Thursday, 28 March, 2013

ಬರುತ್ತಿದೆ ಚುನಾವಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ನಿಮ್ಮ ವೋಟಿಗೆ ನೀವೇ ಹೊಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ವಿಧಾನ ಸಭೆಯಲ್ಲಿ ನಡೆದ ಸೆಕ್ಸ್ ವೀಡಿಯೊ ಘಟನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ರಾಜಕಾರಣಿಗಳ ವಿಕೃತ ಮನಸ್ಸಿನ ಚಿತ್ರನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಐದು ವರುಷದಲಿ ನಿಮ್ಮ ಆದ ಶೋಷಣೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಭ್ರಷ್ಟಾಚಾರ, ದುರಾಚಾರದ ಶಾಸನೆ

ಬರುತ್ತಿದೆ ಚುನಾವಣೆ
ಮರೆಯದಿರಿ
ಅರಿಯಿರಿ ನಿಮ್ಮ ಅಮೂಲ್ಯ ಮತದ ಮಹತ್ವ, ಬೇಡ ಬೇರೆ ಚಿಂತನೆ

ಬರುತ್ತಿದೆ ಚುನಾವಣೆ
ಮರೆಯದಿರಿ ಎಲ್ಲವನ್ನೂ
ಪಾರ್ಟಿ ಅಲ್ಲ ಅಭ್ಯರ್ಥಿ ನೋಡಿ ಮತ ನೀಡುವಿರೆಂದು ಮಾಡಿ ಆಣೆ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment