Monday, September 30, 2013

ಎಲ್ಲೋ ಒಂದು ಮುದ್ದು ನಾಜೂಕು ಬಾಲೆ

!!ಎಲ್ಲೋ ಒಂದು ಮುದ್ದು ನಾಜೂಕು ಬಾಲೆ
ಅತಿ ಸುಂದರಿ
ಆದರೆ ವರ್ಣ ಶ್ಯಾಮಲೆ!!
ಅತಿ ಸುಂದರಿ...

!!ನನ್ನನ್ನು ತನ್ನ ಕನಸಿನ
ಬಾಹುಗಳಲ್ಲಿ ಕಂಡು
ಕೆಲವೊಮ್ಮೆ ನಿದ್ರೆಯಲಿ
ಅವಳು ಮಂದಹಾಸ ಬೀರಿರಬೇಕು
ಅದೇ ನಿದ್ರೆಯಲಿ ಹೊರಳಾಡಿ ಹೊರಳಾಡಿ
ಶಿರದಿಂದ ತಲೆದಿಂಬನ್ನು ಬೀಳಿಸಿರಬೇಕು!!
ಎಲ್ಲೋ ಒಂದು ಮುದ್ದು....

!!ಅದೇ ಕನಸು
ಮುಂಜಾವದ ದಡದಲ್ಲಿ ಬಂದು
ಅವಳ ಮನಸ್ಸಲ್ಲಿ
ಆಸೆಯನ್ನು ಹುಟ್ಟಿಸಿರಬೇಕು
ಹಲವು ಸಂಗೀತ ಎದೆಯ ಮೌನದಲಿ
ನನ್ನ ನೆನಪಾಗಿ ನುಡಿದಿರಬೇಕು
ಅವಳು ನಿಸ್ಸಂದೇಹ
ಮೆಲ್ಲ ಮೆಲ್ಲ ಧ್ವನಿಯಲಿ
ನನ್ನ ಧ್ಯಾನದಲ್ಲೇನೋ ಗುನುಗುನಿಸುತ್ತಿರಬೇಕು!!
ಎಲ್ಲೋ ಒಂದು ಮುದ್ದು....

!!ಪತ್ರ ಬರೆಯಲೆಂದು
ಮನಸ್ಸಾಗಿರಬೇಕು
ಆದರೆ ಬೆರಳು ಕಂಪಿಸುತ್ತಿರಬೇಕು
ಲೇಖನಿ ಕೈಯಿಂದ
ಜಾರಿ ಹೋಗಿರಬೇಕು
ಅತಿ ಉತ್ಸಾಹ ಲೇಖನಿ
ಪುನಃ ಎತ್ತಿರಬೇಕು
ನನ್ನ ಹೆಸರು ತನ್ನ ಪುಸ್ತಕದಲಿ ಬರೆದು
ಅವಳು ಲಜ್ಜೆಯಿಂದ ಬೆರಳನ್ನು ಕಚ್ಚಿಕೊಂಡಿರಬೇಕು!!
ಎಲ್ಲೋ ಒಂದು ಮುದ್ದು....

!!ಮನದಾಳದಿಂದ
ಭಾವ ಉಕ್ಕಿ ಬಂದು  
ದೇಹ ಮೆಲ್ಲ ಮೆಲ್ಲ ಜ್ವಲಿಸಿರಬೇಕು
ಎಲ್ಲೆಲ್ಲೋ ತನ್ನ ಹೆಜ್ಜೆ ಇಟ್ಟಿರಬೇಕು
ನೆಲದಲ್ಲಿ ಸೆರಗು ತೇಲಿ ಬಂದಿರಬೇಕು
ಕೆಲವೊಮ್ಮೆ ಹಗಲನ್ನು
ರಾತ್ರಿಯೆಂದು ಕರೆದಿರಬೇಕು
ಕೆಲವೊಮ್ಮೆ ರಾತ್ರಿಯನ್ನು
ಹಗಲೆಂದು ಹೇಳಿರಬೇಕು !!
ಎಲ್ಲೋ ಒಂದು ಮುದ್ದು....

ಮೂಲ : ಜಾನಿಸಾರ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಖಯ್ಯಾಮ್
ಚಿತ್ರ : ಶಂಕರ್ ಹುಸ್ಸೈನ್

मुझे अपने ख्वाबों की बाहों में पाकर
कभी नींद में मुस्कुराती तो होगी
उसी नींद में कसमसा-कसमसाकर
सरहाने से तकिये गिराती तो होगी

वही ख्वाब दिन के मुंडेरों पे आके
उसे मन ही मन में लुभाते तो होंगे
कई साझ सीने की खामोशियों में
मेरी याद से झनझनाते तो होंगे
वो बेसख्ता धीमें धीमें सुरों में
मेरी धुन में कुछ गुनगुनाती तो होगी

चलो खत लिखें जी में आता तो होगा
मगर उंगलियाँ कंपकपाती तो होगी
कलम हाथ से छुट जाता तो होगा
उमंगे कलम फिर उठाती तो होंगी
मेरा नाम अपनी किताबों पे लिखकर
वो दातों में उंगली दबाती तो होगी

जुबाँ से कभी अगर उफ् निकलती तो होगी
बदन धीमे धीमे सुलगता तो होगा
कहीं के कहीं पाँव पडते तो होंगे
जमीं पर दुपट्टा लटकता तो होगा
कभी सुबह को शाम कहती तो होगी
कभी रात को दिन बताती तो होगी
http://www.youtube.com/watch?v=18OLz4HB150

Sunday, September 29, 2013

ಉಪಕಾರವಾಗುವುದು ನಿನ್ನ

!!ಉಪಕಾರವಾಗುವುದು ನಿನ್ನ ನನ್ನ ಮೇಲೆ
ಹೃದಯ ಬಯಸಿದನ್ನು ಹೇಳಲು ಬಿಡು
ನನಗೆ ನಿನ್ನಿಂದ ಪ್ರೀತಿಯಾಗಿದೆ
ನನಗೆ ಕಣ್ರೆಪ್ಪೆಯ ನೆರಳಲಿ ಇರಲು ಬಿಡು!!
ನನಗೆ ನಿನ್ನಿಂದ ....

!!ನೀನು ನನಗೆ ನಗುವುದನ್ನು ಕಲಿಸಿದೆ
ಅಳ ಬೇಕೆಂದರೆ ಅತ್ತು ಬಿಡುವೆ ನಾನು
ಈ ನನ್ನ ಕಣ್ಣೀರಿನ ನೀನು ವ್ಯಥೆ ಪಡದಿರು
ಇದು ಹರಿಯುತ್ತಿದ್ದರೆ ಹರಿಯ ಬಿಡು!!
ನನಗೆ ನಿನ್ನಿಂದ .....

!!ಮನಸ್ಸಿದ್ದರೆ ರಚಿಸು ಅಥವಾ ಅಳಿಸಿಬಿಡು
ಅಗಲಿದರೂ ಹರಸುವೆ ನಿನಗೆ
ನನ್ನ ಉಳಿದ ಅವಶೇಷ ಹೇಳುವುದು ಇನಿಯ
ಈ ಒಲವಿನ ನೋವನ್ನು ಸಹಿಸಲು ಬಿಡು!!
ನನಗೆ ನಿನ್ನಿಂದ .....

ಮೂಲ : ಹಸರತ್ ಜೈಪುರಿ 
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
ಹಾಡಿದವರು : ಮೊಹಮ್ಮದ್ ರಫಿ,ಲತಾ ಮಂಗೇಶ್ಕರ್  
ಸಂಗೀತ:ಶಂಕರ್ ಜೈ ಕಿಶನ್ 
ಚಿತ್ರ : ಜಂಗಲೀ 

एहसान तेरा होगा मुझ पर
दिल चाहता है वो कहने दो
मुझे तुमसे मोहब्बत हो गयी है
मुझे पलकों की छाँव में रहने दो

तुमने मुझको हँसना सिखाया
रोने कहोगे रो लेंगे अब
आंसू का हमारे गम ना करो
वो बहते हैं तो बहने दो
मुझे तुमसे...

चाहे बना दो चाहे मिटा दो
मर भी गए तो देंगे दुआएं
उड़-उड़ के कहेगी ख़ाक सनम
ये दर्द-ए-मोहब्बत सहने दो
मुझे तुमसे...
www.youtube.com/watch?v=-Jl6fVqLqVg

ನನ್ನನ್ನು ಹೀಗೆ ಮರೆಯಲಾರೆ ನೀನು

!!ನನ್ನನ್ನು ಹೀಗೆ ಮರೆಯಲಾರೆ ನೀನು
ಹೌದು, ನನ್ನನ್ನು ಹೀಗೆ ಮರೆಯಲಾರೆ ನೀನು
ಎಂದೆಂದು ಕೇಳಿದರೆ ನನ್ನ ಹಾಡನ್ನು
ಜೊತೆ ಜೊತೆಯಲಿ ಹಾಡುವೆ ನೀನೂ!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು

!!ಆ ವಸಂತ ಋತು, ಆ ರಾತ್ರಿ ಹುಣ್ಣಿಮೆಯ
ನಾವು ನುಡಿದ ಮಾತುಗಳೆಲ್ಲಾ ಪ್ರೀತಿಯ-೨
ಆ ನೋಟಗಳೆಲ್ಲ ನೆನಪಾಗುವುದು
ಎಂದೆಂದು ನನ್ನನ್ನು ಸ್ಮರಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು

!!ನನ್ನ ಕೈಗಳಲ್ಲಿ ನಿನ್ನ ಚಹರೆ ಇತ್ತು
ಯಾವುದೇ ಗುಲಾಬಿ ಹೂವು ಇದ್ದಂತೆ-೨
ಹಾಗು ಬಾಹುಗಳು ಸಹಾಯವಾಗಿತ್ತು
ಆ ಸಂಜೆ ಹೇಗೆ ಮರೆಯುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು

