Saturday, July 6, 2013

ಮನುಷ್ಯನೊಬ್ಬ ಪ್ರಯಾಣಿಕ

!!ಮನುಷ್ಯನೊಬ್ಬ ಪ್ರಯಾಣಿಕ
ಬರುತ್ತಾನೆ ಹೋಗುತ್ತಾನೆ
ಬರುತ್ತಾ ಹೋಗುತ್ತಾ ಹಾದಿಯಲಿ
ನೆನಪನ್ನು ಬಿಟ್ಟು ಹೋಗುತ್ತಾನೆ!!

!!ಗಾಳಿಯ ಕಂಪು
ನೀರಿನ ತುಳುಕ
ಜಾತ್ರೆಯಲಿ ಉಳಿದವನು
ಉಳಿಯುವನು ಏಕ
ಮತ್ತೆ ಅವನು ಏಕನಾಗಿಯೇ ಉಳಿಯುತ್ತಾನೆ!!
ಮನುಷ್ಯ ಪ್ರಯಾಣಿಕ.....

!!ಯಾವಾಗ ಬಿಡುತ್ತದೆ
ಈ ರೋಗ ಮನಸ್ಸನ್ನು-೨
ಮರೆಯುವಾಗ ಹೃದಯ
ಎಂದೂ ಯಾರನ್ನೋ
ಅವನು ಮರೆತ ನಂತರವೂ ನೆನಪಾಗುತ್ತಾನೆ!!
ಮನುಷ್ಯ ಪ್ರಯಾಣಿಕ.....

!!ಏನನ್ನೊಟ್ಟಿಗೆ ತಂದಿದ್ದೇವೆ
ಏನನ್ನು ಬಿಟ್ಟು ಬಂದಿದ್ದೇವೆ
ರಸ್ತೆಯಲಿ ನಾವು 
ಏನೇನನ್ನು ಬಿಟ್ಟು ಬಂದಿದ್ದೇವೆ
ಗಮ್ಯಕ್ಕೆ ಸೇರಿ ಅದರ ನೆನಪಾಗುತ್ತದೆ!!
ಮನುಷ್ಯ ಪ್ರಯಾಣಿಕ.....

!!ಜೀವನದ ದೋಣಿ
ಅಲುಗುವಾಗ ಜೋರು
ಯಾರಾದರೂ ಬಂದು
ನಾವಿಕನಾಗಿ ನೆರವಾಗುವರು
ಕೆಲವರು ತೀರದಲ್ಲಿಯೇ ಮುಳುಗುವರು!!
ಮನುಷ್ಯ ಪ್ರಯಾಣಿಕ.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆ ಲಾಲ್
ಚಿತ್ರ : ಅಪ್ನಪನ್
adami musafir hai, aata hai, jata hai
aate jate raste me yade chhod jata hai

jhonka hawa kaa pani kaa rela
mele me rah jayey jo akela
phir woh akela hee rah jata hai

kab chhodata hai yeh rog jee ko
dil bhul jata hain jab kisi ko
woh bhulakar bhi yad aata hai

kya sath laye kya tod aaye
raste me ham kya kya chhod aaye
manjil pe ja ke yad aata hai

jab dolati hai, jiwan kee naiyya
koyi toh ban jata hain khiwayya
koyi kinare pe hee dub jata hai
http://www.youtube.com/watch?v=6bVuxhTHp6E

2 comments:

  1. ಮೂಲ ಮತ್ತು ಭಾವಾನುವಾದ ಎರಡಕ್ಕೂ ಸಮಾನ ಓಟುಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...