Thursday, September 19, 2013

ತಬ್ಬಿಕೋ ನನ್ನನ್ನು

ತಬ್ಬಿಕೋ ನನ್ನನ್ನು
ಮತ್ತೆ ಈ ಮೋಹಕ ರಾತ್ರಿ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ
ಭೇಟಿ ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ನಮಗೆ ಸಿಕ್ಕದೆ ಇಂದು
ಸಮಯ ಭಾಗ್ಯದಿಂದ
ಮನಪೂರ್ತಿ ನೋಡು
ನನ್ನನ್ನು ಸನಿಹದಿಂದ
ಮತ್ತೆ ನಿನ್ನ ಭಾಗ್ಯದಲಿ ಈ ಅವಕಾಶ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ
ಭೇಟಿ ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ಬಳಿಗೆ ಬಂದುಬಿಡು
ಅಂದರೆ ಬರಲಾರೆ ಪದೇ ಪದೇ ನಾನು
ಬಾಹುಗಳಿಂದ ತಬ್ಬಿಹಿಡಿದು
ಅತ್ತು ಬಿಡುವೆ ಬಿಕ್ಕಳಿಸಿ ನಾನು
ಕಣ್ಣಿಂದ ಮತ್ತೆ ಈ ಪ್ರೇಮ ವರ್ಷ
ಆಗುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ ಭೇಟಿ
ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ತಬ್ಬಿಕೋ ನನ್ನನ್ನು
ಮತ್ತೆ ಈ ಮೋಹಕ ರಾತ್ರಿ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ ಭೇಟಿ
ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ವೋ ಕೌನ್ ತಿ

Lag Ja Gale Ki Phir Ye Hasin Raat Ho Na Ho
Shaayad Phir Is Janam Men Mulaaqaat Ho Na Ho
Lag Jaa Gale Se ....................

Ham Ko Mili Hain Aaj, Ye Ghadiyaan Nasib Se
Ji Bhar Ke Dekh Lijiye Ham Ko Qarib Se
Phir Aap Ke Nasib Men Ye Baat Ho Na Ho
Phir Is Janam Men Mulaaqaat Ho Na Ho
Lag Ja Gale Ki Phir Ye Hasin Raat Ho Na Ho

Paas Aaiye Ki Ham Nahin Aaenge Baar-Baar
Baahen Gale Men Daal Ke Ham Ro Le Zaar-Zaar
Aankhon Se Phir Ye Pyaar Ki Barasaat Ho Na Ho
Shaayad Phir Is Janam Men Mulaaqaat Ho Na Ho

Lag Ja Gale Ki Phir Ye Hassin Raat Ho Na Ho
Shaayad Phir Is Janam Men Mulaaqaat Ho Na Ho
Lag Ja Gale Ki Phir Ye Hassin Raat Ho Na Ho
http://www.youtube.com/watch?v=uNMG-QBzuhc

2 comments:

  1. ಒಳ್ಳೆ ಸಿನಿಮಾ ಮಾರಾಯ್ರೇ, ಕೆ.ಎಚ್. ಕಾಪಾಡಿಯಾ ಛಾಯಾಗ್ರಹಣ ಈ ಚಿತ್ರಕ್ಕಿತ್ತು.
    "ಮತ್ತೆಂದು ಈ ಜನ್ಮದಲ್ಲಿ ಭೇಟಿ ಆಗುವುದೋ ಇಲ್ಲವೋ" ಎನ್ನುವ ನಿಮ್ಮ ಈ ಭಾವಾನುವಾದ ನನಗೆ ಒಳ್ಳೆಯ ಒಂದು ಕವಿತೆ ಬರೆಯಿಸಲಿ. :)

    ReplyDelete
    Replies
    1. ತುಂಬಾ ತುಂಬಾ ಧನ್ಯವಾದಗಳು ಬದರಿ ಸರ್.

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...