!!ನನ್ನನ್ನು ನೋಡದೆ ನೆಮ್ಮದಿ ಇರುತ್ತಿರಲಿಲ್ಲ
ಒಂದು ಹೀಗೆ ಸಹ ಸಮಯವೂ ಕಳೆದೋಗಿದೆ-೨
ಸುಳ್ಳಾದರೆ ಕೇಳು ಹೃದಯದಿಂದ
ನಾನು ಹೇಳಿದರೆ ಮುನಿಸುವೆ ನೀನು!!
ನನ್ನನ್ನು ಹೀಗೆ ಮರೆಯಲಾರೆ ನೀನು
ಓ, ನನ್ನನ್ನು ಹೀಗೆ ಮರೆಯಲಾರೆ ನೀನು

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ:ಶಂಕರ್ ಜೈ ಕಿಶನ್
ಚಿತ್ರ : ಪಗಲ ಕಹಿ ಕಾ


Tum mujhe yun bhula na paoge
Haan tum mujhe yun bhula na paoge
Jab kabhi bhi sunoge geet mere
Sang sang tum bhi gungunaoge
Haan tum mujhe yun bhula na paoge
Ho tum mujhe yun

Woh baharein woh chandani raatein
Humne ki thi jo pyar ki baatein
Woh baharein woh chandani raatein
Humne ki thi jo pyar ki baatein
Un nazaron ki yaad aayegi
Jab khayalo mein mujhko laaoge
Haan tum mujhe yun bhula na paoge
Ho tum mujhe yun

Mere hathon mein tera chera tha
Jaise koi gulab hota hain
Mere hathon mein tera chera tha
Jaise koi gulab hota hain
Aur sahara liya tha baahon ka
Woh sama kis tarah bhulaoge
Haan tum mujhe yun bhula na paoge
Ho tum mujhe yun

Mujhko dekhe bina karaar na tha
Ek aisa bhi daur gujara hain
Mujhko dekhe bina karaar na tha
Ek aisa bhi daur gujara hain
Jhoot maano to pooch lo dil se
Main kahonga to rooth jaaoge
Haan tum mujhe yun bhula na paoge
Jab kabhi bhi sunoge geet mere
Sang sang tum bhi gungunaoge
Haan tum mujhe yun bhula na paoge
Ho tum mujhe yun
www.youtube.com/watch?v=3WQAfAfxFoI

Saturday, September 28, 2013

ಮಾಲಿ

ಮಾಲಿ
-------
ಉದ್ಯಾನದಲ್ಲಿ ಅರಳಿದ
ಸಾವಿರಾರು ಹೂವಿನ
ಕಣ್ಣಲ್ಲಿ ಉಪಕಾರದ ಭಾವ,
ಪ್ರೀತಿ ವಾತ್ಸಲ್ಯದಿಂದ
ಅವುಗಳನ್ನು ಕಾಪಾಡುತ್ತಿದ್ದ
ಮಾಲಿಯನ್ನು ಕಂಡು
------------
ಸಾಕಿದ ಗಿಡ
ಹೂವು ಬಿಡುವಾಗ
ಗಿಡಕ್ಕಿಂತ ಹೆಚ್ಚು
ಮಾಲಿಗೆ
ಹೂವು ಅರಳುವ ನಿರೀಕ್ಷೆ
------------
ಮರದಲ್ಲಿ ಬೆಳೆದ
ಸುಂದರ ಮಾವಿನ ಹಣ್ಣು
ಕಂಡು ಮಾಲಿಗೆ ಸಂತೃಪ್ತಿ,
ಇತರರಿಗೆ ಅದರ ರುಚಿ
ನೋಡಬೇಕೆಂದು ಆಸೆ
------------
ಮರದ ಹಣ್ಣು ಕೊಯ್ದು
ತಿಂದ ಮಕ್ಕಳ
ಮುಖದಲ್ಲಿ ಹರ್ಷ,
ಬರಿದಾದ ಮರವನ್ನು ನೋಡಿ
ಮಾಲಿಯ ಕಣ್ಣಲಿ ಅಶ್ರು ವರ್ಷ

by ಹರೀಶ್ ಶೆಟ್ಟಿ,ಶಿರ್ವ 

ಹೇ ಜೀವನ ತಬ್ಬಿಕೊಳ್ಳು

ಹೇ ಜೀವನ ತಬ್ಬಿಕೊಳ್ಳು
ನಾನೂ ನಿನ್ನ ಪ್ರತಿಯೊಂದು ಕಷ್ಟವನ್ನು
ತಬ್ಬಿಕೊಂಡಿದ್ದೇನೆ, ಹೌದಲ್ಲವೇ
ಹೇ ಜೀವನ ತಬ್ಬಿಕೊಳ್ಳು
ತಬ್ಬಿಕೊಳ್ಳು

ನಾನು ನೆಪದಿಂದ
ಗುಟ್ಟಾಗಿ ಜಗದಿಂದ
ಕಣ್ರೆಪ್ಪೆಯ ಪರದೆಯಲಿ
ಮನೆ ತುಂಬಿಸಿದೆ-೨
ನಿನ್ನ ಆಸರೆ ಸಿಕ್ಕಿದೆ ಜೀವನ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ನಿನ್ನ ಆಸರೆ ಸಿಕ್ಕಿದೆ ಜೀವನ

ಹೇ ಜೀವನ ತಬ್ಬಿಕೊಳ್ಳು
ನಾನೂ ನಿನ್ನ ಪ್ರತಿಯೊಂದು ಕಷ್ಟವನ್ನು
ತಬ್ಬಿಕೊಂಡಿದ್ದೇನೆ, ಹೌದಲ್ಲವೇ
ಹೇ ಜೀವನ ತಬ್ಬಿಕೊಳ್ಳು
ತಬ್ಬಿಕೊಳ್ಳು

ಸಣ್ಣದೊಂದು ನೆರಳಿತ್ತು
ಕಣ್ಣಲ್ಲಿ ಬಂದಿತ್ತು
ನಾನೆರಡು ಹನಿಯಿಂದ
ಮನಸ್ಸನ್ನು ತೃಪ್ತ ಪಡಿಸಿದೆ
ನನಗೆ ತಟ ಸಿಕ್ಕಿದೆ ಜೀವನ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
ನನಗೆ ತಟ ಸಿಕ್ಕಿದೆ ಜೀವನ

ಹೇ ಜೀವನ ತಬ್ಬಿಕೊಳ್ಳು
ನಾನೂ ನಿನ್ನ ಪ್ರತಿಯೊಂದು ಕಷ್ಟವನ್ನು
ತಬ್ಬಿಕೊಂಡಿದ್ದೇನೆ, ಹೌದಲ್ಲವೇ
ಹೇ ಜೀವನ ತಬ್ಬಿಕೊಳ್ಳು
ತಬ್ಬಿಕೊಳ್ಳು

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಸುರೇಶ ವಾಡ್ಕರ್
ಸಂಗೀತ : ಇಳಯರಾಜ
ಚಿತ್ರ :ಸದ್ಮಾ
Ae zindagi gale laga le
Ae zindagi gale laga le
Hum ne bhi tere har ik gam ko gale se lagaya hai, Hai na
Ae Zindagi Gale Laga Le
Ae Zindagi

Hum Ne Bahane Se, Chhup Ke Jamane Se
Palkon Ke Parde Main Ghar Bhar Liya
Hum Ne Bahane Se, Chhup Ke Jamane Se
Palkon Ke Parde Main Ghar Bhar Liya
Tera Sahara Mil Gaya Hai Zindagi
La La Lala La La Lala La La La
Tera Sahara Mil Gaya Hai Zindagi

Ae Zindagi Gale Laga Le
Ae Zindagi Gale Laga Le
Hum Ne Bhi Tere Har Ik Gam Ko
Gale Se Lagaya Hai
Hai Na 
Ae Zindagi Gale Laga Le
Ae Zindagi

Chhota Sa Saya Tha, Aakhon Main Aaya Tha,
Humne Do Boondon Se Mann Bhar Liye
Chhota Sa Saya Tha, Aakhon Main Aaya Tha,
Humne Do Boondon Se Mann Bhar Liye
Humko Kinaara Mil Gaya Hai Zindagi
La La Lala La La Lala La La La
Humko Kinaara Mil Gaya Hai Zindagi

Ae Zindagi Gale Laga Le
Ae Zindagi Gale Laga Le
La La Lala La La Lala La La La
Hain Na?
Ae Zindagi Gale Laga Le
Gale Laga Le
Gale Laga Le
Gale Laga Le
Ho, Gale Laga Le
www.youtube.com/watch?v=0BXqAnZWqdQ

ಈ ಭೇಟಿಯೊಂದು ನೆಪವಾಗಿದೆ

!!ಈ ಭೇಟಿಯೊಂದು ನೆಪವಾಗಿದೆ
ಪ್ರೀತಿಯ ಪರಂಪರೆ ಹಳೆಯದಾಗಿದೆ!!
ಈ ಭೇಟಿಯೊಂದು...

!!ಮಿಡಿತ ಮಿಡಿತಗಳಲ್ಲಿ ಮರೆಯಾಗುವುದು
ಹೃದಯವನ್ನು ಹೃದಯದ ಸಮೀಪ ತರಲಿದೆ!!
ಈ ಭೇಟಿಯೊಂದು ...

!!ನಾನಿದ್ದೇನೆ ನನ್ನ ಇನಿಯನ ಬಾಹುಗಳಲ್ಲಿ
ನನ್ನ ಕಾಲ ಅಡಿಯಲಿ ಜಗತ್ತಿದೆ!!
ಈ ಭೇಟಿಯೊಂದು ...

