Saturday, June 30, 2012

ಸತ್ಯ

ಸತ್ಯ
ನೋಡು ನಿನ್ನ ಸೊಬಗು
ಕಸದ ಬುಟ್ಟಿಯಲಿ
ಬಿಸಾಕಿ ಹೋಗುವರು
ನವ ಜನಿತ ಹೆಣ್ಣು ಮಗು

ಸತ್ಯ
ನೋಡು ನಿನ್ನ ಪರೀಕ್ಷೆ
ನಿಷ್ಠೆಯಿಂದ ಕಲಿತು
ಪದವಿ ಪಡೆದು ಉತ್ತಿರ್ಣ ಆಗಿಯೂ
ಕೆಲಸಕ್ಕಾಗಿ ಬೇಡುತ್ತಿದ್ದಾನೆ ಭಿಕ್ಷೆ 

ಸತ್ಯ
ನೋಡು ನಿನ್ನ ದಶೆ
ಹತ್ತು ರೂಪಾಯಿ ಗೋಸ್ಕರ
ದಿನ ನಿತ್ಯ ಸಾಯುವ ಹೆಣ್ಣು ಜಾತಿ 
ಕರೆಯುತ್ತಿದ್ದಾರೆ ಜನ ಅವಳಿಗೆ ವೇಶ್ಯೆ

ಸತ್ಯ
ನೋಡು ನಿನ್ನ ಅತ್ಯಾಚಾರ
ಅವಳನ್ನು ಅಪಹರಿಸಿ 
ಅವಳ ಮೇಲೆ ನಡೆಸಿದ್ದರು ವ್ಯಭಿಚಾರ
ಇಂದು ಅವಳು ಒಂದು ಹುಚ್ಚು ಭಿಕಾರಿ

ಸತ್ಯ
ಸಾಕು ಇನ್ನು
ನಿನ್ನನ್ನು ನಾನು ಸಾಕಲಾರೆ
ನೀನೀಗ ಅನಾಥ
by ಹರೀಶ್ ಶೆಟ್ಟಿ, ಶಿರ್ವ

ಇಂದಿನ ದಿನ

ಮನುಜ...
ಹಿಂದಿನ ದುಃಖದಲಿ 
ಮುಂದಿನ ಭವಿಷ್ಯದ ಚಿಂತೆಯಲಿ 
ಇಂದಿನ ದಿನ ಯಾಕೆ ವ್ಯರ್ಥ ಮಾಡುವೆ
ಕಳಿತ ಹಣ್ಣನ್ನು ಇಂದು ತಿನ್ನದೆ
ಅದನ್ನು ಕೊಳೆತು ಹೋಗಲು ಯಾಕೆ ಬಿಡುವೆ
ಹಿಂದಿನ ದುಃಖ ಮರೆಯು ಎಂದ
ಭವಿಷ್ಯದ ಭಯ ತೊರೆಯು ಎಂದ
ಪ್ರಸ್ತುತ ಸಮಯವನ್ನು ಸಂತೋಷದಿಂದ ಕಳೆಯು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಹೊಸ ಕಾರ್ಯ

ಮನುಜ...
ನಿನ್ನ ಪ್ರತಿ ಹೊಸ ಕಾರ್ಯಕ್ಕೆ
ಮೊದಲು ಜನರು ನಗುತ್ತಾರೆ
ನಂತರ ಸವಾಲೆಸೆಯುತ್ತಾರೆ
ಆನಂತರ ಜನರು ನಿನ್ನ ಯಶಸ್ಸು ಕಾಣುತ್ತಾರೆ
ಮತ್ತೆ ಅವರು ನಿನ್ನನ್ನು ಅನುಸರಿಸಲು ಬಯಸುತ್ತಾರೆ
ಪ್ರಪಂಚ ನಿನ್ನ ವಿರುದ್ದ ಇರುವಾಗ ಸಹನೆ ಪಾಲಿಸು
ಕೇವಲ ನಿನ್ನ ಹೃದಯ ದ್ವನಿಯನ್ನು ಹಿಂಬಾಲಿಸು
ಯಶಸ್ಸಿನ ಪತಾಕೆ ಏರಿಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Thursday, June 28, 2012

