Thursday, May 30, 2013

Kabir Doha (ಕಬೀರ ದೋಹ )

ಕಬೀರ ದೋಹ
ಬೇಡಿ ಕೊಳ್ಳದವನು ಅತ್ಯುತ್ತಮ, ಮಧ್ಯಮ ಅವಶ್ಯಕತೆ ಇದ್ದಾಗ ಕೇಳುವವನು!
ಹೇಳುವನು ಕಬೀರ ಪರಮ ನೀಚನವನು,  ಹಠ ಹಿಡಿದು ಬೇಡುವವನು !!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
अन्मंगा उत्तम कहा, मद्यम मांगी जो लेय |
कहे कबीर निकृष्ट, सो पर धरना देय ||

Wednesday, May 29, 2013

Kabir Doha (ಕಬೀರ ದೋಹ )

ಕಬೀರ ದೋಹ
ಸಣ್ಣದರಲ್ಲಿ ಭಗವಂತನ ಅಸ್ತಿತ್ವ, ಪ್ರಭುತ್ವದಿಂದ ಭಗವಂತ ದೂರ ದೂರ !
ಇರುವೆ ಸಕ್ಕರೆ ಕೊಂಡು ನಡೆದಿದೆ, ಆನೆಯ ಪಾಲು ಬರಿ ಧೂಳಿನ ಅಬ್ಬರ !!  
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
लघुता में प्रभुता बसे,प्रभुता ते प्रभु दूर |
चींटी  ले शक्कर चली, हाथी के सर धूर ||
*ಇಲ್ಲಿ ಕಬೀರರು ಇರುವೆ ಹಾಗು ಆನೆಯ ಉದಾಹರಣೆ ನೀಡಿ , ಸಣ್ಣ ಜೀವದಲ್ಲೂ ಈಶ್ವರನ ವಾಸ ಇರುತ್ತದೆ ಹಾಗು ತಾನೇ ದೊಡ್ಡವೆನ್ನುವ ಅಹಂ ತುಂಬಿದವರಿಂದ ಈಶ್ವರ ದೂರವಿರುತ್ತಾನೆ ಎಂದು ತುಂಬಾ ಸರಳತೆಯಿಂದ ಹೇಳಿದ್ದಾರೆ.

Tuesday, May 28, 2013

Kabir Doha (ಕಬೀರ ದೋಹ )

ಕಬೀರ ದೋಹ
ಒಂದು ನುಡಿ ಗುರುವಿನ,  ಖಜಾನೆ ಅನಂತ ವಿಚಾರಗಳ!
ಮುನಿ ಪಂಡಿತರು ಸೋತರು, ವೇದವನ್ನು ತಿಳಿಯಲಾಗಲಿಲ್ಲ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीरा दोहा
एक शब्द गुरुदेव का, ताका अनंत विचार |
थके मुनि जन पंडिता, वेद न पावे पार ||

*ಗುರುವಿನ ಒಂದು ಮಾತಲ್ಲಿ ಅನಂತ ವಿಚಾರ ಹೊಂದಿದೆ, ಇದನ್ನು ಕೇವಲ ಒಂದು ವಿನಮ್ರ ಭಕ್ತನೆ ತಿಳಿಯ ಬಲ್ಲ. ಮುನಿ ಪಂಡಿತರಿಗೆ ಅವರ ಜ್ಞಾನದ ಬಗ್ಗೆ ಅಹಂ ತುಂಬಿರುತ್ತದೆ ಹಾಗು ವೇದದ ಆಳವನ್ನು ತಿಳಿಯಲು ಮತ್ತು ತಿಳಿಸಲು ಅವರಿಂದ  ಸಾದ್ಯವಾಗುವುದಿಲ್ಲ.