!!ಸ್ವಪ್ನ ಗಾಜಿಗಿಂತ ನಾಜೂಕಾಗಿದೆ
ಮುರಿಯದಂತೆ ಇದನ್ನು ಕಾಪಾಡಬೇಕಾಗಿದೆ!!
ಈ ಭೇಟಿಯೊಂದು ...

!!ಮನಸ್ಸು ನನ್ನ ಪ್ರೀತಿಯ ದೇವಾಲಯ
ನಿನ್ನನ್ನು ದೇವರಂತೆ ಪೂಜಿಸಲಿದೆ!!
ಈ ಭೇಟಿಯೊಂದು...

ಮೂಲ : ನಕ್ಷ ಲಯ್ಲ್ಲಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಖಯ್ಯಾಮ್
ಚಿತ್ರ : ಖಾನ್ ಧಾನ್
ये मुलाक़ात एक बहाना है
प्यार का सिलसिला पुराना है

धड़कनें धड़कनों में खो जाए
दिल को दिल के करीब लाना है

मैं हूँ अपने सनम की बाहों में
मेरे पैरों तले ज़माना है

ख्वाब तो कांच से भी नाजुक है
टूटने से इन्हें बचाना है

मन मेरा प्यार का शिवाला है
आप को देवता बनाना है

Thursday, September 26, 2013

ಪ್ರಕೃತಿ

ಹುಣ್ಣಿಮೆ ಬೆಳಕು
ಅಮಾವಾಸ್ಯ ಕತ್ತಲು
------------
ಮರದ ತುದಿಯಲ್ಲಿ ಗೂಡು
ಗಗನದ ಸಮೀಪ
ಹಾರುವ ಒಂದು ಪ್ರತ್ಯೇಕ ಆನಂದ
ಕಣ್ಣ ನೋಟ ತೀಕ್ಷ್ಣ
ಆದರೆ ಕೆಳಗಿನವರು ಕಂಡು ಬರುವುದಿಲ್ಲ
ಬಿದ್ದಾಗ ಉಸಿರಿಲ್ಲ
--------------
ಪ್ರಕೃತಿಯ ತನ್ನದೇ ನಿಯಮ
ಬಿಸಿಲು,ಗಾಳಿ, ಮಳೆ
ಆದರೆ ಎಲ್ಲರ ಪ್ರತ್ಯೇಕ ಅನುಭವ
ಕೆಲವರ ಭೂಮಿ ಬಂಜರು
ಕೆಲವರ ಭೂಮಿ ಫಲಿತ
--------------
ಪೂರ್ಣ ಚಂದ್ರ ಅಂದರೆ
ಕರಗಲು ಸಿದ್ಧ
-------------
ಸೂರ್ಯನ ಪ್ರತಾಪ
ಸಂಜೆ ತನಕ
ಮುಳುಗುವುದು ನಿಶ್ಚಿತ
------------
ಹೂವಿನ
ಅಂದ ಸುಗಂಧ
ಬಾಡುವ ತನಕ

by ಹರೀಶ್ ಶೆಟ್ಟಿ, ಶಿರ್ವ

ಚಕ್ರವ್ಯೂಹ

ನಾನು ಭಾವನೆಯ ಚಕ್ರವ್ಯೂಹದಲ್ಲಿ 
ಕವಿತೆ ಕತೆ ಮೂಡುವುದು ಸ್ವಾಭಾವಿಕ
by ಹರೀಶ್ ಶೆಟ್ಟಿ, ಶಿರ್ವ 

ನಿನ್ನಿಂದ ಮುನಿಸಿಲ್ಲ

!!ನಿನ್ನಿಂದ ಮುನಿಸಿಲ್ಲ ಜೀವನ
ವಿಸ್ಮಯದಲ್ಲಿರುವೆ ನಾನು
ವಿಸ್ಮಯದಲ್ಲಿರುವೆ ನಾನು
ನಿನ್ನ ಮುದ್ದು ಪ್ರಶ್ನೆಗಳಿಂದ
ಸೋತಿರುವೆ ನಾನು
ಸೋತಿರುವೆ ನಾನು!!

!!ಯೋಚಿಸಿರಲಿಲ್ಲ ಬದುಕಲು
ನೋವಿನ ಭಾರ ಹೊರಬೇಕೆಂದು
ನಕ್ಕರೆ, ನಗುವಿನ
ಋಣ ತೀರಿಸಬೇಕೆಂದು
ಈಗ ನಕ್ಕಗಲೆಲ್ಲಾ ಹೀಗೆ ಅನಿಸುತ್ತದೆ
ತುಟಿಯ ಮೇಲೆ ಋಣ ಇಟ್ಟಂತೆ!!
ನಿನ್ನಿಂದ ಮುನಿಸಿಲ್ಲ....

!!ಬದುಕು ನಿನ್ನ ಕಷ್ಟಗಳು
ನನಗೆ ತಿಳಿಸಿಕೊಟ್ಟಿದೆ ಹೊಸ ಸಂಬಂಧಗಳನ್ನು
ಸಿಕ್ಕಿದವರು ಬಿಸಿಲಲ್ಲಿ ಸಿಕ್ಕಿದರು
ನೀಡಿದರು ತಂಪು ನೆರಳಿನ ಆಸರೆಯನ್ನು!!
ನಿನ್ನಿಂದ ಮುನಿಸಿಲ್ಲ....

!!ಇಂದು ಒಂದು ವೇಳೆ ತುಂಬಿ ಬಂದಿದರೆ
ಹನಿಯಾಗಿ ಸುರಿದೋಗುವುದು
ನಾಳೆ ಯಾರಿಗೊತ್ತು ಇದಕ್ಕಾಗಿ
ಕಂಗಳು ಹಂಬಲಿಸಬಹುದು
ಯಾವಾಗ ಕಳೆದೋಯಿತು
ಎಲ್ಲಿ ಮರೆಯಾಯಿತು!!
ಒಂದು ಕಣ್ಣೀರ ಹನಿ ಅಡಗಿಸಿಟ್ಟಿದೆ
ನಿನ್ನಿಂದ ಮುನಿಸಿಲ್ಲ....

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಅನುಪ್ ಘೋಶಾಲ್ (male solo),ಲತಾ ಮಂಗೇಶ್ಕರ್ (female solo)
ಸಂಗೀತ : ಆರ್. ಡಿ.ಬರ್ಮನ್
ಚಿತ್ರ : ಮಾಸೂಮ್

Tujhse Naaraaz Nahiin Zindagi
Hairaan Hoon Main
O Hairaan Huun Main
Tere Masum Sawaalon Se Pareshaan Hoon Main
O Pareshaan Hoon Main

Jeene Ke Liye Sochaa Hi Nahi
Dard Sambhaalane Honge

Jeene Ke Liye Sochaa Hi Nahi
Dard Sambhaalane Honge

Muskuraaye To, Muskuraane Ke Karz Utarne Honge
Muskuraauun Kabhii To Lagataa Hai
Jaise Honthon Pe Karz Rakhaa Hai

Ho Tujhse Naaraaz Nahiin Zindagi
Hairaan Hoon Main
O Hairaan Huun Main

[Zindagii Tere Gam Ne Hamein
Rishte Naye Samajhaaye ]2

Mile Jo Hamein Dhoop Mein Mile
Chaanv Ke Thande Saaye

Ho Tujhse Naaraaz Nahin Zindagi
Hairaan Hoon Main
O Hairaan Huun Main

Aaj Agar Bhar Aai Hain
Boondein Baras Jaayengi
Kal Kyaa Pataa Inke Liye
Aankhein Taras Jaayengi
Jaane Kab Gum Kahaan Khoyaa
Ek Ansuun Chhupaake Rakhaa Thaa

Ho Tujhse Naaraaz Nahin Zindagi
Hairaan Hoon Main
O Hairaan Huun Main

ಅಲೆಗಳ ಅರ್ಭಟ

ಏಕಾಂತದಲಿ ಮೌನ ಕುಳಿತ್ತಿದ್ದಾಗ 
ಸಾಗರದ ಅಲೆಗಳ ಅರ್ಭಟ 
by ಹರೀಶ್ ಶೆಟ್ಟಿ,ಶಿರ್ವ

ಏಕಾಂತದಲಿ ಮೌನ ಕುಳಿತ್ತಿದ್ದಾಗ 
ನೆನಪ ಅಲೆಗಳ ಅರ್ಭಟ 
by ಹರೀಶ್ ಶೆಟ್ಟಿ,ಶಿರ್ವ

ನನ್ನ ಮಾತು ಅವಳ ಕತೆ

ನನ್ನಲ್ಲಿ ನಾನಿರಲಿಲ್ಲ 
ಅವಳಲ್ಲೇ ನಾನಿದ್ದದ್ದು 
------------

ನಾನು ಪೂಜಿಸಿದ್ದು 
ಅವಳು ಫಲ ಪಡೆದದ್ದು 

------------

ನಾನು ಪ್ರಯತ್ನಿಸಿದ್ದು 
ಅವಳು ಸಾದಿಸಿದ್ದು

------------

ನಾನು ನುಡಿದದ್ದು
ಅವಳು ಕೇಳದೆ ನಡೆದದ್ದು

------------

ನಾನು ಬರೆದದ್ದು
ಅವಳು ಹರಿದದ್ದು

by ಹರೀಶ್ ಶೆಟ್ಟಿ,ಶಿರ್ವ

Wednesday, September 25, 2013

ಉಡುಗೊರೆ

ಗೆಳತಿ...
ತನ್ನ ಜೀವನದ
ಸರ್ವಸ್ವ
ನನಗೆ
ನೀಡಿದ
ನಿನಗೆ
ನಾನೇನು
ಉಡುಗೊರೆ
ನೀಡಲಿ

by ಹರೀಶ್ ಶೆಟ್ಟಿ,ಶಿರ್ವ

ಜೀವನದ ಪಯಣದಲಿ

ಜೀವನದ ಪಯಣದಲಿ  
ಹಾದುಹೋದ ಆ ಗಮ್ಯಸ್ಥಾನ
ಎಂದೂ ಪುನಃ ಮರಳಿ ಬರುವುದಿಲ್ಲ
ಎಂದೂ ಪುನಃ ಮರಳಿ ಬರುವುದಿಲ್ಲ

ಹೂವರಳುವುದು
ಜನರ ಭೇಟಿಯಾಗುವುದು ಆದರೆ
ಶಿಶಿರದಲಿ ಬಾಡಿದ ಹೂಗಳೆಂದೂ
ವಸಂತ ಬಂದಾಗ ಅರಳುವುದಿಲ್ಲ
ಒಂದು ದಿನ ನಮ್ಮಿಂದಗಲಿದ ಜನರೆಂದೂ
ಸಾವಿರ ಜನ ಬಂದರೂ ಸಿಗುವುದಿಲ್ಲ
ಜೀವನ ಪರ್ಯಂತ ಅವರೆಸರು ಕರೆದರೂ
ಎಂದೂ ಪುನಃ ಮರಳಿ ಬರುವುದಿಲ್ಲ
ಜೀವನದ... 


