Saturday, 27 April, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಾಡುತ್ತಲಿದ್ದೆ ಏಕೆ ಮಾಡುತ್ತಲಿದ್ದೆ ,ಈಗ ಮಾಡಿದ ನಂತರ ಪಶ್ಚಾತಾಪ ಯಾಕೆ ಪಡುವೆ!
ಜಾಲಿಮರ ಬಿತ್ತಿದೆ, ಮಾವು ಎಲ್ಲಿಂದ ಪಡೆಯುವೆ!! 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
करता रहा सो क्यों रहा, अब करी क्यों पछताए |
बोये पेड़ बबूल का, अमुआ कहा से पाए ||

Thursday, 25 April, 2013

ಹೃದಯ ಈ ರೀತಿ ಯಾರೋ ನನ್ನ ಮುರಿದರು


!!ಹೃದಯ ಈ ರೀತಿ
ಯಾರೋ ನನ್ನ ಮುರಿದರು
ವಿನಾಶದ ಮಾರ್ಗಕ್ಕೆ ದೂಡಿದರು-೨
ಒಬ್ಬ ಸಭ್ಯ ಮನುಷ್ಯನನ್ನು ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಸಾಗರ ಎಷ್ಟು ನನ್ನ ಬಳಿಯಲ್ಲಿದೆ
ನನ್ನ ಜೀವನದಲಿ ಆದರೂ ದಾಹವಿದೆ
ಇದೆ ದಾಹ ದೊಡ್ಡ
ಜೀವನ ಸಣ್ಣದು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಈ ಪ್ರಪಂಚದ ಪಥಗಳು ಹೇಳುತ್ತಿದೆ
ಗಮ್ಯವಿಲ್ಲ ಈಗ ನಿನಗೋಸ್ಕರ ಯಾವುದೇ
ಸೋಲಿನಿಂದ ನನ್ನ ಸಂಬಂಧ ಜೋಡಿಸಿದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

!!ಮುಳುಗಿದ ಸೂರ್ಯ ಪುನಃ ಉದಯವಾಗಲಿದೆ
ಕತ್ತಲು ಎಂದೂ ಉಳಿಯುವುದಿಲ್ಲ
ನನ್ನ ಸೂರ್ಯ ಹೀಗೆ ಮುನಿಸಿತು
ಮುಂಜಾನೆಯನ್ನು ನಾನೆಂದೂ ನೋಡಲಿಲ್ಲ
ಬೆಳಕೆಲ್ಲ ನನ್ನನ್ನು ತೊರೆದರು
ಅಮಾನುಷ ಮಾಡಿ ಬಿಟ್ಟರು!!
ಹೃದಯ ನನ್ನ.....

ಮೂಲ : ಇಂದೀವರ್
ಅನುವಾದ: ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಶ್ಯಾಮಲ್ ಮಿತ್ರ
ಚಿತ್ರ : ಅಮಾನುಶ್

dil aisa kisine mera toda, barbadi kee taraf aisa moda
dil aisa kisine mera toda, barbadi kee taraf aisa moda
yek bhale manush ko amanush bana ke chhoda
dil aisa kisine mera toda, barbadi kee taraf aisa moda

sagar kitna mere pas hai, mere jiwan me fir bhi pyas hai
hai pyas badi jiwan thoda, amanush bana ke chhoda
dil aisa kisine mera toda, barbadi kee taraf aisa moda

kehte hain yeh dooniya ke raste, koyi manjil nahee tere waste
nakamiyo se nata mera joda, amanush bana ke chhoda
dil aisa kisine mera toda, barbadi kee taraf aisa moda

duba suraj fir se nikale, rehta nahee hain andhera
mera suraj aisa ruthha, dekha na maine savere
ujalo ne sath mera chhoda, amanush bana ke chhoda
dil aisa kisine mera toda, barbadi kee taraf aisa moda

Kabir Doha (ಕಬೀರ ದೋಹ )

ಕಬೀರ ದೋಹ
ಜಪಿಸುವವ ಸಾಯುವನು , ಜಪಿಸದವ ಸಾಯುವನು, ಶ್ರೇಷ್ಠನೆನ್ನುವವನೂ ಸತ್ತು ಹೋಗುವನು!
ರಾಮ ಸ್ನೇಹಿ ಸಾಯುವುದಿಲ್ಲ , ಎಂದು ಕಬೀರ ತಿಳಿಸುವನು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ
कबीर दोहा 
जाप मरे, अजापा मरे, अनहद हू मरी जाय |
राम स्नेही ना मरे, कहे कबीर समझाय ||

Kabir Doha (ಕಬೀರ ದೋಹ )

