Thursday, January 31, 2013

ಆ ಪ್ರೇಮ


ಗೆಳತಿ
ನೆನಪಿದೆಯೇ
ಅಂದು ನೀ ನನ್ನಲ್ಲಿ
ಎಸೆದ ಪ್ರಥಮ ಪತ್ರ
ಆ ದಿನ ನನ್ನ ಮನಸ್ಸಿನಲ್ಲಿ
ಎಷ್ಟೊಂದು
ಭಾವಗಳು ಹುಟ್ಟಿತ್ತು !

ನಾನಂದು
ಏಳನೇ ಅಂಬರದಲ್ಲಿ
ವಿಹರಿಸುತ್ತಿದ್ದೆ
ನಿನ್ನ ಆ ಕಿರು ನಗೆ
ನನ್ನ ಹೃದಯವನ್ನು
ನಿನ್ನ ಹೃದಯದ
ಎಷ್ಟು ಹತ್ತಿರ ತಂದಿತ್ತು !

ನಮ್ಮ
ಆ ಪ್ರೇಮದ ಹೂದೋಟದಲಿ
ನಾವು ದಿನ ಪ್ರತಿದಿನ
ಸುಂದರ ಕನಸ
ಪುಷ್ಪಗಳನ್ನು ಅರಳಿಸಿ
ಅಂದು ನಮ್ಮ ಜೀವನ
ಆನಂದದಿಂದ ನಲಿಯುತ್ತಿತ್ತು !

ಆದರೆ
ಜೀವನ ಅಷ್ಟು
ಸರಳವಿಲ್ಲವೆಂದು
ನಮಗೆ ತಿಳಿದದ್ದು
ನೀ ನಿನ್ನ ಪರಿವಾರ ಸಮೇತ
ಪರದೇಶಕ್ಕೆ ಸ್ಥಳಾಂತರವಾದಾಗ
ಅಂದು ನಮ್ಮಿಬ್ಬರ ಜಗತ್ತೇ ಮುಗಿದಿತ್ತು !

ನಿಮ್ಮ
ಗಾಡಿಯ ಹಿಂದೆ ಹಿಂದೆ
ನಾ ಎಷ್ಟೋ
ದೂರ ತನಕ
ಓಡಿ ಓಡಿ ಕಡೆಗೆ
ಸುಸ್ತಾಗಿ ಬಿದ್ದರೂ
ಕಣ್ಣು ನಿಮ್ಮ ಗಾಡಿಯನ್ನೆ ಹಿಂಬಾಲಿಸುತ್ತಿತ್ತು !

ಇಂದೂ
ನನಗೆ ನಿನ್ನ
ಕಣ್ಣೀರು ತುಂಬಿದ ಮುಖ
ನಿನ್ನ ಬೀಸುವ ಕೈ ನೆನಪಾದಾಗ
ಹೃದಯದಲ್ಲಿ ಕಂಪನ ಉಂಟಾಗುತ್ತದೆ
ಆದರೆ ಇಂದು ನಮ್ಮ ಜೀವನ ಬದಲಾಗಿದೆ
ಸೋತಿದೆ ಅತ್ತು ಅತ್ತು !
by ಹರೀಶ್ ಶೆಟ್ಟಿ, ಶಿರ್ವ

ಕೆಂಪು ರಿಬ್ಬನ್

ಸಂತೆಯಲಿ 
ಸಾವಿರಾರು ಸಾಮಾನುಗಳು 
ಆದರೆ ಬಡ ತಂದೆಯ 
ಕಣ್ಣು ಹುಡುಕುವುದು 
ತನ್ನ ಮಗಳು 
ಯಾವಗಲು ತನಗೆ ಬೇಕೆನ್ನುವ 
ಕೂದಲಿಗೆ ಕಟ್ಟುವ ಕೆಂಪು ರಿಬ್ಬನ್ 
by ಹರೀಶ್ ಶೆಟ್ಟಿ, ಶಿರ್ವ

ಅವಳ ಪ್ರಾರ್ಥನೆ

ಕಿಂಚಿತ ಮಿನುಗುವ 
ನಕ್ಷತ್ರವೊಂದು
ಆಕಾಶದಿಂದ ಅಗಲಿ 
ತುಂಡಾಗಿ ಬಿದ್ದಾಗ 
ಅವಳು ತನಗೆ 
ಒಳ್ಳೆಯ ಗಂಡ ಸಿಗಲಿ 
ಹಾಗು ನನ್ನ ಜೀವನ 
ಪ್ರಕಾಶಮಯವಾಗಲಿ 
ಎಂದು ಬೇಡಿದಳು 
by ಹರೀಶ್ ಶೆಟ್ಟಿ, ಶಿರ್ವ

Wednesday, January 30, 2013

ಬದುಕು ಇನ್ನೆಷ್ಟು ಪರೀಕ್ಷೆ

ಬದುಕು ಇನ್ನೆಷ್ಟು ಪರೀಕ್ಷೆ 
ಕ್ಷಣ ಕ್ಷಣ ಅನುಭವಿಸುವೆ ಶಿಕ್ಷೆ !!

ಜೀವನ ಆಡುತ್ತಿದೆ ಆಟ ನಾಟಿಕೆ
ಪದೇ ಪದೇ ಕಲಿಸುತ್ತಿದೆ ಕಲಿಕೆ !! 

ಮುರಿಯುತ್ತಿದೆ ಎಲ್ಲ ಅಪೇಕ್ಷೆ 
ಬತ್ತಿ ಹೋಗಿವೆ ಕಣ್ಣುಗಳು ಮಾಡಿ ನಿರೀಕ್ಷೆ !! 

ದಿನ ನಿತ್ಯ ಕಣ್ಣೀರಿನ ಭಕ್ಷೆ !!
ಯಾವಾಗ ಸಿಗುವುದೋ ಸುಖದ ಭಿಕ್ಷೆ !!

ತಾಳಲಾಗುವುದಿಲ್ಲ ಈ ಉಪೇಕ್ಷೆ !!
ಮುಗಿಯುವುದು ಯಾವಾಗ ಈ ಪ್ರತೀಕ್ಷೆ !!

ಸುಂದರ ಜೀವನ ಮಡಕೆಯಲಿ ಇದು ಯಾವ ಶಾಪದ ಕುಳಿಕೆ
ಮಾಡಿ ಆಯಿತು ಎಲ್ಲ ಪಾಪದ ಅರಿಕೆ !!

ಬದುಕು ಇನ್ನೆಷ್ಟು ಪರೀಕ್ಷೆ
ಕ್ಷಣ ಕ್ಷಣ ಅನುಭವಿಸುವೆ ಶಿಕ್ಷೆ !!
by ಹರೀಶ್ ಶೆಟ್ಟಿ, ಶಿರ್ವ

ಸಾಕಿದ ತಾಯಿ


ಜಾತ್ರೆಯಲ್ಲಿ ಸಿಕ್ಕಿದ
ಮಗುವನ್ನು
ಸಾಕಿದ ತಾಯಿಯನ್ನು
ಅದೇ ಮಗ
ವೃದ್ಧಾಶ್ರಮಕ್ಕೆ
ಸೇರಿಸಿ ಬಂದ
by ಹರೀಶ್ ಶೆಟ್ಟಿ, ಶಿರ್ವ
__________________

ಜಾತ್ರೆಯಲ್ಲಿ ಸಿಕ್ಕಿದ
ಮಗುವನ್ನು
ಸಾಕಿದ ತಾಯಿಯನ್ನು
ಅದೇ ಮಗ
ಜಾತ್ರೆಯಲಿ
ಭಿಕ್ಷೆ ಬೇಡಲು
ಬಿಟ್ಟು ಬಂದ
(ಗೆಳೆಯ Eswara Naik C T  ಸೂಚಿಸಿದ ಪ್ರಕಾರ )

ಬೆಳಗಿಸುವೆ

ಮೋಡಗಳೆ ತಡೆಯದಿರಿ ನನ್ನನ್ನು 
ಲೋಕ ಕಲ್ಯಾಣ ಹೇತು ಹೊರಟಿರುವೆ 
ದಾರಿ ಕೊಟ್ಟು ಸಹಕರಿಸಿ 
ಬೆಳಗಿಸುವೆ ಈ ಜಗತನ್ನು 
by ಹರೀಶ್ ಶೆಟ್ಟಿ, ಶಿರ್ವ

Tuesday, January 29, 2013

ಮರುಳರಿಬ್ಬರು ಶಹರದಲಿ


!!ಮರುಳರಿಬ್ಬರು ಶಹರದಲಿ
ರಾತ್ರಿ ಹಾಗು ಮಧ್ಯಾಹ್ನದಲಿ
ಹೊಟ್ಟೆ ಪಾಡಿಗಾಗಿ ಹುಡುಕುತ್ತಿದ್ದೇವೆ
ಒಂದು ವಸತಿಗಾಗಿ ಹುಡುಕುತ್ತಿದ್ದೇವೆ !!-೨

!!ಈ ಚಕ್ರವ್ಯೂಹ ಗಲ್ಲಿಯಲಿ
ನಮ್ಮದು ಸಹ ಒಂದು ಮನೆ ಇರಬಹುದು
ಅಂಬರದಲಿ ತೆರೆಯುವುದು ಕಿಟಕಿಗಳು
ಅಥವಾ ಕಿಟಕಿಯಲಿ ತೆರೆದ ಅಂಬರವಿರಬಹುದು- ೨
ಆಕಾಶ ಬಣ್ಣದ ಕಣ್ಣಲ್ಲಿ
ಆಕಾಶ ಅಥವಾ ಆಕಾಶದ???
ಆಕಾಶ ಬಣ್ಣದ ಕಣ್ಣಲ್ಲಿ
ನೆಲೆಸುವ ಕಾರಣ ಹುಡುಕುತ್ತಿದ್ದೇವೆ !!
ಹೊಟ್ಟೆ ಪಾಡಿಗಾಗಿ.....