ಕಣ್ಣು ಮೋಸವೊಂದು
ವಿಶ್ವಾಸ ಅಂದರೇನು ಕೇಳಿ
ಗೆಳೆಯರೇ ಸಂಶಯ 
ಗೆಳೆತನದ ವೈರಿಯಾಗಿದೆ
ತನ್ನ ಹೃದಯದಲಿ ಇದನ್ನು  

ನೆಲೆಸ ಬಿಡಬೇಡಿ
ನಾಳೆ ಪಶ್ಚಾತಾಪ ಪಡಬೇಕಾಗಬಹುದು 

ಅವರ ನೆನಪಲಿ
ನಿಲ್ಲಿಸಿ ಅವರನ್ನು 

ಮುನಿಸಿ ಹೋಗಲು ಬಿಡಬೇಡಿ
ನಂತರ ಆ ಪ್ರೀತಿಗೆ ಸಾವಿರ 

ಸಂದೇಶ ಕಳಿಸಿದರೂ
ಎಂದೂ ಪುನಃ ಮರಳಿ ಬರುವುದಿಲ್ಲ
ಎಂದೂ ಪುನಃ ಮರಳಿ ಬರುವುದಿಲ್ಲ
ಜೀವನದ... 


ಹಗಲಾಗುವುದು  

ರಾತ್ರಿ ಹೋಗುವುದು ಹೀಗೆಯೇ
ಸಮಯ ಕಳೆದೋಗುತ್ತದೆ ನಿಲ್ಲುವುದಿಲ್ಲ
ಒಂದು ಕ್ಷಣದಲ್ಲಿ ಇದು ಮುಂದೆ ಸಾಗುತ್ತದೆ
ಮನುಷ್ಯನಿಗೆ ಸರಿಯಾಗಿ ನೋಡಲಾಗುವುದಿಲ್ಲ
ಹಾಗು ತೆರೆಯಲ್ಲಿ ದೃಶ್ಯ ಬದಲಾಗುತ್ತದೆ
ಒಂದು ವೇಳೆ ಹೋದವರು 

ಹಗಲು ರಾತ್ರಿ ದಿನ ಅಥವಾ ಸಂಜೆಯಾಗಲಿ
ಎಂದೂ ಪುನಃ ಮರಳಿ ಬರುವುದಿಲ್ಲ
ದೂ ಪುನಃ ಮರಳಿ ಬರುವುದಿಲ್ಲ

ಜೀವನದ... 


ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್ . ಡಿ .ಬರ್ಮನ್
ಚಿತ್ರ : ಆಪ್ ಕಿ ಕಸಮ್



zindagi ke safar mein guzar jate hain jo makam,
woh phir nahin aate,
woh phir nahin aate!
zindagi ke safar mein,guzar jate hain jo makam
woh phir nahin aate,
woh phir nahin aate
phool khilte hain,
log milte hain
phool khilte hain,
log milte hain magar
patjhad main jo phool
murjha jate hain
woh baharon ke aane se khilte nahin
kuchh log ek roz jo bichad jate hain
woh hazaron ke aane se milte nahin
umr bhar chahe koi pukara kare unka naam
woh phir nahin aate,
woh phir nahin aate
aak dhoka hai
kya bharosa hai
aak dhooka hai kya bharosa hai suno
doston shak dosti ka dushman hai
apne dil me ise ghar banane na do
kal tadapna pade yaad me Jeen ki
rok lo roothkar unko jaane na do
baad me pyaar ke chahe bhejo hazaroon salaam
woh phir nahi aate
woh phir nahi aate
subaah aati hai
raat jaati hai
subaah aati hai
raat jaati hai yuhi
waqt chalta hi rehta hai rukta nahi
ek pal me ye aage nikal jaata hai
aadmi theek se dekh paata nahin
aur parde pe manzar badal jaata hai,
ek baar chale jaate hai jo din raat subaah shaam
woh phir nahi aate
woh phir nahi aate!
zindagi ke safar mein,guzar jate hain jo makam
woh phir nahin aate,
woh phir nahin aate!
www.youtube.com/watch?v=Fr-r5NAhOZo

Tuesday, September 24, 2013

ನನ್ನಿಂದ ಒಲವೊಂದಿದ್ದರೆ

ನನ್ನಿಂದ ಒಲವೊಂದಿದ್ದರೆ
ನಿನ್ನೆಲ್ಲಾ ಕಷ್ಟ ನನಗೆ ನೀಡು
ಈ ಕಣ್ಣಿನ ಪ್ರತಿಯೊಂದು ಕಣ್ಣೀರು
ನನ್ನಾಣೆ ನನಗೆ ನೀಡು
ನನ್ನಿಂದ ಒಲವೊಂದಿದ್ದರೆ....

ನಿನ್ನ ದುಃಖವನ್ನು ನನ್ನ ಮಾಡಿಕೊಂಡರೆ
ನೆಮ್ಮದಿ ಪಡೆಯುವೆ
ನಿನ್ನ ನೋವನ್ನು ನನ್ನೆದೆಯಲಿ ಬಚ್ಚಿಟ್ಟರೆ 
ನೆಮ್ಮದಿ ಪಡೆಯುವೆ
ನಿನಗೆ ದುಃಖ ನೀಡುತ್ತಿರುವ
ಆ ಪ್ರತಿಯೊಂದು ವಸ್ತುವನ್ನು 

ನನ್ನೊಲವೆ ನನಗೆ ನೀಡು
ನನ್ನಿಂದ ಒಲವೊಂದಿದ್ದರೆ....

ಅರ್ಧಾಂಗಿಯಾದ ನನಗೇಕೆ
ಕಷ್ಟದ ಬಾಗಿ ಮಾಡುವುದಿಲ್ಲ ನೀನು
ಕಷ್ಟವನ್ನೆಲ್ಲಾ ಹೇಳಿ ಯಾಕೆ
ದುಃಖವನ್ನು ಕಡಿಮೆ ಮಾಡುವುದಿಲ್ಲ ನೀನು 
ವ್ಯಥೆ ನಿನ್ನ ಹೃದಯದ ಸ್ವಲ್ಪ
ನನ್ನೊಲವೆ ನನಗೆ ನೀಡು
ನನ್ನಿಂದ ಒಲವೊಂದಿದ್ದರೆ....

ಈ ಕಣ್ಣಲ್ಲಿ ನನಗೆಂದೂ
ಈ ಕಣ್ಣೀರು ಕಾಣದಿರಲಿ
ಸದಾ ನಗುತ್ತಿರಲಿ ಈ ಕಂಗಳು 
ಸದಾ ಈ ಅಧರ ನಗುತ್ತಿರಲಿ
ನನಗೆ ನಿನ್ನೆಲ್ಲಾ ಕೊರಗು
ಎಲ್ಲಾ ನೋವು ಸಂಕಟ ನೀಡು
ನನ್ನಿಂದ ಒಲವೊಂದಿದ್ದರೆ....

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಆಪ್ ಕಿ ಪರ್ಚಾಯಿಯಾ


Agar Mujhse Mohabbat Hain
Mujhe Sab Apane Gam De Do
In Aankhon Kaa Har Yek Aansoo
Mujhe Meree Kasam De Do

Tumhaare Gam Ko Apanaa Gam Banaa Lo
To Karaar Aaye
Tumhaaraa Dard Seene Mein Chhoopaa Lo
To Karaar Aaye
Woh Har Shay Jo 
Tumhe Dukh De
Mujhe Mere Sanam De Do

Shareek-Ye-Zindagi Ko Kyon
Shareek-Ye-Gam Naheen Karate
Dukhon Ko Baatakar Kyon 
In Dukhon Ko Kam Naheen Karate
Tadap Is Dil Kee Thodee See
Mujhe Mere Sanam De Do

In Aakhon Mein Naa Ab Mujh Ko Kabhee Aasoo Najar Aaye
Sadaa Hasatee Rahe Aankhe
Sadaa Ye Honthh Musakaye
Mujhe Apanee Sabhee Aahe
Sabhee Dard-O-Alam De Do 
www.youtube.com/watch?v=t7sOemYL-mA

Monday, September 23, 2013

ನಾ ನನ್ನ ಕಥೆಯನ್ನು ಹೇಳಿಕೊಂಡರೆ

ನಾ ನನ್ನ ಕಥೆಯನ್ನು ಹೇಳಿಕೊಂಡರೆ
ನೀನು ಅಳುವುದೇಕೆ
ದುಸ್ಥಿತಿ ನನ್ನ ಹೃದಯಕ್ಕೆ ಬಂದಿದೆ
ನೀನು ಅಳುವುದೇಕೆ

ಈ ನೋವು ಕೊರಗು ನನ್ನದಾಗಿದೆ
ನೀನೇಕೆ ಸಹಿಸುತ್ತಿರುವೆ ಇದನ್ನ
ಅದೇಕೆ ನನ್ನ ಕಣ್ಣೀರು
ನಿನ್ನ ಕಣ್ಣಿಂದ ಹರಿಯುತ್ತಿದೆ ಚಿನ್ನ
ದುಃಖದ ಅಗ್ನಿ ನಾನೇ ಹಚ್ಚಿದ್ದೇನೆ
ನೀನು ಅಳುವುದೇಕೆ
ನಾ ನನ್ನ.....

