Thursday, 14 March, 2013

ಎದೆಯಲಿ ಜ್ವಲಿಸುತ್ತಿದೆ ಬಯಕೆ


!!ಎದೆಯಲಿ ಜ್ವಲಿಸುತ್ತಿದೆ ಬಯಕೆ
ಕಣ್ಣಲ್ಲಿ ಬೇಸರ ಹರಡಿದೆ
ಇಂದು ಈ ನಿನ್ನ ಜಗದಿಂದ ನನಗೆ
ವಿಧಿ ಎಲ್ಲಿ ತಂದು ನಿಲ್ಲಿಸಿದೆ!!
ಎದೆಯಲಿ ಜ್ವಲಿಸುತ್ತಿದೆ ಬಯಕೆ .....

!!ಸ್ವಲ್ಪ ಕಣ್ಣಲ್ಲಿ ಕಣ್ಣೀರು ಉಳಿದಿದೆ
ಅದು ನನ್ನ ದುಃಖದ ಸಂಗಾತಿಯಾಗಿದೆ-೨
ಈಗ ಹೃದಯವಿಲ್ಲ
ಹೃದಯದ ಬಯಕೆಗಳಿಲ್ಲ-೨
ಕೇವಲ ನಾನಿದ್ದೇನೆ ನನ್ನ ಏಕಾಂತವಿದೆ !!
ಎದೆಯಲಿ ಜ್ವಲಿಸುತ್ತಿದೆ ಬಯಕೆ .....

ನಿನ್ನಿಂದ ಇಲ್ಲ ಏನೂ ಕೋಪ ನನಗೆ
ಪ್ರಪಂಚದಿಂದ ಇಲ್ಲ ಏನೂ ಮೊರೆ ನನಗೆ
ಎರಡು ಮೂರು ಹೆಜ್ಜೆ ಗಮ್ಯವಿದ್ದಾಗ-೨
ಭಾಗ್ಯ ಮುಗ್ಗರಿಸಿದೆ
ಎದೆಯಲಿ ಜ್ವಲಿಸುತ್ತಿದೆ ಬಯಕೆ .....

ಹೀಗೆ ಹೃದಯ ಉರಿಯಿತು ಅಂದರೆ
ಬದುಕಲು ಸಾಧ್ಯವಿಲ್ಲ
ಸಾಯಲು ಸಾಧ್ಯವಿಲ್ಲ
ಮೌನವಿದ್ದರೆ ಅಂತರಂಗ ಉರಿಯುತ್ತದೆ- ೨
ಹೇಳಿದರೆ ನಿನಗೆ ಅಪಕೀರ್ತಿವಿದೆ
ಎದೆಯಲಿ ಜ್ವಲಿಸುತ್ತಿದೆ ಬಯಕೆ .....

ಮೂಲ : ಪ್ರೇಮ್ ಧವನ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ತಲತ್ ಮೆಹಮೂದ್ , ಲತಾ ಮಂಗೇಶ್ಕರ್
ಚಿತ್ರ : ತರಾನಾ

Seene Mein Sulagte Hain Armaan
Aankho Mein Udaasi Chhaayi Hai
Ye Aaj Teri Duniya Se Hamein
Taqdeer Kaha Le Aayi Hai
Seene Mein Sulagte Hain Armaan

Kuchh Aankh Mein Aansoo Baaki Hain
Jo Mere Gham Ke Saathi Hain - 2
Ab Dil Hain Na Dil Ke Armaan Hain - 2
Bas Main Hu Meri Tanhaai Hai
Seene Mein Sulagte Hain Armaan

Na Tujhse Gila Koyi Hamko
Na Koyi Shikaayat Duniya Se
Do Chaar Qadam Jab Manzil Thi - 2
Qismat Ne Thhokar Khaayi Hai
Seene Mein Sulagte Hain Armaan

Kuchh Aisi Aag Lagi Man Mein
Jeene Bhi Na De Marne Bhi Na De ...
Chup Hu To Kaleja Jalta Hai - 2
Bolu To Teri Ruswaayi Hai

Seene Mein Sulagte Hain Armaan
http://www.youtube.com/watch?v=GMlTeyN3zo4

No comments:

Post a Comment