ಕಬೀರ ದೋಹ
ಮಿತಿಯಲ್ಲಿ ನಡೆಯುವವ ಮಾನವ, ಅಪರಿಮಿತ ನಡೆಯುವವ ಸಂತ! 
ಮಿತಿ ಅಪರಿಮಿತ ಎರಡನ್ನೂ ತ್ಯಜಿಸಿದವ, ಅವನ ಜ್ಞಾನ ಅಗಾಧ!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
हद में चले सो मानव, बेहद चले सो साध |
हद बेहद दोनों तजे, ताको बता अगाध ||

Wednesday, 24 April, 2013

Kabir Doha (ಕಬೀರ ದೋಹ )

ಕಬೀರ ದೋಹ
ಶ್ರಮದಿಂದಲೇ ಎಲ್ಲವೂ ಸಾಧ್ಯ, ಶ್ರಮವಿಲ್ಲದೆ ಏನೂ ಸಿಗದು!! 
ನೇರ ಬೆರಳಿನಿಂದ ಹೆಪ್ಪುಗಟ್ಟಿದ ಬೆಣ್ಣೆ, ಎಂದೂ ತೆಗೆಯಲು ಆಗದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीरा दोहा 
श्रम से ही सब कुछ होत है, बिन श्रम मिले कुछ नाही |
सीधे ऊँगली घी जमो, कबसू निकसे नाही ||

Tuesday, 23 April, 2013

Kabir Doha (ಕಬೀರ ದೋಹ )

ಕಬೀರ ದೋಹ
ಉಪ್ಪು ನೋಡಿ ಹೊರಟಿತು, ಅಳೆಯಲು ಸಮುದ್ರದ ಆಳವನ್ನು! 
ತಾನೇ ನೀರಲ್ಲಿ ಕರಗಿತು, ಯಾರು ಹೇಳಲು ಬರುವರು ಆಳವನ್ನು !! 
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
कबीर दोहा
चली जो पुतली लौन की, थाह सिंधु का लेन |
आपहू गली पानी भई, उलटी काहे को बैन ||

(ಭಗವಂತ ಸಮುದ್ರ ಸಮಾನ, ಭಕ್ತ ಅವನ ಆಳ ಅಳೆಯಲು ಹೋಗಿ ಅವನಲ್ಲಿ ಮರೆಯಾಗುತ್ತಾನೆ.
ಅಂದರೆ ಭಗವಂತನ ಇದ್ದಾನೆ, ಇಲ್ಲ ಎಂಬ ವರದಿ ನೀಡುವವರು ಅಸ್ತಿತ್ವದಲ್ಲಿಲ್ಲ )

Monday, 22 April, 2013

Kabir Doha (ಕಬೀರ ದೋಹ ),

ಕಬೀರ ದೋಹ
ಮನಸ್ಸು ಕೆರಳಿದಾಗ ಪ್ರತಿಕ್ರಿಯಿಸದಿರಿ , ಮಾತನ್ನು ನುಡಿಯಿರಿ ಅಳೆದು !
ಮೂರ್ಖರಿಗೆ ಇದರ ಅರಿವಿಲ್ಲ, ಬೇಡದನ್ನು ನುಡಿಯುವರು ಸಂಯಮ ಕಳೆದು!! 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
कबीर दोहा 
मन उन्मना न तोलिये, शब्द के मोल न तोल |
मुर्ख लोग न जान्सी, आपा खोया बोल ||

Sunday, 21 April, 2013

ನಮ್ಮ ಮನಸ್ಸಿಗೆ ಶಕ್ತಿ ನೀಡು

ನಮ್ಮ ಮನಸ್ಸಿಗೆ ಶಕ್ತಿ ನೀಡು 
ಮನಸ್ಸಿನ ವಿಜಯವಾಗಲಿ 
ಅನ್ಯರಿಗೆ ನೆರವಾಗುವ ಮುಂಚೆ 
ಸ್ವತಃ ಶಕ್ತರಾಗುವಂತಾಗಲಿ-೨ 
ನಮ್ಮ ಮನಸ್ಸಿಗೆ... 

ಭೇದ ಭಾವ ತನ್ನ ಹೃದಯದಿಂದ 
ಶುಚಿ ಮಾಡುವಂತಾಗಲಿ-೨ 
ಮಿತ್ರರಿಂದ ತಪ್ಪಾದರೆ 
ಕ್ಷಮಿಸುವಂತಾಗಲಿ-೨ 
ಸುಳ್ಳಿಂದ ರಕ್ಷಿಸಿ  
ಸತ್ಯವನ್ನು ಕಾಪಾಡುವಂತಾಗಲಿ-೨ 
ಅನ್ಯರಿಗೆ ನೆರವಾಗುವ... 

