Monday, 30 December, 2013

ನವೀನ ವರ್ಷ ೨೦೧೪

ಬರುತ್ತಿದೆ 
ಹೌದು ಬರುತ್ತಿದೆ 
ನಿನ್ನೆಜ್ಜೆಯ ಸದ್ದು 
ಮೆಲ್ಲ ಮೆಲ್ಲನೆ 

ಗೊತ್ತಿಲ್ಲ ನನಗಾಗಿ 
ಏನು ತಂದಿರುವೆಯೆಂದು 
ಈಗಂತೂ ನಿನ್ನೆಜ್ಜೆಯ ಸದ್ದು 
ಮಧುರವೆನಿಸುತ್ತಿದೆ 

ಸಮಯದ ಚಕ್ರವೆ ಹೀಗೆಯೇ
ಹೋಗುವವರನ್ನು ನಿಲ್ಲಿಸಲಾಗುವುದಿಲ್ಲ
ಬರುವವರನ್ನು ತಡೆಯಲಾಗುವುದಿಲ್ಲ
ಗೊತ್ತಿದೆ ನೀನಂತೂ ಬರುವೆ

ಒಳ್ಳೆಯದು
ನವ ನವೀನ ಕನಸು ತುಂಬಿದೆ
ಕಣ್ಣಲ್ಲಿ ನಿನಗಾಗಿ
ಬಾ ನಿನ್ನನ್ನು ಕಾಯುತ್ತಿರುವೆ

ನವೀನ ವರ್ಷ ೨೦೧೪
ಬಾ ನಿನ್ನನ್ನು ಕಾಯುತ್ತಿರುವೆ
ಹರ್ಷದಿಂದ, ಸಂದೇಹದಿಂದ
ಏನೋ ಸ್ವಲ್ಪ ಭಯದಿಂದಲೂ

ನಿನ್ನನ್ನು ಕಾಯುತ್ತಿರುವೆ
ಬಾ ಕಾಯುತ್ತಿರುವೆ

by ಹರೀಶ್ ಶೆಟ್ಟಿ,ಶಿರ್ವ

ಹೊರಡು ಗೆಳತಿ

!!ಹೊರಡು ಗೆಳತಿ
ಇನ್ನೆಂತಹ ಯೋಚನೆ
ಕಣ್ಣ ಕಾಡಿಗೆ ಹರಿಯದಿರಲಿ
ಅತ್ತು ಅತ್ತು ಸುಮ್ಮನೆ!!
ಹೊರಡು ಗೆಳತಿ.....

!!ಹತಾಶನಾಗಿದ್ದಾನೆ
ಪಶ್ಚಾತಾಪದಲಿ ಅಪ್ಪಯ್ಯ
ಯಾಕೆ ನೀಡಿದೆ ನಾನು ಪರದೇಶ
ಹೃದಯದ ತುಂಡಯ್ಯ
ಕಣ್ಣೀರು ಸುರಿಸುತ್ತ
ದೂರ ನಿಂತು ಕೊರಗುತ್ತಿದ್ದಾನೆ!!
ಹೊರಡು ಗೆಳತಿ.....

!!ಮಮತೆಯ ಸೆರಗು
ಬೊಂಬೆಯ ಬಳೆಗಳ
ಸಣ್ಣ ದೊಡ್ಡ ಸಖಿಯರು
ಮನೆ ಗಲ್ಲಿ ಅಂಗಳ
ಬಿಟ್ಟೋಯಿತು ಬಿಟ್ಟೋಯಿತು
ಬಿಟ್ಟೋಯಿತು ಎಲ್ಲವೂ!!
ಹೊರಡು ಗೆಳತಿ.....

!!ಮದುಮಗಳಾಗಿ
ಪಾಲಕಿ ನಿಂತಿದೆ
ಯಾರಿಲ್ಲ ನಮ್ಮ
ಎಂಥ ಕ್ಷಣ ಇದಾಗಿದೆ
ಯಾರು ಇಲ್ಲಿ ಯಾರು ಅಲ್ಲಿ
ಯಾರು ಎಲ್ಲಿಯೋ!!
ಹೊರಡು ಗೆಳತಿ.....

ಮೂಲ : ಮಜರೂಹ್ ಸುಲ್ತಾನ್ಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಎಸ್ . ಡೀ. ಬರ್ಮನ್
ಚಿತ್ರ : ಬಂಬೈ ಕಾ ಬಾಬು

चल री सजनी अब क्या सोचे
कजरा ना बह जाये रोते-रोते

बाबुल पछताए हाथों को मल के
काहे दिया परदेस टुकड़े को दिल के
आँसू लिये, सोच रहा, दूर खड़ा रे
चल री सजनी...

ममता का आँगन, गुड़ियों का कंगना
छोटी बड़ी सखियाँ, घर गली अंगना
छूट गया, छूट गया, छूट गया रे
चल री सजनी...

दुल्हन बन के गोरी खड़ी है
कोई नही अपना कैसी घड़ी है
कोई यहाँ, कोई वहाँ, कोई कहाँ रे
चल री सजनी...
http://www.youtube.com/watch?v=XuNp_LY13P4

ವಸಂತವೆ ನನ್ನ

!!ವಸಂತವೆ ನನ್ನ ಹೂದೋಟ
ದೋಚಿದ ಮೇಲೆ
ಶಿಶಿರದ ಮೇಲೆ
ಈ ಆರೋಪ ಹೊರಿಸಿದ್ಯಾಕೆ
ಯಾರೋ ಒಬ್ಬರು
ಹಗೆತನ ಇಟ್ಟುಕೊಂಡಿದ್ದರು
ಆದರೆ ಇದಕ್ಕೆ
ಗೆಳೆತನದ ಹೆಸರು ನೀಡಿದ್ಯಾಕೆ!!
ವಸಂತವೆ....

!!ನನಗೆ ತಿಳಿಯಲಿಲ್ಲ
ಓ ನನ್ನ ಪ್ರೇಮಿಕೆ
ಈ ಸಜೆ ಸಿಕ್ಕಿದೆ ನನಗ್ಯಾಕೆಯೆಂದು -೨
ಅಂದರೆ ಸಾಕಿ
ನನ್ನಧರದಿಂದ ಕಸಿದು
ಇನ್ನೊಬ್ಬರಿಗೆ ಈ ಮದ್ಯ ನೀಡಿದ್ಯಾಕೆಯೆಂದು!!
ವಸಂತವೆ....

!!ನನಗೇನು ತಿಳಿದಿತ್ತು
ಹೀಗೆ ಪ್ರೀತಿಯಲಿ ಗೆಳೆಯನನ್ನು
ಸಂದೇಶವಾಹಕ ಮಾಡುವುದಿಲ್ಲವೆಂದು-೨
ತಪ್ಪಾಯ್ತು
ಓ ನನ್ನ ಸಂದೇಶವಾಹಕ
ನಾನು ನಿನ್ನ ಮೂಲಕ ಸಂದೇಶ ನೀಡಿದ್ಯಾಕೆ!!
ವಸಂತವೆ....

!!ದೇವರೇ ನಿನ್ನ ನ್ಯಾಯದ
ತುಂಬಾ ಪ್ರಶಂಸೆ ಕೇಳಿದ್ದೆ ಆದರೆ-೨
ಸಜೆಯ ಬದಲು
ಒಬ್ಬ ದೋಷಿಗೆ
ನೀನು ಈ ಉಡುಗೊರೆ ನೀಡಿದ್ಯಾಕೆ !!
ವಸಂತವೆ....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ರೋಶನ್
ಚಿತ್ರ : ದೇವರ್

bahaaron ne meraa chaman loot kar
khizaan ko ye ilzaam kyon de diyaa
kisine chalo, dushmani ki magar
ise dosti naam, kyon de diyaa
bahaaron ne meraa chaman loot kar

main samajhaa nahin, ai mere hamanashin
(sazaa ye mili hai, mujhe kis liye)-2
ke saaqi ne lab se mere, chheen kar
kisi aur ko jaam kyon de diyaa
bahaaron ne meraa chaman loot kar

mujhe kya pataa thaa, kabhi ishq men
(raqeebon ko kaasid, banaate nahin)-2
khataa ho gai mujhase, kaasid mere
tere haath paigaam kyon de diyaa
bahaaron ne meraa chaman loot kar

khudaayaa yahaan tere insaaf ke
(bahut main ne charche, sune hain, magar)-2
sazaa ki jagah, ek khataavaar ko
bhalaa tune inaam kyon de diyaa

bahaaron ne meraa chaman loot kar
khizaan ko ye ilzaam kyon de diyaa ..
http://www.youtube.com/watch?v=IZdmevaMzzU

Sunday, 29 December, 2013

ಕಷ್ಟ ಪಡೆಯಲು

ಬಾನಲ್ಲಿ ಎಷ್ಟು ತಾರೆಗಳಿವೆ
ಅವುಗಳು ಸಹ ಲಜ್ಜಿಸಬಹುದು,
ಓ ನೀಡುವವನೆ ನನಗೆ
ಇಷ್ಟೊಂದು ಜೀವನ ನೀಡು,
ಇದೇ ನನ್ನ ಸಜೆಯಾಗಲಿ
ಮೃತ್ಯ ಸಹ ನನಗೆ ಒದಗದಿರಲಿ,
ಯಾರಿಗಾದರೂ ನೆಮ್ಮದಿ ಸಿಗಲಿ
ನನಗೆ ದುರ್ದಶೆಯನ್ನು ನೀಡು

!!ಕಷ್ಟ ಪಡೆಯಲು
ನಾನಿನ್ನು ಬದುಕು ಸಾಗಿಸುತ್ತಿರುವೆ
ಉಸಿರ ಲಯದಲಿ
ನಿನ್ನೆಸರನ್ನು ಜಪಿಸುತ್ತಿರುವೆ!!
ಕಷ್ಟ ಪಡೆಯಲು....

!!ಒಹ್ ನೀನು ನನಗೆ ಒಲವಿನ ಹೊರತು
ಏನನ್ನೂ ನೀಡಲಿಲ್ಲ
ಆದರೆ ನಾನು ನಿನಗೆ ದ್ವೇಷದ ಹೊರತು
ಏನನ್ನೂ ನೀಡಲಿಲ್ಲ
ನಿನ್ನಿಂದ ಲಜ್ಜಿತಗೊಂಡಿದ್ದೇನೆ
ಓ ನನ್ನ ನಿಷ್ಠೆಯ ದೇವಿ
ನಿನ್ನ ದ್ರೋಹಿ ನಾನು
ಕಷ್ಟದ ಹೊರತು ಏನನ್ನೂ ನೀಡಲಿಲ್ಲ!!
ಕಷ್ಟ ಪಡೆಯಲು....

!!ನೀನು ನನ್ನ ಯೋಚನೆಯಲಿ
ಈಗಲೂ ಬರುತ್ತಿರುವೆ
ತನ್ನ ಕಣ್ರೆಪ್ಪೆಯಲಿ
ಆ ಅಶ್ರುಗಳ ಶವಗಳನ್ನಿಟ್ಟು
ನೀನು ನಿದ್ರೆ ತ್ಯಜಿಸಿದೆ
ನನ್ನ ಹಾದಿಯಲಿ
ನಾನು ನಶೆಯಲ್ಲಿಯೆ ಇದ್ದೆ
ಅನ್ಯರ ಆಸರೆಯಲಿ!!
ಕಷ್ಟ ಪಡೆಯಲು....

ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಮೇರೆ ಹುಜೂರ್

Falaq pe jitane sitaare hai wo bhi sharamaaye
O dene waale mujhe itani zindagi de de
Yahi sazaa hai meri maut hi na aaye mujhe
Kisi ko chain mile mujhako bekali de de

Gam uthaane ke liye mai to jiye jaaungaa
Gam uthaane ke liye mai to jiye jaaungaa
Saans ki lay pe teraa naam liye jaaungaa
Gam uthaane ke liye mai to jiye jaaungaa

Haay  tune mujhe ulfat ke sivaa kuchh na diyaa
Aur maine tujhe nafarat ke sivaa kuchh na diyaa
Haay  tune mujhe ulfat ke sivaa kuchh na diyaa
Aur maine tujhe nafarat ke sivaa kuchh na diyaa
Tujhase sharamindaa hun, ai meri vafaa ki devi
Teraa mujarim hun musibat ke sivaa kuchh na diyaa
Gam uthaane ke liye mai to jiye jaaungaa
Saans ki lay pe teraa naam liye jaaungaa
Gam uthaane ke liye mai to jiye jaaungaa

Tu khayaalo me mere ab bhi chali aati hai
Apani palako pe un ashko kaa janaazaa lekar
Tu khayaalo me mere ab bhi chali aati hai
Apani palako pe un ashko kaa janaazaa lekar
Tune ninde kari qurabaan meri raaho me
Mai nashe me rahaa gairo kaa sahaaraa lekar
Gam uthaane ke liye mai to jiye jaaungaa
Saans ki lay pe teraa naam liye jaaungaa
Gam uthaane ke liye mai to jiye jaaungaa
Gam uthaane ke liye mai to jiye jaaungaa
Gam uthaane ke liye mai to jiye jaaungaa.

Saturday, 28 December, 2013

ಇದು ನನ್ನ ಮರುಳುತನವೇ

ಹೃದಯದಿಂದ ನಿನಗೆ ಬೇಸರವಿದೆ
ನನಗೆ ಹೃದಯದ ಹೆಮ್ಮೆ ಇದೆ
ನೀನು ಒಪ್ಪು ಒಪ್ಪದಿರು
ಜನರೆಲ್ಲಾ ಖಂಡಿತ ಒಪ್ಪುವರು

!!ಇದು ನನ್ನ ಮರುಳುತನವೇ
ಅಥವಾ ಪ್ರೀತಿಯ ಅಮಲಿದು
ನಿನಗೆ ಗುರುತಿಸಲಾಗಲಿಲ್ಲ ಅಂದರೆ
ನಿನ್ನ ದೃಷ್ಟಿಯ ದೋಷ ಇದು !!
ಇದು ನನ್ನ.....

!!ಹೃದಯಕ್ಕೆ ನಿನ್ನದೇ ಬಯಕೆ
ಹೃದಯಕ್ಕೆ ಒಲವು ನಿನ್ನಿಂದಲೇ
ನೀನು ಬಾ, ಬಾರದಿರು
ನಾನಿರುವೆ ನಿನ್ನನ್ನು ಕಾಯುತ್ತಲೇ!!
ಇದು ನನ್ನ.....

!!ಈ ನಿರ್ಜನದಲಿ ಒಂದು ದಿನ
ಉಸಿರು ಕಟ್ಟಿ ಸಾಯುವೆ ನಾನು
ಮತ್ತೆಷ್ಟು ನೀನು ಕರೆದರೂ
ಮತ್ತೆಂದೂ ಬರಲಾರೆ ನಾನು!!
ಇದು ನನ್ನ.....

ಮೂಲ : ಶೈಲೇಂದ್ರ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಶಂಕರ್ ಜೈ ಕಿಶನ್
ಚಿತ್ರ : ಯಹೂದಿ

dil se tujhko bedili hai, mujhko hai dil ka gurur
tu yeh maane ke na maane, log maanenge jarur
yeh mera diwanapan hai, ya mohabbat ka surur
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai

dil ko teri hi tamanna, dil ko hai tujhse hi pyaar
dil ko teri hi tamanna, dil ko hai tujhse hi pyaar
chaahe tu aaye na aaye, ham karenge intejaar
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai

aise viraane me ek din, ghut ke mar jaayenge ham
aise viraane me ek din, ghut ke mar jaayenge ham
jitna ji chaahe pukaaro, phir nahi aayenge ham
yeh mera diwanapan hai, ya mohabbat ka surur
tu na pehchaane toh hai yeh, teri najro ka kusur
yeh mera diwanapan hai, yeh mera diwanapan hai
http://www.youtube.com/watch?v=AppcdtqKuxE

ಮನದ ಭಾವ

ಒಬ್ಬ ಕವಿಯ 
ಕಣ್ಣೀರು ಬಿತ್ತು
ನೆಲದ ಮೇಲೆ 
ಕವನ ಮೂಡಿತು 

------

ಬರೆದದ್ದನ್ನು
ಯಾರೂ ಓದಲಿಲ್ಲ, 
ಆದರೆ ಕಾಗದ ಹೆಮ್ಮೆಯಲಿ 
ಕವಿ ತೃಪ್ತಿಯಲಿ 

------

ಅವನೇನು 
ಕವಿ ಏನಲ್ಲ 
ಕೇವಲ ಮನ ಸಂತೃಪ್ತಿ 
ಹಾಗು ಸಮಯ ಕಳೆಯಲು ಗೀಚುತ್ತಿದ್ದ 
ಆದರೆ ಕೆಲವೊಮ್ಮೆ 
ಕಾಗದದ ಮೇಲೆ ಕವನ, ಕಥೆ ನಗುತಿತ್ತು 

------

ಬರೆಯುವದು 
ಅವನ ಹವ್ಯಾಸ,
ಓದುಗರಿಲ್ಲ ಎಂಬ 
ಚಿಂತೆ ಅವನಿಗಿಲ್ಲ 

by ಹರೀಶ್ ಶೆಟ್ಟಿ,ಶಿರ್ವ   

ಯಾವಾಗ ಜೀವನ

ಅತಿ ಉತ್ತಮ ಹಿಂದೀ ಚಿತ್ರಪಟ ನಟ ಫಾರೂಕ್ ಶೇಖ್ ಇಂದು ನಮ್ಮನ್ನು ಬಿಟ್ಟು ಅಗಲಿದರು. ಅವರ ಒಂದು ಚಿತ್ರ ಉಮ್ರಾವ್ ಜಾನ್ ಚಿತ್ರದ ಒಂದು ಹಾಡಿನ ಕನ್ನಡ ಅರ್ಥಾನುವಾದ ನನ್ನಿಂದ .
----------------------------

!!ಯಾವಾಗ ಜೀವನ
ನಿನ್ನ ಸನಿಹ ತರುತ್ತದೋ ನನಗೆ-೨
ಈ ಭೂಮಿ ಚಂದ್ರಕ್ಕಿಂತಲೂ
ಸುಂದರ ಕಂಡು ಬರುತ್ತದೆ ನನಗೆ-೨!!

!!ಕಡುಗೆಂಪು ಹೂವಿನಿಂದ
ಸುಗಂಧಿಸುತ್ತದೆ ಹೃದಯದ ಹಾದಿಗಳು-೨
ಇಳಿ ಸಂಜೆಯಲಿ
ನಿನ್ನ ಧ್ವನಿ ಕರೆಯುತ್ತದೆ ನನಗೆ-೨!!
ಈ ಭೂಮಿ .....

!!ನೆನಪು ನಿನ್ನ ಕೆಲವೊಮ್ಮೆ ಚಪ್ಪಾಳೆ
ಕೆಲವೊಮ್ಮೆ ಪಿಸುಮಾತಿನಿಂದ-೨
ನಡು ರಾತ್ರಿಯಲಿ ಪ್ರತಿದಿನ
ಎಬ್ಬಿಸುತ್ತದೆ ನನಗೆ-೨!!
ಈ ಭೂಮಿ .....

!!ಪ್ರತಿ ಭೇಟಿಯ ಪರಿಣಾಮ
ಅಗಲಿಕೆ ಯಾಕೆ ?-೨
ಈಗಂತೂ ಪ್ರತಿ ಸಮಯ
ಇದೇ ಮಾತು ಸತಾಯಿಸುತ್ತದೆ ನನಗೆ-೨!!
ಈ ಭೂಮಿ .....

ಮೂಲ : ಶಹರಿಯಾರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು: ತಲತ್ ಅಜೀಜ್
ಸಂಗೀತ : ಖಯ್ಯಾಮ್
ಚಿತ್ರ : ಉಮ್ರಾವ್ ಜಾನ್


zindagi jab bhi teri bazm mein laati hai hamen
ye zamin chand se behatar nazar aati hai hamen

surkh phulon se mahak uthati hain dil ki rahen
din dhale yun teri aawaz bulaati hai hamen

yaad teri kabhi dastak kabhi saragoshi se
raat ke pichhale prahar roz jagaati hai hamen

har mulaqat ka anjaam judai kyun hai
ab to har vaqt yahi baat satati hai hamen

http://www.youtube.com/watch?v=82tyHLrjuBo

Thursday, 26 December, 2013

ಕಜ್ಜಳ ಕಂಗಳಲಿ

!!ಕಜ್ಜಳ ಕಂಗಳಲಿ
ಸಣ್ಣ ಪುಟ್ಟದೊಂದು
ಕನಸು ನೀಡಿ ಹೋಗಯ್ಯ
ನಿದಿರೆಯ ಹಾರುವ ಹಕ್ಕಿಯೆ
ಕಂಗಳಲ್ಲಿ ಬಾ ಸಂಗಾತಿಯೆ!!

ರಾ ರೀ ರಾ ರೀ ಓ ರಾ ರೀ ರುಮ್, ರಾ ರೀ ರಾ ರೀ ಓ ರಾರೀ ರುಮ್  

!!ನಿಜವಾದ ಯಾವುದೇ
ಕನಸು ನೀಡಿ ಹೋಗಯ್ಯ
ನನಗೆ ಯಾರಾದರು
ನನ್ನವರು ನೀಡಿ ಹೋಗಯ್ಯ
ಅಪರಿಚಿತ
ಆದರೆ ಸ್ವಲ್ಪ ಪರಿಚಿತವಾದ
ಮೃದು ಕೋಮಲ ಇಬ್ಬನಿಯಂತಹ
ರೇಶಿಮೆಕ್ಕಿಂತಲೂ ರೇಶಿಮೆ!

!!ಕಜ್ಜಳ ಕಂಗಳಲಿ
ಸಣ್ಣ ಪುಟ್ಟದೊಂದು
ಕನಸು ನೀಡಿ ಹೋಗಯ್ಯ
ನಿದಿರೆಯ ಹಾರುವ ಹಕ್ಕಿಯೆ
ಕಂಗಳಲ್ಲಿ ಬಾ ಸಂಗಾತಿಯೆ!!

ರಾ ರೀ ರಾ ರೀ ಓ ರಾ ರೀ ರುಮ್, ರಾ ರೀ ರಾ ರೀ ಓ ರಾರೀ ರುಮ್  

!!ರಾತ್ರಿಯ ರಥದಲಿ ಹೋಗುವವರೇ
ನಿದಿರೆಯ ಹನಿ ಸುರಿಯುವವರೇ
ಇಷ್ಟೊಂದು ಮಾಡು
ನನ್ನ ಕಣ್ಣು ತುಂಬಿಸು
ಕಂಗಳಲ್ಲಿ ನೆಲೆಸಿರಲಿ
ಕನಸು ಈ ನಗುತಿರಲಿ!!