!!ಯಾವಾಗ ನಕ್ಷತ್ರಗಳು ಭೂಮಿಯಲಿ....
ನಕ್ಷತ್ರಗಳು ಭೂಮಿಯಲಿ ??
ಆಫ್ ಕೋರ್ಸ್
ಯಾವಾಗ ನಕ್ಷತ್ರಗಳು ಭೂಮಿಯಲಿ ಮಿನುಗುತ್ತವೆ
ಆಕಾಶ ಭೂಮಿಯಾಗುವುದು
ಆ ರಾತ್ರಿ ಮತ್ತೆ ಮನೆಗೆ ಹೋಗುವುದಿಲ್ಲ
ಆ ಚಂದಿರ ಅಲ್ಲೇ ಮಲಗುವನು
ಕ್ಷಣಕ್ಕಾಗಿ .....ಕ್ಷಣಕ್ಕಾಗಿ
ಕ್ಷಣಕ್ಕಾಗಿ ಈ ಕಣ್ಣಲ್ಲಿ
ಒಂದು ಜಗತ್ತನ್ನು ಹುಡುಕುತ್ತಿದ್ದೇವೆ!!
ಹೊಟ್ಟೆ ಪಾಡಿಗಾಗಿ...

ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭುಪಿಂದರ್ ಸಿಂಗ್, ರೂಣ ಲೈಲಾ
ಸಂಗೀತ : ಜೈದೇವ್
ಚಿತ್ರ : ಘರೊಂದ

Do Diwaane Shahar Me,
Raat Mein Yaa Dopahar Mein
aabodaanaa Dhoondhate Hai,
Yek Aashiyaanaa Dhoondhate Hain

in Bhoolabhoolaiyyaa Galiyon Mein
Apanaa Bhee Koee Yek Ghar Hogaa
ambar Pe Khoolegee Khidakee,
Yaa Khidakee Pe Khulaa Ambar Hogaa
asmaanee Rang Kee Aakhon Me
asmaanee ya aasmaanee ??
asmaanee Rang Kee Aakhon Me
Basane Kaa Bahaanaa Dhoondhate Hain
aabodaanaa Dhoondhate Hai,
Yek Aashiyaanaa Dhoondhate Hain

jab Taare zameen Par
Taare aur zameen Par??
off course.
jab Taare zameen Par Jalate Hain,
Aakaash zameen Ho Jaataa Hain
us Raat Naheen Fir Ghar Jaataa,
Wo Chaand Yahee So Jaataa Hain
palabhar Ke Liye .....palabhar Ke Liye
palabhar Ke Liye In Aakhon Mein,
Yek Jamaanaa Dhoondhate Hain
aabodaanaa Dhoondhate Hai,
Yek Aashiyaanaa Dhoondhate Hain
http://www.youtube.com/watch?v=F4T8l22NM2c

ಒಗ್ಗಟ್ಟು


ಮುಷ್ಟಿ ಕಾಳಗದಲ್ಲಿ
ಚ್ಯಾಂಪಿಯನ್ ಆಗಿದ್ದವನು
ಒಗ್ಗಟ್ಟಿಲ್ಲದೆ
ಪರಿವಾರದಿಂದ ದೂರವಾದ
by ಹರೀಶ್ ಶೆಟ್ಟಿ, ಶಿರ್ವ

ಅನುದಾನ

ಅವನು 
ಕಡು ಬಡವನೆಂದು ಪ್ರಸಿದ್ಧ 
ಆದರೆ ಅವನು 
ಸತ್ತ ನಂತರ 
ಅನಾಥ ಆಶ್ರಮಕ್ಕೆ 
ಬರುವ ಅನುದಾನ 
ನಿಂತು ಹೋಯಿತು 
by ಹರೀಶ್ ಶೆಟ್ಟಿ, ಶಿರ್ವ

ಯಾರೂ ಬೇಡ

ಗೆಳತಿ.. 
ಒಂದೊಂದು ವೇಳೆ 
ನನಗೆ ಯಾರೂ 
ಬೇಡವೆಂದು ಅನಿಸುತ್ತದೆ 
ಆದರೆ ಹಾಗೆ ಯೋಚಿಸುವಾಗ 
ನನ್ನದೇ ಅವಸ್ಥೆ 
ಕಣ್ಣ ಮುಂದೆ ನಲಿಯುತ್ತದೆ 
by ಹರೀಶ್ ಶೆಟ್ಟಿ, ಶಿರ್ವ

Monday, January 28, 2013

ಬೆಳಗಿನ ಜಾವ ನದಿ ತಟದಲಿ


!!ಬೆಳಗಿನ ಜಾವ ನದಿ ತಟದಲಿ
ನನ್ನಿಂದ ತುಂಟ ಶ್ಯಾಮ ಆಡುವನು ಚೆಲ್ಲಾಟ
ನನ್ನ ಸೆರಗು ಮಾಡ ತೊಡಗಿದೆ ಹಾರಾಟ
ನಾನೇನು ಮಾಡಲಿ
ಏನನು ಮಾಡಲಿ
ಅಯ್ಯೋ ರಾಮ
ಅಯ್ಯೋ  ಅಯ್ಯೋ !!
ಬೆಳಗಿನ ಜಾವದಲಿ ನದಿ ತಟದಲಿ ....

!!ಯಾರೂ ಸಖಿ ಗೆಳತಿಯರಿಲ್ಲ ಒಟ್ಟಿಗೆ
ನಾನೊಬ್ಬಳೆ
ಯಾರು ನೋಡಿದರೆ
ಅರಿಯುವರು
ನೀರು ತುಂಬಿಸುವ ನೆಪದಲಿ
ಮಡಕೆ ಹಿಡಿದು
ರಾಧೆ ಶ್ಯಾಮನಿಗೆ ಸಿಗಲು ಹೊರಡಿದ್ದಾಳೆ ಎಂದು
ಅಯ್ಯೋ !!
ಬೆಳಗಿನ ಜಾವ ನದಿ ತಟದಲಿ....

!!ಬಂದಿರುವುದು ತಂಗಾಳಿ ಮೋಹಕ
ನನ್ನ ಮೈಯನ್ನು ಸೋಕುತ
ಮೌನ ಮೌನ ಮೆಲ್ಲ ಮೆಲ್ಲ
ಕುಳಿತ್ತಿದ್ದಾನೆ ಎಲ್ಲೊ ಅಡಗಿ ಅವನು
ನೋಡಿ ನೋಡಿ ನಗುವನು
ನಿರ್ಲಜ್ಜನಿಗೆ 
ಹೌದು ಹೌದು
ನಿರ್ಲಜ್ಜನಿಗೆ ಲಜ್ಜೆಯೂ ಬಾರದು!!
ಬೆಳಗಿನ ಜಾವ ನದಿ ತಟದಲಿ ....

!!ಸಿಗದಾಗ ಹಾದಿಯಲಿ ನಾನು
ಅವಾಗ ಅವನು ಮನೆಗೆ ಬರುವನು
ಬೈಯುವೆ ನಾನು 
ಮುನಿಸುವೆ ನಾನು
ಕಿಡಕಿ ತೆರೆಯುವುದಿಲ್ಲ ನಾನು
ನಿದ್ದೆ ಬರುವಾಗ
ಅವನು ಸಣ್ಣ ಕಲ್ಲು ಎಸೆದು ಎಚ್ಚರಿಸುವನು!!
ಬೆಳಗಿನ ಜಾವ ನದಿ ತಟದಲಿ ....