ಕಷ್ಟಗಳು ಒದಗಿದರೆ 
ಇಷ್ಟೊಂದು ಉಪಕಾರ ಮಾಡು-೨
ಜೊತೆ ನೀಡುವುದಾದರೂ ಧರ್ಮದ 

ನಡೆದರೂ ಹಾದಿಯಲಿ ಧರ್ಮದ-೨
ತನ್ನಲ್ಲಿ ಧೈರ್ಯವಿರಲಿ  
ದುಷ್ಟತೆಯಿಂದ ಹೆದರದಿರಲಿ-೨
ಅನ್ಯರಿಗೆ ನೆರವಾಗುವ
...

ಮೂಲ : ಗುಲ್ಶಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ವಾಣಿ ಜಯರಾಂ
ಸಂಗೀತ : ವಸಂತ್ ದೇಸಾಯಿ
ಚಿತ್ರ : ಗುಡ್ಡಿ


Hamko manki shakti dena man vijay karen
doosron ki jay se pahle khudko jay karen
doosron ki jay se pahle khudko jay karen
Hamko manki shakti dena man vijay karen
doosron ki jay se pahle khudko jay karen
Hamko manki shakti dena

bhed bhaav
bhed bhaav apne dil se saaf kar saken
bhed bhaav apne dil se saaf kar saken
doston se bhool ho to maaf kar saken
doston se bhool ho to maaf kar saken
jhooth se bache rahen sach ka dam bharen
jhooth se bache rahen sach ka dam bharen
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena

mushkilen paden to hampe itna karm kar
mushkilen paden to hampe itna karm kar
saath de to dharm ka chale to dharm par
saath de to dharm ka chale to dharm par
khud pe hausla rahe badi se na daren
khud pe hausla rahe badi se na daren
doosron ki jay se pahle khud ko jay karen
Hamko manki shakti dena man vijay karen
doosron ki jay se pahle khud ko jay karen
Hamko manki shakti dena

Kabir Doha (ಕಬೀರ ದೋಹ )

ಕಬೀರ ದೋಹ
ಒಣಹುಲ್ಲನ್ನು ಎಂದೂ ತುಳಿಯ ಬೇಡಿ , ಕಾಲ ಆಡಿಯಲ್ಲಿ ಇರುವುದನ್ನು ! 
ಒಂದು ವೇಳೆ ಹಾರಿ ಬಂದು ಕಣ್ಣಲ್ಲಿ ಹೊಕ್ಕಿದರೆ , ತಡೆಯಲಾಗದು ವೇದನೆಯನ್ನು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
तिनका कबहुँ ना निंदिये, जो पाँव तले होय ।
कबहुँ उड़ आँखो पड़े, पीड गहरी होय ॥

Kabir Doha (ಕಬೀರ ದೋಹ )

ಕಬೀರ ದೋಹ
ಜಪಿಸುವೆ ದೇವ ನಾಮ ,ದಿನ ನಿತ್ಯ ಋಷಿ ಮಹತ್ಮರೊಂದಿಗೆ ! 
ಒಳ ವಿಕಾರದಿಂದ ಮುಕ್ತವಾಗಿಲ್ಲ, ಹೇಗೆ ಒಲಿಯುವನು ಭಗವಂತ ನಿನಗೆ !!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
मुख से नाम रटा करैं, निस दिन साधुन संग!
कहु धौं कौन कुफेर तें, नाहीं लागत रंग!!

ಬೇಸರದ ಲತೆ

ಬೆಳೆಯುತ್ತಿದೆ 
ಬೇಸರದ ಲತೆ
ದೂರವಿದ್ದ ಮರವನ್ನು 
ಬಿಗಿದಪ್ಪಿ ಅಳುವ ತವಕ 
ಭಾರ ಕಡಿಮೆ ಆದೀತು ಎಂಬ ಭ್ರಮೆ 
by ಹರೀಶ್ ಶೆಟ್ಟಿ,ಶಿರ್ವ

Thursday, 18 April, 2013

Kabir Doha (ಕಬೀರ ದೋಹ )


ಕಬೀರ ದೋಹ
ಕಬೀರ ಈ ಮನಸ್ಸು ಲೋಭಿ, ಅರ್ಥವಾಗದ ಪೆದ್ದ !!
ಭಕ್ತಿ ಮಾಡಲು ಆಲಸಿ, ತಿನ್ನಲು ಸಿದ್ಧ !!
ಕಬೀರ ಮನಸ್ಸು ಮದದಾನೆ, ವಶದಲ್ಲಿರಬೇಕು !
ವಿಷದ ಬಳ್ಳಿಯಲ್ಲಿ ಸೆರೆ ಆಗದಿರಿ,ಅಮೃತ ಫಲ ಸವಿಯಬೇಕು !!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
कबिरा यह मन लालची, समझै नहीं गंवार।
भजन करन को आलसी, खाने को तैयार।।
कबिरा मन ही गयंद है, आंकुष दे दे राखु ।
विष की बेली परिहरी, अमरित का फल चाखु ।।