ತುಂಬಾ ಅತ್ತು ಬಿಟ್ಟೆ ಆದರೆ  
ಇನ್ನು ನಿನಗೋಸ್ಕರ ಅಳಲಾರೆ
ನನ್ನ ನೆಮ್ಮದಿ ಕಳೆದುಕೊಂಡು
ನಿನ್ನ ನೆಮ್ಮದಿಯನ್ನು ಹಾಳು ಮಾಡಲಾರೆ
ಕಳವಳ ನಿನ್ನ ಅಶ್ರು ತಂದಿದೆ
ನೀನು ಅಳುವುದೇಕೆ
ನಾ ನನ್ನ.....

ಈ ಕಣ್ಣೀರು ನಿಲ್ಲದಿದ್ದರೆ ನೋಡಿನ್ನು
ನಾನೂ  ರೋದಿಸುವೆ
ನಾನು ನನ್ನ ಕಣ್ಣೀರಿನಲ್ಲಿ
ಚಂದ್ರ ತಾರೆ ಮುಳುಗಿಸುವೆ
ಮುಗಿದೋಗುವುದು ಎಲ್ಲಾ ನೋವು ಸಂಕಟ
ನೀನು ಅಳುವುದೇಕೆ
ನಾ ನನ್ನ.....


ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ವೋ ಕೌನ್ ತಿ
Jo humne dastan apni sunayi
aap kyun roye
Tabahi to hamare dil pe aayi
aap kyun roye
Hamara dard-o-gham hai yeh ise kyun
aap sehte hain
Yeh kyun aasoon hamare aapki
aankhon se behte hain
Ghamon ki aag humne khud lagayi
aap kyun roye
Jo humne dastan apni sunayi
aap kyun roye
Bahut roye magar ab aapki
khaatir na royenge
Na apna chain khokar aapka
hum chain khoyenge
Qayamat aapke ashkon ne dhaayi
aap kyun roye
Jo humne dastan apni sunayi
aap kyun roye
Na yeh aansoon ruke to dekhiye phir
hum bhi ro denge
Hum apne aansuon mein chand taaron
ko doobo denge
Fanaah ho jaayegi saari khudai
aap kyun roye
Jo humne dastan apni sunayi
aap kyun roye

Sunday, September 22, 2013

ಸುಮ್ಮನೆ ಕಲ್ಪನೆ

ಸುಮ್ಮನೆ ಕಲ್ಪನೆ
ಸುಂದರ ಹೂವಾಗಬೇಕೆಂದು
ಅಂದವಾಗಿ  ಅರಳಿ
ಅನೇಕರ ಮನ ಮೋಹಿಸಬೇಕೆಂದು
ಸುಮ್ಮನೆ ಕಲ್ಪನೆ

ವಿಶಾಲ ಮರವಾಗಬೇಕೆಂದು
ಹಣ್ಣು ತುಂಬಿದ
ಹಣ್ಣ ರುಚಿ ಸವಿದವರು ತೃಪ್ತರಾಗಬೇಕೆಂದು
ಸುಮ್ಮನೆ ಕಲ್ಪನೆ

ಹರಿಯುವ ನದಿಯಾಗಬೇಕೆಂದು
ಸ್ವಚ್ಚ ಜಲಭರಿತ
ಅನೇಕರ ದಾಹ ತಣಿಸಿ ಆನಂದಿಸಬೇಕೆಂದು
ಸುಮ್ಮನೆ ಕಲ್ಪನೆ

ಆಕಾಶದ ತಾರೆಯಾಗಬೇಕೆಂದು
ರಾತ್ರಿಯಲ್ಲಿ ಥಳ ಥಳ ಮಿನುಗಿ
ಅನೇಕ ಸಂಗಾತಿಯರೊಂದಿಗೆ ಸ್ವಚ್ಚಂದವಾಗಿ ವಿಹರಿಸಬೇಕೆಂದು
ಸುಮ್ಮನೆ ಕಲ್ಪನೆ

ಅವಳನ್ನು ಪಡೆಯಬೇಕೆಂದು
ಅಗಲಿದ ಅವಳು ಪುನಃ ಹಿಂತಿರುಗಿ ಬರಬೇಕೆಂದು
ನನ್ನನ್ನು ಪ್ರೀತಿಸುವಂತೆ ಮಾಡಬೇಕೆಂದು
ಅವಳನ್ನು ಹೃದಯ ಮಂದಿರದ ರಾಣಿ ಮಾಡಬೇಕೆಂದು
ಆದರೆ......ಕಲ್ಪನೆ ....ಸುಮ್ಮನೆ ಕಲ್ಪನೆ

by ಹರೀಶ್ ಶೆಟ್ಟಿ, ಶಿರ್ವ 

ನೀನೆಲ್ಲೆಲ್ಲಿ ಹೋಗುವೆಯೋ

ನೀನೆಲ್ಲೆಲ್ಲಿ ಹೋಗುವೆಯೋ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ಎಂದಾದರೂ ನನ್ನನ್ನು ನೆನಪಿಸಿ
ಅಶ್ರು ಸುರಿದರೆ ನಿನ್ನ
ಅದನಲ್ಲಿಯೇ ನಿಲ್ಲಿಸುವುದು
ಬಂದು ಅಶ್ರು ನನ್ನ
ನೀನೆಲ್ಲೆಲ್ಲಿಯ ಹಾದಿ ಹಿಡಿಯುವೆಯೋ 
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನೀನೊಂದು ವೇಳೆ ಬೇಸರಗೊಂಡರೆ
ಆಗ ಬೇಸರಗೊಳ್ಳುವೆ ನಾನೂ
ಕಂಡು ಬರಲಿ ಬರದಿರಲಿ
ನಿನ್ನ ಹತ್ತಿರವಿರುವೆ ನಾನು
ನೀನೆಲ್ಲಿಯೂ ಹೋದರೂ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನಾನೊಂದು ವೇಳೆ ಅಗಲಿದರೆ
ಎಂದೂ ನನಗಾಗಿ ದುಃಖಿಸದಿರು
ನನ್ನ ಪ್ರೀತಿ ನೆನೆದು
ಎಂದೂ ಕಂಗಳನ್ನು ತೇವಗೊಳಿಸದಿರು
ನೀನು ಹಿಂತಿರುಗಿ ನೋಡಿದರೆ
ನನ್ನ ನೆರಳು ಜೊತೆಯಲ್ಲಿರುವುದು 
ನನ್ನ ನೆರಳು
ನನ್ನ ನೆರಳು

ನನ್ನ ದುಃಖವೂ ಜೊತೆಯಲ್ಲಿದೆ 
ನಿನ್ನ ಕಷ್ಟದಲಿ ನಿನ್ನ ವ್ಯಥೆಯಲಿ
ನನ್ನ ಪ್ರೀತಿ ನೀಡಿದೆ ನಿನಗೆ
ಜತೆ ಪ್ರತಿ ಜನ್ಮದಲಿ
ನೀನು ಯಾವುದೇ ಜನ್ಮ ಪಡೆದರೆ
ನನ್ನ ನೆರಳು ಜೊತೆಯಲ್ಲಿರುವುದು
ನನ್ನ ನೆರಳು
ನನ್ನ ನೆರಳು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಮೇರ ಸಾಯ

तू जहाँ जहाँ चलेगा,
मेरा साया साथ होगा
मेरा साया...

कभी मुझको याद करके, जो बहेंगे तेरे आँसू
तो वहीं पे रोक लेंगे, उन्हें आ के मेरे आँसू
तू जिधर का रुख करेगा
मेरा साया...

तू अगर उदास होगा, तो उदास हूँगी मैं भी
नज़र आऊँ या ना आऊँ, तेरे पास हूँगी मैं भी
तू कहीं भी जा रहेगा
मेरा साया...

मैं अगर बिछड़ भी जाऊँ, कभी मेरा ग़म न करना
मेरा प्यार याद करके, कभी आँख नम न करना
तू जो मुड़के देख लेगा
मेरा साया...

मेरा ग़म रहा है शामिल, तेरे दुख में, तेरे ग़म में
मेरे प्यार ने दिया है, तेरा साथ हर जनम में
तू कोई जनम भी लेगा
मेरा साया...
www.youtube.com/watch?v=xhnxyhfEdGk‎

ಎದೆಯಲ್ಲಿ ಉರಿ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಹೃದಯವಿದ್ದಲಿ ಮಿಡಿತಕ್ಕೆ
ಕಾರಣದ ಹುಡುಕಾಟವೇಕೆ
ಶಿಲೆಯ ಹಾಗೆ ಇದು ಕೂಡ
ನಿರ್ಜೀವದಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಏಕಾಂತದ ಇದ್ಯಾವುದು
ಗಮ್ಯ ಗೆಳೆಯರೇ
ದೃಷ್ಟಿ ಬೀರಿದಲ್ಲೆಲ್ಲ
ಒಂದು ಮರುಭೂಮಿಯಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಅದೇನು ಹೊಸತನ
ಕಂಡು ಬರುತ್ತಿದೆ ನನ್ನಲ್ಲಿ
ದರ್ಪಣ ನನ್ನನ್ನು ನೋಡಿ
ಆಘಾತಗೊಂಡಂತೆ ಏಕಿದೆ

ಎದೆಯಲ್ಲಿ ಉರಿ
ಕಣ್ಣಲ್ಲಿ ಬಿರುಗಾಳಿಯಂತೆ ಏಕಿದೆ
ಈ ನಗರದಲಿ ಪ್ರತಿ ಮನುಷ್ಯ
ಗೊಂದಲದಲ್ಲಿದ್ದಂತೆ ಏಕಿದೆ

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸುರೇಶ ವಾಡ್ಕರ್
ಸಂಗೀತ : ಜೈದೇವ್
ಚಿತ್ರ : ಗಮನ್
seene mein jalan aankhon mein tufaan saa kyon hai ?
is shahar mein har shaks pareshaan saa kyon hai ?
dil hai to, dhadakane kaa bahaanaa koee dhoondhe
patthar kee tarah behees -o-bejaan saa kyon hai ?
tanahaee kee ye kaunasee, manzil hai rafeekon
taa-hadd-ye-nazar ek bayaabaan saa kyon hain ?
kyaa koee nayee baat najar aatee hai hum me
aaeenaa humei dekh ke hairaan saa kyon hain ?