ಮೂಲ :ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಲತಾ ಮಂಗೇಶ್ಕರ್
ಸಂಗೀತ : ಲಕ್ಷ್ಮಿಕಾಂತ್ ಪ್ಯಾರೇಲಾಲ್
ಚಿತ್ರ :ಸತ್ಯಂ ಶಿವಂ ಸುಂದರಂ

bhor bhaye panghat pe
mohe natkhat shaam sataye) - 2
mori chunariya lipti jaye
main ka karoo hai raam hai haaii

koi sakhi.. saheli.. nahi
sang main akeli
koi dekhe toh yeh jaane
paniya bharne ke bahane ghagri uthaye
radha shaam se milne jaaye.. hai
bhor bhaye panghat pe

aaye pawan jhakora
toote ang ang mora
chori chori chupke chupke
baitha kahi pe woh chupke
dekhe muskaye
nirlaj ko ha ha
nirlaj ko laaj na aave
bhor bhaye panghat pe

main na milu.. dagar main
toh woh chala aaye.. ghar main
main du gali,main du chidki,
main na kholu khidki
neendiya jo aaye
toh woh kankar mar jagaye
bhor bhaye panghat pe
mohe natkhat shaam sataye
mori chunariya lipti jaye
main ka karoo hai raam hai haaii hai
bhor bhaye panghat pe
http://www.youtube.com/watch?v=QvfU-yAnYZ4

Sunday, January 27, 2013

ಹೆಸರು ಕಳೆದೋಗುವುದು

ಹೆಸರು ಕಳೆದೋಗುವುದು 
ಮುಖ ಈ ಬದಲಾಗುವುದು 
ನನ್ನ ಸ್ವರವೇ ಗುರುತೊಂದು 
ಒಂದು ವೇಳೆ ನೆನಪಿನಲಿ ಇಟ್ಟುಕೊಂಡರೆ!

ಸಮಯದ ಏಟಿನ ಅಂದ ಕಡಿಮೆವೇನಿಲ್ಲ
ಇಂದಿದೆ ಇಲ್ಲಿ 
ನಾಳೆ ಎಲ್ಲೂ ಇಲ್ಲ 
ಸಮಯದ ಆಚೆ ಒಂದು ವೇಳೆ ಸಿಕ್ಕಿದರೆ ಎಲ್ಲಿಯೋ!
ನನ್ನ ಸ್ವರವೇ ಗುರುತೊಂದು...

ಕಳೆದೋದದ್ದು ನಿನ್ನೆಯ ಮಾತಾಗಿತ್ತು
ವಯಸೆಲ್ಲ ಅಲ್ಲ 

ಒಂದು ರಾತ್ರಿಯಾಗಿತ್ತು
ರಾತ್ರಿಯ ತುದಿ ಒಂದು ವೇಳೆ ಪುನಃ ಸಿಕ್ಕಿದರೆ ಎಲ್ಲಿಯೋ!
ನನ್ನ ಸ್ವರವೇ ಗುರುತೊಂದು ...

ದಿನ ಮುಗಿಯುವುದೆಲ್ಲಿ ಅಲ್ಲಿಯೇ ಹತ್ತಿರ ರಾತ್ರಿವಿರಲಿ
ಜೀವನದ ಜ್ವಾಲೆ

ಹೀಗೆಯೇ ಉರಿಯುತ್ತಿರಲಿ
ನೆನಪಾದರೆ ಒಂದು ವೇಳೆ ಮನಸ್ಸು ಬೇಸರವಾದಲ್ಲಿ !
ನನ್ನ ಸ್ವರವೇ ಗುರುತೊಂದು ...


ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್ ,ಭುಪಿಂದೆರ್ ಸಿಂಗ್
ಸಂಗೀತ : ಆರ್ .ಡೀ .ಬರ್ಮನ್
ಚಿತ್ರ : ಕಿನಾರ


naam gum jaayegaa, cheharaa ye badal jaayegaa
meree aawaaj hee pahachaan hai, gar yaad rahe

wakt ke sitam kam haseen nahee, aaj hain yahaa kal kahee nahee
wakt ke pare agar mil gaye kahee, meree aawaaj hee.. ..

jo gujar gayee, kal kee baat thee, umar to naheen yek raat thee
raat kaa siraa agar fir mile kahee, meree aawaaj hee.. ..

din dhale jahaa raat paas ho, jindagee kee lau unchee kar chalo
yaad aaye gar kabhee jee udaas ho, meree aawaaj hee.. ..

http://www.youtube.com/watch?v=6hE2NUPewB8


ಪ್ರೀತಿಯ ಅಲೆಗಳು

ಗೆಳತಿ... 
ನಮ್ಮ 
ಸಂಬಂಧ 
ಶಾಂತ ಸಾಗರ 
ಆದರೂ 
ಹೇಗೆ ಅದರಲ್ಲಿ 
ಪ್ರೀತಿಯ ಅಲೆಗಳು 
ಉಕ್ಕಿ ಉಕ್ಕಿ ಬರುತ್ತವೆ 
by ಹರೀಶ್ ಶೆಟ್ಟಿ, ಶಿರ್ವ

ನೆನಪಿನ ಬೆಳಕು

ಗೆಳತಿ.. 
ರಾತ್ರಿಯ ಕತ್ತಲಲ್ಲೂ 
ನಿನ್ನದೆ ನೆನಪಿನ 
ಬೆಳಕು 
by ಹರೀಶ್ ಶೆಟ್ಟಿ, ಶಿರ್ವ

Saturday, January 26, 2013

ಹೃದಯ ಹುಡುಕುತ್ತದೆ



ಹೃದಯ ಹುಡುಕುತ್ತದೆ
ಮತ್ತದೇ ಬಿಡುವಿನ ಹಗಲು ರಾತ್ರಿ
ಕುಳಿತ್ತಿರುವೆ ಕಲ್ಪನೆಯಲಿ ವಿಹರಿಸಿಕೊಂಡು !

ಚಳಿಗಾಲದ ಮೃದು ಬಿಸಿಲು
ಮತ್ತೆ ಅಂಗಳದಲ್ಲಿ ಮಲಗಿಕೊಂಡು
ನಿನ್ನ ದೇಹದ ನೆರಳನ್ನು ಕಣ್ಣಲ್ಲಿ ಎಳೆದುಕೊಂಡು
ಹಿಮ್ಮುಖವಾಗಿ ಮಲಗಿಕೊಂಡು
ಕೆಲವೊಮ್ಮೆ ಹೊರಳಾಡಿಕೊಂಡು  !

ಬೇಸಿಗೆಯ ರಾತ್ರಿ
ತಂಗಾಳಿ ಬೀಸುವಾಗ
ಶ್ವೇತ ಚದ್ದರ ಹೊದೆದು
ರಾತ್ರಿ ತಡ ತನಕ ಎಚ್ಚರವಾಗಿದ್ದು
ನಕ್ಷತ್ರಗಳನ್ನು ನೋಡುತ್ತಿರುವೆ
ಮನೆಯ ಮಾಡಲ್ಲಿ ಬಿದ್ದುಕೊಂಡು  !

ಶೀತಲ ಚಳಿಯಲ್ಲಿ
ಯಾವುದೇ ಪರ್ವತದಲ್ಲಿ
ನಿಸರ್ಗದಲ್ಲಿ ಪ್ರತಿದ್ವನಿಸುವ
ಮೌನವನ್ನು ಕೇಳಿ
ಕಣ್ಣಲ್ಲಿ ಇಬ್ಬನಿಯಂತಹ 
ಕ್ಷಣಗಳನ್ನು ಸಾವರಿಸಿಕೊಂಡು  !

ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭುಪಿಂದರ್ ಸಿಂಗ್ , ಲತಾ ಮಂಗೇಶ್ಕರ್
ಸಂಗೀತ : ಮದನ್ ಮೋಹನ್
ಚಿತ್ರ : ಮೌಸಮ್

dil dhundhata hai fir wahee furasat ke rat din
baithe rahe tasawwure jaana kiye huye

jaado kee narma dhup aur aangan me let kar
aankho pe khinch kar tere daaman ke saaye ko
aaundhe pade rahe kabhee karwat liye huye

ya garmiyo kee raat jo puraawaayiya chale
thhandee safed chaadaro pe jage der tak
taaro ko dekhate rahe chhat par pade huye

barfilee sardiyo me kisee bhee pahad par
wadee me gunjatee hui, khamoshiya sune
aankho me bhige bhige se lamhe liye huye
http://www.youtube.com/watch?v=ZiQT44E9hLM

Friday, January 25, 2013

ಬೀಳುವುದು ಮಲ್ಲಿಗೆ

ಗೆಳತಿ
ನಿನಗ್ಯಾಕೆ ಬೇಕು
ಹೂವು ಮಲ್ಲಿಗೆ
ನೀ ನಗುವಾಗೆಲ್ಲ
ಬೀಳುವುದು ಮಲ್ಲಿಗೆ
by ಹರೀಶ್ ಶೆಟ್ಟಿ, ಶಿರ್ವ

Thursday, January 24, 2013

ಅನಿಶ್ಚಿತ ಹೆಜ್ಜೆಗಳು


ಅನಿಶ್ಚಿತ ಹೆಜ್ಜೆಗಳು
ನಿಂತು ಪುನಃ ಪುನಃ ಸಾಗಿದೆ
ಅನುಮತಿ ಪಡೆದು ನಿನ್ನ
ದ್ವಾರದಿಂದ ನಿರಾಸೆಯಿಂದ ಸಾಗಿದೆ!