!!ಕಜ್ಜಳ ಕಂಗಳಲಿ
ಸಣ್ಣ ಪುಟ್ಟದೊಂದು
ಕನಸು ನೀಡಿ ಹೋಗಯ್ಯ
ನಿದಿರೆಯ ಹಾರುವ ಹಕ್ಕಿಯೆ
ಕಂಗಳಲ್ಲಿ ಬಾ ಸಂಗಾತಿಯೆ!!

ರಾ ರೀ ರಾ ರೀ ಓ ರಾ ರೀ ರುಮ್, ರಾ ರೀ ರಾ ರೀ ಓ ರಾರೀ ರುಮ್    

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಯೇಸುದಾಸ್
ಸಂಗೀತ : ಇಳಯರಾಜ
ಚಿತ್ರ : ಸದ್ಮಾ

Surmayee Ankhiyon Main
Nanha Munna Ek Sapana De Jaa Re
Nindiya Ke Udate Paakhi Re
Ankhiyon Maon Aaja Saathi Re

Raa Rii Raa Ram O Raaree Ram

Sachcha Koi Sapanaa Dejaa 
Mujhako Koi Apanaa Dejaa 
Anajaana Sa, Magar Kuchh Pehchaana Sa
Halka Phulka Shabanami
Resham Se Bhi Reshmi 

Surmayee Ankhiyon Main 
Nanha Munna Ek Sapana De Jaa Re
Nindiya Ke Udate Paakhi Re
Ankhiyon Maon Aaja Saathi Re 

Raa Rii Raa Ram O Raaree Ram 

Raat Ke Rath Par Jaane Vaale 
Neend Ka Ras Barsaane Vaale 
Itana Kar De Ki Meri Aankhen Bhar De 
Ankhon Main Basthaa Rahe, Sapana Ye Hasthaa Rahe

Surmayee Ankhiyon Main 
Nanha Munna Ek Sapana De Jaa Re
Nindiya Ke Udate Paakhi Re
Ankhiyon Maon Aaja Saathi Re

http://www.youtube.com/watch?v=V5qMS-K8eYY

Wednesday, 25 December, 2013

ಈ ಸಂಬಂಧಗಳು

ಸೂಕ್ಷ್ಮ ದಾರ 
ಬಲು ನಾಜೂಕು
ಆದರೂ ತುಂಬಾ ಪ್ರಭಲ 
ಈ ಸಂಬಂಧಗಳು 

ಅದೆಷ್ಟೋ ಕಿತ್ತಾಟ
ಅದೆಷ್ಟೋ ಎಳೆತ 
ಆದರೂ ಮುರಿಯದಂತೆ ಕಾಪಾಡಬೇಕು 
ಈ ಸಂಬಂಧಗಳು 

ಸುಲಭ ಕಠಿಣ
ಹರ್ಷ ವಿಷಾದ
ಅನೇಕ ಸ್ಥಿತಿ ಪರಿಸ್ಥಿತಿಗಳ ಆಗಮನ
ಈ ಸಂಬಂಧಗಳು

ಮೃದು ಕೋಮಲ
ಕೋಪ ತಾಪ,ದುಃಖ ಸಂತಾಪ
ವಿವಿಧ ಭಾವಗಳ ಸಂಗಮ
ಈ ಸಂಬಂಧಗಳು

ಮಾನ ಮರ್ಯಾದೆ
ದೊಡ್ಡವರು ಸಣ್ಣವರು
ಇದರ ಮೂಲ್ಯ ಗೌರವವೇ
ಈ ಸಂಬಂಧಗಳು

by ಹರೀಶ್ ಶೆಟ್ಟಿ,ಶಿರ್ವ

ಭಾವುಕ ಮನಸ್ಷಿನ ರೋಷ

ಅದೇಗೋ ಒಂದೇ ಕ್ಷಣದಲ್ಲಿ ಬದಲಾಗುತ್ತದೆ 
ಈ ಜಗತ್ತಿನ ಸತ್ಯ/ಸುಳ್ಳು ಸಂಬಂಧಗಳು

***

ನಿನಗೆ ಕೊಟ್ಟದ್ದು ನೆನಪಿಲ್ಲ 
ನೀನು ಕೊಟ್ಟದ್ದು ನಿನಗೆ ನೆನಪಿದೆ 
ವಾಹ್ ಜಗತ್ತೇ...

***

ಹೌದು ನಾನು ಭಾವುಕ, ಸ್ವಾಭಿಮಾನಿ
ನಿನ್ನ ಅಥವಾ ಯಾರದ್ದು ಉಪಕಾರ ನಾನು ಬಯಸುವುದಿಲ್ಲ 
ಅದಕ್ಕೇನು ನಾನು ನಿನ್ನ ವೈರಿಯೆ

***

ಹೀಗೆಯೇ ನಿನ್ನ ವ್ಯವಹಾರ ಎಂದಾದರೆ 
ಈ ಸುಳ್ಳು ಸಂಬಂಧ ಇಟ್ಟು ಏನು ಪ್ರಯೋಜನ
ಇಂದೇ ಸಂಕಲ್ಪ ಮಾಡುವ 
ನೀನು ನಿನ್ನ ಹಾದಿಯಲಿ 
ನಾನು ನನ್ನ ಹಾದಿಯಲಿ

***

ಬಿಟ್ಟ ಒಂದೇ ಒಂದು ಬಾಣದಿಂದ ಗಾಯಗೊಂಡಿರುವೆ ನೀನು, ಸರಿ 
ಆದರೆ ನಿನ್ನ ಎಷ್ಟೋ ವ್ಯಂಗ ಬಾಣಗಳನ್ನೆಲ್ಲ ಸಹಿಸಿದ ನನಗೆ, ನೋವಾಗುದಿಲ್ಲವೇ

***

ಹೌದು, ಒಪ್ಪುವೆ ಇಂದಿನ ನನ್ನ ಸ್ಥಿತಿಗೆ ನೀನೆ ಕಾರಣವೆಂದು 
ಆದರೆ ಈ ರೀತಿಯ ಉಪೇಕ್ಷೆ, ನನ್ನಿಂದ ಏನು ತಪ್ಪಾಯಿತೆಂದು?

by ಹರೀಶ್ ಶೆಟ್ಟಿ,ಶಿರ್ವ

Tuesday, 24 December, 2013

ಅಮಲಿನ ದೊಡ್ಡ ಆಸರೆಯಾಗಿದೆ

!!ಅಮಲಿನ ದೊಡ್ಡ ಆಸರೆಯಾಗಿದೆ-೨
ಇಲ್ಲವಾದರೆ ಈ ಜಗತ್ತಿನಲ್ಲಿ ಏನು ನಮ್ಮದಿದೆ
ಜನ ಸಾಯುವರು ಸಾವು ಬಂದಾಗ-೨
ನನಗೆ ಈ ಜೀವನ ಕೊಂದಿದೆ!!
ಅಮಲಿನ.....

!!ಮನುಷ್ಯನಿಗೆ ಏನೂ ಮಾಡಲಾಗುವುದಿಲ್ಲ-೨
ಸಮಯವನ್ನು ಹೀಗೆ ಕಳೆಯಲಾಗುವುದಿಲ್ಲ
ಆದರೆ ಸಮಯ ಹೀಗೆ ಕಳೆದೋಗಿದೆ!!
ಅಮಲಿನ.....

!!ಎಷ್ಟು ಹಗುರ ಎಷ್ಟು ನಾಜೂಕು ಇದು -೨
ಯಾವುದೇ ಹೆಂಗಸಲ್ಲ ಬಾಟಲಿ ಇದು
ಇದರಲ್ಲಿ ಪ್ರಪಂಚ ಅಡಗಿದೆ!!
ಅಮಲಿನ.....

!!ಈ ಭಾಗ್ಯದ ಕ್ರೂರತನ ನೋಡಿ-೨
ಮುಳುಗುತ್ತಿದ್ದೇನೆ ನಾನು ನೋಡಿ
ಹಾಗು ಎದುರಲ್ಲಿಯೇ ಕಿನಾರೆ ಇದೆ!!
ಅಮಲಿನ.....

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಎಸ್ . ಪಿ. ಬಾಲಸುಬ್ರಮಣ್ಯಂ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಎಕ್ ಹಿ ಭೂಲ್

Bekhudi ka bada sahaara hai
varana duniya mein kya hamaara hai
Log marate hain maut aane se
Humko is zindagi ne maara hai
Bekhudi ka bada sahaara hai

Aadami kuchh bhi kar nahin sakata
Vaqt aisa guzar nahin sakata
Vaqt aisa magar guzaara hai
Bekhudi ka bada sahaara hai

Kitani halki hai kitani bojhil hai
Koyi aurat nahin ye botal hai
Band is mein jahaan saara hai
Bekhudi ka bada sahaara hai

Is muqaddar ka ye sitam dekho
Duubate ja rahe hain ham dekho
Aur vo saamane kinaara hai
Bekhudi ka bada sahaara hai
http://www.youtube.com/watch?v=ssfPZCZnkag

ಎಲ್ಲರಿಗೂ ಶುಭವಾಗಲಿ

!!ಎಲ್ಲರಿಗೂ ಶುಭವಾಗಲಿ
ಆನಂದಿಸಿ ಈ ಆನಂದೋಲ್ಲಾಸದ ಸಮಯವನ್ನು
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು!!
ಮರುಳು ನಾನು, ಮರುಳು ನಾನು, ಮರುಳು ನಾನು

!!ಸಾವಿರ ತರಹದ ಇರುತ್ತದೆ
ಈ ಕಣ್ಣೀರು
ಒಂದು ವೇಳೆ ಹೃದಯದಲ್ಲಿ ದುಃಖವಿದ್ದರೆ
ಹರಿಯುತ್ತದೆ ಈ ಕಣ್ಣೀರು
ಖುಷಿಯಲ್ಲೂ ಕಣ್ಣನ್ನು
ತೇವಗೊಳಿಸುತ್ತದೆ ಈ ಕಣ್ಣೀರು
ಅರಿಯಲಾರರು ಈ ಜಗದ ಜನರು ಇದನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು

!!ಈ ಶಹನಾಯಿ ಹರಸುತ್ತಿದೆ
ವಸ್ತೊಂದು ನನ್ನ
ಅನ್ಯರ ಪಾಲಾಗುತ್ತಿದೆ
ಯಾರೊಂದಿಗೆ ಮಿಲನವಾದರೆ
ಯಾರೊಂದಿಗೆ ವಿಯೋಗ
ಹೊಸ ಸಂಬಂಧ ಮುರಿದವು ಹಳೆಯ ನಂಟನ್ನು!!
ನಾನು ಸಂತೋಷದಲ್ಲಿರುವೆ
ನಿರ್ಲಕ್ಷಿಸಿ ಈ ನನ್ನ ಕಣ್ಣೀರನ್ನು
ಮರುಳು ನಾನು, ಮರುಳು ನಾನು, ಮರುಳು ನಾನು

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ : ಮಿಲನ್

mubaarak ho sab ko samaa ye suhaanaa
main khush hun mere aansuon pe na jaanaa
main to deewaanaa,deewaanaa,deewaanaa - 2

hazaaron tarah ke ye hote hain aansu
agar dil men gham ho to rote hain aansu
khushi men bhi aankhen bhigote hain aansu
inhen jaan sakataa nahin ye zamaanaa
main khush hun mere aansuon pe na jaanaa
main to deewaanaa,deewaanaa,deewaanaa 2

ye shahanaaiyaan de rahi hain duhaai
koi cheez apani hui hai paraaI
kisi se milan hai kisi se judaai
nae rishton ne todaa naataa puraanaa
main khush hun mere aansuon pe na jaanaa
main to deewaanaa,deewaanaa,deewaanaa ೨
http://www.youtube.com/watch?v=LV7ETI2Bh3Y

