Saturday, 14 September, 2013

ಬದುಕು

ಮಲ್ಲಿಗೆಯ ಹೂವೊಂದು 
ಹಾರಿ ಬಂದು 
ಗುಲಾಬಿ ಹೂವನ್ನು 
ಅಪ್ಪಿಕೊಂಡಿತು, 
ಗುಲಾಬಿ ಹೂವಿನ ಮುಳ್ಳಿನಿಂದ 
ಮಲ್ಲಿಗೆಯ ಸಂಹಾರ 
___________

ಸೂರ್ಯನ ತಾಪದಿಂದ 
ಭಾರ ಹೊರುವ ಹಮಾಲಿಯ 
ಬೆವರ ಸ್ನಾನ,
ಭಾರ ತಲುಪಿಸಿ
ಕೂಲಿ ಪಡೆದ ನಂತರ
ಅನ್ನ ದರ್ಶನ

____________

ಮರದಿಂದ ಅಗಲಿದ
ಒಣಗಿದ ಎಲೆ
ಈಗ ಅಲೆಮಾರಿ

by ಹರೀಶ್ ಶೆಟ್ಟಿ, ಶಿರ್ವ

No comments:

Post a Comment