ಮುಂಜಾನೆ ಬರಲಿಲ್ಲ
ಅನೇಕವೇಳೆ ನಿದ್ದೆಯಿಂದ ಎಚ್ಚರಗೊಂಡೆ
ಒಂದು ರಾತ್ರಿ ಈ ಜೀವನವಾಗಿತ್ತು
ಅನುಭವಿಸಿಕೊಂಡು ಸಾಗಿದೆ!

ಹೊತ್ತು ತಿರುಗುತ್ತಿದ್ದೆ
ಉಪಕಾರ ಹೃದಯದ ಎದೆಯಲ್ಲಿ
ತೆಗೋ ಈ ಸಾಲವನ್ನೂ ನಿನ್ನ ಹೆಜ್ಜೆಯಲ್ಲಿ
ತೀರಿಸಿಕೊಂಡು ಸಾಗಿದೆ !

ಮೂಲ : ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಚಿತ್ರ : ಮೌಸಮ್

ruke ruke se kadam,
ruk ke baar baar chale
karaar leke tere,
dar se bekaraar chale

subah na aayee,
kaeye bar nind se jaage
thee ek raat kee yeh jindagee,
gujaar chale

uthhaaye firate the
ehsaan dil ka sine par
le tere kadamo me yeh karja bhee
utaar chale
www.youtube.com/watch?v=rIDphvxk3ZI

Wednesday, January 23, 2013

ಪ್ರಶ್ನಾರ್ಥಕ ಚಿಹ್ನೆ ?

ಗೆಳತಿ...
ನೀನು ನನ್ನ ಪ್ರೀತಿಗೆ 
ಪೂರ್ಣವಿರಾಮ ನೀಡಿದ 
ನಂತರ 
ನನ್ನ ಜೀವನ ಒಂದು 
ಪ್ರಶ್ನಾರ್ಥಕ ಚಿಹ್ನೆ ಆಗಿ ಉಳಿದಿದೆ 
by ಹರೀಶ್ ಶೆಟ್ಟಿ, ಶಿರ್ವ

Tuesday, January 22, 2013

ಸ್ನೇಹ


ಮಿತ್ರರೇ, ಇದು ನನ್ನ ೧೦೦೦ ನೇ ರಚನೆ. ನಾನು ನನ್ನ ಬ್ಲಾಗ್ "ಇನ್ನೊಂದು ಜೀವನ " ಪ್ರಾರಂಭಿಸಿ ೧೮ ತಿಂಗಳಾಯಿತು. ನನ್ನ ಬರಹದ ಈ ಪ್ರವಾಸ ಇಷ್ಟು ವೇಗವಾಗಿ ಸಾಗುವುದು ಎಂದು ನಾನು ತಿಳಿದಿರಲಿಲ್ಲ, ಇದೆಲ್ಲ ನನ್ನ ಓದುಗರ ಕೃಪೆ ಹಾಗು ಸ್ನೇಹ.
ಅದಕ್ಕಾಗಿ ನನ್ನ ಈ ೧೦೦೦ ನೇ ರಚನೆ "ಸ್ನೇಹ" ಸ್ನೇಹದ ಕುರಿತು ಒಂದು ಸಣ್ಣ ಕಥೆ ರೂಪ ನಿಮ್ಮ ಮುಂದೆ ಇಟ್ಟಿದ್ದೇನೆ.
ಸ್ನೇಹ
_______

ಬೇಕಂತಲೇ ನಾನು ಹೋಗಿದೆ ಅವನ ಬಳಿ, ನಾನು ಬರುವುದು ಅವನಿಗೆ
ಇಷ್ಟವಿಲ್ಲವೆಂದು ಗೊತ್ತಿದ್ದರೂ ಅವನಿಂದ ದೂರ ಇದ್ದು ಇನ್ನೂ ದೂರ ಆಗುವುದು ಬೇಡವೆಂದು.

ನನ್ನನ್ನು ಕಂಡು ಚಕಿತನಾದ, ಆದರೆ ಅವನ ಮುಖದಲಿ ಸ್ವಲ್ಪವೂ ಖುಷಿ ಕಾಣಲಿಲ್ಲ .
ನಾನೇನು ಅಷ್ಟು ಕೆಟ್ಟವನೇ, ನನ್ನನ್ನೇ ನಾನು ಕೇಳಿದೆ, ಕಣ್ಣೀರು ಹರಿಯಿತು ಬೇಗನೆ ಒರೆಸಿದೆ.

"ಹೇಗಿದ್ದಿ ನೀನು" ಎಂದು ಕೇಳಿದಾಗ ಅವನು ಎದ್ದು ಒಳಗೆ ಹೋದ ಎಷ್ಟು ಹೊತ್ತಾದರೂ ಹೊರಗೆ ಬರಲಿಲ್ಲ, ಕಾದು ಕಾದು ಸೋತ ನಂತರ ಬೇಸರ ಮನದಿಂದ ನಾನು ಹಿಂತಿರುಗಿದೆ.

ಆ ನಂತರ ತನ್ನ ತನ್ನ ಕಾರ್ಯ ಸಂಸಾರದಲ್ಲಿ ನಾವು ನಿರತರಾದೆವು, ಎಷ್ಟೋ ವರ್ಷ ಕಳೆದೋಯಿತು, ಊರಿಗೆ ಹೋದಾಗ ಪುನಃ ಅವನ ನೆನಪಾಯಿತು, ಈಗ ಅವನೂ ಮುದುಕನಾಗಿರಬೇಕು ಎಂದು ಎನಿಸಿ ಮನಸ್ಸಲ್ಲಿ ನಕ್ಕೆ.

ಕಾಲು ತನ್ನಿಂದತಾನೆ ಅವನ ಮನೆಯತ್ತ ನಡೆಯಿತು.

ಒಬ್ಬ ಯುವಕ ಮನೆ ಅಂಗಳದಲ್ಲಿ ಪತ್ರಿಕೆ ಓದುತ ಕುಳಿತ್ತಿದ್ದ.

ನನ್ನನ್ನು ಕಂಡು ಅವನು ಒಮ್ಮೆಲೇ ಸಂತಸದಿಂದ"ನೀವು ಆನಂದ್ ತಾನೇ "

"ಹೌದು ,ನಿನಗೆ ಹೇಗೆ ಗೊತ್ತು ?"

"ಬನ್ನಿ, ಗೊತ್ತಾಗುತ್ತದೆ " ಎಂದು ಹೇಳಿ ಒಳಗೆ ನಡೆದ.

ನನ್ನ ಕಣ್ಣು ಅವನನ್ನು ಹುಡುಕುತ್ತಿತ್ತು ,ಆದರೆ ಒಳಗೆ ಗೋಡೆಯಲ್ಲಿ ಅವನ ಫೋಟೋ ಮೇಲೆ ಹೂವಿನ ಮಾಲೆ ನೇತಾಡುತ್ತಿತ್ತು,  ನಾನು ಅಲ್ಲಿಯೇ ಜಡವಾದೆ.

ಹುಡುಗ ನನಗೆ ಬಂದು ಒಂದು ಪತ್ರ ಕೊಟ್ಟು  "ನಿಮ್ಮೊಟ್ಟಿಗೆ ತಂದೆಯವರ ಒಂದು ಚಿತ್ರ ಇದೆ, ಅದನ್ನು ತೋರಿಸಿ ಅವರು ಯಾವಗಲು ನಿಮ್ಮ ಬಗ್ಗೆ ನಮಗೆ ಹೇಳುತ್ತಿದ್ದರು ಹಾಗು ನಿಮ್ಮ ಬಾಲ್ಯದ ಘಟನೆ ಹೇಳಿ ಅವರು ತುಂಬಾ ಆನಂದ ಪಡುತ್ತಿದ್ದರು, ಕೆಲವು ವೇಳೆ ನಾನು ಅವರನ್ನು ಕೋಣೆಯಲ್ಲಿ ನಿಮ್ಮ ಚಿತ್ರ ನೋಡಿ ಅಳುವುದನ್ನು ಕಂಡಿದೆ.