Kabir Doha (ಕಬೀರ ದೋಹ )


ಕಬೀರ ದೋಹ
ಅತಿ ಮಾತು ಒಳ್ಳೆಯದಲ್ಲ , ಒಳ್ಳೆಯದಲ್ಲ ಅತಿ ಮೌನವು !
ಅತಿ ಮಳೆಯೂ ಒಳ್ಳೆಯದಲ್ಲ, ಒಳ್ಳೆಯದಲ್ಲ ಅತಿ ಬಿಸಿಲು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ
कबीर दोहा
अति का भला न बोलना, अति की भली न चूप।
अति का भला न बरसना, अति की भली न धूप।।

ಗುಲ್ ಮೊಹರ್ ಒಂದು ವೇಳೆ ಹೆಸರಾಗಿದ್ದರೆ ನಿನ್ನ


!!ಗುಲ್ ಮೊಹರ್ 
ಒಂದು ವೇಳೆ ಹೆಸರಾಗಿದ್ದರೆ ನಿನ್ನ
ನಿಸರ್ಗದ ಹೂವನ್ನು ರಮಿಸುವುದೂ 
ಕೆಲಸವಾಗುತ್ತಿತ್ತು ನನ್ನ!!

!!ಬಂದಾಗ ವಸಂತ ಋತು 
ಹೇಳವರಿಗೆ ಸ್ವಲ್ಪ ಕೇಳೆಂದು 
ಹೇಗೆ ಅದರ ವಸಂತವೆಂದು ಹೆಸರಾಗುತ್ತಿತ್ತು 
ನನ್ನ ಹೂವಿನ ವಿನಾಃ !!
ಗುಲ್ ಮೊಹರ್ 
ಒಂದು ವೇಳೆ ಹೆಸರಾಗಿದ್ದರೆ ನಿನ್ನ...

!!ಸಂಜೆಯ ಗುಲಾಬಿ ಸೆರಗಲ್ಲಿ 
ದೀಪ ಬೆಳಗುತ್ತಿದೆ ಚಂದ್ರನ 
ಹೇಗೆ ಅದರ ಚಂದ್ರವೆಂದು ಹೆಸರಾಗುತ್ತಿತ್ತು 
ನನ್ನವರ ವಿನಾಃ  !!
ಗುಲ್ ಮೊಹರ್ 
ಒಂದು ವೇಳೆ ಹೆಸರಾಗಿದ್ದರೆ ನಿನ್ನ...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್, ಲತಾ ಮಂಗೇಶ್ಕರ್
ಸಂಗೀತ : ಆರ್ .ಡೀ.ಬರ್ಮನ್
ಚಿತ್ರ : ದೇವತಾ
gulmohar gar tumhara nam hota
mausame gul ko hasana bhee hamara kam hota

aayengee bahare toh abke unhe kehna jara itna sune
mere gul bina kaha unka bahar nam hota
gulmohar gar tumhara nam hota.......

sham ke gulabee se aanchal me ek diya jala hai chand kaa
mere unn bina kaha uska chand nam hota
gulmohar gar tumhara nam hota......

http://www.youtube.com/watch?v=eG5CqEIQtFE

Wednesday, 17 April, 2013

Kabir Doha (ಕಬೀರ ದೋಹ )

ಕಬೀರ ದೋಹ
ನೂರು ವರುಷ ಇಷ್ಟ ದೇವರನ್ನು ಪೂಜಿಸುವೆ, ಒಂದು ದಿನ ಸಂದಿಗ್ಧತೆಯಲ್ಲಿ ಅನ್ಯ ಸ್ವರೂಪವನ್ನು ಪೂಜಿಸುವೆ! 
ನೂರು ವರ್ಷದ ಪೂಣ್ಯ ಕಳೆದುಕೊಳ್ಳುವೆ , ಅಪರಾಧಿ ಆತ್ಮವನ್ನು ಹೊತ್ತು ಅಲೆಯುವೆ!! 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
कबीर दोहा 
सौं बरसां भक्ति करै, एक दिन पूजै आन
सौ अपराधी आतमा, पड़ै चैरासी खान

ಭೂಮಿ ಅಂದರೆ

ಮಗು : ಅಮ್ಮ ಇದೇನು ?
ಅಮ್ಮ : ಭೂಮಿ ನಡುಗುತ್ತಿದೆ, ಮಗ .
ಮಗು :ಆದರೆ ನೀನೇಕೆ ಇಷ್ಟು ಚಿಂತೆಯಲಿ, ಭೂಮಿ ನಡುಗಿದರೆ ಏನಾಗುತ್ತದೆ ?
ಅಮ್ಮ :ಕಷ್ಟವಾಗುತ್ತದೆ , ನೋವಾಗುತ್ತದೆ, ಭೂಮಿ ಅಂದರೆ ನಿನಗೆ ನಾನು ಇದ್ದ ಹಾಗೆ, ಮಗು.
by ಹರೀಶ್ ಶೆಟ್ಟಿ,ಶಿರ್ವ