Saturday, September 21, 2013

ಒರಸಿ ಅಶ್ರು ತನ್ನ ಕಣ್ಣಿಂದ

ಒರಸಿ ಅಶ್ರು ತನ್ನ ಕಣ್ಣಿಂದ 
ನಗೆ ಬೀರಿದರೆ ಏನೋ ಪ್ರಯೋಜನವಾದೀತು
ತಲೆ ತಗ್ಗಿಸಿ ಏನಾಗಲಿಕ್ಕಿಲ್ಲ 
ತಲೆ ಎತ್ತಿದ್ದರೆ ಏನೋ ಪ್ರಯೋಜನವಾದೀತು
ಒರೆಸ ಅಶ್ರು ತನ್ನ ಕಣ್ಣಿಂದ.....

ಜೀವನ ಭಿಕ್ಷೆಯಲಿ ಸಿಗುವುದಿಲ್ಲ 
ಜೀವನ ಮುಂದೆ ಸಾಗಿ ಕಸಿದುಕೊಳ್ಳಬೇಕಾಗುತ್ತದೆ 
ತನ್ನ ಹಕ್ಕು ನಿರ್ದಯ ಜಗತ್ತಿಂದ 
ಕಸಿದುಕೊಂಡರೆ ಏನೋ ಪ್ರಯೋಜನವಾದೀತು
ತಲೆ ತಗ್ಗಿಸಿ ಏನಾಗಲಿಕ್ಕಿಲ್ಲ .....

ರಂಗು ಮತ್ತು ಭೇದ ಜಾತಿ ಮತ್ತು ಧರ್ಮ
ಯಾವುದೇ ಇರಲಿ ಮನುಷ್ಯನಿಗಿಂತ ಕಡಿಮೆಯೇ
ಈ ಸತ್ಯವನ್ನು ನೀನು ಸಹ ನನ್ನಂತೆ
ಒಪ್ಪಿದರೆ ಏನೋ ಪ್ರಯೋಜನವಾದೀತು
ತಲೆ ತಗ್ಗಿಸಿ ಏನಾಗಲಿಕ್ಕಿಲ್ಲ .....

ದ್ವೇಷದ ಜಗತ್ತಿನಲಿ ನಮಗೆ
ಪ್ರೀತಿಯ ವಸಾಹತು ಸ್ಥಾಪಿಸಲಿದೆ
ದೂರ ನಿಲ್ಲುವುದು ಸಾಹಸವೇನಲ್ಲ
ಬಳಿ ಬಂದರೆ ಏನೋ ಪ್ರಯೋಜನವಾದೀತು
ಒರಸಿ ಅಶ್ರು ತನ್ನ ಕಣ್ಣಿಂದ.....

ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಏನ್ .ದತ್ತಾ
ಚಿತ್ರ : ನಯಾ ರಸ್ತಾ 


ponchh kar ashq apni aankhon se
ponchh kar ashq apni aankhon se
muskuraao to koyi baat bane
sar jhukaane se kuchh nahin hoga
sar uthaao to koyi baat bane
ponchh kar ashq apni aankhon se
muskuraao to koyi baat bane


zindagi bheekh mein nahin milti
zindagi bheekh mein nahin milti
zindagi badh ke chheeni jaati hai
zindagi badh ke chheeni jaati hai
apnaa haq sangdil zamaane se
cheen paao to koyi baat bane
sar jhukaane se kuchh nahin hogaa
sar uthaao to koyi baat bane


rang aur nasl jaat aur mazhab
rang aur nasl jaat aur mazhab
jo bhi ho aadmi se kamtar hai
jo bhi ho aadmi se kamtar hai
is haqeeqat ko tum bhi meri tarah
maan jaao to koyi baat bane
sar jhukaane se kuchh nahin hoga
sar uthaao to koyi baat bane



nafraton ke jahaan mein hamko
nafraton ke jahaan mein hamko
pyaar ki bastiyaan basaani hain
pyaar ki bastiyaan basaani hain
door rahnaa koyi kamaal nahin
paas aao to koyi baat bane
ponchh kar ashq apni aankhon se
muskuraao to koyi baat bane
sar jhukaane se kuchh nahin hogaa
sar uthaao to koyi baat bane

www.youtube.com/watch?v=FnVCkYsALqg

ಜ್ಞಾನೋದಯ

ಪಾಂಡಿತ್ಯ ಹಂಚುವ 
ಹೃದಯದಲಿ 
ಸಂಯಮದ ಕೊರತೆ 
____________
ಬುದ್ಧನ ಮಾರ್ಗ 
ಹಿಡಿದವನ
ಮನಸ್ಸಲ್ಲಿ ದಯೆ ಭಾವನೆಯ ಕೊರತೆ, 
ಅವನು 
ಡಾಕು ಅಂಗುಲಿಮಲ್'ನ 
ಕಥೆ ಮರೆತ 
____________
ರತ್ನಾಕರನೆಂಬ
ಕ್ರೂರ ಬೇಟೆಗಾರ ಮತ್ತು ಭಯವಿಲ್ಲದ ಕಳ್ಳ
ಮುಂದೆ
ವಾಲ್ಮೀಕಿಯೆಂದು ಹೆಸರು ಪಡೆದು
ರಾಮಾಯಣ ರಚಿಸಿದ
____________

ಛತ್ರಪತಿ ಶಿವಾಜಿ ಮಹಾರಾಜ್
ಮತ್ತು
ಔರಂಗಜೆಬ್ ಅವರ ಕಥೆ ಕೇಳಿ
ಮಗುವಿನ ಮನಸ್ಸಲಿ
ಛತ್ರಪತಿ ಶಿವಾಜಿ ಮಹಾರಾಜ್
ಆಗುವ ಬಯಕೆ

by ಹರೀಶ್ ಶೆಟ್ಟಿ,ಶಿರ್ವ

ರಾಜಕೀಯ

ರಾಜಕೀಯ
________
ಸಭೆ ಸೇರಿತು 
ಅವನನ್ನು ಕೇಳಲು
ಅವನು ಸಿಗರೇಟ್ ಸೇದುತ್ತಿದ್ದ 
ಅವನ ಸೆಕ್ರೆಟರಿ ಅವನಿಗಾಗಿ ಭಾಷಣ ಬರೆಯುತ್ತಿದ್ದ 

_____________

ಕೋಮು ಗಲಾಟೆ 
ಎಲ್ಲ ಕಡೆ ಮುಗ್ಧ ಜನರ ನೆತ್ತರು
ಅವನು ಎ.ಸಿ ರೂಮಲ್ಲಿ ಕೂತು
ಟಿ.ವಿಯಲ್ಲಿ ಈ ಸಮಾಚಾರ ನೋಡುತ
ಕೆಂಪು ಜ್ಯೂಸು ಕುಡಿಯುತ್ತಿದ್ದ.

_____________

ರಾಮ ರಹೀಮ ಇಬ್ಬರು ಮಿತ್ರರು
ಇಬ್ಬರೂ ರಾಜಕೀಯದಲ್ಲಿ ಸಕ್ರಿಯ
ಸಂಸತ್ತು ಭವನದಲ್ಲಿ ಇಬ್ಬರ ಮುಖದಲ್ಲೂ
ಶತ್ರುತ್ವದ ಮುಖವಾಡ

_____________

ಒಂದು ಪಾರ್ಟಿಯ ರಾಜಕಾರಣಿ
ಇನ್ನೊಂದು ಪಾರ್ಟಿಯ ಭ್ರಷ್ಟ ರಾಜಕಾರಣಿಯ
ಮೇಲೆ ಸಂಸತ್ತು ಭವನದಲ್ಲಿ
ಆರೋಪದ ಸುರಿಮಳೆ ಮಾಡಿದ
ಆ ಭ್ರಷ್ಟ ರಾಜಕಾರಣಿಯ ರಾತ್ರಿ
ಭೋಜನ ಕೂಟದಲಿ
ಆರೋಪಿಸಿದ ರಾಜಕಾರಣಿ
ಮುಖ್ಯ ಅತಿಥಿ
by ಹರೀಶ್ ಶೆಟ್ಟಿ, ಶಿರ್ವ

Thursday, September 19, 2013

ತಬ್ಬಿಕೋ ನನ್ನನ್ನು

ತಬ್ಬಿಕೋ ನನ್ನನ್ನು
ಮತ್ತೆ ಈ ಮೋಹಕ ರಾತ್ರಿ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ
ಭೇಟಿ ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ನಮಗೆ ಸಿಕ್ಕದೆ ಇಂದು
ಸಮಯ ಭಾಗ್ಯದಿಂದ
ಮನಪೂರ್ತಿ ನೋಡು
ನನ್ನನ್ನು ಸನಿಹದಿಂದ
ಮತ್ತೆ ನಿನ್ನ ಭಾಗ್ಯದಲಿ ಈ ಅವಕಾಶ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ
ಭೇಟಿ ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ಬಳಿಗೆ ಬಂದುಬಿಡು
ಅಂದರೆ ಬರಲಾರೆ ಪದೇ ಪದೇ ನಾನು
ಬಾಹುಗಳಿಂದ ತಬ್ಬಿಹಿಡಿದು
ಅತ್ತು ಬಿಡುವೆ ಬಿಕ್ಕಳಿಸಿ ನಾನು
ಕಣ್ಣಿಂದ ಮತ್ತೆ ಈ ಪ್ರೇಮ ವರ್ಷ
ಆಗುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ ಭೇಟಿ
ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ತಬ್ಬಿಕೋ ನನ್ನನ್ನು
ಮತ್ತೆ ಈ ಮೋಹಕ ರಾತ್ರಿ
ಇರುವುದೋ ಇಲ್ಲವೋ
ಮತ್ತೆಂದು ಈ ಜನ್ಮದಲ್ಲಿ ಭೇಟಿ
ಆಗುವುದೋ ಇಲ್ಲವೋ
ತಬ್ಬಿಕೋ ನನ್ನನ್ನು

ಮೂಲ : ರಾಜ ಮೆಹಂದಿ ಅಲಿ ಖಾನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ವೋ ಕೌನ್ ತಿ

Lag Ja Gale Ki Phir Ye Hasin Raat Ho Na Ho
Shaayad Phir Is Janam Men Mulaaqaat Ho Na Ho
Lag Jaa Gale Se ....................

