Friday, February 1, 2013

ಶಿಶಿರದ ಹೂವುಗಳಿಗೆಂದೂ ವಸಂತ ಬರುವುದಿಲ್ಲ

!!ಶಿಶಿರದ ಹೂವುಗಳಿಗೆಂದೂ 
ವಸಂತ ಬರುವುದಿಲ್ಲ
ನನ್ನ ಭಾಗ್ಯದಲಿ ಹೇ ಗೆಳತಿ 

ನಿನ್ನ ಪ್ರೀತಿ ಇಲ್ಲ
ನನ್ನ ಭಾಗ್ಯದಲಿ ಹೇ ಗೆಳತಿ ನಿನ್ನ ಪ್ರೀತಿ ಇಲ್ಲ!!

!!ಗೊತ್ತಿಲ್ಲ ನಾನು 

ಯಾವಾಗ ಪ್ರೀತಿಯಲಿ 
ನಿನಗೆ ಕೊಟ್ಟ ಭಾಷೆ ಮುರಿಯುವೆಯೆಂದು
ನಾನು ಕಣ್ಣೀರಾಗಿ ಸ್ವತಃ 

ನನ್ನದೇ ದೃಷ್ಟಿಯಿಂದ ಬೀಳುವೆಯೆಂದು 
ನಿನ್ನಾಣೆ ನನ್ನದು 
ಯಾವುದೇ ಭರವಸೆ ಇಲ್ಲ !!
ನನ್ನ ಭಾಗ್ಯದಲಿ ಹೇ ಗೆಳತಿ ನಿನ್ನ ಪ್ರೀತಿ ಇಲ್ಲ

!!ನಾ ದಿನನಿತ್ಯ ಅಧರದಲಿ 

ಹೊಸತೊಂದು ನೋವನ್ನಿಡುತ್ತೇನೆ
ನಾ ದಿನನಿತ್ಯ ಹೊಸತೊಂದು 

ದುಃಖವನ್ನು ಕಾಯುತ್ತಿರುತ್ತೇನೆ
ಯಾವುದೇ ಸಂತೋಷದ 

ನನಗೆ ನಿರೀಕ್ಷೆ ಇಲ್ಲ !!
ನನ್ನ ಭಾಗ್ಯದಲಿ ಹೇ ಗೆಳತಿ ನಿನ್ನ ಪ್ರೀತಿ ಇಲ್ಲ

!!ಬಡವ ಹೇಗೆ ಮಾಡಲಿ 

ಪ್ರೀತಿ ಐಶ್ವರ್ಯವಂತರಿಂದ
ಅಗಲಿದ್ದಾರೆ ಎಷ್ಟೋ ಪ್ರೇಮಿಯರೂ 

ತನ್ನ ಪ್ರೇಯಸಿಯರಿಂದ
ಯಾರಿಗೂ ತನ್ನ ಭಾಗ್ಯವನ್ನು 

ಆಯ್ಕೆ ಮಾಡುವ ಹಕ್ಕು ಒದಗಿಲ್ಲ!!
ನನ್ನ ಭಾಗ್ಯದಲಿ ಹೇ ಗೆಳತಿ ನಿನ್ನ ಪ್ರೀತಿ ಇಲ್ಲ

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ : ದೋ ರಾಸ್ತೇ
Khiza Ke Phool Pe Ati Kabhi Bahaar nahin
Mere nasib Mein Ai Dost, Tera Pyaar nahin
Mere nasib Mein Ai Dost, Tera Pyaar nahin
na Jane Pyaar Mein Kab Main, Zubaan Se Phir Jaaun
Main Banake Aansuu Khud Apani, nazar Se Gir Jaaun
Teri Qasam Hai Meraa Koi, Aitabaar nahin
Mere nasib Mein
Main Roz Lab Pe nai Ek, Aah Rakhataa Huun
Main Roz Ek naye Gam Ki Raah Takataa Huun
Kisi Khushi Ka Mere Dil Ko, Intazaar nahin
Mere nasib Mein
Garib Kaise Mohabbat, Kare Amiron Se
BichhaD Gaye Hain Ka_Ii Raanjhe, Apani Hiron Se
Kisi Ko Apane Muqaddar Pe, Ikhtiyaar nahin
Mere nasib Mein
Khiza Ke Phool Pe Ati Kabhi Bahaar nahin
Mere nasib Mein Ai Dost, Tera Pyaar nahin

www.youtube.com/watch?v=aPVvXlnV3Vg

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...