Monday, May 27, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಬೀರ ಆ ಕಡೆ ಹೋಗದಿರು, ಮೋಸ ಕಪಟತನ ಇದ್ದಲ್ಲಿ !
ಅದು ದಾಳಿಂಬೆಯ ಬೀಜದ ಹಾಗೆ, ವರ್ಣಮಯ ಹೊರಗಿನಿಂದ ಕಪ್ಪು ಒಳಗಲ್ಲಿ!!
ಅನುವಾದ :ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा तहां न जाइये, जहा कपट का हेत |
जालू कली अनार की, तन रीतो मन सेत ||
*ಇಲ್ಲಿ ಕಬೀರರು  ಕಪಟಿ ಮನುಷ್ಯರಿಂದ ದೂರವಾಗಿರಿ ಎಂದು ಎಚ್ಚರಿಕೆ ನೀಡಿದ್ದಾರೆ, ಬಾಹ್ಯದಿಂದ ಆಕರ್ಷಕ ಕಾಣುವವರ ಅಂತರಂಗ ಮೋಸದಿಂದ ತುಂಬಿರುತ್ತದೆ ಎಂಬ ವಿಷಯವನ್ನು ದಾಳಿಂಬ ಹಣ್ಣಿಗೆ ಹೋಲಿಸಿ ಹೇಳಿದ್ದಾರೆ .

Sunday, May 26, 2013

Kabir Doha (ಕಬೀರ ದೋಹ )


ಕಬೀರ ದೋಹ
ಅಂಧಕಾರ ಹೋಯಿತು ರವಿಯನ್ನು ಕಂಡು, ಅಜ್ಞಾನ ಹೋಯಿತು ಗುರು ಜ್ಞಾನದಿಂದ!
ವಿವೇಕ ಹೋಯಿತು ಅತಿ ಆಸೆಯಿಂದ, ಭಕ್ತಿ ಹೋಯಿತು ಅಭಿಮಾನದಿಂದ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
तिमिर गया रवि देखते, कुमति गयी गुरु ज्ञान |
सुमति गयी अति लोभाते, भक्ति गयी अभिमान ||

Thursday, May 23, 2013

Kabir Doha (ಕಬೀರ ದೋಹ )


ಕಬೀರ ದೋಹ
ಬಡ ಗುರು ಏನು ಮಾಡಲಿ, ದೋಷವಿದ್ದಾಗ ಶಿಷ್ಯನಲ್ಲಿ!
ಹೇಗೆಯೂ ಕಲಿಸಿದರೂ, ಕೊಳಲಲ್ಲಿ ಸಂಗೀತ ಎಲ್ಲಿ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
गुरु बिचारा क्या करे, सिक्खहि माहिं चूक |
भावे त्यों परबोधिये, बांस बजाये फूँक ||

Wednesday, May 22, 2013

Kabir Doha (ಕಬೀರ ದೋಹ )


ಕಬೀರ ದೋಹ
ನೈತಿಕತೆ ಎಲ್ಲಕ್ಕಿಂತ ದೊಡ್ಡದು, ಎಲ್ಲ ರತ್ನಗಳ ಗಣಿ !
ಮೂರು ಲೋಕದ ಸಂಪತ್ತು, ವಿಲೀನವಾಗುವುದು ಇದರಲ್ಲಿ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
सीलवंत सबसे बड़ा, सब रतनो की खान |
तीन लोक की सम्पदा, रही सील में आन ||


Sunday, May 19, 2013

Kabir Doha (ಕಬೀರ ದೋಹ )


ಕಬೀರ ದೋಹ
ಹೇಳಿಕೆ ಸಿಹಿ ಸಕ್ಕರೆ, ಮಾಡುವಿಕೆ ಹಿಟ್ಟಿನ ಉಂಡೆ ವಿಷಪೂರಿತ!
ಹೇಳಿಕೆ ಬಿಟ್ಟು ಮಾಡಿದರೆ, ವಿಷವು ಆಗುವುದು ಅಮೃತ!!
ಅನುವಾದ : by ಹರೀಶ್ ಶೆಟ್ಟಿ,ಶಿರ್ವ
कबीर दोहा
कथनी मीठी खांड सी, करनी विष की लोई |
कथनी छोड़ी करनी करे, विष का अमृत होई ||
* ಕೇವಲ ಸಿಹಿ ಸಿಹಿ ಮಾತಾನಾಡುವ ಬದಲು ಒಳ್ಳೆಯ ಕಾರ್ಯ ಮಾಡಿದರೆ ವಿಷವು ಅಮೃತ ಆಗುವುದು.