Kabir Doha (ಕಬೀರ ದೋಹ )

ಕಬೀರ ದೋಹ
ನಡೆ ಮುಕ್ತಿಯ ಮಾರ್ಗದಲಿ ತನ್ನ ಸಾಮರ್ಥ್ಯದಿಂದಲೇ, ಆಶಿಸುವುದನ್ನು ಬಿಡು ಅನ್ಯರಿಂದ! 
ನಿನ್ನ ಅಂಗಳದಲ್ಲಿಯೇ ನದಿ ಹರಿಯುವಾಗ, ಯಾಕೆ ಸಾಯುವೆ ದಾಹದಿಂದ!! 
ಅನುವಾದ :ಹರೀಶ್ ಶೆಟ್ಟಿ,ಶಿರ್ವ 
कबीर दोहा 
करु बहियां बल आपनी, छोड़ बिरानी आस।
जाके आंगन नदिया बहै, सो कस मरै पियास।।

ಜನರೆಲ್ಲಾ ಚಿಂತಿತ

ಇಂದು ಭೂಮಿಗೆ ಹುಷಾರಿಲ್ಲ 
ಮೈಯಲ್ಲಿ ನಡುಗು 
ಜನರೆಲ್ಲಾ ಚಿಂತಿತ! 
by ಹರೀಶ್ ಶೆಟ್ಟಿ,ಶಿರ್ವ

Tuesday, 16 April, 2013

ಸೇಂದಿ ಅಂಗಡಿ

ಮುಂಜಾನೆ ಸಂಜೆ ಎಂದಿಲ್ಲ 
ಎದ್ದ ಸಮಯವೇ 
ಅವನಿಗೆ 
ಪ್ರಭಾತ !

ಅವನು ಧರಿಸುವ ಬಟ್ಟೆ 
ಅಂದರೆ 
ಒಂದು ಹರಕಲು ಬನಿಯಾನು 
ಸೊಂಟಕ್ಕೆ ಲುಂಗಿ !

ಹಬ್ಬದ ದಿವಸ
ಆವನ ಮೈ ಹಾಗು
ಉಟ್ಟ ಬಟ್ಟೆಗೆ
ಸಾಬೂನು ನೀರಿನ ಭಾಗ್ಯ!

ಪೇಟೆಯ ಯಾವುದೇ ಅಂಗಡಿಯ ಬಗ್ಗೆ
ಅವನಿಗೆ ಆಸಕ್ತಿ ಇಲ್ಲ
ಒಂದು ಅಂಗಡಿ ಬಿಟ್ಟು
"ಸೇಂದಿ ಅಂಗಡಿ" !

ಅವನ ಹಾಸಿಗೆ
ಅಂದರೆ
ಹೆಚ್ಚಾಗಿ ಯಾವುದೇ ಚರಂಡಿ ಅಲ್ಲದೆ
ಕಸದ ರಾಶಿ !

ಅವನಲ್ಲಿ ಇರುವುದು
ಒಂದೇ ಗುಣ
ಅಂದರೆ
ಪ್ರಾಮಾಣಿಕತೆ!

ಇಡಿ ಮನೆ ಬೇಕಾದರೂ
ಅವನ ಭರವಸೆಯಲ್ಲಿ
ಬಿಟ್ಟು ಹೋಗಬಹುದು
ಒಂದು ನಯ ಪೈಸೆ ಅಲ್ಲಿಲ್ಲಾಗದು !

ಆದರೆ ಮನೆಯವರಿಂದ
ಹಣ ಬಂದ ಕೂಡಲೇ
ಅವನನ್ನು ಎಳೆಯುವುದು
ಆದೇ "ಸೇಂದಿ ಅಂಗಡಿ"!

ಎಷ್ಟೋ ವರ್ಷದ ನಂತರ
ಅವನನ್ನು ನೋಡಿದ್ದು
ಈಗ ಅವನ ಶರೀರದ ಅವಸ್ಥೆ
ಇನ್ನೂ ಹಾಳು!