ನನ್ನ ಹೃದಯ ರೋದನ ಮಾಡತೊಡಗಿತು, ಪತ್ರದಲ್ಲಿ ಬರೆದಿತ್ತು "ನೀನು ಬರುವೆಯೆಂದು   ಗೊತ್ತಿದೆ, ಕ್ಷಮಿಸು ನನ್ನನ್ನು" .

by ಹರೀಶ್ ಶೆಟ್ಟಿ, ಶಿರ್ವ

ತೃಪ್ತಿ

ಗೆಳತಿ...
ನನ್ನನ್ನು
ಹೀಯಾಳಿಸಿ
ನಿನಗೆ ಆತ್ಮ ತೃಪ್ತಿ
ಸಿಗುತ್ತದೆ ಅಂದರೆ
ಇದರಲ್ಲಿಯೇ
ನನಗೆ
ಅಸೀಮ ತೃಪ್ತಿ
by ಹರೀಶ್ ಶೆಟ್ಟಿ, ಶಿರ್ವ

ಚಂದ್ರ ಒಂಟಿ ಒಂಟಿ

ಚಂದ್ರ ಒಂಟಿ ಒಂಟಿ
ಸುತ್ತ ಮುತ್ತ
ಮಿನುಗುವ ನಕ್ಷತ್ರಗಳು
ನನ್ನ ಹಾಗೆ
ನಾನೂ ಒಬ್ಬಂಟಿ
ಸುತ್ತ ಮುತ್ತ
ಮಿನುಗುವ ನೆನಪುಗಳು
by ಹರೀಶ್ ಶೆಟ್ಟಿ, ಶಿರ್ವ

Monday, January 21, 2013

ಮನುಜ ನಿನಗೆ ನೀನೆ ಸಾಟಿ


ಮನುಜ ನಿನಗೆ ನೀನೆ ಸಾಟಿ
ಜೀವನ ಸೋಲು ಗೆಲುವಿನ ಪೈಪೋಟಿ
ಯಾವ ಪಥದಲಿ ಹೋಗಲಿದೆಯೋ ನಿನಗೆ
ಅನುಸರಿಸಿ ಅದನ್ನೇ ವಿಜಯಿಯಾಗು ಅದನ್ನು ದಾಟಿ !

ಅಲ್ಲಲ್ಲಿ ಕಲ್ಲು ಮುಳ್ಳುಗಳಿದೆ ಅತಿಶಯವಾಗಿ
ರಕ್ತ ಸುರಿಯುವುದು ಗಾಯವಾಗಿ
ನಿಲ್ಲದಿರು ನೀ ನಿರಾಶೆಯಾಗಿ
ಪಡೆ ಗುರಿ ಶ್ರದ್ಧೆ ಧೈರ್ಯದಿಂದ ಮುಂದೆ ಸಾಗಿ !

ವ್ಯರ್ಥ ಕಳೆಯದಿರು ಈ ಯೌವನ
ಪ್ರಯಾಣ ಕಠಿಣವಾಗುವುದು ಬದುಕಿನ
ಹೂವಿನ ಶಯ್ಯೆ ಅಲ್ಲ ಈ ಜೀವನ
ನಿನ್ನ ಕೈಯಲ್ಲೇ ಇದೆ ನಿನ್ನ ಬೂತ ,ಭವಿಷ್ಯ ವರ್ತಮಾನ !

ಅಸೂಯೆ ಪಡದಿರು ಅನ್ಯರ ಗೆಲುವಿಗೆ
ಕುಗ್ಗದಿರು ನಿನ್ನ ಸೋಲಿಗೆ
ಸಾಧಿಸುವ ಛಲ ಇದ್ದರೆ ನಿನ್ನಲ್ಲಿ
ಖಂಡಿತ ಜಯ ಬರುವುದು ನಿನ್ನ ಪಾಲಿಗೆ !
by ಹರೀಶ್ ಶೆಟ್ಟಿ, ಶಿರ್ವ

Sunday, January 20, 2013

ಹಾಡು ಹಾಡುವೆ ನಾನು


ಹಾಡು ಹಾಡುವೆ ನಾನು 
ಗುನುಗುನಿಸುವೆ ನಾನು 
ನಾನು ನಗುವ ಪ್ರತಿಜ್ಞೆ ಮಾಡಿದೆ ಎಂದೋ 
ಹಾಗಾಗಿ ಸದಾ ನಗುತ್ತಿರುವೆ ನಾನು!

ಈ ಪ್ರೀತಿಯ ಕ್ಷಣ ಎಷ್ಟು ಅಮೂಲ್ಯವಾಗಿದೆ 
ಹೂವಿಂದ ನಾಜೂಕು ನನ್ನ ಮಾತುಗಳಾಗಿದೆ
ಎಲ್ಲರಿಗೂ ಹೂವಿನ ಮಾಲೆ ತೊಡಿಸುವೆ ನಾನು
ನಗುತ್ತಿರುವೆ ನಾನು...

ಬೆಳಕಾಗುವುದು ಇಷ್ಟು ಯಾರಿಗಿತ್ತು ಸುದ್ದಿ
ಹೊಳೆಯುತ್ತಿದೆ ನನ್ನ ಈ ಮನಸ್ಸ ಕನ್ನಡಿ
ಜೊತೆಯಲ್ಲಿದೆ ಕನ್ನಡಿ ತೋರಿಸುವೆ ನಾನು
ನಗುತ್ತಿರುವೆ ನಾನು ...



ಮೂಲ : ದೇವ್ ಕೊಹಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಶಂಕರ್ ಜೈಕಿಶನ್
ಚಿತ್ರ : ಲಾಲ್ ಪತ್ತಾರ್


geet gaataa hoon main, gunagunaatoo hoon main
maine hasane kaa waadaa kiyaa thaa kabhee
isaliye ab sadaa muskuraataa hoon main

ye mohabbat ke pal kitane anamol hain
kitane fulon se naajook mere bol hain
sab ko fulon kee maalaa pahanaataa hoon main
muskuraataa hoon main ...

roshanee hogee itanee kise thee khabar
mere man kaa ye darpan gayaa hain nikhar
saath hain ab ye darpan dikhaataa hoon main
muskuraataa hoon main ...
www.youtube.com/watch?v=HLGIpR_6tRM

ಒಣಗಿದ ಎಲೆಗಳು

ಮರದ 
ಒಣಗಿದ ಎಲೆಗಳು 
ಬಿದ್ದು ಬಿದ್ದು 
ತನ್ನ ತಾಯಿ ಮರದಡಿಯ 
ಮಣ್ಣನ್ನು ಅಪ್ಪಿಕೊಂಡಿತು
ತಂಗಾಳಿ ಬಂದು 
ಅವರನ್ನು ಆಚೆ ಅಟ್ಟಿ ಬಿಟ್ಟರೂ 
ಆ ಎಲೆಗಳು ಪುನಃ ಪುನಃ ಬಂದು 
ಆ ಮಣ್ಣನ್ನೇ ಅಪ್ಪಿಕೊಳ್ಳುತ್ತಿತ್ತು 
by ಹರೀಶ್ ಶೆಟ್ಟಿ, ಶಿರ್ವ

Saturday, January 19, 2013

ಸಾಗರ ತೀರದಲಿ


ಸಾಗರ ತೀರದಲಿ
ಕರೆಯುತ್ತಿದೆ ಹೃದಯ
ನೀನಲ್ಲದೆ ನನ್ನ ಇನ್ಯಾರಿಲ್ಲ
ಸಾಗರ ತೀರ ....

ಎಚ್ಚರವಾಯಿತು ನೋಟಗಳೆಲ್ಲ
ಎಚ್ಚರವಾಯಿತು ಗಾಳಿ
ಪ್ರೀತಿ ಎಚ್ಚರಗೊಂಡಾಗ
ಎಚ್ಚರವಾಯಿತು ಪರಿಸರವೆಲ್ಲ
ಕ್ಷಣಕ್ಕೂ ಹೃದಯದ ಪ್ರಪಂಚ ನಿದ್ರಿಸಲಿಲ್ಲ
ಸಾಗರ ತೀರದಲಿ.....

ಅಲೆಗಳ ಮೇಲೆ ನಲಿಯುತ್ತಿದೆ
ಕಿರಣದ ಅಪ್ಸರೆ
ನಾನು ಮರೆಯಾದೆ ಹೀಗೆ
ಸಾಗರದಲಿ ನದಿಯ ಧಾರೆ
ನೀನೆ ಒಬ್ಬಳೇ ಮರೆಯಾಗಲಿಲ್ಲವಲ್ಲ
ಸಾಗರ ತೀರದಲಿ ....

ಮೂಲ :ಜಾವೇದ್ ಅಕ್ತರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್, ಕಿಶೋರ್ ಕುಮಾರ್
ಸಂಗೀತ : ಆರ್ ಡೀ ಬರ್ಮನ್
ಚಿತ್ರ : ಸಾಗರ್

Saagar Kinare Dil Yeh Pukare
Tu Jo Nahin To Mera Koi Nahin Hai

Jaage Nazaare Jaagi Havaaein
Jab Pyar Jaaga Jaagi Fizaaein
Pal Bhar Ko Dil Ki Duniya Soyi Nahin Hai
Saagar Kinare Dil Yeh Pukare...

Lehron Pe Naache Kirnon Ki Pariyaan
Maein Khoi Jaise Saagar Mein Nadiya
Tu Hi Akeli To Khoi Nahin Hai
Saagar Kinare Dil Yeh Pukare.
www.youtube.com/watch?v=oFWmYPJ_Syc

Friday, January 18, 2013

ವಿಚಿತ್ರ ಕಥೆ ಇದು

!!ವಿಚಿತ್ರ ಕಥೆ ಇದು
ಎಲ್ಲಿ ಆರಂಭ ಎಲ್ಲಿ ಅಂತ್ಯ
ಈ ಗಮ್ಯಗಳು ಯಾವುದು
ಅರ್ಥವಾಗಲಿಲ್ಲ ಅವರಿಗೂ
ನನಗೂ!!-೨

!!ಈ ಬೆಳಕಿನ ಜೊತೆಯಲಿ ಯಾಕೆ
ಹೊಗೆ ಹೊರಡಿತು ದೀಪದಿಂದ -೨
ಈ ಕನಸು ಕಾಣುತ್ತಿದ್ದೇನೆ ನಾನು
ಅಂದರೆ ಎದ್ದು ಬಂದಿದ್ದೇನೆ ಕನಸಿನಿಂದ !!
ವಿಚಿತ್ರ ಕಥೆ ಇದು....