Ham Ko Mili Hain Aaj, Ye Ghadiyaan Nasib Se
Ji Bhar Ke Dekh Lijiye Ham Ko Qarib Se
Phir Aap Ke Nasib Men Ye Baat Ho Na Ho
Phir Is Janam Men Mulaaqaat Ho Na Ho
Lag Ja Gale Ki Phir Ye Hasin Raat Ho Na Ho

Paas Aaiye Ki Ham Nahin Aaenge Baar-Baar
Baahen Gale Men Daal Ke Ham Ro Le Zaar-Zaar
Aankhon Se Phir Ye Pyaar Ki Barasaat Ho Na Ho
Shaayad Phir Is Janam Men Mulaaqaat Ho Na Ho

Lag Ja Gale Ki Phir Ye Hassin Raat Ho Na Ho
Shaayad Phir Is Janam Men Mulaaqaat Ho Na Ho
Lag Ja Gale Ki Phir Ye Hassin Raat Ho Na Ho
http://www.youtube.com/watch?v=uNMG-QBzuhc

Wednesday, September 18, 2013

ದೂರವಿದ್ದು ನುಡಿಯದಿರು

ದೂರವಿದ್ದು ನುಡಿಯದಿರು 
ಸನಿಹ ಬಾ ನೀನು
ದೂರವಿದ್ದು ನುಡಿಯದಿರು 
ಸನಿಹ ಬಾ ನೀನು 
ಸ್ಮೃತಿಯಲ್ಲಿರುವುದು ಈ ರಾತ್ರಿ 
ಸನಿಹ ಬಾ ನೀನು

ಎಷ್ಟೋ ಸಮಯದಿಂದ ಬಯಸುತ್ತಿದ್ದೆ
ನಿನ್ನನ್ನು ಸ್ಪರ್ಶಿಸಲೆಂದು
ಎಷ್ಟೋ ಸಮಯದಿಂದ ಬಯಸುತ್ತಿದ್ದೆ
ನಿನ್ನನ್ನು ಸ್ಪರ್ಶಿಸಲೆಂದು
ಈಗ ನಿಯಂತ್ರಿಸಲಾಗದು ಮನಸ್ಸನ್ನು
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ತಂಪು ಗಾಳಿಯಿಂದ ಧಗಧಗಿಸುವುದು
ಮೈಯ ಜ್ವಾಲೆ
ತಂಪು ಗಾಳಿಯಿಂದ ಧಗಧಗಿಸುವುದು
ಮೈಯ ಜ್ವಾಲೆ
ಪ್ರಾಣ ತೆಗೆದುಕೊಳ್ಳುವುದು ಈ ಮಳೆ
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ಈ ತರಹ ಸಂಕೋಚ ಪಡುವ
ಅಗತ್ಯವೇನು
ಈ ತರಹ ಸಂಕೋಚ ಪಡುವ
ಅಗತ್ಯವೇನು
ಜೀವಮಾನದ ಈ ಬಂಧವಾಗಿದೆ
ಸ್ಮೃತಿಯಲ್ಲಿರುವುದು ಈ ರಾತ್ರಿ
ಸನಿಹ ಬಾ ನೀನು
ದೂರವಿದ್ದು ನುಡಿಯದಿರು
ಸನಿಹ ಬಾ ನೀನು

ಮೂಲ : ಸಾಹಿರ್ ಲುಧ್ಯಾನ್ವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ರವಿ
ಚಿತ್ರ : ಅಮಾನತ್ 


door reh kar na karo baat
kareeb aa jaao
door reh kar na karo baat
kareeb aa jaao

yaad reh jaayegi ye raat
kareeb aa jaao
ek muddat se tamanna thi
tumhe chhoone ki
ek muddat se tamanna thi
tumhe chhoone ki

aaj bas mein nahi jazbaat
kareeb aa jaao
aaj bas mein nahi jazbaat
kareeb aa jaao
door reh kar na karo baat
kareeb aa jaao

sard jhonko se bhadakte hain
badan mein shole
sard jhonko se bhadakte hain
badan mein shole

jaan le legi ye barsaat
kareeb aa jaao
jaan le legi ye barsaat
kareeb aa jaao
door reh kar na karo baat
kareeb aa jaao

is kadar hum se jhijhakne ki
zaroorat kya hai
is kadar hum se jhijhakne ki
zaroorat kya hai

zindagi bhar ka hai ab saath
kareeb aa jaao
zindagi bhar ka hai ab saath
kareeb aa jaao

yaad reh jaayegi ye raat
kareeb aa jaao
door reh kar na karo baat
kareeb aa jaao

Tuesday, September 17, 2013

ವಿವಿಧ

ಅವರು ಉದ್ಯಾನದ ಒಳಗೆ 
ನುಸುಳಿ ಬಂದು 
ಅನೇಕ ಹೂಗಳನ್ನು 
ಕಾಲ ಅಡಿಯಲಿ ಜಜ್ಜಿ ಹೋದರು,
ಕೆಲವು ಬುದ್ಧಿ ಜೀವಿಗಳು 
ಉದ್ಯಾನದ ಮಾಲಿಯ 
ಮೇಲೆ ಅಪವಾದ ಹೊರಿಸಿದರು 
__________
ವೃಕ್ಷದಿಂದ ಬಿದ್ದ
ಹಣ್ಣಿಗೆ 
ಸಾವಿರಾರು ವಾರಸುದಾರರು
____________
ಸುಂದರ ಬಣ್ಣದ ಚಿಟ್ಟೆಯ
ಆನಂದದಿಂದ
ಸುಮಗಳಿಗೆ ಸಂತಸ
___________
ತಾರೆಗಳ ಮಧ್ಯೆ ಇದ್ದ
ಚಂದ್ರ
ಏಕಾಂತದ
ಹುಡುಕಾಟದಲಿ
___________
ರಾತ್ರಿಯ ಕಾವಲುಗಾರ
ಚಂದ್ರ
ಮಲಗಿದನೆಂದು
ಸುತ್ತ ಮುತ್ತ ಇದ್ದ
ತಾರೆಗಳ ಆರೋಪ

by ಹರೀಶ್ ಶೆಟ್ಟಿ,ಶಿರ್ವ

ಇನ್ನು ದೂರ ಇರುವೆ ನಿನ್ನಿಂದ

ಗೆಳತಿ

ಇನ್ನು ದೂರ ಇರುವೆ ನಿನ್ನಿಂದ 
ಹಲವು ಪ್ರೇಮ ಸಂದೇಶ ಕಳಿಸಿದ ನಿನಗೆ 
ನಿನ್ನಿಂದ ಒಂದೂ ಉತ್ತರವಿಲ್ಲದ ಮೇಲೆ 
ಇನ್ನು ನಿನ್ನ ಹೃದಯ ಮಿಡಿಯುವುದೆಂದು 
ಸುಮ್ಮನೆ ಅಪೇಕ್ಷಿಸುವುದಕ್ಕೆ ಏನು ಅರ್ಥವಿಲ್ಲ 

ನಾನು ನಿನ್ನ ಮನೆಯ ಸುತ್ತ ಮುತ್ತ ಅಲೆದು 
ದಿನ ನಿನ್ನ ಗೋಡೆಯಲಿ ನನ್ನ ಹೆಸರು ಬರೆಯುವೆ 
ಆದರೆ ನೀನು ನನ್ನ ಮನೆಯಲಿ ಇಣುಕಿಯೂ ನೋಡದ ಮೇಲೆ
ಇನ್ನು ನೀನು ಬರುವುದನ್ನು
ಸುಮ್ಮನೆ ಕಾಯುವುದಕ್ಕೆ ಏನು ಅರ್ಥವಿಲ್ಲ

ನೀನು ನನ್ನ ಮನ ಮಂಧಿರದಲ್ಲಿರುವೆ
ಆದರೆ ನಿನ್ನ ಹೃದಯದಲ್ಲಿ ನಾನಿಲ್ಲ
ಇನ್ನು ಎಂದೋ ಎಲ್ಲಿಯೋ ದಾರಿಯಲಿ ಸಿಕ್ಕಿದರೆ
ನೀನು ಅತ್ತ ಸಾಗು ನಾನು ಇತ್ತ ಸಾಗುವೆ
ನಾವು ಒಂದಾಗದ ಈ ಸ್ಥಿತಿಯಲ್ಲಿ
ಸುಮ್ಮನೆ ಕೊರಗುವುದಕ್ಕೆ ಏನು ಅರ್ಥವಿಲ್ಲ

by ಹರೀಶ್ ಶೆಟ್ಟಿ, ಶಿರ್ವ

Monday, September 16, 2013

ಜೀವನ ಇಲ್ಲಿ ಮರಣ ಇಲ್ಲಿ


ಜೀವನ ಇಲ್ಲಿ
ಮರಣ ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಮನಸ್ಸಾದಾಗ ನನ್ನನ್ನು ಕರೆ ನೀನು
ನಾನಲ್ಲಿಯೇ ಇದ್ದೇನೆ 
ನಾನಿದ್ದಲ್ಲಿ
ಎರಡೂ ಜಗ ನಮ್ಮದಿಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ
ಮರಣ ಇಲ್ಲಿ .....