ನಾನೊಂದು ಒಣಗಿದ ಮರ

ನಾನೊಂದು ಒಣಗಿದ ಮರ
ಒಬ್ಬಂಟಿ ಈ ಬಂಜರ ಭೂಮಿಯಲಿ
ಒಂದು ಕಾಲ ಇತ್ತು
ನನ್ನದು ಸಹ
ಆಗ ಈ ಭೂಮಿ
ಫಲಿತವಾಗಿತ್ತು!

ನನ್ನ ಎಲೆ ಹೂ
ತುಂಬಿದ ರೆಂಬೆಯಿಂದ
ತಂಗಾಳಿ ಬೀಸಿದಾಗ
ಜನರು ತಂಪಾಗಿ
ತನ್ನ ಆಯಾಸ
ಮರೆಯುತ್ತಿದ್ದರು!

ದೇಶ ವಿದೇಶದಿಂದ
ಹಕ್ಕಿಗಳು ಬಂದು
ನನ್ನ ಆಶ್ರಯ ಪಡೆದು
ನನ್ನಲಿ ಗೂಡು ಕಟ್ಟಿ
ತನ್ನ ಸಂಸಾರದೊಂದಿಗೆ
ಸುಖವಾಗಿರುತ್ತಿದ್ದರು!

ಮಕ್ಕಳು ನನ್ನ
ಕೊಂಬೆಯಲಿ
ಉಯ್ಯಾಲೆ ಕಟ್ಟಿ
ಜೋಕಾಲಿ ಆಡುತ
ನನ್ನ ಫಲದ ರುಚಿ
ಸವಿಯುತ್ತಿದ್ದರು!

ಪ್ರೇಮಿ ಜೋಡಿಗಳು
ನನ್ನ ನೆರಳಲ್ಲಿ ಕುಳಿತು
ಪ್ರೀತಿ ಮಾತನೆಲ್ಲ ನುಡಿದು
ತಮ್ಮ ಎಲ್ಲ
ಸುಖ ಸ್ವಪ್ನಗಳನ್ನು 
ನನ್ನಲ್ಲಿ ಹಂಚುತ್ತಿದ್ದರು!

ಈಗ ನಾನು ಏಕಾಂಗಿ
ಬಿಸಿಲ ತಾಪದಿಂದ ಸುಡುತ್ತಿದ್ದೇನೆ
ಸುಳಿಯುವುದಿಲ್ಲ ನನ್ನ ಹತ್ತಿರ ಹಕ್ಕಿಗಳು
ಬರಲು ಹಿಂಜರಿಯುತ್ತಾರೆ ನನ್ನ ಬಳಿ ಮಕ್ಕಳು
ಪ್ರೇಮಿಯರು ನನ್ನಿಂದ ದೂರ ದೂರ
ಈ ಭೂಮಿಗೆ ಈಗ ನಾನೊಂದು ಭಾರ
by ಹರೀಶ್ ಶೆಟ್ಟಿ, ಶಿರ್ವ

ಗುಣ ಅವಗುಣ

ಮನುಜ...
ಗುಣ ಅವಗುಣ
ಎಲ್ಲ ನಿನ್ನ ಆಯ್ಕೆಯ ಪರಿಣಾಮ 
ಸಜ್ಜನರ ಸಂಗ ಗುಣಗಳ ಸಂಗಮ
ದುರ್ಜನರ ಸಂಗ ದುರ್ಗುಣಗಳ ಆಗಮನ
ಒಳ್ಳೆಯವರ ಸಹವಾಸ ಮಾಡು
ತನ್ನಲ್ಲಿರುವ ದುರ್ಗುಣಗಳನ್ನು ಹೊರ ದೂಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ರಾತ್ರಿ