!!ಶುಭಾಶಯ ನಿನಗೆ ನೀನು
ಯಾರದ್ದೋ ಭಾಗ್ಯ ಆಗುವೆ -೨
ಯಾರದ್ದೋ ಇಷ್ಟು ಬಳಿಯಲ್ಲಿರುವೆ
ಅಂದರೆ ಎಲ್ಲರಿಂದಲೂ ದೂರವಾಗುವೆ !!
ವಿಚಿತ್ರ ಕಥೆ ಇದು....

!!ಯಾರದ್ದೋ ಪ್ರೀತಿ ಪಡೆದು ನೀನು
ಹೊಸ ಜೀವನ ಸಾಗಿಸುವೆ -೨
ಈ ಸಂಜೆ ಎಂದೂ ಬಂದರೆ
ನೀನು ನನಗೆ ನೆನಪಾಗುವೆ !!
ವಿಚಿತ್ರ ಕಥೆ ಇದು....

ಮೂಲ :ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಲತಾ ಮಂಗೇಶ್ಕರ್
ಸಂಗೀತ :ಶಂಕರ್ ಜೈಕಿಶನ್
ಚಿತ್ರ :ದಿಲ್ ಅಪನಾ ಪ್ರೀತ್ ಪರಾಯಿ

अजीब दास्ताँ है ये
कहाँ शुरू कहाँ ख़तम
ये मंजिलें है कौन सी
न वो समझ सके न हम

ये रौशनी के साथ क्यूँ
धुंआ उठा चिराग से
ये ख्वाब देखती हूँ मैं
के जग पड़ी हूँ ख्वाब से
अजीब..

मुबारके तुम्हें के तुम
किसी के नूर हो गए
किसी के इतने पास हो
के सबसे दूर हो गए
अजीब..

किसी का प्यार ले के तुम
नया जहां बसाओगे
ये शाम जब भी आएगी
तुम हमको याद आओगे
अजीब..
www.youtube.com/watch?v=VEY2Szh0dEM

Thursday, January 17, 2013

ತುಟಿಯಿಂದ ಸ್ಪರ್ಶಿಸು ನೀನು


!!ತುಟಿಯಿಂದ ಸ್ಪರ್ಶಿಸು ನೀನು
ನನ್ನ ಗೀತೆ ಅಮರಗೊಳಿಸು!!-೨
ನನ್ನಾಗು ಇನಿಯ ನೀನು
ನನ್ನ ಪ್ರೀತಿ ಅಮರಗೊಳಿಸು !

!!ವಯಸ್ಸಿನ ಸೀಮೆ ಇರದಿರಲಿ
ಇರದಿರಲಿ ಜನುಮದ ಬಂಧನ-೨
ಯಾರಾದರೂ ಪ್ರೀತಿ ಮಾಡುವಾಗ
ನೋಡುವರು ಕೇವಲ ಮನಸ್ಸನ್ನ
ಹೊಸ ರೂಢಿ ನಿರ್ಮಿಸಿ ನೀನು
ಈ ರೀತಿ ಅಮರಗೊಳಿಸು!!-೨

!!ಆಕಾಶದ ಖಾಲಿತನ
ನನ್ನ ಏಕಾಂತ ಮನದಲಿ-೨
ಗೆಜ್ಜೆಯ ಜಣಜಣಿಸುತ ನೀನು
ಬಾ ನನ್ನ ಜೀವನದಲಿ
ಉಸಿರು ಕೊಟ್ಟು ತನ್ನ
ಸಂಗೀತ ಅಮರಗೊಳಿಸು
ಸಂಗೀತ ಅಮರಗೊಳಿಸು
ನನ್ನ ಗೀತೆ ಅಮರಗೊಳಿಸು!!

!!ಜಗ ನನ್ನಿಂದ ದೋಚಿದರು
ನನಗೆ ಪ್ರಿಯವಾದುದನ್ನೆಲ್ಲ-೨
ಎಲ್ಲರೂ ಗೆಲ್ಲುತ್ತಿದ್ದರು ನನ್ನಿಂದ
ನಾನು ಯಾವಗಲೂ ಸೋತೆನಲ್ಲ
ನೀ ಸೋತು ಹೃದಯವನ್ನು
ನನ್ನ ಗೆಲುವನ್ನು ಅಮರಗೊಳಿಸು!!-೨
ತುಟಿಯಿಂದ ಸ್ಪರ್ಶಿಸು ನೀ
ನನ್ನ ಗೀತೆ ಅಮರಗೊಳಿಸು!!

ಮೂಲ : ಇಂದೀವರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು /ಸಂಗೀತ :ಜಗಜಿತ್ ಸಿಂಗ್
ಚಿತ್ರ :ಪ್ರೇಮ್ ಗೀತ

Hm Mm Mm Mm, Hm Hm Hm Hm Hm Hm Hm
(Honton Se Chhoo Lo Tum
Mera Geet Amar Kar Do) - 2
Ban Jaao Meet Mere
Meri Preet Amar Kar Do
Honton Se Chhoo Lo Tum
Mera Geet Amar Kar Do
(Na Umr Ki Seema Ho
Na Janm Ka Ho Bandhan) - 2
Jab Pyaar Kare Koi
To Dekhe Keval Mann
(Nayi Reet Chalaakar Tum
Yeh Reet Amar Kar Do) - 2
(Aakaash Ka Soonapan
Mere Tanha Mann Mein) - 2
Paayal Chhankaati Tum
Aa Jaao Jeevan Mein
Saansein Dekar Apni
Sangeet Amar Kar Do
Sangeet Amar Kar Do
Mera Geet Amar Kar Do
(Jag Ne Chheena Mujhse
Mujhe Jo Bhi Laga Pyaara) - 2
Sab Jeeta Kiye Mujhse
Main Har Dam Hi Haara
(Tum Haarke Dil Apna
Meri Jeet Amar Kar Do) - 2
Honton Se Chhoo Lo Tum
Mera Geet Amar Kar Do
www.youtube.com/watch?v=Azx7sTwv24w

ಅಪ್ಪ

ಇಂದು 
ಸಾವಿರಾರು ತರಹದ 
ಬಿಸ್ಕೆಟ್ ಇದೆ ಮಾರ್ಕೆಟಲ್ಲಿ 
ಆದರೆ ಬಾಲ್ಯದಲ್ಲಿ 
ಅಪ್ಪ ಸಂತೆಯಿಂದ ಬರುವಾಗ 
ಪೇಪರಲ್ಲಿ ಮಡಚಿ ತರುವ 
ಆ ಎರಡು ತುಂಡು 
ಬಿಸ್ಕೆಟಿನ ರುಚಿ 
ಜಗದ ಯಾವ ಬಿಸ್ಕೆಟ್ ತಿಂದರು ಸಿಗದು 
by ಹರೀಶ್ ಶೆಟ್ಟಿ, ಶಿರ್ವ

ನಮಗ್ಯಾಕೆ ಅನ್ಯರ ಚಿಂತೆ

ಗೆಳತಿ... 
ನಮಗ್ಯಾಕೆ ಅನ್ಯರ ಚಿಂತೆ 
ನಮ್ಮ ನೇರ ಮಾತಿನಿಂದ 
ಅವರ ಒಳಿತಿದ್ದರೂ 
ಅವರಿಗೆ ಅದು 
ನಾವು ಅವರ 
ಅಪಮಾನ ಮಾಡುತ್ತಿದ್ದೇವೆ 
ಎಂದು ಅವರು ಭಾವಿಸುವರು !