ಕವಿ ಕನ್ನಡಿ

ಖಾಲಿ ಕಾಗದ 
ಹಾಗು ಲೇಖನಿ,
ಚೆಲ್ಲಿದ ಮಸಿ, 
ಮಸಿಯ ವ್ಯಥೆ 
"ಒಂದೊಳ್ಳೆ ಕವಿತೆಯಾಗುವ ಮುನ್ನವೇ..."

by ಹರೀಶ್ ಶೆಟ್ಟಿ, ಶಿರ್ವ 
-------

ಮಾರಟಕ್ಕೆ 
ಮಹಾನ ಕವಿಗಳ 
ಅತ್ಯೋತ್ತಮ ರಚನೆಗಳು
ಆದರೆ ಓದುಗರ ಕೊರತೆ, 
ಗಿರಾಕಿ ಅಂದರೆ 
ಕೆಲವು ಯುವ ಕವಿಗಳು ಅಷ್ಟೇ,
ಪುಸ್ತಕದ ಒಂದು ಕೋಣೆಯಲ್ಲಿ
ಪುಸ್ತಕ ಹುಳುಗಳು ನಿರೀಕ್ಷೆಯಲ್ಲಿ 


-------

ಒಳಗೆ 
ಮಹಾನ ಕವಿಯ 
ಸನ್ಮಾನ ಸಮಾರಂಭ 
ಹೊರಗೆ 
ಬಡ ಕವಿಯ 
ನನ್ನ 
ಕೃತಿಚೌರ್ಯ ಆಯಿತೆಂದು ಗೋಳಾಟ 

by ಹರೀಶ್ ಶೆಟ್ಟಿ, ಶಿರ್ವ 


Monday, 23 December, 2013

ನಾನಿದನ್ನು ಯೋಚಿಸಿ

!!ನಾನಿದನ್ನು ಯೋಚಿಸಿ
ಅವಳ ಮನೆಯಿಂದ ಹೊರಟಿದ್ದೆ
ಅಂದರೆ ಅವಳು ಬಂದು
ನನ್ನನ್ನು ನಿಲ್ಲಿಸುವಲೆಂದು
ನನ್ನ ಮನವೊಲಿಸುವಳೆಂದು!!

!!ಗಾಳಿಯಲಿ ತರಂಗಿತವಾಗಿ
ಸಾಗುತ್ತಿತ್ತು ಹೆಜ್ಜೆಗಳು
ಅಂದರೆ ಅವಳು ಬಂದು
ನನ್ನ ಕಾಲಿಡಿದು
ಕುಳಿತುಕೊಳ್ಳಲು ಹೇಳುವಳೆಂದು!!

!!ನಾನು ಈ ಪ್ರಕಾರ
ನನ್ನ ಹೆಜ್ಜೆಯನ್ನಿಡುತ್ತಿದ್ದೆ
ಅಂದರೆ ಅವಳು ನನ್ನನ್ನು ಕರೆದು
ಹಿಂತಿರುಗಿ ಬರಲೇಳುವಳೆಂದು!!

!!ಆದರೆ...
ನಿಲ್ಲಿಸಲಿಲ್ಲ ಅವಳು
ಮನವೊಲಿಸಲಿಲ್ಲ ಅವಳು
ಕಾಲನ್ನೂ ಹಿಡಿಯಲಿಲ್ಲ
ಕುಳಿತುಕೊಳ್ಳಲೂ ಹೇಳಲಿಲ್ಲ
ನಾನು ಮೆಲ್ಲ ಮೆಲ್ಲನೆ ಮುಂದೆ ಸಾಗುತ್ತಿದ್ದೆ
ಅಲ್ಲಿಯ ತನಕ ಅಂದರೆ
ನಾವು ಒಬ್ಬರಿನ್ನೊಬ್ಬರಿಂದ ಅಗಲಿ ದೂರವಾದೆವು!!
ಅಗಲಿ ದೂರವಾದೆವು
ಅಗಲಿ ದೂರವಾದೆವು
ಅಗಲಿ ದೂರವಾದೆವು
ಅಗಲಿ ದೂರವಾದೆವು

ಮೂಲ : ಕೈಫಿ ಆಜ್ಮಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಮದನ್ ಮೋಹನ್
ಚಿತ್ರ : ಹಕಿಕತ್

 Un un un un un un.........

 Mai yeh sochkar usake dar se utha tha
 Ke woh rok legee mana legee mujhko

 Havao me lahrata aata tha daman
 Ke daman pakadkar bitha legee mujhko

 Kadam aise andaj se uth rahe the
 Ke aavaj dekar bula legee mujhko

 Magar usane roka, naa usane manaya
 Naa daman hee pakada, naa mujhko bithaya
 Naa aavaj hee di, naa vapas bulaya
 Mai aahista aahista badhta hee aaya
 Yahan tak ke us se juda ho gaya mai - (2)
 Juda ho gaya mai - (4)
http://www.youtube.com/watch?v=6p6VvdCuxJM

Sunday, 22 December, 2013

ಪ್ರೀತಿಯಲಿ ಏನೆಲ್ಲ

ಅದೆಷ್ಟೋ ಮುಚ್ಚಿದೆ ಕಂಗಳನ್ನು
ಅದರೂ ನಿನ್ನದೇ ಚಿತ್ರದ ನೋಟ 
-----

ನನ್ನ ಖುಷಿಯ 
ಬೇರುಗಳೆಲ್ಲ
ಮಣ್ಣಿನ ಅಡಿಯಲಿ ದಫನ
ಮೇಲೆ ಬೆಳೆದಿದೆ ಹಸನ್ಮುಖ ಮಿಥ್ಯ ಮರ 
-----

ಸಂಕೋಲೆ ಕಾಣುತ್ತಿಲ್ಲ 
ಆದರೆ 
ನಾನು 
ಪ್ರೀತಿಯ ಬಂಧನದಲಿ
----

ಬಯಕೆಗೆ ಮಿತಿಯಿಲ್ಲ,
ಕೋಟಿ ತಾರೆಗಳ 
ಮಧ್ಯೆ 
ಅವಳನ್ನು ಕಾಣುವ ಬಯಕೆ 
----

ಅವಳು
ಇಕ್ಕಟ್ಟಿನ ಸ್ಥಿತಿಯಲ್ಲಿ,
ಚಿಂತನೆಯಲಿ 
ನನ್ನ 
ಮುಗ್ಧ 
ಪ್ರೀತಿ 
----

ಕನ್ನಡಿಯೆ,
ದಿನ 
ನಿನ್ನಲ್ಲಿ ಕಾಣುವ 
ಪ್ರತಿಬಿಂಬ 
ಇಂದೇಕೆ 
ನಗುತ್ತಿದ್ದಂತೆ ಕಾಣುತ್ತಿದೆ 
----

ತುಂಬಾ ತಾಪತ್ರಯದ 
ನಂತರ 
ಅವಳೀಗ ನನ್ನ ಬಾಹುಗಳಲ್ಲಿ,
ನಾನು 
ಜೀವನದ 
ಶಿಖರದಲಿ 

by ಹರೀಶ್ ಶೆಟ್ಟಿ, ಶಿರ್ವ 

ಇಳಿ ಸಂಜೆಯಲಿ

!!ಇಳಿ ಸಂಜೆಯಲಿ
ಗಗನದಡಿಯಲಿ
ಇಳಿ ಸಂಜೆಯಲಿ
ಗಗನದಡಿಯಲಿ
ನಾನೆಷ್ಟು ಏಕಾಂಗಿ
ಬಿಟ್ಟೋಯಿತು ಕಂಗಳನ್ನು ಕಿರಣದ ಹಕ್ಕಿ!!
ಇಳಿ ಸಂಜೆಯಲಿ...

!!ಎಲೆಗಳ ಜಾಲದಿಂದ
ಇಣುಕುತ್ತಿತ್ತು ಹೂ ಮೊಗ್ಗುಗಳು
ಎಲೆಗಳ ಜಾಲದಿಂದ
ಇಣುಕುತ್ತಿತ್ತು ಹೂ ಮೊಗ್ಗುಗಳು
ಸುಗಂಧದ ಉತ್ಸಾಹದಲಿ
ಮಗ್ನವಾಗಿತ್ತು ಈ ಹೂ ಮೊಗ್ಗುಗಳು
ಇಷ್ಟಕ್ಕೆ ಕತ್ತಲೆ ಕವಿಯಿತು
ಕನಸು ತುಂಬಿದ ಕಂಗಳಲ್ಲಿ
ಮೊಗ್ಗುಗಳ ಕಣ್ಣೀರಿಗೆ
ಯಾರಿಲ್ಲ ಜತೆಯಲ್ಲಿ!!
ಬಿಟ್ಟೋಯಿತು...

!!ಮಿಂಚುಳುವಿನ ವಸ್ತ್ರ ಧರಿಸಿ
ರಾತ್ರಿ ಈಗ ಬರುವುದು
ಮಿಂಚುಳುವಿನ ವಸ್ತ್ರ ಧರಿಸಿ
ರಾತ್ರಿ ಈಗ ಬರುವುದು
ನಿಶಿಗಂಧ ಹೂವಿನ ರಾಗದಲಿ
ಮಾತೆಲ್ಲ ಹೇಳುವುದು
ನಿಶಿಗಂಧ ಹೂವಿನ ರಾಗದಲಿ
ಮಾತೆಲ್ಲ ಹೇಳುವುದು
ಕಂಪಿಸುತ್ತಿದೆ ಮನಸ್ಸು
ಮಾವಿನ ಶಾಖೆಯಂತೆ!!
ಬಿಟ್ಟೋಯಿತು...

ಮೂಲ : ವಸಂತ್ ದೇವ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು: ಸುರೇಶ ವಾಡಕರ್
ಸಂಗೀತ :ಲಕ್ಷ್ಮಿ ಕಾಂತ್ ಪ್ಯಾರೇಲಾಲ್
ಚಿತ್ರ :ಉತ್ಸವ್

saajh dhale gagan tale
saajh dhale gagan tale ham kitne ekaaki
chhod chale nayano ko kirano ke pakhi
saajh dhale gagan tale ham kitne ekaaki

path ki jaali se jhaak rahi thi kaliyaa
path ki jaali se jhaak rahi thi kaliyaa
gandh bhari gungun me magan hui thi kaliya
itne me timir dasa sapne le nayno me
kaliyo ke aansuo kaa koi nahi saathi
chhod chale nayano ko kirano ke pakhi
saajh dhale gagan tale ham kitne ekaaki

juganu kaa pat odhe aayegi raat abhi
juganu kaa pat odhe aayegi raat abhi
nishigandha ke sur me kah degi baat sabhi
nishigandha ke sur me kah degi baat sabhi
kapata hai man jaise daali ambavaa ki
chhod chale nayano ko kirano ke pakhi
saajh dhale gagan tale ham kitne ekaaki
saajh dhale gagan tale ham kitne ekaaki

Saturday, 21 December, 2013

ಎಲ್ಲಿಂದ ಬಂತು ಮೇಘೆ

!!ಎಲ್ಲಿಂದ ಬಂತು ಮೇಘೆ
ಕರಗಿತೆಲ್ಲ ಕಣ್ಣ ಕಾಡಿಗೆ!!

!!ಕಣ್ರೆಪ್ಪೆಯ ಸಪ್ತವರ್ಣ ದೀಪಗಳು
ಆಗೋಯಿತು ಕಣ್ಣೀರ ಸಾಲುಗಳು
ಮುತ್ತಿನ ಬಹುಮೂಲ್ಯ ವಜ್ರ
ಸೇರಿಹೋಯಿತು ಮಣ್ಣಿಗೆ!!
ಎಲ್ಲಿಂದ ಬಂತು ಮೇಘೆ...