ಆದರೆ ಈಗಲೂ ಬೇರೆ ಯಾವದರಲ್ಲೂ
ಅವನಿಗೆ ರುಚಿ ಇಲ್ಲ
ಅವನಾಯಿತು ಹಾಗು ಅವನ
ಅದೇ "ಸೇಂದಿ ಅಂಗಡಿ" ಆಯಿತು!
by ಹರೀಶ್ ಶೆಟ್ಟಿ, ಶಿರ್ವ

Monday, 15 April, 2013

Kabir Doha (ಕಬೀರ ದೋಹ )

ಕಬೀರ ದೋಹ
ಕಪಟಿ ಹಾಗು ಶ್ರೀಮಂತರನ್ನು, ಪ್ರೀತಿಸುವರು ಎಲ್ಲರೂ, ಓಡುವರು ಅವರತ್ತ!
ಕಬೀರ ಹೇಳುವನು ಸತ್ಯ ಪ್ರೇಮ ತಿಳಿದುಕೋ, ಅದು ಇರುವುದು ಸ್ವಾರ್ಥರಹಿತ!! 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
गुणवेता और द्रव्य को, प्रीति करै सब कोय।
कबीर प्रीति सो जानिये, इनसे न्यारी होय॥

ನೀ ಓಡಿ ಓಡಿ ಬಂದೆ

ಮೃದಂಗ ಬಾರಿಸಿದೆ 
ನೀ ಬರಲಿಲ್ಲ 
ಶಹನಾಯಿ ಊದಿದೆ
ನೀ ಬರಲಿಲ್ಲ 
ಪ್ರೀತಿಯ ಪರಿ ನೋಡು 
ನನಗೆ ಸೌಖ್ಯವಿಲ್ಲವೆಂದು ಗೊತ್ತಾದ ಕೂಡಲೇ 
ನೀ ಓಡಿ ಓಡಿ ಬಂದೆ
by ಹರೀಶ್ ಶೆಟ್ಟಿ, ಶಿರ್ವ

ಮೋಡಗಳಿಗೂ ಬೇಸರ

ಗೆಳತಿ 
ನೋಡು,
ನನ್ನ ವ್ಯಥೆಯಿಂದ 
ಇಂದು ಮೋಡಗಳಿಗೂ ಬೇಸರ 
ತಟಕ್ಕನೆ ಬಂದು 
ನಾಲ್ಕು ಹನಿ ಸುರಿಸಿ ಹೋದವು 
by ಹರೀಶ್ ಶೆಟ್ಟಿ, ಶಿರ್ವ

Kabir Doha (ಕಬೀರ ದೋಹ )

ಕಬೀರ ದೋಹ
ಕಟು ನುಡಿ ಬೆಂಕಿ ಸಮಾನ, ಶರೀರ ಉರಿದು ಬೂದಿ ಆಗುವುದು! 
ಮಧುರ ನುಡಿ ಜಲ ಸಮಾನ, ಅಮೃತ ಧಾರೆ ಹರಿಯುವುದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
(ಬೆಂಕಿ ಸಮಾನ =ತುಂಬಾ ಕೆಟ್ಟದ್ದು) 
कबीर दोहा 
कुटिल वचन सबतें बुरा, जारि करै सब छार।
साधु वचन जल रूप है, बरसै अमृत धार।।

ಸಣ್ಣ ದೀಪದ ಅಂದ

ಜಗ ಬೆಳಗಿಸುವ 
ಸೂರ್ಯ ಅಲ್ಲ ಅದು 
ಆದರೆ 
ಪುಟ್ಟ ಬೆಳಕು ಬೀರುವ 
ಈ ಸಣ್ಣ ದೀಪದ 
ಅಂದ ಕಡಿಮೆ ಏನಲ್ಲ. 
by ಹರೀಶ್ ಶೆಟ್ಟಿ, ಶಿರ್ವ

ಕಾಡು ಹೂ

ಸುಂದರ ಸುಂದರ 
ಮನಮೋಹಕ ಹೂಗಳ 
ಮಧ್ಯೆ 
ಒಂದು ಕಾಡು ಹೂ, 
ತನ್ನದೇ ಆಕರ್ಷಣ 
ತನ್ನದೇ ಅಂದ 
ತನ್ನದೇ ಚೆಲುವು 
ಆ ಕಾಡು ಹೂವು ಮೆಲ್ಲ ಮೆಲ್ಲನೆ ನಗುತ್ತಿದೆ 
by ಹರೀಶ್ ಶೆಟ್ಟಿ, ಶಿರ್ವ

Sunday, 14 April, 2013

Kabir Doha (ಕಬೀರ ದೋಹ )


ಕಬೀರ ದೋಹ
ಪರ ಸ್ತ್ರೀ ಮೋಹ ಅಂದರೆ,  ಬೆಳ್ಳುಳ್ಳಿ ತಿನ್ನುವಂತೆ !
ಮೂಲೆಯಲಿ ಕುಳಿತು ತಿಂದರೂ, ಅದರ ಕಂಪು ಪ್ರಕಟವಾದಂತೆ !!
ಅನುವಾದ :ಹರೀಶ್ ಶೆಟ್ಟಿ, ಶಿರ್ವ
कबीर दोहा
पर नारी का राचना, ज्यूं लहसून की खान।
कोने बैठे खाइये, परगट होय निदान।।

