Thursday, April 25, 2013

ಹೃದಯ ಈ ರೀತಿ ಯಾರೋ ನನ್ನ ಮುರಿದರು


!!ಹೃದಯ ಈ ರೀತಿ
ಯಾರೋ ನನ್ನ ಮುರಿದರು
ವಿನಾಶದ ಮಾರ್ಗಕ್ಕೆ ದೂಡಿದರು-೨
ಒಬ್ಬ ಸಭ್ಯ ಮನುಷ್ಯನನ್ನು ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಸಾಗರ ಎಷ್ಟು ನನ್ನ ಬಳಿಯಲ್ಲಿದೆ
ನನ್ನ ಜೀವನದಲಿ ಆದರೂ ದಾಹವಿದೆ
ಇದೆ ದಾಹ ದೊಡ್ಡ
ಜೀವನ ಸಣ್ಣದು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಈ ಪ್ರಪಂಚದ ಪಥಗಳು ಹೇಳುತ್ತಿದೆ
ಗಮ್ಯವಿಲ್ಲ ಈಗ ನಿನಗೋಸ್ಕರ ಯಾವುದೇ
ಸೋಲಿನಿಂದ ನನ್ನ ಸಂಬಂಧ ಜೋಡಿಸಿದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಮುಳುಗಿದ ಸೂರ್ಯ ಪುನಃ ಉದಯವಾಗಲಿದೆ
ಕತ್ತಲು ಎಂದೂ ಉಳಿಯುವುದಿಲ್ಲ
ನನ್ನ ಸೂರ್ಯ ಹೀಗೆ ಮುನಿಸಿತು
ಮುಂಜಾನೆಯನ್ನು ನಾನೆಂದೂ ನೋಡಲಿಲ್ಲ
ಬೆಳಕೆಲ್ಲ ನನ್ನನ್ನು ತೊರೆದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

ಮೂಲ : ಇಂದೀವರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಶ್ಯಾಮಲ್ ಮಿತ್ರ
ಚಿತ್ರ : ಅಮಾನುಶ್

dil aisa kisine mera toda, barbadi kee taraf aisa moda
dil aisa kisine mera toda, barbadi kee taraf aisa moda
yek bhale manush ko amanush bana ke chhoda
dil aisa kisine mera toda, barbadi kee taraf aisa moda

sagar kitna mere pas hai, mere jiwan me fir bhi pyas hai
hai pyas badi jiwan thoda, amanush bana ke chhoda
dil aisa kisine mera toda, barbadi kee taraf aisa moda

kehte hain yeh dooniya ke raste, koyi manjil nahee tere waste
nakamiyo se nata mera joda, amanush bana ke chhoda
dil aisa kisine mera toda, barbadi kee taraf aisa moda

duba suraj fir se nikale, rehta nahee hain andhera
mera suraj aisa ruthha, dekha na maine savere
ujalo ne sath mera chhoda, amanush bana ke chhoda
dil aisa kisine mera toda, barbadi kee taraf aisa moda

2 comments:

  1. ಭಾವಾನುವಾದವೇ ಹಾಡಿಕೊಳ್ಳುವಂತಿದೆ ಶೆಟ್ಟರೇ, ಇಂದೀವರ್ ಮತ್ತು ಹರೀಶರಿಗೂ ಸಮವಾದ ಬಹುಮಾನ.

    "ಸಾಗರ ಎಷ್ಟು ನನ್ನ ಬಳಿ ಇದೆ
    ನನ್ನ ಜೀವನದಲಿ ಆದರೂ ದಾಹವಿದೆ
    ಇದೆ ದಾಹ ದೊಡ್ಡ, ಜೀವನ ಸಣ್ಣದು
    ಅಮಾನುಷ ಮಾಡಿ ಬಿಟ್ಟರು!!
    ಹೃದಯ ನನ್ನ....."

    ಚರಣಕ್ಕೆ ಫುಲ್ ಮಾರ್ಕ್ಸ್.

    ಅಂದಹಾಗೆ, ಅಮಾನುಷ್ ಚಿತ್ರಕ್ಕೆ ಆಲೋಕೇ ದಾಸ್ ಗುಪ್ತರ ಛಾಯಾಗ್ರಹಣ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...