!!ನಿದಿರೆ ನಲ್ಲನ ಸಂಗ ಅಗಲಿತು
ಕನಸಿನ ಒಣಗಿದ ಹೂಗಲಿತ್ತು
ಅಮೃತ ಅಧರಕ್ಕೆ ಬಂದಾಗ
ಪರಿವರ್ತಿಸಿತು ವಿಷಕ್ಕೆ!!
ಎಲ್ಲಿಂದ ಬಂತು ಮೇಘೆ...

!! ಮೇಘಗಳಿಳಿದು ಹೃದಯದಲಿ ಆವರಿಸಿತು
ಕ್ರೂರ ಹೊಯ್ಗಾಳಿಯಿಂದ ತಾಪ ಏರುತ್ತಿತ್ತು
ಸುರಿಯಿತು ಈಗಂತೂ ನಿನ್ನಿಂದ ವರ್ಷ
ಅಳುತ್ತಿದೆ ಮನಸ್ಸು ಮರುಳು!!
ಎಲ್ಲಿಂದ ಬಂತು ಮೇಘೆ...

ಮೂಲ : ಇಂದೂ ಜೈನ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಯೇಸುದಾಸ್ , ಹೆಮಂತಿ ಶುಕ್ಲಾ
ಸಂಗೀತ : ರಾಜ್ ಕಮಲ್
ಚಿತ್ರ : ಚಷ್ಮೆ ಬದ್ದೂರ್


कहाँ से आए बदरा
घुलता जाए कजरा

पलकों के सतरंगे दीपक
बन बैठे आँसू की झालर
मोती का अनमोलक हीरा
मिट्टी में जा फिसला
कहाँ से आए बदरा...

नींद पिया के संग सिधारी
सपनों की सूखी फुलवारी
अमृत होठों तक आते ही
जैसे विष में बदला
कहाँ से आए बदरा...

उतरे मेघ या फिर छाये
निर्दय झोंके अगन बढ़ाये
बरसे हैं अब तोसे सावन
रोए मन है पगला
कहाँ से आये बदरा...
http://www.youtube.com/watch?v=q_Q4O_QR9HA

Wednesday, 18 December, 2013

ನೀನೇ ನೀನೇ

ನೀನೇ ನೀನೇ
ಸಪ್ತವರ್ಣಿ ರೂಪಿಣಿಯೇ
ನೀನೇ ನೀನೇ
ಮನಸ್ಸ ಬಣ್ಣಗಾರತಿಯೇ
ಹೃದಯದ ನೆರಳು ನಿನ್ನೆರಳು
ಸಪ್ತವರ್ಣಿ ರೂಪಿಣಿಯೇ
ಮನಸ್ಸ ಬಣ್ಣಗಾರತಿಯೇ

ನೀನು ಸುಂದರಿ
ಯಾಕೆ ದೂರವಿರುವಿ
ನಿನ್ನದೇ ಭಾವಗಳು
ನೀನಿರುವಾಗ ಸನಿಹದಲಿ
ಸಪ್ತವರ್ಣಿ ರೂಪಿಣಿಯೇ
ಯಾವುದೇ ಕನಸೆ
ಅಥವಾ ನೆರಳೆ ನೀನು
ಸಪ್ತವರ್ಣಿ ರೂಪಿಣಿಯೇ
ಸಪ್ತವರ್ಣಿ ರೂಪಿಣಿಯೇ
ಈಗಂತೂ ಹೇಳು
ಈ ಚಂಡಮಾರುತ ಹೋಗಿ ನಿಲ್ಲುವುದೆಲ್ಲಿ ?

(ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು, ಘಾಲಿಬ್
ಒಂದು ಬೆಂಕಿಯ ಸಾಗರ ಇದು

ಹತ್ತಿಸಿಯೂ ಹತ್ತಿಸಲಾಗದ
ನಂದಿಸಿಯೂ ನಂದಿಸಲಾಗದ

ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು,ಘಾಲಿಬ್
ಒಂದು ಬೆಂಕಿಯ ಸಾಗರ ಇದು)

ಅವಳ ಕಂಗಳು
ಹೀಗೆ ಸ್ಪರ್ಶಿಸಿತು ನನ್ನನ್ನು
ಮೆಲ್ಲ ಮೆಲ್ಲ
ಸಮ್ಮೋಹಿತನಾದೆ ನಾನು
ಮೆಲ್ಲ ಮೆಲ್ಲ
ಸಮ್ಮೋಹಿತನಾದೆ ನಾನು
ಹೃದಯಕ್ಕಾಯಿತು ಈ ಅನುಭವ
ನೀನೇ ನೀನೇ
ಬದುಕುವ ಸುಗಂಧವೊಂದು
ನೀನೇ ನೀನೇ
ಬಯಕೆಯೊಂದು ಬಯಕೆಯೊಂದು
ನಿನ್ನ ಮೈಯ ತಾಪ ಸ್ಪರ್ಶಿಸುತ್ತಲೇ
ನನ್ನ ಉಸಿರು ಉರಿಯಲಾರಂಭಿಸುತ್ತದೆ
ನನಗೆ ಪ್ರೀತಿ ಆಶ್ವಾಸನೆ ನೀಡುತ್ತದೆ
ನನ್ನ ನೋವು ಕರಗಲಾರಂಭಿಸುತ್ತದೆ

ನೀನೇ ನೀನೇ
ಬದುಕುವ ಸುಗಂಧವೊಂದು

ನೀನೇ ನೀನೇ
ಬಯಕೆಯೊಂದು ಬಯಕೆಯೊಂದು

ಸ್ಪರ್ಶಿಸುವೆ ನೀ ನನ್ನನ್ನು ಗುಟ್ಟಿನಿಂದ
ಕಂಗಳಲ್ಲಿ ಮಿಶ್ರವಾಗಿದ ಮೌನದಿಂದ
ನಾನು ನೆಲದ ಮೇಲೆ ಕುಳಿತು ಪ್ರಾರ್ಥಿಸುವೆ
ಸ್ವಲ್ಪ ಪ್ರಜ್ಞೆಯಲಿ ಸ್ವಲ್ಪ ಪ್ರಜ್ಞಾಹೀನತೆಯಲಿ

ನೀನೇ ನೀನೇ......

ನಿನ್ನ ಹಾದಿಯಲಿ ಸಿಕ್ಕಿಕೊಂಡಿರುವೆ
ನಿನ್ನ ಬಾಹುಗಳಲ್ಲಿ ಸಿಕ್ಕಿಕೊಂಡಿರುವೆ
ಬಿಡಿಸಲು ಬಿಡು ಈ ಬಂಧನವನ್ನು
ನಿನ್ನ ಅಪೇಕ್ಷೆಯಲಿ ಸಿಕ್ಕಿಕೊಂಡಿರುವೆ
ಬದುಕುವುದು ಅನುರಾಗ ನನ್ನ
ಸಾಯುವುದು ಅನುರಾಗ ನನ್ನ

ಈಗ ಇದರ ಹೊರತು ಆರಾಮವೇನಿಲ್ಲ
ನೀನೇ ನೀನೇ ಸಪ್ತವರ್ಣಿ ರೂಪಿಣಿಯೇ
ನೀನೇ ನೀನೇ ಮನಸ್ಸ ಬಣ್ಣಗಾರತಿಯೇ
ನೀನೇ ನೀನೇ.........

(ಪ್ರೀತಿಯ ಮೇಲೆ ಹಿಡಿತವಿಲ್ಲ ಯಾರದ್ದು,ಘಾಲಿಬ್
ಒಂದು ಬೆಂಕಿಯ ಸಾಗರ ಇದು
ಹತ್ತಿಸಿಯೂ ಹತ್ತಿಸಲಾಗದ,ನಂದಿಸಿಯೂ ನಂದಿಸಲಾಗದ)

ನನಗೆ ಮರಣದ ಮಡಿಲಲ್ಲಿ ಮಲಗಲು ಬಿಡು
ನಿನ್ನ ಅತ್ಮದಲಿ ದೇಹ ಸೇರಿಸಲು ಬಿಡು
ಸಪ್ತವರ್ಣಿ ರೂಪಿಣಿಯೇ
ಮನಸ್ಸ ಬಣ್ಣಗಾರತಿಯೇ

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಸೋನು ನಿಗಮ್ , ಕವಿತಾ ಕೃಷ್ಣಮೂರ್ತಿ
ಸಂಗೀತ : ಎ. ಆರ್ . ರೆಹಮಾನ್
ಚಿತ್ರ : ದಿಲ್ ಸೆ

Tu Hi Tu Tu Hi Tu Satrangi Re 
Tu Hi Tu Tu Hi Tu Manrangi Re 
Tu Hi Tu Tu Hi Tu Satrangi Re 
Tu Hi Tu Tu Hi Tu Manrangi Re 
Dil Ka Saaya Humsaaya Satrangi Re Manrangi Re 
Koi Noor Hai Tu Kyon Door Hai Tu 
Jab Paas Hai Tu Ehsaas Hai Tu 
Koi Khwaab Hai Ya Phir Parchhai Satrangi Re 
Satrangi Re 
Is Baar Bata Munh Zor Hava Thehregi Kahan 
Ishq Kar Zor Nahin Hai Ye Voh Aatish Ghalib 
Jo Lagaye Na Lage Aur Bujhaye Na Bane 
Jo Lagaye Na Lage Aur Bujhaye Na Bane 
Ishq Kar Zor Nahin Hai Ye Voh Aatish Ghalib 
Aankhone Ne Kuchh Aisa Chhua Halka Halka Uns Hua 
Halka Halka Uns Hua Dil Ko Mehsoos Hua 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Tere Jism Ki Aanch Ko Chhoote Hi 
Mere Saans Sulagne Lagte Hain 
Mujhe Ishq Dilaase Deta Hai 
Mere Dard Pilaghne Lagte Hain 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Chhooti Hai Mujhe Sargoshi Se 
Aankhon Mein Ghuli Khaamoshi Se 
Main Farsh Pe Sajde Karta Hoon 
Kuchh Hosh Mein Kuch Behoshi Se 
Dil Ka Saaya Humsaaya Satrangi Re Manrangi Re 
Koi Noor Hai Tu Kyon Door Hai Tu 
Jab Paas Hai Tu Ehsaas Hai Tu 
Koi Khwaab Hai Ya Phir Parchhai Satrangi Re 
Teri Raahon Mein Uljha Uljha Hoon 
Teri Baahon Mein Uljha Hoon 
Suljhaane De Hosh Mujhe 
Teri Chaahon Mein Uljha Hoon 
Teri Raahon Mein Uljha Uljha Hoon 
Teri Baahon Mein Uljha Hoon 
Suljhaane De Hosh Mujhe 
Teri Chaahon Mein Uljha Hoon 
Mera Jeena Junoon Mera Marna Junoon 
Ab Iske Siva Nahin Koi Sukoon 
Mera Jeena Junoon Mera Marna Junoon 
Ab Iske Siva Nahin Koi Sukoon 
Mera Jeena Junoon Mera Marna Junoon 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Tu Hi Tu Tu Hi Tu Jeene Ki Saari Khushboo 
Tu Hi Tu Thu Hi Tu Aarzoo Aarzoo 
Ishq Kar Zor Nahin Hai Ye Voh Aatish Ghalib 
Jo Lagaye Na Lage Aur Bujhaye Na Bane 
Jo Lagaye Na Lage Aur Bujhaye Na Bane 
Ishq Kar Zor Nahin Hai Ye Voh Aatish Ghalib 
Mujhe Maut Ki Goad Mein Sone De 
Mujhe Maut Ki Goad Mein Sone De 
Mujhe Maut Ki Goad Mein Sone De 
Teri Rooh Mein Jism Dibone De 
Teri Rooh Mein Jism Dibone De 
Satrangi Re Manrangi Re 
Satrangi Re Manrangi Re
http://www.youtube.com/watch?v=wqNgdlNK3Fo

Tuesday, 17 December, 2013

ಈ ಪ್ರೀತಿಯಲಿ ಹೀಗೇಕಾಗುತ್ತದೆ

ಈ ಪ್ರೀತಿಯಲಿ ಹೀಗೇಕಾಗುತ್ತದೆ

ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ
ಯಾಕೆ ಯಾರಿಗೂ
ಉಪಕಾರದ ಬದಲು ಉಪಕಾರ ಸಿಗುವುದಿಲ್ಲ
ಯಾಕೆ ಯಾರಿಗೂ
ಖುಷಿಯ ಬದಲು ಖುಷಿ ಸಿಗುವುದಿಲ್ಲ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಪ್ರೀತಿ ಎಷ್ಟೊಂದು ಕಣ್ಣೀರು ಹರಿಸುವುದು
ಎಲ್ಲಾ ಜಗವನ್ನು ಮರೆಸುವುದು
ಚಡಪಡಿಕೆ ಏರಿಸುವುದು
ನೆಮ್ಮದಿ ಒಂದು ಕ್ಷಣವೂ ಬರದು
ಜನರು ಪ್ರೀತಿಯಲಿ ಏನಿಂದ ಏನಾದರು
ಎಂದೋ ಭೇಟಿಯಾಗಿ
ನಂತರೊಂದು ದಿನ ಅಗಲಿದರು
ಕೇವಲ ಶಿಶಿರ ಸಿಕ್ಕಿದೆ ಈ ವಸಂತದಲಿ
ಕಾಲ ಕಳೆಯುತ್ತಿದೆ ನಿರೀಕ್ಷೆಯಲಿ

ಯಾಕೆ ಯಾರಿಗೂ
ನಗುವಿನ ಬದಲು ನಗು ಸಿಗುವುದಿಲ್ಲ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಈ ಕ್ಷಣ ಎಂದೂ ನಿಲ್ಲಲಿಲ್ಲ
ನೆನಪಲ್ಲಿ ಯಾರದ್ದೂ ಕಾವಲಿಲ್ಲ

ಔಷದಿಯಿಂದಲೂ
ಗಾಯ ಗುಣವಾಗದಿದ್ದರೆ ಎಂದೂ
ಆ ಅವಸ್ಥೆಯಲಿ ಯೋಚಿಸಿ
ಯಾರಾದರೂ ಏನು ಮಾಡುವುದೆಂದು

ಯಾಕೆ ಯಾರಿಗೂ
ಖುಷಿಯ ಬದಲು ಖುಷಿ ಸಿಗುವುದಿಲ್ಲ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಈ ಪ್ರೀತಿಯಲಿ ಹೀಗೇಕಾಗುತ್ತದೆ
ಈ ಪ್ರೀತಿಯಲಿ ಹೀಗೇಕಾಗುತ್ತದೆ
ಯಾಕೆ ಯಾರಿಗೂ
ನಿಷ್ಠೆಯ ಬದಲು ನಿಷ್ಠೆ ಸಿಗುವುದಿಲ್ಲ

ಮೂಲ :ಸಮೀರ್
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಉದಿತ್ ನಾರಾಯಣ್
ಸಂಗೀತ : ಹಿಮೇಶ್ ರೇಶಮಿಯಾ
ಚಿತ್ರ : ತೆರೆ ನಾಮ್
Ye Pyaar Mein Kyun Hotaa Hai
Hun Aa Aa Aa Aa Haan..

La La La La La La La La La La La, La La La La
Kyun Kisi Ko Vafaa Ke Badle Vafaa Nahin Milti
Kyun Kisi Ko Duaa Ke Badle Duaa Nahin Milti
Kyun Kisi Ko Khushi Ke Badle Khushi Nahin Milti
Ye Pyaar Mein Kyun Hotaa Hai
Ye Pyaar Mein Kyun Hotaa Hai
Kyun Kisi Ko Vafaa Ke Badle Vafaa Nahin Milti

Ishq Kitnaa Rulaaye Saari Duniyaa Bhulaaye
Beqaraari Badaaye Chain Ek Pal Na Aaye
Log Ishq Mein Kyaa Se Kyaa Hue
Mil Gaye Kabhi Phir Judaa Hue
Bas Khizaan Mili Is Bahaar Mein
Umr Kat Rahi Intazaar Mein..

Kyun Kisi Ko Hansi Ke Badle Hansi Nahin Milti
Kyun Kisi Ko Vafaa Ke Badle Vafaa Nahin Milti.

Aa Aa Aa Aa Aa Aa Aa Aa Aa Aa

Ni Dha Ni Sa Sa Ga Re Ma Pa Ga Re Ga Sa
Ni Dha Ni Sa Ga Sa

Ye Pal Kahin Thahraa Nahin
Yaadon Pe To Pahraa Nahin..

Jab Davaa Se Bhi Zakhm Na Bhare
Aise Haal Mein Socho Koi Kyaa Kare

Kyun Kisi Ko Khushi Ke Badle Khushi Nahin Milti
Kyun Kisi Ko Vafaa Ke Badle Vafaa Nahin Milti...

Ye Pyaar Mein Kyun Hotaa Hai..
Ye Pyaar Mein Kyun Hotaa Hai ...
Kyun Kisi Ko Vafaa Ke Badle Vafaa Nahin Milti.
http://www.youtube.com/watch?v=SaYKTDFEZgM

ಯಾವುದೇ ಸಾಗರ


!!ಯಾವುದೇ ಸಾಗರ
ಹೃದಯ ತಣಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ
ಯಾವುದೇ ಸಾಗರ
ಹೃದಯ ತಣಿಸುವುದಿಲ್ಲ!!

!!ನಾನೊಂದು ಯಾವುದೇ ಕಲ್ಲಲ್ಲ
ಮನುಷ್ಯನಾಗಿದ್ದೇನೆ
ಹೇಗೆ ಹೇಳಲಿ
ಕಷ್ಟದಿಂದ ಹೆದರುವುದಿಲ್ಲ!!
ಯಾವುದೇ ಸಾಗರ
ಹೃದಯ ತಣಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

!!ನಿನ್ನೆಯಂದು ಎಲ್ಲರಿದ್ದರೂ
ಪ್ರವಾಸದಲಿ ಒಟ್ಟಿಗೆ
ಇಂದು ಯಾರೂ
ಹಾದಿ ತೋರಿಸುವುದಿಲ್ಲ!!
ಯಾವುದೇ ಸಾಗರ
ಹೃದಯ ತಣಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

!!ಜೀವನದ ಕನ್ನಡಿಯನ್ನು
ಮುರಿಯಿರಿ
ಇದರಲ್ಲಿ ಈಗ ಏನೂ
ಕಂಡು ಬರುವುದಿಲ್ಲ!!
ಯಾವುದೇ ಸಾಗರ
ಹೃದಯ ತಣಿಸುವುದಿಲ್ಲ
ಏಕಾಂತದಲ್ಲೂ
ನೆಮ್ಮದಿ ಸಿಗುವುದಿಲ್ಲ

ಮೂಲ : ಶಕೀಲ್ ಬದಯೂನ್ವಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ನೌಶಾದ್
ಚಿತ್ರ : ದಿಲ್ ದಿಯಾ ದರ್ದ್ ಲಿಯಾ


Koi sagar, dil ko behlata nahin,
Koi sagar, dil ko behlata nahin,
Baykhudi mein bhi, qarar aata nahin,
Koi sagar, dil ko behlata nahin,

Main, koi, pathar nahin,
insaan hoon, Kaise kehdoon,
Ghum se ghabrata nahin,

Koi sagar, dil ko behlata nahin,
Baykhudi mein bhi, qarar aata nahin,

Kal tu sab thhey, karavan ke, saath saath,
Kal tu sab they, karavan ke, saath saath,
Aaj koi, raha dikhlata nahin,

Koi sagar, dil ko behlata nahin,
Baykhudi mein bhi, qarar aata nahin,

Zindagi keh, aainay ko, tod doo,
Zindagi keh, aainay ko, tod doo,
Es mein aab, kuch bhi, nazar aata nahin,

Koi sagar, dil ko behlata nahin,
Baykhudi mein bhi, qarar aata nahin,
Koi sagar, dil ko behlata nahin
http://www.youtube.com/watch?v=4BFWC8Cl1QM

Monday, 16 December, 2013

ನೂರು ರೂಪಾಯಿ


ಮಗ ಚಳಿಗಾಲದ ರಜೆಯಲ್ಲಿ ಮನೆಯಲ್ಲಿದ್ದ, ದಿನಾ ನಾನು ಕೆಲಸದಿಂದ ಬಂದ ಕೂಡಲೇ "ಪಪ್ಪಾ, ಬನ್ನಿ ಹೊರಗೆ ಹೋಗಿ ಬರುವ" ಎಂದು ಹಿಂದೆ ಬೀಳುತ್ತಿದ, ಆದರೆ ನಾನು ಏನಾದರೂ ನೆಪ ಮಾಡಿ ಮುಂದೂಡುತ್ತಿದ್ದೆ. ಒಂದು ದಿವಸ ಕೆಲಸದಿಂದ ಬಂದ ನಂತರ ಏನೋ ನನಗೆ ಸಹ ಸ್ವಲ್ಪ ತಿರುಗಿ ಬರುವ ಎಂದು ಮನಸ್ಸಾಯಿತು, ನಾನು ಕೆಲಸದಿಂದ ಬಂದ ಕೂಡಲೇ ಸುಮಾಳಿಗೆ "ಬೇಗ ರೆಡಿ ಆಗಿ, ನಾವು ಇಂದು ಸ್ವಲ್ಪ ಮಾಲ್ ತಿರುಗಿ ಬರುವ" ಎಂದು ಹೇಳಿದೆ. ಮಗ  ಖುಷಿಯಿಂದ "ಹುರಾ" ಎಂದ, ಸುಮಾಳಿಗೆ ಆಶ್ಚರ್ಯವಾದರೂ ಕಿರುನಗೆ ಬೀರಿ ಇಬ್ಬರು ರೆಡಿ ಆಗಲು ಹೋದರು.

ನಾವು ಹೀಗೆಯೇ ಮಾಲ್'ಲ್ಲಿ ತಿರುಗುವಾಗ, ಒಬ್ಬಾತ ನನ್ನನ್ನು ಧ್ಯಾನದಿಂದ  ನೋಡುತ್ತಿದಂತೆ ನನಗೆ ಭಾಸವಾಯಿತು. ಆದರೆ ನಾನು ಅವನನ್ನು ನೋಡದಂತೆ ಮಾಡಿ ಮುಂದೆ ನಡೆದೆ, ಸ್ವಲ್ಪ ಮುಂದೆ ಹೋದ ನಂತರ ಹಠಾತ್  ನನಗೆ ಏನೋ ಹೊಳೆದಂತಾಯಿತು, ನಾನು ಹಿಂತಿರುಗಿ ಅವನನ್ನು ನೋಡಿದೆ, ಅವನು ನನ್ನನ್ನು ನೋಡಿ ನಗೆ ಬೀರಿದ. "ಹೌದು ಇದು ಅವನೇ ಬಷೀರ್ " ಎಂದು ನಾನು ಮನಸ್ಸಲ್ಲೇ ನುಡಿದೆ.
                          ***
ನನಗೆ ಬಾಲ್ಯದ ಶಾಲೆಯ ನೆನಪಿನ ಪುಟ ತೆರೆದಂತಾಯಿತು.

