Saturday, January 26, 2013

ಹೃದಯ ಹುಡುಕುತ್ತದೆ



ಹೃದಯ ಹುಡುಕುತ್ತದೆ
ಮತ್ತದೇ ಬಿಡುವಿನ ಹಗಲು ರಾತ್ರಿ
ಕುಳಿತ್ತಿರುವೆ ಕಲ್ಪನೆಯಲಿ ವಿಹರಿಸಿಕೊಂಡು !

ಚಳಿಗಾಲದ ಮೃದು ಬಿಸಿಲು
ಮತ್ತೆ ಅಂಗಳದಲ್ಲಿ ಮಲಗಿಕೊಂಡು
ನಿನ್ನ ದೇಹದ ನೆರಳನ್ನು ಕಣ್ಣಲ್ಲಿ ಎಳೆದುಕೊಂಡು
ಹಿಮ್ಮುಖವಾಗಿ ಮಲಗಿಕೊಂಡು
ಕೆಲವೊಮ್ಮೆ ಹೊರಳಾಡಿಕೊಂಡು  !

ಬೇಸಿಗೆಯ ರಾತ್ರಿ
ತಂಗಾಳಿ ಬೀಸುವಾಗ
ಶ್ವೇತ ಚದ್ದರ ಹೊದೆದು
ರಾತ್ರಿ ತಡ ತನಕ ಎಚ್ಚರವಾಗಿದ್ದು
ನಕ್ಷತ್ರಗಳನ್ನು ನೋಡುತ್ತಿರುವೆ
ಮನೆಯ ಮಾಡಲ್ಲಿ ಬಿದ್ದುಕೊಂಡು  !

ಶೀತಲ ಚಳಿಯಲ್ಲಿ
ಯಾವುದೇ ಪರ್ವತದಲ್ಲಿ
ನಿಸರ್ಗದಲ್ಲಿ ಪ್ರತಿದ್ವನಿಸುವ
ಮೌನವನ್ನು ಕೇಳಿ
ಕಣ್ಣಲ್ಲಿ ಇಬ್ಬನಿಯಂತಹ 
ಕ್ಷಣಗಳನ್ನು ಸಾವರಿಸಿಕೊಂಡು  !

ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭುಪಿಂದರ್ ಸಿಂಗ್ , ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಮೌಸಮ್

dil dhundhata hai fir wahee furasat ke rat din
baithe rahe tasawwure jaana kiye huye

jaado kee narma dhup aur aangan me let kar
aankho pe khinch kar tere daaman ke saaye ko
aaundhe pade rahe kabhee karwat liye huye

ya garmiyo kee raat jo puraawaayiya chale
thhandee safed chaadaro pe jage der tak
taaro ko dekhate rahe chhat par pade huye

barfilee sardiyo me kisee bhee pahad par
wadee me gunjatee hui, khamoshiya sune
aankho me bhige bhige se lamhe liye huye
http://www.youtube.com/watch?v=ZiQT44E9hLM

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...