ಬಿಡು ಇರುವ ನಾವು ನಮ್ಮಷ್ಟಕ್ಕೆ
ರಗಳೆ ಇಲ್ಲ
ಅವರ ಇಷ್ಟ ಕಷ್ಟ ಅವರಿಗೆ ಬಿಟ್ಟದ್ದು
ನಮಗ್ಯಾಕೆ ಅವರ ಗೋಷ್ಠಿ
ನಮಗೆ ನಮ್ಮ ಜಂಜಾಟ ಹೆಚ್ಚಾಗಿರುವಾಗ
ನಾವು ಅವರಿಗೆ ಸಕ್ಕರೆ ಕೊಡಲು ಹೋಗಿ
ಅವರು ಅದು ಉಪ್ಪೆಂದು
ನಮ್ಮ ಮೇಲೆ ಉಗುಳುವುದು ಬೇಡ !
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಸೋಮಾರಿ


ಗೆಳತಿ...
ನನ್ನ
ಪ್ರೀತಿ
ಸೋಮಾರಿಯಾಗಿದೆ
ಅದಕ್ಕೆ
ನಿನ್ನ
ಹೃದಯದಲ್ಲಿ
ಕಾಯಂ ನೆಲೆಸಿದೆ
by ಹರೀಶ್ ಶೆಟ್ಟಿ, ಶಿರ್ವ

ಭಾರತ ಮಾತೆ

ದೇಶ ದ್ರೌಪದಿಯಂತೆ ನಿಸ್ಸಹಾಯ 
ಆಡಳಿತದಲ್ಲಿ ಮೌನ ದೃತರಾಷ್ಟ್ರ 
ದುಷ್ಟ ಕೌರವ ರಾಜಕಾರಣಿಗಳ ಅಟ್ಟಹಾಸ 
ವ್ಯಾಕುಲ ಜನ ಪಾಂಡವರು, ಆದರೆ ಅಸಹಾಯ 
ನೆರೆಯ ಆಡಳಿತದವರ ವಿಧ್ವಂಸಕತೆ
ಅಳುತ್ತಿದ್ದಾಳೆ ಭಾರತ ಮಾತೆ 
by ಹರೀಶ್ ಶೆಟ್ಟಿ, ಶಿರ್ವ

ಸುನಾಮಿ

ಶಬ್ದ ಚಿಮುಕಿಸದ 
ಶಾಂತ ಮೌನ ಮೂರ್ತಿಯಿಂದ 
ಕೋಪದ ಜ್ವಾಲೆ 
ಸುರಿಯಿತು 
ಇನ್ನು ಯುದ್ದದ ಸುನಾಮಿ ಬರದಿರಲಿ 
ಎಂದು ಅಪೇಕ್ಷಿಸುವೆ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಸಾಲ

ಪ್ರೀತಿಯ ಸಾಲ 
_____________
ಅಗಲಿಕೆಯನ್ನು ಕೊಟ್ಟು 
ಜೀವನ ಪರ್ಯಂತ 
ಕಣ್ಣೀರ ರೂಪದಲ್ಲಿ 
ಕೇವಲ ಬಡ್ಡಿ ತೆಗೆದು ಕೊಳ್ಳುವುದು 
ಅಸಲು ತೀರುವುದು ಸತ್ತ ನಂತರ 
by ಹರೀಶ್ ಶೆಟ್ಟಿ, ಶಿರ್ವ

ದುರ್ಬಲ ಸತ್ಯವಾದಿ

ಅವನು ತುಂಬಾ ಬಲಶಾಲಿ 
ಆದರೂ ಅವನು 
ಆ ದುರ್ಬಲ ಸತ್ಯವಾದಿಗೆ 
ಹೆದರುತ್ತಿದ್ದ 
by ಹರೀಶ್ ಶೆಟ್ಟಿ, ಶಿರ್ವ

Tuesday, January 15, 2013

ಎಂದೂ ಯಾವುದೇ ವಿಷಯದಲಿ ಸಿಕ್ಕಿ ಬಿದ್ದರೆ


ಎಂದೂ ಯಾವುದೇ ವಿಷಯದಲಿ ಸಿಕ್ಕಿ ಬಿದ್ದರೆ
ಎಂದೂ ಯಾವುದೇ ಕಷ್ಟ ಒದಗಿದರೆ
ನೀನು ಜೊತೆಯಾಗಿರು ನನ್ನ
ಓ ನನ್ನೊಲವೆ-೨

ಇರಲಿಲ್ಲ ಯಾರೂ
ಯಾರೂ ಇಲ್ಲ

ಜೀವನದಲಿ ನೀನಲ್ಲದೆ
ನೀನು ಜೊತೆಯಾಗಿರು ನನ್ನ
ಓ ನನ್ನೊಲವೆ -೨

ಚಂದಿರನ ಬೆಳಕಿರುವ ತನಕ ರಾತ್ರಿಯಲಿ
ಪ್ರತಿಯೊಬ್ಬರೂ ಇರುವರು ಜೊತೆಯಲ್ಲಿ
ಆದರೆ ನೀನೆಂದೂ ನನ್ನ ಕೈ ಬಿಡಬೇಡ ಕತ್ತಲಲಿ -೨
ಎಂದೂ ಯಾವುದೇ .....

ನಂಬಿಕೆಗಳ ಆ ಆಚರಣೆ ವಚನಗಳನ್ನು
ಪಾಲಿಸುವ ನಾವು ಎಂದೆಂದಿಗೂ
ಜೀವನದ ಒಂದೊಂದು ಉಸಿರು
ನಮ್ಮ ನಿಯಂತ್ರಣದಲ್ಲಿರುವವರೆಗೂ  -೨
ಎಂದೂ ಯಾವುದೇ ...

ಈ ಹೃದಯಕ್ಕೆ ನಂಬಿಕೆಯಾಗಿದೆ
ಮೊದಲೆಲ್ಲೋ ನಾವು ಸಿಕ್ಕಿದೇವೆಯೆಂದು
ಇದು ಶತಮಾನಗಳ ಪರಂಪರೆಯಾಗಿದೆ 
ಕತೆಯಲ್ಲ ಇದು ಇಂದಿನದು 
ಎಂದೂ ಯಾವುದೇ ...

ಮೂಲ :ಇಂದೀವರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಕುಮಾರ್ ಸಾನು /ಸಾಧನ ಸರ್ಗಮ್
ಸಂಗೀತ :ರಾಜೇಶ್ ರೋಶನ್
ಚಿತ್ರ : ಜುರ್ಮ್

Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz
Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz

Na Koi Hai Na Koi Tha Zindage Mein Tumhaare Siva
Tum Dena Saath Mera O Humnawaaz
Tum Dena Saath Mera O Humnawaaz

Ho Chaandni Jab Tak Raat Deta Hai Har Koi Saath
Tum Magar Andheron Mein Na Chhodna Mera Haath
Ho Chaandni Jab Tak Raat Deta Hai Har Koi Saath
Tum Magar Andheron Mein Na Chhodna Mera Haath

Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz
Na Koi Hai Na Koi Tha Zindage Mein Tumhaare Siva
Tum Dena Saath Mera O Humnawaaz

Wafadaari Ki Vo Rasmein Nibhayenge Hum Tum Kasmein
Ek Bhi Saans Zindagi Ki Jab Tak Ho Apne Bas Mein
Wafadaari Ki Vo Rasmein Nibhayenge Hum Tum Kasmein
Ek Bhi Saans Zindagi Ki Jab Tak Ho Apne Bas Mein

Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz
Na Koi Hai Na Koi Tha Zindage Mein Tumhaare Siva
Tum Dena Saath Mera O Humnawaaz

Dil Ko Mere Hua Yakeen Hum Pehle Bhi Mile Kahin
Silsila Ye Sadiyon Ka Koi Aaj Ki Baat Nahin
Dil Ko Mere Hua Yakeen Hum Pehle Bhi Mile Kahin
Silsila Ye Sadiyon Ka Koi Aaj Ki Baat Nahin

Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz
Jab Koi Baat Bigad Jaaye Jab Koi Mushkil Pad Jaaye
Tum Dena Saath Mera O Humnawaaz
Na Koi Hai Na Koi Tha Zindage Mein Tumhaare Siva
Tum Dena Saath Mera O Humnawaaz
Tum Dena Saath Mera O Humnawaaz      
http://www.youtube.com/watch?v=E_mtmnptlTA                                                             

ಸುಖ ನಿದ್ರೆ

ಚಾಪೆ ಇಲ್ಲದೆ ಇವನು ನೆಲದ ಮೇಲೆ ಸುಖ ನಿದ್ರೆ ನಿದ್ರಿಸುತ್ತಿದ್ದ 
ನಿದ್ದೆ ಬಾರದೆ ಹಾಸಿಗೆಯಲ್ಲಿ ಅವನು ಹೊರಳಾಡುತ್ತಿದ್ದ 
by ಹರೀಶ್ ಶೆಟ್ಟಿ, ಶಿರ್ವ

Monday, January 14, 2013

ಪ್ರೀತಿಯ ಮಗ್ಗುಲಲ್ಲಿ


ಪ್ರೀತಿಯ ಮಗ್ಗುಲಲ್ಲಿ
ಮತ್ಸರ ಸಹ ಮಲಗಿತ್ತು
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯಿಂದ ಬಾಳೋಣ

ಗೆಳತಿ
ಹಬ್ಬದ ದಿನವೂ 
ಈ ಮುನಿಸೇಕೆ ?
ಬಾ ಒಟ್ಟು ಕೂಡಿ 
ಎಳ್ಳು ಬೆಲ್ಲ ಲಡ್ಡು ಸವಿಯೋಣ 
ಎರಡು ದಿನದ ಜೀವನ 
ಪ್ರೀತಿಯಿಂದ ಬಾಳೋಣ 
by ಹರೀಶ್ ಶೆಟ್ಟಿ, ಶಿರ್ವ

Sunday, January 13, 2013

ಒಹ್ ನನ್ನ ದೇಶದ ಜನರೇ


ಒಹ್ ನನ್ನ ದೇಶದ ಜನರೇ
ನೀವೆಲ್ಲ ತುಂಬಾ ಘೋಷಣೆ ಮಾಡಿ
ಇದು ಶುಭ ದಿನ ನಮ್ಮೆಲ್ಲರ
ಹಾರಿಸಿ ದ್ವಜ ತ್ರಿವರ್ಣ ಸುಂದರ
ಆದರೆ ಮರೆಯಬೇಡಿ ಸೀಮೆಯಲಿ
ಪ್ರಾಣ ತ್ಯಜಿಸಿದ ವೀರರನ್ನು
ಸ್ವಲ್ಪ ಸ್ಮರಿಸಿ ಅವರನ್ನೂ
ಸ್ವಲ್ಪ ಸ್ಮರಿಸಿ ಅವರನ್ನೂ
ಹಿಂತಿರುಗಿ ಮನೆಗೆ ಬರದವರನ್ನು
ಹಿಂತಿರುಗಿ ಮನೆಗೆ ಬರದವರನ್ನು !