ಬಷೀರ್ ಮತ್ತು ನಾನು ಒಂದೇ ಶಾಲೆಯಲ್ಲಿ ,ಒಂದೇ ಕ್ಲಾಸ್ಸಲ್ಲಿ ಓದುತ್ತಿದ್ದೆವು. ಬಷೀರ್ ಕ್ಲಾಸ್ಸಲ್ಲಿ ತುಂಬಾ ಮೌನವಾಗಿರುತ್ತಿದ್ದ, ಯಾರ ಹತ್ತಿರ ಸಹ ಅವನು ಹೆಚ್ಚು ಮಾತನಾಡುತ್ತಿರಲಿಲ್ಲ. ನನ್ನ ಹತ್ತಿರ ಸಹ ಬೇಕಾದಷ್ಟೇ ಮಾತನಾಡುತ್ತಿದ್ದ.
ಆದರೆ ನಮ್ಮಲ್ಲಿ ಒಳ್ಳೆ ಸ್ನೇಹ ಇತ್ತು.
ಆದರೆ ಒಂದು ದಿವಸ.....
ನಾವು ಏಳನೇ ಕ್ಲಾಸ್ಸಲ್ಲಿರುವಾಗ ಒಂದು ದಿನ ನಮ್ಮ ಕಬಡ್ಡಿ  ಪಂದ್ಯ  ಇತ್ತು, ನಾನು ಮತ್ತು ಬಷೀರ್ ಬೇರೆ ಬೇರೆ ಟೀಮ್'ಲ್ಲಿ ಇದ್ದೆವು, ಆಟದ ಮಧ್ಯೆ ಬಷೀರ್'ನ ಕೈ ನನ್ನ ಮುಖಕ್ಕೆ ಜೋರಿನಿಂದ ತಾಗಿತು, ಆ ಸಮಯ ನನಗೆ ಅವನು ಬೇಕೆಂದೇ ಹೊಡೆದ ಎಂದು ತಿಳಿದು ನಾನು ಸಹ ಅವನಿಗೆ ಹೊಡೆದೆ, ಅ ನಂತರ ನಾವಿಬ್ಬರು ಹೊಡೆದಾಡಲು ಶುರು ಮಾಡಿದೆವು, ಹೊಡೆದಾಡುವಾಗ ನನ್ನಿಂದ ಅವನ ಅಂಗಿಯ ಕಿಸೆ ಹರಿದು, ಅವನ ಕಿಸೆಯಲ್ಲಿದ ಕಾಗದದ ತುಂಡು ಸಹ ಹರಿದು ಕೆಳಗೆ ಬಿತ್ತು. ನಮ್ಮ ಹೊಡೆದಾಟ ಕಂಡು ಟೀಚರ್ ಬಂದು ನಮ್ಮಿಬ್ಬರಿಗೂ ಒಂದೊಂದು ಹೊಡೆದು ಬಿಡಿಸಿದರು. ಆ ನಂತರ ನಮ್ಮ ಮಾತುಕತೆ ನಿಂತು ಹೋಯಿತು, ನಾನು ಅವನತ್ರ ಒಂದೆರಡು ಸಲ ಮಾತನಾಡಲು ಪ್ರಯತ್ನಿಸಿದೆ, ಆದರೆ ಅವನು ಪ್ರತಿಕ್ರಿಯಸಲಿಲ್ಲ.  ಅವನಿಗೆ ತುಂಬಾ ನೋವಾಗಿರಬೇಕು ಏನೋ ಎಂದು ನಾನು ಸಹ ನಂತರ ನನ್ನ ಪ್ರಯತ್ನ ನಿಲ್ಲಿಸಿದೆ, ಆದರೆ  ಅದರ ನಂತರ ಮೂರು ವರ್ಷ ಒಟ್ಟಿಗೆ ಒಂದೇ ಕ್ಲಾಸ್ಸಲ್ಲಿದ್ದು ಸಹ ನಮ್ಮ ಮಧ್ಯೆ ಮಾತಿರಲಿಲ್ಲ, ಇದರ ನನಗೆ ಎಲ್ಲೊ ಒಂದು ಮನಸ್ಸಲ್ಲಿ ಬೇಸರವಿತ್ತು. ಹತ್ತನೇ ಕ್ಲಾಸ್ ಮುಗಿದ ನಂತರ ನಾವೆಲ್ಲಾ ಮಕ್ಕಳು ಬೇರೆ ಬೇರೆ ಕಾಲೇಜ್ ಸೇರಿ ನಂತರ ಯಾರೆಲ್ಲಿ , ಯಾರೆಲ್ಲಿ. ಬಷೀರ್ ಸಹ ಆ ನಂತರ ಎಲ್ಲಿ ಯಾವ ಕಾಲೇಜ್ ಸೇರಿದ ಎಂದು ನನಗೆ ತಿಳಿಯಲಿಲ್ಲ .
                          ***
ನೆನಪಿನಂಗಳದಿಂದ ಹೊರ ಬಂದೆ.

ನಾನು ಸ್ವಲ್ಪ ಅನುಮಾನವಿದ್ದರೂ ಏನೋ ಖುಷಿಯಿಂದ ನಾನು ಅವನತ್ತ ಸಾಗಿದೆ. ನಾನು ಅವನ ಬಳಿ ಹೋಗಿ " ಬಷೀರ್" ಎಂದೆ, ಅವನು ಸಂತೋಷದಿಂದ "ಗುರುತಿಸಿದೆ ಅಲ್ಲ ನನ್ನನ್ನು" ಎಂದು ಹೇಳಿದ. ತುಂಬಾ ಅತ್ಮಿಯತೆಯಿಂದ ನಾವಿಬ್ಬರು ಒಬ್ಬರನೊಬ್ಬರನ್ನು ಅಪ್ಪಿಕೊಂಡೆವು. ಸುಮಾ ಹಾಗು ಮಗ ಸಹ ನಮ್ಮನ್ನು ನೋಡಿ ಬಳಿ ಬಂದರು. ನಾನು ಅವರಿಗೆ "ಸುಮಾ, ಇದು ನನ್ನ ಶಾಲೆಯ ಸಹಪಾಠಿ "ಬಷೀರ್" , ಹತ್ತನೇ ಕ್ಲಾಸ್ ತನಕ ನಾವಿಬ್ಬರು ಒಂದೇ ಕ್ಲಾಸ್'ಲ್ಲಿ ಕಲಿತದ್ದು"ಎಂದು ಅವನನ್ನು ಪರಿಚಯಿಸಿದೆ.
ನಾವು ಅಲ್ಲಿಯೇ ಫುಡ್ ಕೋರ್ಟ್'ಲ್ಲಿ ತುಂಬಾ ಸಮಯ ತನಕ ಮಾತನಾಡಿ, ಒಬ್ಬರನೊಬ್ಬರ ವಿಷಯ ತಿಳಿದುಕೊಂಡೆವು. ಅವನ ಸಹ ಮದುವೆ ಆಗಿ ಕೆಲವು ವರ್ಷ ಆಗಿತ್ತು, ಆದರೆ ಅವನ ಫ್ಯಾಮಿಲಿ ಇಂಡಿಯಾದಲ್ಲಿ ಇದ್ದರು, ಅವನಿಗೆ ಎರಡು ಮುದ್ದು ಮಕ್ಕಳು ಸಹ ಇದ್ದರೆಂದು ಹೇಳಿದ. ಇಲ್ಲಿ ದುಬೈಯಲ್ಲಿ ಅವನು ಕೆಲಸ ಸೇರಿ ಒಂದೇ ವರ್ಷ ಆದದ್ದು ಹಾಗು ಇಲ್ಲಿ ಶೇರಿಂಗ್ ರೂಮಲ್ಲಿ ಇರುತ್ತಿದ್ದ. ನಾನು  ನನ್ನ  ಫೋನ್ ನಂಬರ್, ಮನೆ ವಿಳಾಸ ಅವನಿಗೆ ಕೊಟ್ಟು, ಅವನಿಗೆ ಇನ್ನೊಂದು ಶುಕ್ರವಾರ ಮನೆಗೆ ಬರಲು ಆಹ್ವಾನಿಸಿದೆ, ಅವನು ಖಂಡಿತ ಬರುತ್ತೇನೆ ಎಂದು ಹೇಳಿದ .
                     
ಮನೆಗೆ ಹಿಂತಿರುಗುವಾಗ ನಾನು ಶಾಲೆಯ ನೆನಪೆಲ್ಲ ಸುಮಾಳಿಗೆ ಹೇಳಿದೆ, ಅವಳು ತುಂಬಾ ಉತ್ಸುಕತೆಯಿಂದ ಎಲ್ಲ ಕೇಳಿದಳು.
                           ***
ಶುಕ್ರವಾರದ ದಿವಸ ಬಷೀರ್ ಫೋನ್ ಮಾಡಿ ಮನೆಗೆ ಬಂದ, ಊಟ ಎಲ್ಲ ಆದ ನಂತರಹೀಗೆಯೇ  ನಾವು ಹರಟೆ ಹೊಡೆಯುತ ಕುಳಿತೆವು, ಆಗ ಸುಮಾ ಬಂದು  ಹಣ್ಣು ತಂದಿಟ್ಟು ಅಲ್ಲೇ ಕುಳಿತಳು.

ಸುಮಾ "ಬಷೀರ್'ಣ್ಣ ನಿಮ್ಮ  ಮಕ್ಕಳ ಹೆಸರೇನು?"

ಬಷೀರ್ " ಮಗನ ಆಫ್ನಾನ್ ಹಾಗು ಮಗಳ ಸಾರಾ" ಎಂದು ಹೇಳಿದ.

ಸುಮಾ "ವಾವ್ ಒಳ್ಳೆ ಹೆಸರು, ಬಷೀರ್'ಣ್ಣ  ಇವರು ನಿಮ್ಮ ಶಾಲೆಯ ಜಗಳದ ವಿಷಯವೆಲ್ಲ ಹೇಳಿದರು, ಆದರೆ ನೀವು ಅಷ್ಟು ಕೋಪ ಯಾಕೆ ಇಟ್ಟದ್ದು ನಂತರ ಮಾತನಾಡಲೇ ಇಲ್ಲಂತೆ" ಎಂದು ನಗು ನಗುತ ಕೇಳಿದಳು.

ಬಷೀರ್ ನಗುತ "ಅದೆಲ್ಲ ಬಾಲ್ಯದ ವಿಷಯ, ಬಿಡು ಸುಮಾ"
.
ಸುಮಾ "ಇಲ್ಲ ಬಷೀರ್'ಣ್ಣ ಹೇಳಿ ಪ್ಲೀಸ್, ನನಗೆ ಯಾಕೆ ಎಂದು ತಿಳಿಯಬೇಕು".

ಬಷೀರ್ " ಸುಮಾ, ನನ್ನ ಕೋಪದ ವಿಷಯ ನಿನಗೆ ಹೇಗೆ ಹೇಳುವುದು, ಇದರ ಹಿಂದೆ ಒಂದು ದೊಡ್ಡ ಕಥೆ ಇದೆ.

ಸುಮಾ " ಹೇಳಿ, ಪ್ಲೀಸ್ " .