Saturday, May 18, 2013

ನೆಮ್ಮದಿಯಿಂದ ನನಗೆಂದೂ


!!ನೆಮ್ಮದಿಯಿಂದ ನನಗೆಂದೂ
ನೀನು ಬದುಕಲು ಬಿಡಲಿಲ್ಲ
ವಿಷವೂ ಬಯಸಿದರೂ ಕುಡಿಯಲೆಂದು
ಕುಡಿಯಲು ಬಿಡಲಿಲ್ಲ!!

!!ಚಂದ್ರನ ರಥದಲಿ
ರಾತ್ರಿಯ ಮದುಮಗಳು
ಬರುವಳು ಯಾವಾಗ
ನೆನಪು ನನ್ನ
ನಿನ್ನ ಹೃದಯವನ್ನು
ಹಂಬಲಿಸಿ ಹೋಗುವುದು ಆವಾಗ
ನೀನು ನೀಡಿದನ್ನು
ಅದನ್ಯಾರು ನೀಡಲಿಲ್ಲ!!
ವಿಷವೂ ಬಯಸಿದರೂ ...

!!ನಿನ್ನ ದುಃಖ ಈ ಹೃದಯದಲಿ
ಒಂದು ವೇಳೆ ಇರುತ್ತಿದ್ದರೆ ರಾತ್ರಿ ದಿನ 
ಯೋಚಿಸಿ ಇದನ್ನು ಉಸಿರುಗಟ್ಟುತ್ತದೆ
ಮತ್ತೇಗೆ ಸಾಗುತ್ತಿತ್ತೋ ಈ ಜೀವನ
ಅಯ್ಯೋ ಈ ಅಗಲಿಕೆ
ನಮಗೆ ಬರಬಾರದಿತ್ತು
ಸಾವೇ ಬಂದಿದ್ದರೂ ನಡೆಯುತ್ತಿತ್ತು
ಯಾವುದೇ ವಿಧದಿಂದ ನಮ್ಮ ನೆಮ್ಮದಿ
ತನ್ನ ಆತ್ಮವನ್ನು ಪಡೆಯುತ್ತಿತ್ತು
ಒಂದು ಕ್ಷಣ ನಗುವುದಾದರೂ
ಈ ಹೃದಯದ ವೇದನೆಯೂ ಬಿಡಲಿಲ್ಲ!!
ವಿಷವೂ ಬಯಸಿದರೂ....

ಮೂಲ : ಎಸ್ .ಎಚ್ .ಬಿಹಾರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಆಶಾ ಭೋಸ್ಲೆ
ಸಂಗೀತ : ಓ .ಪಿ .ನಯ್ಯರ್
ಚಿತ್ರ : ಪ್ರಾಣ್ ಜಾಯೆ ಪರ್ ವಚನ್ ನ ಜಾಯೆ

चैन से हम को कभी, आप ने जीने ना दिया
जहर भी चाहा अगर, पीना तो पीने ना दिया

चाँद के रथ में, रात की दुल्हन  जब जब आयेगी
याद हमारी, आप के दिल को, तड़पा जायेगी
आप ने जो हैं दिया, वो तो किसी ने ना दिया

आप का गम जो, इस दिल में दिनरात अगर होगा
सोच के ये दम घुटता है, फिर कैसे गुजर होगा
काश न आती अपनी जुदाई, मौत ही आ जाती
कोइ बहाने चैन हमारी, रूह तो पा जाती
एक पल हसना कभी, दिल की लगी ने ना दिया
http://www.youtube.com/watch?v=Yc1MfFxpYEI

Thursday, May 16, 2013

Kabir Doha (ಕಬೀರ ದೋಹ )


ಕಬೀರ ದೋಹ
ಮಧುರ ನುಡಿ ಔಷದಿ ಸಮಾನ, ಕುಟಿಲ ನುಡಿ ಹರಿತವಾದ ಬಾಣ !
ಶ್ರವಣ ಮಾರ್ಗದಿಂದ ಒಳ ನುಗ್ಗುವುದು, ಯಾತನೆಯಿಂದ ಬಳಲುವುದು ಶರೀರದ ಕಣ ಕಣ !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
मधुर वचन है औषधि, कुटिल वचन है तीर |
श्रवन द्वार है संचरे, साले सकल सरीर ||