ಒಹ್ ನನ್ನ ದೇಶದ ಜನರೇ
ಸ್ವಲ್ಪ ಕಣ್ಣಲ್ಲಿ ಕಣ್ಣೀರು ತುಂಬಿಸಿ
ಆ ಹುತಾತ್ಮರಾದವರ ತ್ಯಾಗವನ್ನು
ಸ್ವಲ್ಪ ನೀವು ಸ್ಮರಿಸಿ!

ಗಾಯಗೊಂಡಾಗ ಹಿಮಾಲಯ
ಅಪಾಯದಲ್ಲಿರುವಾಗ ಸ್ವಾತಂತ್ರ
ಕೊನೆ ಉಸಿರು ತನಕ ಹೋರಾಡಿದರವರು
ಮತ್ತೆ ತನ್ನ ಶವ ಹಾಸಿದರು
ಮಾತೃಭೂಮಿಯಲಿ ತಲೆಯನ್ನಿಟ್ಟು
ಮಲಗಿದರು ಅಮರ ಯೋಧ ಸಾಹಸಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ದೇಶದಲ್ಲಿದ್ದಾಗ ದೀಪಾವಳಿ
ಅವರು ಆಡುತ್ತಿದ್ದರು ಹೋಳಿ
ನಾವು ಮನೆಯಲ್ಲಿ ಕುಳಿತ್ತಿದ್ದಾಗ
ಅವರು ಎದುರಿಸುತ್ತಿದ್ದರು ಗುಂಡಿನ ಗೋಲಿ
ಧನ್ಯ ಸಿಪಾಯಿರು ನಮ್ಮ
ಧನ್ಯ ಅವರ ಯೌವನ ಸಾಹಸಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ಒಬ್ಬ ಸಿಖ್ ಆದರೆ ಒಬ್ಬ ಮರಾಠಿ
ಒಬ್ಬ ಸಿಖ್ ಆದರೆ ಒಬ್ಬ ಮರಾಠಿ
ಒಬ್ಬ ಗೂರ್ಖಾ ಆದರೆ ಮತ್ತೊಬ್ಬ ಮದರಾಸಿ
ಒಬ್ಬ ಗೂರ್ಖಾ ಆದರೆ ಮತ್ತೊಬ್ಬ ಮದರಾಸಿ
ಗಡಿಯಲ್ಲಿ ಸಾಯುವವನು
ಗಡಿಯಲ್ಲಿ ಸಾಯುವವನು
ಪ್ರತಿ ವೀರನಾಗಿದ್ದ ಭಾರತವಾಸಿ
ಯಾವ ರಕ್ತ ಬಿತ್ತು ಪರ್ವತದಲ್ಲಿ
ಆ ರಕ್ತವಾಗಿತ್ತು ಭಾರತೀಯ ಪ್ರತಿ
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ನಿರ್ಲಕ್ಷಿಸಿ ರಕ್ತರಂಜಿತ ದೇಹವನ್ನು  
ಎತ್ತಿಕೊಂಡು ತನ್ನ ತುಪಾಕಿಯನ್ನು 
ಒಬ್ಬೊಬ್ಬರೇ ಕೊಂದರು ಹತ್ತತ್ತು ಜನರನ್ನು 
ಮತ್ತೆ ಬಿದ್ದರು ಕಳೆದು ಪ್ರಜ್ಞೆಯನ್ನು 
ಕಡೆಯ ಸಮಯ ಬಂದಾಗ 
ಕಡೆಯ ಸಮಯ ಬಂದಾಗ 
ಹೇಳಿ ಹೋದರು ಈಗ ಸಾಯುತ್ತಿದ್ದೇವೆ  
ಖುಷಿಯಲ್ಲಿರಿ ದೇಶದ ಪ್ರಿಯರೆ 
ಖುಷಿಯಲ್ಲಿರಿ ದೇಶದ ಪ್ರಿಯರೆ 
ಈಗ ನಾವು ಪ್ರಯಾಣ ಮಾಡುತ್ತಿದ್ದೇವೆ  
ಈಗ ನಾವು ಪ್ರಯಾಣ ಮಾಡುತ್ತಿದ್ದೇವೆ 
ಎಂತಹ ಜನರಾಗಿದ್ದರು ಅವರು ಸ್ವಾಭಿಮಾನಿ 
ಎಂಥ ಜನರಾಗಿದ್ದರು ಅವರು ದುಸ್ಸಾಹಸಿ 
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!

ನೀವು ಮರೆಯದಿರಿ ಅವರನ್ನು ಎಂದು 
ಹೇಳಿದೆ ಈ ಕಥೆಯನ್ನು ಬಿಡಿಸಿ 
ಆ ಹುತಾತ್ಮರಾದವರ ತ್ಯಾಗವನ್ನು ಸ್ವಲ್ಪ ಸ್ಮರಿಸಿ!


ಜೈ ಭಾರತ ಜೈ ಭಾರತ ಸೇನೆ 
ಜೈ  ಭಾರತ ಜೈ  ಭಾರತ ಸೇನೆ 
ಜೈ  ಭಾರತ ಜೈ  ಭಾರತ  ಜೈ  ಭಾರತ

ಮೂಲ :ಕವಿ ಪ್ರದೀಪ್ 
ಅನುವಾದ :ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು :ಲತಾ ಮಂಗೇಶ್ಕರ್ 
ಸಂಗೀತ : ಸಿ .ರಾಮಚಂದ್ರ 

Ae mere vatan ke logon
Tum khoob laga lo naara
Ye shubh din hai ham sab ka
Lehera lo tiranga pyaara
Par mat bhoolo seema par
Eeeron ne hai praan ganvae
Kuch yaad unhein bhi kar lo
Kuch yaad unhein bhi kar lo
Jo laut ke ghar na aaye
Jo laut ke ghar na aaye


Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

Ae mere vatan ke logon
Zara aankh mein bhar lo paani
Jo shaheed hue hain unki
Zara yaad karo qurbaani

Tum bhool na jaao unko
Is liye kahi ye kahaani
Jo shaheed hue hain unki
Zara yaad karo qurbaani


Jab ghayal hua himaalaya
Khatre mein padi aazadi
Jab tak thi saans lade woh
Jab tak thi saans lade woh
Phir apni laash bichha di

Sangeen pe dhar kar maatha
So gaye amar balidaani
Jo shaheed hue hain unki
Zara yaad karo qurbaani

Jab desh mein thi diwali
Woh khel rahe the holi
Jab ham baithe the gharon mein
Woh jhel rahe the goli
The dhanya javaan woh aapane
Thi dhanya woh unki javaani
Jo shaheed

Koi sikh koi jaat maraatha
Koi sikh koi jaat maraatha
Koi gurakha koi madaraasi
Koi gurakha koi madaraasi
Sarhad pe marane vaala
Sarhad pe marane vaala
Har veer tha bhaaratvaasi
Jo khoon gira parvat par
Woh khoon tha hindustaani
Jo shaheed hue hain unki
Zara yaad karo qurbaani


Thi khoon se lath-path kaaya
Phir bhi bandook uthaake
Dus dus ko ek ne maara
Phir gir gaye hosh ganva ke

Jab ant samay aaya to
Jab ant samay aaya to
Keh gaye ke ab marate hain
Khush rahana desh ke pyaaron
Khush rahana desh ke pyaaron
Ab hum to safar karate hain
Ab hum to safar karate hain

Kya log the woh deewane
Kya log the woh abhimaani
Jo shaheed hue hain unki
Zara yaad karo qurbaani

Tum bhool na jaao unko
Is liye kahi ye kahaani
Jo shaheed hue hain unki
zara yaad karo qurbaani

Jay hind jay hind ki sena
Jay hind jay hind ki sena
Jay hind jay hind jay hind




ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...