ರಾತ್ರಿ ನಿದ್ದೆಯ ಮುನ್ನ ನಿನ್ನದೆ ನೆನಪು
ರಾತ್ರಿ ನಿದ್ದೆಯಲಿ ನಿನ್ನದೆ ಕನಸು
by ಹರೀಶ್ ಶೆಟ್ಟಿ, ಶಿರ್ವ

Wednesday, June 27, 2012

ಹಕ್ಕಿಯ ಆಸೆ

ಸಣ್ಣದೊಂದು ಗೂಡು
ಸಣ್ಣ ಕುಟುಂಬ
ಒಣ ಹುಲ್ಲಿನ ಮೃದು ಶಯನ
ಎತ್ತರ ಎತ್ತರ ಹಾರಿ
ಆಕಾಶ ಮುಟ್ಟಬೇಕೆಂದು !

ತನಗೆ ಹಾಗು ತನ್ನ
ಪರಿವಾರ ಗೋಸ್ಕರ
ಸಿಕ್ಕಿದ್ದನ್ನು ಹೆಕ್ಕಿ ತಂದು
ತಿಂದು ತೃಪ್ತಿಯಿಂದ
ಜೀವನ ಕಳೆಯಬೇಕೆಂದು !

ತಾನು ಇಟ್ಟ ಮೊಟ್ಟೆಗೆ
ವಾತ್ಸಲ್ಯದ ಕಾವು ಕೊಟ್ಟು
ತನ್ನ ಮರಿಯನ್ನು
ಹೊರ ಬರುವುದನ್ನು
ನೋಡಿ ಸಂತೋಷ ಪಡಬೇಕೆಂದು !

ದೇವರು ನೀಡಿದ
ಈ ಪುಟ್ಟ ಬದುಕಿನ
ಒಂದೊಂದು ಕ್ಷಣ
ಸುಖ ಶಾಂತಿಯಿಂದ
ಆನಂದದಿಂದ ಅನುಭವಿಸ ಬೇಕೆಂದು !
by ಹರೀಶ್ ಶೆಟ್ಟಿ, ಶಿರ್ವ

ತಥ್ಯವಿಲ್ಲದ ಕಲ್ಪನೆ

ಮನುಜ...
ತಥ್ಯವಿಲ್ಲದ ಕಲ್ಪನೆ ಕಾಗೆಯಂತೆ ಕಪ್ಪು
ಕೋಗಿಲೆಯಂತೆ ಮಧುರ ಸ್ವರ ನುಡಿಯಲಾರದು
ಯಾರ ಬಗ್ಗೆಯೂ ತಿಳಿಯದೆ ಅವರ ಬಗ್ಗೆ ಹಾಳು ನುಡಿಯ ಬೇಡ
ಅನ್ಯರ ಬಗ್ಗೆ ಏನೋ ಕಲ್ಪನೆ ಮಾಡಿ ತನ್ನ ಸುಳ್ಳು ಬಾಣ ಬಿಡ ಬೇಡ
ಅನ್ಯರ ನಿಂದನೆ ಮಾಡುವವ ಸ್ವತ ಆ ಉರಿಯಲಿ ಸುಡುವನು
ನೀ ನುಡಿಯುವಾಗ ಮಲ್ಲಿಗೆಯ ಮಳೆಯಾಗಲಿ
ಕೇಳುವವರು ಅದರ ಸುಗಂಧ ಹನಿಯಲಿ ನೆನೆಯಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Tuesday, June 26, 2012

ಕನಸು

ಕನಸು ಸಾಕು ಇನ್ನು
ಬರಬೇಡ ಇನ್ನು
ಮೊಳಕೆ ಬಿಡದ ಆಸೆಯ ಬೀಜವನ್ನು ನೀಡಿ
ಬೆಳೆಸು ಎಂದು ಹೇಳಿ
ನೀ ಪರಾರಿ ಆಗುವೆ!

ಶಕ್ತಿ ಸಾಮರ್ಥ್ಯವೆಲ್ಲವನ್ನು
ನಿನ್ನ ಬಾಳನ್ನು ರಚಿಸಲು ನೀಡುವೆ
ಆದರೂ ನೀನು ಮರೀಚಿಕೆಯಂತೆ ಬಂದು
ಇನ್ನೊಂದು ದಾರಿಯತ್ತ ನನ್ನನ್ನು ದೂಡಿ
ನೀನು ನೀನಾಗಿಯೇ ಉಳಿಯುವೆ!

ಕನಸು ನೀನೆಂತ ಪಾಪಿ
ಸತ್ಯ ಧರ್ಮ ಪಾಲಿಸುವವರಿಗೆ ನೀನು ನೀನೆ
ತುಂಬಾ ಕಷ್ಟ ಪಟ್ಟ ನಂತರ ನನಸಾಗುವೆ
ಪಾಪ ಕರ್ಮ ಮಾಡುವವರಿಗೆ
ನೀನು ಬೇಗನೆ ದಯಾ ಪಾಲಿಸುವೆ!

ಕನಸು ನೀನು ಹುಚ್ಚ ಸಹ
ಬೇಡವಾದ ಭಯಕೆ ನಿರ್ಮಿಸುವೆ
ನಿನ್ನನ್ನು ಆಚೆ ದೂಡುವಂತೆ ಸಹ ಇಲ್ಲ
ನಿನ್ನನ್ನು ನಿರ್ಲಕ್ಷಿಸಿದರೆ ನಾನು ಮೂರ್ಖನೆಂದು ಅರ್ಥ
ಆದರೆ ನಿನ್ನ ಹುಚ್ಚಾಟದಿಂದ ಸೋತೆ ನಾನು !

ಕನಸು ನೀನು ಬಹು ಜಾಣ
ನಾನು ಸಹ ಪ್ರಯತ್ನ ಪಡಬೇಕೆಂದು ಹೇಳುವೆ
ಹೌದು ಸತ್ಯ
ಪಡುದಿಲ್ಲವೇ?
ತುಂಬಾ ಪ್ರಯತ್ನ ಪಡುತ್ತೇನೆ!

ಕನಸು ನನ್ನನ್ನು ಒತ್ತಾಯಿಸ ಬೇಡ
ಹಾಳು ಕೆಲಸ ಮಾಡಲಾರೆ
ನಿನ್ನನ್ನು ನಗ್ನ ಮಾಡಿ ಬಿಕ್ಷೆ ಬೇಡಲಾರೆ
ಮಣ್ಣಿಗೆ ಪಾಲಾದರೂ ನಿನಗಾಗಿ
ದುಷ್ಟ ಕಾರ್ಯ ಮಾಡಲಾರೆ!
by ಹರೀಶ್ ಶೆಟ್ಟಿ, ಶಿರ್ವ

ವರ್ತಮಾನ

ಮನುಜ...
ಗತ ಕಾಲದ ಮಾತನ್ನು ಬಿಡು
ವರ್ತಮಾನದ ದಾರಿಯನ್ನು ಹಿಡು
ನಿನ್ನೆಯ ನೆರಳಲ್ಲಿ ಬದುಕಬೇಡ
ಇಂದಿಗೆ ಮಹತ್ವ ಕೊಡು
ನಿನ್ನ ಬದುಕಿನ ಕತ್ತಲೆಯೂ ಕವಿಯುವುದು
ಹೊಸ ಸೂರ್ಯ ದಿನ ಉದಯವಾಗುವುದು
ನಿನ್ನ ಜೀವನದಲ್ಲಿಯೂ ಬೆಳಕಾಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, June 25, 2012

ಮಳೆಯ ತುಂತುರು ಹನಿ

ಮಳೆಯ ತುಂತುರು ಹನಿ
ಅಡಗಿಸಿದೆ ನನ್ನ ಕಂಬನಿ
ಹೃದಯ ಅಳುತ್ತಲೇ ಇತ್ತು
ನಕ್ಕೆ ನಕ್ಕೆ ಹೀಗೆಯೇ ಸುಮ್ಮನೆ ನಕ್ಕೆ!