ಈ ನನ್ನ ಗೀತೆಯನ್ನು
ಜೀವನ ಸಂಗೀತವನ್ನು
ನಾಳೆಯೂ ಯಾರೋ ಪುನರಾವರ್ತಿಸುವನು
ಜಗತ್ತನ್ನು ನಗಿಸಲು ವೇಷಧಾರಿ
ರೂಪ ಬದಲಾಯಿಸಿ ಬರುವನು
ಸ್ವರ್ಗ ಇಲ್ಲಿ
ನರಕ ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ
ಮರಣ ಇಲ್ಲಿ .....

ನಾಳೆ ಆಟದಲ್ಲಿ ನಾನಿರಲಿ
ಇಲ್ಲದಿರಲಿ
ಬಾನಲ್ಲಿ ತಾರೆ ಇರುವುದು ಸದಾ
ಮರೆಯುವೆ ನೀನು
ಮರೆಯುವರು ಅವರು
ಆದರೆ ನಾನು ನಿನ್ನಾಗಿಯೇ ಇರುವೆ ಸದಾ
ಉಳಿಯುವುದು ಕೇವಲ ನಾಮ್ಮ ಗುರುತು ಇಲ್ಲಿ
ಇದರ ಹೊರತು ಹೋಗುವುದೆಲ್ಲಿ
ಜೀವನ ಇಲ್ಲಿ, ಮರಣ ಇಲ್ಲಿ .....

ಮೂಲ :ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಮೇರ ನಾಮ್ ಜೋಕರ್

जीना यहाँ, मरना यहाँ
इसके सिवा जाना कहाँ
जी चाहे जब हमको आवाज़ दो
हम हैं वहीं, हम थे जहाँ
अपने यही दोनों जहां
इसके सिवा जाना कहाँ

ये मेरा गीत जीवन संगीत
कल भी कोई दोहरायेगा
जग को हँसाने बहरूपिया
रूप बदल फिर आयेगा
स्वर्ग यहीं, नर्क यहाँ
इसके सिवा जाना कहाँ
जी चाहे जब...

कल खेल में, हम हों न हों
गर्दिश में तारे रहेंगे सदा
भूलोगे तुम, भूलेंगे वो
पर हम तुम्हारे रहेंगे सदा
रहेंगे यहीं, अपने निशाँ
इसके सिवा जाना कहाँ
जी चाहे जब...
http://www.youtube.com/watch?v=5XOi1GzOgfc

Sunday, September 15, 2013

ಬದುಕು

ಮಲ್ಲಿಗೆಯ ಹೂವೊಂದು 
ಹಾರಿ ಬಂದು 
ಗುಲಾಬಿ ಹೂವನ್ನು 
ಅಪ್ಪಿಕೊಂಡಿತು, 
ಗುಲಾಬಿ ಹೂವಿನ ಮುಳ್ಳಿನಿಂದ 
ಮಲ್ಲಿಗೆಯ ಸಂಹಾರ 
___________

ಸೂರ್ಯನ ತಾಪದಿಂದ 
ಭಾರ ಹೊರುವ ಹಮಾಲಿಯ 
ಬೆವರ ಸ್ನಾನ,
ಭಾರ ತಲುಪಿಸಿ
ಕೂಲಿ ಪಡೆದ ನಂತರ
ಅನ್ನ ದರ್ಶನ

____________

ಮರದಿಂದ ಅಗಲಿದ
ಒಣಗಿದ ಎಲೆ
ಈಗ ಅಲೆಮಾರಿ

by ಹರೀಶ್ ಶೆಟ್ಟಿ, ಶಿರ್ವ

Friday, September 13, 2013

ಅನನ್ಯ

ಅನನ್ಯ
********

ದಾರಿಯಲ್ಲಿ ಹಲವರು ನಡೆಯುತ್ತಿದ್ದರು
ಅವನೊಬ್ಬ ವಿರಳ
ಅವನದು ಕುಂಟು ನಡಿಗೆ
______________

ಆ ರಸ್ತೆಯಲಿ
ಎಲ್ಲರೂ ಹಿಂಬಾಲಿಸುತ್ತಿದ್ದರು
ಒಬ್ಬರನೊಬ್ಬರನ್ನು
ಗಮ್ಯ ತಲುಪಲು,
ಅವನು ವಿಶಿಷ್ಟ ದಾರಿ ಹಿಡಿದ
ಗಮ್ಯ ತಲುಪಲು
_______________

ಚಹಾ ಕುಡಿದು
ಛೆ ಛೆ ಚಹಾದಲ್ಲಿ
ಸಕ್ಕರೆ ಇಲ್ಲ
ಎಂಥ ಹಾಳು ಚಹಾ ಎಂದನೊಬ್ಬ
ಅವನು ಬಂದು
ಅದೇ ಚಹಾ ರುಚಿಯಿಂದ ಕುಡಿದು
ಹೇಳಿದ
ತುಂಬಾ ಸಮಯದ ನಂತರ ಇಷ್ಟು
ಒಳ್ಳೆ ಚಹಾ ಕುಡಿದದ್ದು

_______________

ಕತ್ತೆ ಹೋಗುತ್ತಿತ್ತು
ಎಲ್ಲರೂ ನೋಡಲಾರಂಭಿಸಿದ್ದರು
ಅವನು
ಕತ್ತೆ ನೋಡುವವರನ್ನು ನೋಡುತ್ತಿದ್ದ

_______________

ದೊಡ್ಡ ಸಮಾರಂಭ
ಎಲ್ಲರೂ
ಸೂಟು ಬೂಟು ಧರಿಸಿ ಬಂದಿದ್ದರು
ಅವನು
ಪಂಚೆ ಶಾಲು ಉಡುಕೊಂಡು ಬಂದಿದ್ದ
ತುಂಬಾ ಜನ ಅವನನ್ನೇ ನೋಡುತ್ತಿದ್ದರು

by ಹರೀಶ್ ಶೆಟ್ಟಿ, ಶಿರ್ವ

ಮತ್ತದೇ ರಾತ್ರಿ

ಮತ್ತದೇ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ ಕನಸಿನ
ರಾತ್ರಿಯೆಲ್ಲ ಕನಸಲಿ
ನೋಡುತ್ತಿರುವೆ ನಿನ್ನನ್ನು
ಮತ್ತದೇ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ ಕನಸಿನ
ರಾತ್ರಿಯೆಲ್ಲ ಕನಸಲಿ
ನೋಡುತ್ತಿರುವೆ ನಿನ್ನನ್ನು
ಮತ್ತದೇ ರಾತ್ರಿ

ಮುಗ್ಧ ನಿದ್ರೆಯಲಿ
ಕನಸು ನಡೆತ್ತಿರುವಾಗ
ನನ್ನನ್ನು ಕರೆ ನೀನು
ಕಣ್ಣ ಕಂಡಿಯಿಂದ ಆಗ
ಈ ರಾತ್ರಿ ಕನಸಿನ
ಕನಸಿನ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ ಕನಸಿನ

ಗಾಜಿನ ಕನಸಿದು
ಕಣ್ಣಿಗೆ ಚುಚ್ಚುವುದು
ಕಣ್ರೆಪ್ಪೆಯಲಿ ಆವರಿಸಿಕೊಳ್ಳು
ಕಣ್ಣಲ್ಲಿ ನಿಲ್ಲುವುದು
ಈ ರಾತ್ರಿ ಕನಸಿನ
ಕನಸಿನ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ
ಮತ್ತದೇ ರಾತ್ರಿ ಕನಸಿನ
ರಾತ್ರಿಯೆಲ್ಲ ಕನಸಲಿ
ನೋಡುತ್ತಿರುವೆ ನಿನ್ನನ್ನು
ಮತ್ತದೇ ರಾತ್ರಿ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರೆ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಘರ್

Phir Wahi Raat Hain
Hmm Hmm Hmm ....
Phir Wahi Raat Hain
Phir Wahi Raat Hain
Khwaabo Ki
Raat Bhar Khwaab Mein Dekha Karenge Tumhe
Phir Wahi Raat Hain
Phir Wahi Raat Hain
Phir Wahi Raat Hain
Khwaabo Ki
Raat Bhar Khwaab Mein Dekha Karenge Tumhe
Phir Wahi Raat Hain

Masoom Si Neend Mein Jb Koi Sapna Chale
Humko Bula Lena Tum Palko Ke Parde Tale
Yeh Raat Hain Khwaab Ki Khwaab Ki Raat Hain
Phir Wahi Raat Hain
Phir Wahi Raat Hain
Phir Wahi Raat Hain
Khwaabo Ki

Kaanch Ke Khwaab Hain Aankhon Mein Chubh Jayenge
Palko Mein Le Na Inhe Aankho Mein Rut Jayenge
Yeh Raat Hain Khwaab Ki Khwaab Ki Raat Hain
Phir Wahi Raat Hain
Phir Wahi Raat Hain
Phir Wahi Raat Hain
Khwaabo Ki
Raat Bhar Khwaab Mein Dekha Karenge Tumhe
Phir Wahi Raat Hain
Raat Hain, Raat Hain
http://www.youtube.com/watch?v=-PTsM9FRfTA

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...