Sunday, April 7, 2013

ಜೀವನದ ಪ್ರಯಾಣ


!!ಜೀವನದ ಪ್ರಯಾಣ
ಇದೆಂತಹ ಪ್ರಯಾಣ
ಯಾರಿಗೂ ತಿಳಿಯಲಿಲ್ಲ
ಯಾರೂ ಅರಿಯಲಿಲ್ಲ
ಇದೆಂತಹ ಪಥಗಳು
ಆದರೆ ನಡೆಯುವರು ಎಲ್ಲರೂ
ಯಾರಿಗೂ ತಿಳಿಯಲಿಲ್ಲ
ಯಾರೂ ಅರಿಯಲಿಲ್ಲ!!

!!ಜೀವನಕ್ಕೆ ತುಂಬಾ ಪ್ರೀತಿ
ನೀಡಿದೆ ನಾನು
ಸಾವಿನಿಂದಲೂ ಪ್ರೀತಿ
ನಿಭಾಯಿಸುವೆ ನಾನು
ಅಳುತ್ತಾ ಅಳುತ್ತಾ ಜಗದಲಿ ಬಂದೆ ಆದರೆ
ನಗು ನಗುತ್ತಾ ಜಗದಿಂದ ಹೋಗುವೆ ನಾನು
ಆದರೆ ಹೋಗುವುದೆಲ್ಲಿಗೆ
ಇದರ ಅರಿವು ಯಾರಿಗೆ
ಯಾರಿಗೂ ತಿಳಿಯಲಿಲ್ಲ
ಯಾರೂ ಅರಿಯಲಿಲ್ಲ!!

!!ಅಂತಹದು ಜೀವನವೂ ಇದೆ
ಎಂದಿಗೂ ಬದುಕದ  
ಅದಕ್ಕೆ ಜೀವಿಸುವ ಮೊದಲೇ ಸಾವು ಬಂದಿತ್ತು
ಹೂವು ಅಂತಹದು ಇದೆ
ಎಂದಿಗೂ ಅರಳದ
ಅದು ಅರಳುವ ಮುನ್ನವೇ ಶಿಶಿರ ನುಂಗಿತ್ತು
ಕಂಗಳು ಚಿಂತೆಯಲ್ಲಿದೆ
ಯೋಚಿಸಿ ಸೋತುಹೋದೆ
ಯಾರಿಗೂ ತಿಳಿಯಲಿಲ್ಲ
ಯಾರೂ ಅರಿಯಲಿಲ್ಲ!!

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಲ್ಯಾಣ್ ಜಿ ಆನಂದ್ ಜಿ
ಚಿತ್ರ : ಸಫರ್

जिन्दगी का सफ़र, हैं ये कैसा सफ़र
कोई समझा नहीं, कोई जाना नहीं

है ये कैसी डगर, चलते हैं सब मगर
कोई समझा नहीं, कोई जाना नहीं

जिन्दगी को बहोत प्यार हम ने किया
मौत से भी मोहब्बत निभायेंगे हम
रोते रोते जमाने में आये मगर
हंसते हंसते जमाने से जायेंगे हम
जायेंगे पर किधर , हैं किसे ये खबर
कोई समझा नहीं, कोई जाना नहीं

ऐसे जीवन भी हैं जो जिए ही नहीं
जिनको जीने से पहले ही मौत आ गयी
फूल ऐसे भी हैं जो खिले ही नहीं
जिनको खिलने से पहले खिजा खा गयी
है परेशान नजर, थक गए चार अगर
कोई समझा नहीं, कोई जाना
www.youtube.com/watch?v=nI51ESCus1U

2 comments:

  1. ನನ್ನ ನೆಚ್ಚಿನ ನಾಯಕನ ಒಳ್ಳೆಯ ಹಾಡಿಗೆ ನ್ಯಾಯ ಒದಗಿಸಿದ್ದೀರಿ.

    ReplyDelete
  2. ಧನ್ಯವಾದಗಳು ಬದರಿ ಸರ್, ನಿಮ್ಮ ಮೆಚ್ಚುಗೆಯ ನುಡಿಗಳೇ ನನ್ನ ಬರಹದ ಶಕ್ತಿ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...