Saturday, January 12, 2013

ಮಾಡಿದರೆ ನೆನಪು


ಮಾಡಿದರೆ ನೆನಪು
ಪ್ರತಿಯೊಂದು ಮಾತು ನೆನಪಾಗುವುದು
ಹಾದುಹೋಗುವ ಸಮಯದ
ಪ್ರತಿಯೊಂದು ತರಂಗ ನಿಲ್ಲುವುದು !

ಈ ಚಂದ್ರ ಕಳೆದೋದ ಜಗದ
ಕನ್ನಡಿಯಾಗುವುದು
ಅಲೆಯುವ ಮೋಡದಲಿ
ಮುಖ ಯಾವುದೇ ಮೂಡಬಹುದು
ಬೇಸರ ಹಾದಿ
ಯಾವುದೇ ಕಥೆ ಹೇಳಬಹುದು !

ಸುರಿಯುವ ನೆನೆಯುವ
ನಿಸರ್ಗ ಹೊಗೆ ಹೊಗೆಯಾಗಬಹುದು
ಕರಗುವ ದೀಪಗಳಲ್ಲಿ
ನನ್ನ ಹೃದಯದ ಆಭಾಸವಿರಬಹುದು
ಕೈಯ ಮೆಹಂದಿ
ನೆನಪು ಏನೋ ಕೊಡಬಹುದು !

ಗಲ್ಲಿಯ ತಿರುವಿನಲ್ಲಿ
ಖಾಲಿಯಾದ ಒಂದು ಬಾಗಿಲು
ಹಂಬಲಿಸುವ ಕಣ್ಣಿನಿಂದ
ಯಾರನ್ನೋ ಕಾಯಬಹುದು
ದೃಷ್ಟಿ ದೂರ ತನಕ
ಹೋಗಿ ಹಿಂತಿರುಗುವುದು !

ಮೂಲ : ಬಶರ್ ನವಾಜ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಭೂಪೇಂದ್ರ
ಸಂಗೀತ : ಖಯಾಮ್
ಚಿತ್ರ : ಬಾಜಾರ್

करोगे याद तो, हर बात याद आयेगी
गुजरते वक्त की, हर मौज ठहर जायेगी

ये चाँद बीते जमानो का आईना होगा
भटकते अब्र में चेहरा कोई बना होगा
उदास राह कोई दास्ताँ सुनाएगी

बरसता भीगता मौसम धुवा धुवा होगा
पिघलती शम्मो पे दिल का मेरे गुमा होगा
हथेलियों की हिना, याद कुछ दिलायेगी

गली के मोड़ पे, सूना सा कोई दरवाजा
तरसती आँखों से, रास्ता किसी का देखेगा
निगाह दूर तलक, जा के लौट आयेगी
http://www.youtube.com/watch?v=MHqMBAo6WM8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...