Saturday, 13 April, 2013

ಸತ್ಯ ಅಲ್ಲವೇ ?

ಸತ್ಯ ಅಲ್ಲವೇ ?
ಎಲ್ಲ ಅವರವರ ಇಚ್ಛೆ ಅಲ್ಲವೇ?

ಶುಭಾಶಯ ನೀಡುವುದು ನಿಮ್ಮ ಇಚ್ಛೆ 
ಆದರೆ ಅದಕ್ಕೆ ಧನ್ಯವಾದ ನೀಡದಿದ್ದರೆ 
ಇದು ಅವರ ಇಚ್ಛೆ ಅಲ್ಲವೇ?

ಕರೆ ಮಾಡಿ ಮಾತನಾಡುವುದು ನಿಮ್ಮ ಇಚ್ಛೆ, 
ಆದರೆ ಅವರು ಮಾತಿನ ಮಧ್ಯೆ ನಿಮ್ಮ ಕರೆಯನ್ನು 
ತಿರಸ್ಕರಿಸಿದ್ದರೆ ಅಲ್ಲದೆ ಪುನಃ ಒಂದು 
ಕರೆ ಮಾಡಿ ವಿಚಾರಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?

ನಿಮಗೆ ಮಹತ್ವಪೂರ್ಣ ಎನಿಸುವ
ಅವರಿಗೆ ಅಷ್ಟು ಮಹತ್ವಪೂರ್ಣ ಎನಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?

ಪ್ರೀತಿ, ಗೌರವ ನೀಡುವುದು ನಿಮ್ಮ ಇಚ್ಛೆ
ಆದರೆ ಆ ಪ್ರೀತಿ, ಗೌರವವನ್ನು
ಅವರು ಅನ್ಯಥಾ ಭಾವಿಸುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ?

ಜ್ಞಾನದ ಮಾತನ್ನು ಸಾರುವವರು
ಅಜ್ಞಾನದ ಕತ್ತಲಲ್ಲಿ ಇದ್ದು
ಅಸೂಯೆಯ ಜ್ವಾಲೆಯಲ್ಲಿ
ಬೇಯುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment