Monday, August 26, 2013

ಯಾವುದೇ ಉತ್ಸಾಹ ಇಲ್ಲದಾಗಿದೆ

!!ಯಾವುದೇ ಉತ್ಸಾಹ ಇಲ್ಲದಾಗಿದೆ
ಯಾವುದೇ ಉಲ್ಲಾಸ ಇಲ್ಲದಾಗಿದೆ
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ!!

!!ಆಕಾಶದಿಂದ ಬಿದ್ದೆ ನಾನು
ಒಂದು ಸಲ ಹೀಗೆ ಕಡಿದು
ಜಗ ಮತ್ತೆ ಕೇಳಬೇಡಿ
ಕೊಂಡೋದರು ಎಲ್ಲವೂ ನನ್ನ ಕಸಿದು
ಯಾರದ್ದು ಜೊತೆ ಇಲ್ಲದಾಗಿದೆ
ಯಾರದ್ದು ಜತೆ ಇಲ್ಲದಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಅಪ್ಪಿಕೊಂಡು ನನ್ನ ತಾಯಂದಿರನ್ನು
ಅಳಲಾಗಲಿಲ್ಲ ನನಗೆ -೨
ಪಾಲಕಿ ಸಾಗಿತು ಹೀಗೆ
ಯಾರದ್ದೋ ಶವ ಸಾಗಿದ ಹಾಗೆ
ಇದೇ ದುಃಖ ಈಗಲೂ
ನನ್ನ ದೇಹದ ಜತೆ ಇದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

!!ಕನಸಿನ ದೇವತೆ
ಏನನ್ನು ನಾನು ನಿನಗೆ ಮಾಡಲಿ ಅರ್ಪಣೆ
ಶರತ್ಕಾಲದ ನಾನು ಛಾಯೆ
ಕಣ್ಣೀರ ನಾನು ದರ್ಪಣೆ
ಇದೇ ನನ್ನ ರೂಪವಾಗಿದೆ
ಇದೆ ನನ್ನ ವರ್ಣವಾಗಿದೆ!!
ನನ್ನ ಜೀವನ ಏನು
ಒಂದು ಕಡಿದ ಗಾಳಿಪಟವಾಗಿದೆ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ : ಆರ್ .ಡಿ. ಬರ್ಮನ್
ಚಿತ್ರ : ಕಟಿ ಪತಂಗ್
Naa Koee Umang Hai, Naa Koee Tarang Hai
meree Jindagee Hain Kyaa, Yek Katee Patang Hai

aakaash Se Giree Main Yek Baar Kat Ke Ayese
duniyaa Ne Fir Naa Poochho, Lootaa Hain Muz Ko Kaise
naa Kisee Kaa Saath Hai, Naa Kisee Kaa Sang Hai

lag Ke Gale Se Apane, Baabool Ke Main Naa Royee
dolee Uthhee Yoo Jaise, Atrhee Uthhee Ho Koee
yahee Dukh To Aaj Bhee Mere Ang Sang Hai

sapanon Ke Dewataa Kyaa, Tuz Ko Karu Main Arpan
patazad Kee Main Hoo Chhaayaa, Main Aasooon Kaa Darpan
yahee Meraa Rup Hai, Yahee Meraa Rang Hai                                                                       

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...