Sunday, July 7, 2013

ಹೊಲಸು ಹೊದಿಕೆ ಧರಿಸಿ ಹೇಗೆ

!!ಹೊಲಸು ಹೊದಿಕೆ ಧರಿಸಿ ಹೇಗೆ
ದ್ವಾರಕ್ಕೆ ನಿನ್ನ ಬರಲಿ
ಹೇ ಪಾವನ ಪರಮೇಶ್ವರ ನನ್ನ
ಹೆದರುವೆ ಮನಸ್ಸಲಿ!!

!ಹೊಲಸು ಹೊದಿಕೆ ಧರಿಸಿ ಹೇಗೆ!

!!ನೀನು ನನ್ನನ್ನು ಜಗಕ್ಕೆ ಕಳಿಸಿದೆ
ಕೊಟ್ಟು ನಿರ್ಮಲ ದೇಹವನ್ನು
ಬಂದು ಈ ಪ್ರಪಂಚದಲಿ ನಾನು
ಕಳಂಕಗೊಳಿಸಿದೆ ಇದನ್ನು
ಜನ್ಮ ಜನ್ಮದ ಹೊಲಸು ಹೊದಿಕೆ
ಹೇಗೆ ಕಲೆ ಬಿಡಿಸಲಿ!!

!ಹೊಲಸು ಹೊದಿಕೆ ಧರಿಸಿ ಹೇಗೆ!

!!ನಿರ್ಮಲ ವಾಣಿ ಪಡೆದು ನಿನ್ನಿಂದ
ನಾಮ ನಿನ್ನ ಹಾಡಲಿಲ್ಲ
ಕಣ್ಣು ಮುಚ್ಚಿ ಹೇ ಪರಮೇಶ್ವರ
ಎಂದೂ ನಿನ್ನ ಧ್ಯಾನ ಮಾಡಲಿಲ್ಲ
ಮನ ವೀಣೆಯ ತಂತಿ ಮುರಿಯಿತು
ಈಗ ಏನು ಗೀತೆ ಹಾಡಲಿ!!

!ಹೊಲಸು ಹೊದಿಕೆ ಧರಿಸಿ ಹೇಗೆ!

!!ಈ ಕಾಲಿನಿಂದ ನಡೆದು ನಿನ್ನ
ದೇವಾಲಯ ಎಂದೂ ಬರಲಿಲ್ಲ
ಎಲ್ಲೆಲ್ಲಿಯೂ ಇರುತ್ತದೆ ಪೂಜೆ ನಿನ್ನ
ಎಂದೂ ಶಿರ ತಗ್ಗಿಸಲಿಲ್ಲ
ಹೇ ಹರಿಹರ ನಾನು ಸೋತು ಬಂದೆ
ಈಗ ಏನು ಹೂಮಾಲೆ ಅರ್ಪಿಸಲಿ

!ಹೊಲಸು ಹೊದಿಕೆ ಧರಿಸಿ ಹೇಗೆ!

ಮೂಲ/ಹಾಡಿದವರು/ಸಂಗೀತ : ಹರಿ ಓಂ ಶರಣ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ

Maili Chaadar Odhke Kaise
Dwaar Tumhaare Aaoon
Hey Paavan Parameshwara Mere
Man Hi Man Sharmaaoon

[Maili Chaadar …]

Tune Mujhko Jag Me Bhejaa
Nirmal Dekar Kaayaa
Aakar Is Sansaar Maine
Isko Daag Lagaaya
Janam Janam Ki Maili Chaadar
Kaise Daag Chudaaoon

[Maili Chaadar …]

Nirmal Vaani Paakar Tujhse
Naam Na Teraa Gaayaa
Nain Moondhkar He Parameshwar
Kabhi Naa Tujhko Dhyaayaa
Man Veena Ki Taaren Tooti
Ab Kyaa Geeth Sunaaoon

[Maili Chaadar …]

In Pairon Se Chal Kar Tere
Mandir Kabhi Na Aayaa
Jahaan Jahaan Ho Poojaa Teri
Kabhi Naa Sees Jhukaayaa
Hey Harihar Main Haar Ke Aayaa
Ab Kyaa Haar Chadhaaoon

[Maili Chaadar …]

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...