ನೆನಪಾಯಿತು ಅವಳ ಮಾತುಗಳು
ಚೂರಿಯಂತೆ ಹರಿತ ಕಟಾಕ್ಷಗಳು
ಪುನಃ ತುಂಬಿ ಬಂತು ಕಣ್ಣುಗಳು
ಒದ್ದೆ ಒದ್ದೆ ಕಂಗಳು ಎಲ್ಲ ಶರೀರವೂ ಒದ್ದೆ!

ಪ್ರೀತಿ ಅಂದರೆ ಹೀಗೆಯೇ
ಕೇವಲ ಸಿಹಿ ಮಾತುಗಳೇ
ನನ್ನ ಕ್ಷಣಿಕ ಕೋಪ ಅರ್ಥವಾಗುದಿಲ್ಲವೇ
ಬಿದ್ದೆ ಬಿದ್ದೆ ನಾಲಿಗೆಯ ನಿಯಂತ್ರಣವಿಲ್ಲದೆ  ಜಾರಿ ಬಿದ್ದೆ!

ನಿನ್ನ ಮುನಿಸು ಮುಗಿಸುವುದು ಹೇಗೆ
ಕ್ಷಮೆ ಎಂಬ ಪದ ನಿನ್ನ ಬಳಿ ಇಲ್ಲವೇ
ನನ್ನ ನಿವೇದನೆಕ್ಕೆ ಬೆಲೆ ಇಲ್ಲವೇ
ಸೋತೆ ಸೋತೆ ಕ್ಷಮೆ ಕೇಳಿ ಕೇಳಿ ನಾ ಸೋತೆ!

ಆಗಲಿ ಎಷ್ಟು ದಿವಸ ನೋಡುವ
ನಮ್ಮ ಬಂಧ ಎಷ್ಟು ದೃಡ ಎಂದು ನೋಡುವ
ಜೀವನದ ಈ ನೋವಿನ ಅಧ್ಯಾಯ ಸಹ ಓದುವ
ಕಲಿತೆ ಕಲಿತೆ ಜೀವನದ ಈ ಪಾಠವೂ ಕಲಿತೆ!
by ಹರೀಶ್ ಶೆಟ್ಟಿ, ಶಿರ್ವ

ಆರೋಗ್ಯ

ಮನುಜ...
ಆರೋಗ್ಯವೆ ಸೌಭಾಗ್ಯ
ಅರೋಗ್ಯ ಪೂರ್ಣ ಶರೀರವೆ ಸಂಪತ್ತು
ಆರೋಗ್ಯಕರ ಹೃದಯವೆ ಐಶ್ವರ್ಯ
ಹೃದಯದಲ್ಲಿ ತುಂಬಿದ ಪ್ರೀತಿಯೆ ಧನ
ನಿರ್ಮಲ ಮನಸ್ಸೆ ಸುಂದರ
ಆಧ್ಯಾತ್ಮಿಕ ಆತ್ಮವೇ ಪಾವನ
ಆತ್ಮ ಸಂತೋಷವೆ ತೃಪ್ತಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ತಂಗಾಳಿ