ನಾನು ಸಹ ಅವನಿಗೆ " ಏನೋ ಹೇಳು , ನನಗೆ ಸಹ ತಿಳಿಯಬೇಕು, ನಾನು ಅಂಥದೇನು ಮಹಾ  ಮಾಡಿದೆ ಎಂದು , ಜಗಳದಲ್ಲಿ ನಿನ್ನ ಸಹ ಅಷ್ಟೇ ತಪ್ಪಿತ್ತು".


ತುಂಬಾ ಒತ್ತಾಯದ ನಂತರ ಬಷೀರ್ ಹೇಳಲಾರಂಭಿಸಿದ.

ಸುಮಾ, ನನ್ನ ಬಾಲ್ಯ ತುಂಬಾ ಕಷ್ಟದಲ್ಲಿ ಕಳೆದದ್ದು, ನಾವು ಎಂಟು ಜನ ಮಕ್ಕಳು, ನಾನು ಅವರಲ್ಲಿ ದೊಡ್ಡವನು ಬೇರೆ ನನಗೆ ೪ ತಮ್ಮಂದಿರು ಹಾಗು ೩ ತಂಗಿಯರಿದ್ದರು. ನನ್ನ ಅಬ್ಬು ರೈಲ್ವೆ'ಯಲ್ಲಿ ಹಮಾಲ್ ಆಗಿದ್ದರು. ಅವರ ಒಂದು ನಾಲ್ಕು ಚಕ್ರದ ಸಾಮಾನು ಸಾಗಿಸುವ ಗಾಡಿ ಇತ್ತು, ಅದರಲ್ಲಿ ಪ್ರವಾಸಿಯರ ಸಾಮಾನು ಇಟ್ಟು , ಅದನ್ನು ಎಳೆದು ಅಲ್ಲಿಂದ ಇಲ್ಲಿ ಸಾಗಿಸುತ್ತಿದರು. ತುಂಬಾ ಕಷ್ಟಪಟ್ಟು ದುಡಿಯುತ್ತಿದ್ದರು. ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋದವರು ನಂತರ  ರಾತ್ರಿ ಮನೆಗೆ ಬರುವಾಗ ಹನ್ನೊಂದು ಗಂಟೆ ಆಗುತ್ತಿತ್ತು. ಇಷ್ಟು ಕಷ್ಟಪಟ್ಟು ದುಡಿದರು ಅವರಿಗೆ ಸಿಗುವುದು ಕೇವಲ ೪೦/೫೦ ರೂಪಾಯಿ, ಅದು  ಮನೆಖರ್ಚಿಗೆ ಪೂರ್ಣವಾಗುತ್ತಿರಲಿಲ್ಲ, ದಿನಾ ಅಮ್ಮಿ ಹಾಗು ಅಬ್ಬು ಇವರ ಮಧ್ಯೆ ಈ ವಿಷಯದಲ್ಲಿ ಜಗಳವಾಗುತ್ತಿತ್ತು, ಆದರೆ ಅಬ್ಬು ಪ್ರತಿಕ್ರಿಯುಸುವುದು ಕಡಿಮೆ. ನನ್ನ ಅಬ್ಬು ತುಂಬಾ ಒಳ್ಳೆಯವರು ಅವರಯ್ತು ಅವರ ಕೆಲಸ ಆಯಿತು, ಬೇರೆ ಯಾವುದು ಆಸಕ್ತಿ ಅಲ್ಲದೆ ಯಾವುದೇ ದುರಭ್ಯಾಸವೂ ಅವರಿಗೆ ಇರಲಿಲ್ಲ. ಅಮ್ಮಿ ಪ್ರೀತಿಯ ಸಾಗರ  ಆದರೆ ತಂದೆಯ ಕಷ್ಟ ನೋಡಲಾರದೆ ತಾಳ್ಮೆ ಕಳೆದು ಅವರಿಂದ ಜಗಳ ಮಾಡುತ್ತಿದ್ದಳು. ಒಂದು ದಿನ ಶಾಲೆಯಲ್ಲಿ ಪಿಕ್ನಿಕ್ ಹೋಗಲಿದೆ ಹಾಗು ಎಲ್ಲ ಮಕ್ಕಳಿಗೆ ೧೦೦ ರೂಪಾಯಿ ತಂದು ಜಮಾ ಮಾಡಲ್ಲಿಕ್ಕಿದೆ ಎಂದು ಟೀಚರ್ ಹೇಳಿದರು. ಈ ವಿಷಯ ಈಗ ಅಬ್ಬುಗೆ ಹೇಗೆ ಹೇಳುವುದು ಎಂದು ನನಗೆ ಅರ್ಥವಾಗುತ್ತಿರಲಿಲ್ಲ. ನಮಗೆ  ಶಾಲೆಗೆ ಹೋಗಲಿಕ್ಕೆ ಏನು ಖರ್ಚು ಇರಲಿಲ್ಲ, ಆ ಸಮಯದಲ್ಲಿ ನಮಗೆ ಶಾಲೆಯ ಫೀಸ್ ಇರಲಿಲ್ಲ, ನಮ್ಮ ಸರಕಾರಿ ಶಾಲೆ, ಆದುದರಿಂದ  ಈ ಎಲ್ಲ ವಿಷಯಗಳಿಗೆ ಹಣ ಒಟ್ಟು ಮಾಡುವುದು ಸಹಜವಾಗಿತ್ತು. ನಾನು ಆ ದಿನ ಮಲಗದೇ ಅಬ್ಬು ಬರುವ ಸಮಯ ತನಕ ಕಾದು ಕುಳಿತೆ. ರಾತ್ರಿ ಅಬ್ಬು ಬಂದು ಊಟ ಮಾಡಿದ ನಂತರ ನನ್ನಿಂದ "ಏನೋ , ಇನ್ನೂ ಮಲಗಲಿಲ್ಲ , ನಾಳೆ ಶಾಲೆ ಇಲ್ಲವ " ಎಂದು ಕೇಳಿದರು .

ನಾನು "ಇಲ್ಲ ಅಬ್ಬು, ಶಾಲೆ ಇದೆ,ಆದರೆ ನಿಮ್ಮಿಂದ ಒಂದು ವಿಷಯ ಹೇಳಲಿಕ್ಕಿತ್ತು" .

ಅಬ್ಬು " ಏನದು ಹೇಳು".

ನಾನು ಅವರಿಗೆ ಪಿಕ್ನಿಕ್ ವಿಷಯಯೆಲ್ಲ ತಿಳಿಸಿದೆ.

ಅವರು ಒಮ್ಮೆ ನನ್ನ ಮುಖ ನೋಡಿ " ನಾಳೆ  ರಾತ್ರಿ ಬರುವಾಗ  ತರುತ್ತೇನೆ, ಆಗಬಹುದಲ್ಲ?" ಎಂದು ಕೇಳಿದರು.

ನಾನು " ಆಗಬಹುದು ಅಬ್ಬು" ಎಂದು ಹೇಳಿದೆ.

ಮಾರನೆ ದಿನ ಶಾಲೆಯಿಂದ ಹಿಂತಿರುಗಿ ಬಂದು ನಾನು ರಾತ್ರಿ ತನಕ ಅಬ್ಬು ಯಾವಾಗ ಬರುತ್ತಾರೆ ಎಂದು ಕಾದು ಕುಳಿತೆ. ಅಬ್ಬು ಆ ದಿವಸ ತುಂಬಾ ತಡವಾಗಿಯೇ ಮನೆಗೆ ಬಂದರು, ಯಾಕೋ ತುಂಬಾ ಸೋತು ಹೋದಂತೆ ಕಾಣುತ್ತಿದ್ದರು.

ಅವರು ನನ್ನನ್ನು ನೋಡಿ " ಒಹ್ ಕಾದೆ ಕುಳಿತಿರುವೇಯಾ" ಎಂದು ಹೇಳಿ ನಗುತ ಕಿಸೆಯಿಂದ ೧೦೦ ರೂಪಾಯಿ ತೆಗೆದು ನನಗೆ ಕೊಟ್ಟರು. ನನ್ನ ಖುಷಿಗೆ ಮಿತಿಯೇ ಇರಲಿಲ್ಲ, ಆದರೆ ನನ್ನ ತಂದೆ ಪಾಪ ಇದಕ್ಕಾಗಿ ಎಷ್ಟು ಕಷ್ಟಪಟ್ಟಿರಬೇಕು ಎಂದು ಯೋಚಿಸಿ ನನ್ನ ಕಣ್ಣು ತುಂಬಿ ಬಂತು.

ಮಾರನೆ ದಿನ ಶಾಲೆಗೆ ಹೋಗುವಾಗ ಸ್ವಲ್ಪ ತಡವಾಯಿತು, ಕ್ಲಾಸ್ಸಲ್ಲಿ ಯಾರೂ ಇರಲಿಲ್ಲ, ಅವಾಗ ನನಗೆ ಜ್ಞಾಪಕ ಬಂತು "ಅರೆ, ಇವತ್ತು ಕಬಡ್ಡಿ  ಪಂದ್ಯ  ಇದೆ ". ನಾನು ಬೇಗ ಬೇಗ ಗ್ರೌಂಡ್'ಗೆ ಓಡಿದೆ, ಅಲ್ಲಿ ಎಲ್ಲ ಮಕ್ಕಳು ನನ್ನನ್ನು ಕಾಯುತ್ತಿದ್ದರು, ತಡವಾಗಿ ಬಂದುದಕ್ಕೆ ನನ್ನ ಕ್ಯಾಪ್ಟನ್ ನನಗೆ ಬೈದ. ಹೇಗೋ ಕಬಡ್ಡಿ ಪಂದ್ಯ ಶುರುವಾಯಿತು. ಪಂದ್ಯದ ಮಧ್ಯದಲ್ಲಿ ನಮ್ಮಲ್ಲಿ ಆದ ಜಗಳದಲ್ಲಿ ಅಬ್ಬು ಕಷ್ಟಪಟ್ಟು ತಂದು ಕೊಟ್ಟ ೧೦೦ ರೂಪಾಯಿ ನನ್ನ ಕಿಸೆ ಹರಿದಾಗ ಹರಿದು ಚೂರು ಚೂರು ಆಗಿತ್ತು.

ಆದರೆ ಸುಮಾ, ಆ ನೂರು ರೂಪಾಯಿ ವಿಷಯ ಇವನಿಗೆ ತಿಳಿದಿರಲಿಲ್ಲ. ಆದರೆ ಯಾಕೋ ಆ ನಂತರ ನನಗೆ ಇವನ ಮೇಲೆ ತುಂಬಾ ಕೋಪ ನಿರ್ಮಾಣವಾಯಿತು ಹಾಗು ನಾನು ಇವನತ್ರ ಮಾತನಾಡುವುದನ್ನು  ನಿಲ್ಲಿಸಿದೆ, ಇವನು ಎರಡು ಮೂರು ಸಲ ಪ್ರಯತ್ನಿಸಿದ್ದರೂ ನಾನು ಮಾತನಾಡಲಿಲ್ಲ. ಕ್ರಮೇಣ ನನ್ನ ಕೋಪ ಸಹ ಇಳಿಯಿತು, ಆದರೆ ನಂತರ ನಮ್ಮಲ್ಲಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಬಷೀರ್ ಮಾತು ಮುಗಿಸಿದ ನಂತರ ಸುಮಾ ನನ್ನ ಕಡೆ ತಿರುಗಿ ನೋಡಿದಳು, ನನ್ನ ಕಣ್ಣಿಂದ ದಳದಳ ಕಣ್ಣೀರು ಉದುರುತ್ತಿತ್ತು, ಬಷೀರ್ ನನ್ನನ್ನು ನೋಡಿ ನಗುತ್ತಿದ್ದ.

by ಹರೀಶ್ ಶೆಟ್ಟಿ,ಶಿರ್ವ