Wednesday, May 15, 2013

Kabir Doha (ಕಬೀರ ದೋಹ )


ಕಬೀರ ದೋಹ
ನಿಂದನೆ ಮಾಡುವವರು ಬಳಿಯಲ್ಲಿರಲಿ, ಲೋಪ ತಿಳಿದು ಸುಧಾರಿಸಬಹುದು!
ನೀರಿಲ್ಲದೆ ಸಾಬೂನು ಇಲ್ಲದೆ , ಸ್ವಭಾವ ನಿರ್ಮಲವಾಗುವುದು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
निंदक नियरे राखिये, आँगन कुटी छवाय |
बिन पानी बिन साबुन, निर्मल करे सुभाव ||

Monday, May 13, 2013

Kabir Doha (ಕಬೀರ ದೋಹ )


ಕಬೀರ ದೋಹ
ಓದಿದೆ ಕೇಳಿದೆ ಕಲಿತೆ ಎಲ್ಲಾ, ದೂರವಾಗಲಿಲ್ಲ ಸಂಶಯದ ಶೂಲ!
ಹೇಳುವನು ಕಬೀರ ಹೇಗೆ ಹೇಳಲಿ, ಇದೇ ಎಲ್ಲಾ ದುಃಖದ ಮೂಲ!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
पढ़ा सुना सीखा सभी, मिटी ना संशय शूल |
कहे कबीर कैसो कहू, यह सब दुःख का मूल ||

Saturday, May 11, 2013

Kabir Doha (ಕಬೀರ ದೋಹ )


ಕಬೀರ ದೋಹ
ಇಂದು ಹೇಳುವೆ ನಾಳೆ ಹರಿ ನಾಮ ಭಜಿಸುವೆಯೆಂದು, ನಾಳೆ ಪುನಃ ನಾಳೆ ಹೇಳುವೆ !
ಇಂದು ನಾಳೆ ಹೇಳುತ್ತಲೇ, ಅವಕಾಶ ವ್ಯರ್ಥ ಗೊಳಿಸುವೆ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा
आज कहे हरी कल भजुंगा, काल कहे फिर काल |
आज कालके करत ही, अवसर जासी चाल ||

Thursday, May 9, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಾವಲಿಲ್ಲದೆ ಧಾನ್ಯಗಳು, ಹಕ್ಕಿಗಳ ಆಹಾರ ಆಗುವುದು ಹೊಲಗಳು !
ಈಗಲೂ ಸ್ವಲ್ಪ ಉಳಿದಿದೆ,   ಚೇತರಿಸಿಕೊಳ್ಳುವುದಾದರೆ ಚೇತರಿಸಿಕೊಳ್ಳು !!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीरा दोहा
बिन रखवारे बाहिरा, चिड़ियों खाया खेत |
अरधा परधा ऊबरे, चेति सके तो चेत ||


Wednesday, May 8, 2013

Kabir Doha (ಕಬೀರ ದೋಹ )


ಕಬೀರ ದೋಹ
ಕಬೀರ ಹೆಮ್ಮೆಯ ಪಡಬೇಡ, ಯಾರದ್ದು ಮಾಡದಿರು ಗೇಲಿ ಎಂದೂ!
ನಿನ್ನ ಬದುಕು ದೋಣಿ ಸಾಗರದಲ್ಲಿದ್ದ ಹಾಗೆ, ಯಾರಿಗೆ ಗೊತ್ತು ಯಾವಾಗ ಏನಾಗುವುದೆಂದು!!
ಅನುವಾದ : by ಹರೀಶ್ ಶೆಟ್ಟಿ,ಶಿರ್ವ
कबीर दोहा
कबीरा गर्व न कीजिये, कबहू न हँसिये कोय |
अजहू नाव समुंदर में, न जाने क्या होय ||

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...