ನೋಡಿ ಹೂವುಗಳು ನಗುತ್ತಿವೆ
ಹರ್ಷ ತಡೆಯಲಾರದೆ
ಬಣ್ಣ ಬಣ್ಣದ ಪಾತರಗಿತ್ತಿ ನಲಿದಾಡುತ್ತಿವೆ
ಆನಂದ ತಾಳಲಾರದೆ
ಹಕ್ಕಿಗಳು ರೆಕ್ಕೆಯ ಬಿಚ್ಚಿ ಹಾರಾಡುತ್ತಿವೆ
ಸಂತೋಷದಿಂದ ಗಗನ ಎತ್ತರ
ಇಂದು ಉದ್ಯಾನದಲಿ ಹಬ್ಬದ ಸಂಭ್ರಮ
ಶರತ್ಕಾಲದಲಿ ಮುನಿಸಿದ ಎಲೆಗಳೆಲ್ಲ ಹಳದಿಯಾಗಿ ಬಿದ್ದು
ಚಳಿಗಾಲದ ಏಕಾಂತದಲಿ ಶಾಂತ ನಿಂತಿದ ಫಲಿತ ಮರ
ಇಂದು ವಸಂತ ಋತು ಬಂದು
ತನ್ನ ಎಲೆ ಭರಿತ ಶಾಖೆಗಳನ್ನು ಅಲುಗಾಡಿಸುತ
ಸುಖ ತಂಗಾಳಿ ಬೀಸುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

ಸಮಸ್ಯೆ

ಮನುಜ
ಜೀವನದಲಿ ಹತ್ತಾರು ಸಮಸ್ಯೆಗಳು
ಅದೆಲ್ಲ ಶಾಶ್ವತ ಅಲ್ಲ
ಆದರೆ ಜೀವನ ಶಾಶ್ವತ
ಧೈರ್ಯ ಹಾಗು ವಿಶ್ವಾಸದಿಂದ ಎದುರಿಸಿದರೆ
ಸಮಸ್ಯೆ ಸಮಸ್ಯೆ ಅಲ್ಲ
ಯಾವಾಗಲು ಸಮಸ್ಯೆಗಳನ್ನು ಸ್ವಾಗತಿಸು
ಸಮಸ್ಯೆಗಳು ನಿನಗೆ ಎರಡು ಸಲಹೆ ನೀಡುತ್ತದೆ
ಒಂದು ಹೇಗೆ ಅದನ್ನು ಬಗೆಹರಿಸುವುದೆಂದು
ಎರಡು ಹೇಗೆ ಅದರಿಂದ ತಪ್ಪಿಸಿ ಕೊಳ್ಳಬೇಕೆಂದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, June 23, 2012

ಪ್ರಥಮವಾಗಿ

ಮನುಜ...
ನಿನ್ನನ್ನು ಪ್ರೀತಿಸುವವರನ್ನು ಮೆಚ್ಚು
ನಿನ್ನಿಂದ ಸಹಾಯ ಕೋರುವವರಿಗೆ ಸಹಾಯ ಮಾಡು
ನಿನ್ನನ್ನು ನೋವಿಸಿದವರನ್ನು ಕ್ಷಮಿಸು
ನಿನ್ನನ್ನು ಬಿಟ್ಟು ಹೋದವರನ್ನು ಮರೆತು ಬಿಡು
ಪ್ರಥಮವಾಗಿ ಪ್ರೀತಿಸುವವನ ಹೃದಯ ಪಾವನ
ಪ್ರಥಮವಾಗಿ ಸಹಾಯ ಮಾಡುವವನು ದಾನಿ
ಪ್ರಥಮವಾಗಿ ಕ್ಷಮೆ ಕೇಳುವವನು ಧೈರ್ಯಶಾಲಿ
ಪ್ರಥಮವಾಗಿ ಕ್ಷಮಿಸುವವನು ಶಕ್ತಿಶಾಲಿ
ಪ್ರಥಮವಾಗಿ ಮರೆಯುವವನು ಸಂತೋಷಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಶಿಕ್ಷೆ

ಏನು ಮಾಡಲಿ
ಯಾರನ್ನು ಕೇಳಲಿ
ಮನಸ್ಸಲ್ಲಿ ಅಡಗಿಸಿದ ವ್ಯಥೆಯನ್ನು
ಹೇಗೆ ಹೇಳಲಿ!

ಮಾಡಿದ ತಪ್ಪಿಗೆ
ಯಾವ ಶಿಕ್ಷೆ ಅನುಭವಿಸಲಿ
ಕಲ್ಲ ