿ
ನೆನಪಿನ ದೀಪಗಳನ್ನು
ಹಚ್ಚಿ ಇಟ್ಟಿರಿ
ದೀರ್ಘವಾಗಿದೆ ಪ್ರವಾಸ
ಇದರಲ್ಲಿ ಹಲವು ರಾತ್ರಿಗಳಿರುವುದು!!
ಕಳೆದೋದ ಕ್ಷಣಗಳ.....

!!ಈ ಒಟ್ಟಿಗೆ
ಕಳೆದ ಕ್ಷಣಗಳ ಸಂಪತ್ತು
ಭಾವನೆಗಳ ಸಂಪತ್ತು
ಅಭಿಪ್ರಾಯಗಳ ಸಂಪತ್ತು
ಹತ್ತಿರ ಏನಿಲ್ಲದಿದ್ದರೂ
ಈ ಕೊಡುಗೆ ಹತ್ತಿರವಿರುವುದು!!
ಕಳೆದೋದ ಕ್ಷಣಗಳ.....

ಮೂಲ : ಹಸನ್ ಕಮಲ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮಹೇಂದ್ರ ಕಪೂರ್
ಸಂಗೀತ : ರವಿ
ಚಿತ್ರ : ನಿಕಾಹ

Abhi Alavida Mat Kaho Doston
Na Jaane Phir Kahaan Mulaaqaat Ho, Kyon Ki

Beete Hue Lamhon Ki Kasak Saath To Hogi
Khwaabon Men Hi Ho, Chaahe Mulaaqaat To Hogi

Ye Pyaar, Ye Doobi Hui Rangeen Fizaaen
Ye Chahere, Ye Nazaare, Ye Javaan Rrut, Ye Havaaen
Ham Jaaen Kahin, In Ki Mahak Saath To Hogi
Beete Hue Lamhon Ki..................

Phoolon Ki Tarah Dil Men Basaae Hue Rakhana
Yaadon Ke Chiraaghon Ko Jalaae Hue Rakhana
Lamba Hai Safar Is Men Kahin Raat To Hogi
Beete Hue Lamhon Ki...................

Ye Saath Guzaare Hue Lamhaat Ki Daulat
Jazbaat Ki Daulat, Ye Khyaalaat Ki Daulat
Kuchh Paas Na Ho, Paas Ye Saughaat To Hogi
Beete Hue Lamhon Ki.....................
http://www.youtube.com/watch?v=dRaCej_XkqQ