Kabir Doha (ಕಬೀರ ದೋಹ )

ಕಬೀರ ದೋಹ
ಮೋಸ ಜಗದ ಮರುಳಲಿ, ಕೇವಲ ತನ್ನದೇ ಕುಟುಂಬದ ಚಿಂತೆಯಲಿ ನೀನು!
ಭೂಮಿಯಿಂದ ಅಗಲಿದಾಗ, ನಿನ್ನ ಕುಲದ ಪ್ರತಿಷ್ಠೆ ಏನು!! 
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
कबीर दोहा 
दुनिया के धोखे मुआ, चल कुटुंब की कानि।
तब कुल की क्या लाज है, जब ले धरा पसानि॥

Saturday, 13 April, 2013

ಮಾನ, ಏಳಿಗೆ, ಘನತೆ

ಕಬೀರ ದೋಹ
ಮಾನ, ಏಳಿಗೆ, ಘನತೆ ಪಡೆಯಲೆಂದು, ಜಗ ಪೂಜಿಸುವರು ದೇವರನ್ನು! 
ಸಿಗದಾಗ ಅದೆಲ್ಲಾ, ಮೂರ್ಖರಂತೆ ದೂರುವರು ಅದೇ ದೇವ,ಜಗವನ್ನು!!
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
कबीर दोहा 
मान बड़ाई देखि कर, भक्ति करै संसार।

जब देखैं कछु हीनता, अवगुन धरै गंवार।।

ಅರಿವಾಯಿತು ಇಂದು ನನಗೆ

ಗೆಳತಿ, 
ಅರಿವಾಯಿತು 
ಇಂದು ನನಗೆ, 
ಈ ಮೃದು ಹೃದಯಕ್ಕೆ 
ವೇದನೆ ಏನೋ ಆಯಿತು, 
ಆದರೆ ಮನಸ್ಸಿನ ಭ್ರಮೆ 
ಎಲ್ಲ ಮಾಯವಾಯಿತು.
by ಹರೀಶ್ ಶೆಟ್ಟಿ, ಶಿರ್ವ

ಹೃದಯದಲ್ಲಿದ್ದ ಪ್ರೀತಿ

ಗೆಳತಿ ,
ಯಾಕೋ ಅನಿಸುತ್ತಿದೆ 
ಎಲ್ಲೊ ಮಾಯವಾದಂತಿದೆ 
ನಮ್ಮ ಹೃದಯದಲ್ಲಿದ್ದ ಪ್ರೀತಿ! 

ಇಲ್ಲಾದರೆ ಸಂತಸದ 
ಈ ದಿನದಲ್ಲೂ 
ಏಕೆ ಕಣ್ಣಲ್ಲಿ ಈ
ಕಣ್ಣೀರ ಹನಿ! 
by ಹರೀಶ್ ಶೆಟ್ಟಿ, ಶಿರ್ವ

ರಾಮ ರಹೀಮ

ಕಬೀರ ದೋಹ
ಹಿಂದೂ ಹೇಳುವನು ರಾಮ ನಮ್ಮ ಅಪ್ತನೆಂದು ,ತುರ್ಕಿ ಹೇಳುವನು ರಹೀಮ ನಮ್ಮ
ಪರಸ್ಪರ ಜಗಳಾಡಿ ನಾಶ ಹೊಂದುವರು, ಯಾರಿಗೂ ತಿಳಿಯದು ಧರ್ಮದ ಮರ್ಮ
ಅನುವಾದ :ಹರೀಶ್ ಶೆಟ್ಟಿ,ಶಿರ್ವ 
कबीर दोहा 
कहै हिन्दु मोहि राम पिआरा, तुरक कहे रहिमाना।

आपस में दोऊ लरि-लरि मुए, मरम न कोऊ जाना।।

ಮಲ್ಲಿಗೆ ಹೂವಿಗೂ ಕೋಪ

ಗೆಳತಿ 
ನಿನ್ನಂತೆ 
ಮಲ್ಲಿಗೆ ಹೂವಿಗೂ 
ನನ್ನ ಮೇಲೆ ಕೋಪ,
ನನ್ನ ಕೈ ಸೇರಿದ 
ಕೂಡಲೇ 
ಕೆಂಪಾಗಿ ಬಾಡಿ ಹೋಗುತ್ತದೆ. 
by ಹರೀಶ್ ಶೆಟ್ಟಿ,ಶಿರ್ವ

ಪುರಾವೆ ಬೇಕೇ ?

ಗೆಳತಿ... 
ಪ್ರೀತಿಸುವುದಿಲ್ಲ 
ಎಂಬ 
ಗಂಭೀರ ಆರೋಪ ಏಕೆ ?
ನನ್ನ ಅವಸ್ಥೆ 
ನೋಡಿ ತಿಳಿಯುವುದಿಲ್ಲವೇ 
ಇನ್ನೂ ಪುರಾವೆ ಬೇಕೇ ?
by ಹರೀಶ್ ಶೆಟ್ಟಿ, ಶಿರ್ವ

ಸತ್ಯ ಅಲ್ಲವೇ ?

ಸತ್ಯ ಅಲ್ಲವೇ ?
ಎಲ್ಲ ಅವರವರ ಇಚ್ಛೆ ಅಲ್ಲವೇ?

ಶುಭಾಶಯ ನೀಡುವುದು ನಿಮ್ಮ ಇಚ್ಛೆ 
ಆದರೆ ಅದಕ್ಕೆ ಧನ್ಯವಾದ ನೀಡದಿದ್ದರೆ 
ಇದು ಅವರ ಇಚ್ಛೆ ಅಲ್ಲವೇ?

ಕರೆ ಮಾಡಿ ಮಾತನಾಡುವುದು ನಿಮ್ಮ ಇಚ್ಛೆ, 
ಆದರೆ ಅವರು ಮಾತಿನ ಮಧ್ಯೆ ನಿಮ್ಮ ಕರೆಯನ್ನು 
ತಿರಸ್ಕರಿಸಿದ್ದರೆ ಅಲ್ಲದೆ ಪುನಃ ಒಂದು 
ಕರೆ ಮಾಡಿ ವಿಚಾರಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?

ನಿಮಗೆ ಮಹತ್ವಪೂರ್ಣ ಎನಿಸುವ
ಅವರಿಗೆ ಅಷ್ಟು ಮಹತ್ವಪೂರ್ಣ ಎನಿಸದಿದ್ದರೆ
ಇದು ಅವರ ಇಚ್ಛೆ ಅಲ್ಲವೇ?

ಪ್ರೀತಿ, ಗೌರವ ನೀಡುವುದು ನಿಮ್ಮ ಇಚ್ಛೆ
ಆದರೆ ಆ ಪ್ರೀತಿ, ಗೌರವವನ್ನು
ಅವರು ಅನ್ಯಥಾ ಭಾವಿಸುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ?

ಜ್ಞಾನದ ಮಾತನ್ನು ಸಾರುವವರು
ಅಜ್ಞಾನದ ಕತ್ತಲಲ್ಲಿ ಇದ್ದು
ಅಸೂಯೆಯ ಜ್ವಾಲೆಯಲ್ಲಿ
ಬೇಯುತ್ತಿದ್ದರೆ
ಇದು ಅವರ ಇಚ್ಛೆ ಅಲ್ಲವೇ ?
by ಹರೀಶ್ ಶೆಟ್ಟಿ, ಶಿರ್ವ

ರಾಜಕಾರಣಿ

ರಾಜಕಾರಣಿ 
_________
ಧರಿಸಿ ವೇಷ 
ಒಳ್ಳೆ ನಟಿಸಿದ 
ಅದೇನೋ 
ಎಲ್ಲರೂ ಅವನನ್ನು 
ನಮ್ಮ ನಾಯಕನೆಂದು ಕರೆದರು
by ಹರೀಶ್ ಶೆಟ್ಟಿ, ಶಿರ್ವ

Thursday, 11 April, 2013

ದುರ್ಲಭ ಮಾನವ ಜನ್ಮ

ಕಬೀರ ದೋಹ
ದುರ್ಲಭ ಮಾನವ ಜನ್ಮ ಇನ್ನೊಮ್ಮೆ ಸಿಗಲಾರದು
ಪಕ್ವವಾದ ಹಣ್ಣು ಬಿದ್ದರೆ ಇನ್ನೊಮ್ಮೆ ಮರಕ್ಕೆ ಸೇರದು  
ಅನುವಾದ :ಹರೀಶ್ ಶೆಟ್ಟಿ,ಶಿರ್ವ

कबीर दोहा
दुर्लभ मानस जन्म है होए न दूजी बार...
पक्का फल जो गिर पड़ा लगे न दूजी बार...

 

ಬೇವು ಬೆಲ್ಲ

ಗೆಳತಿ, 
ನೀನಿರುವಾಗ 
ಒಟ್ಟಿಗೆ ಈ ಬಾಳಲ್ಲಿ 
ಬೇವು ಸಹ ಸಿಹಿ ಸಿಹಿ 
ಬೆಲ್ಲ ಏಕೆ ಬೇಕು ನನಗೆ 
by ಹರೀಶ್ ಶೆಟ್ಟಿ,ಶಿರ್ವ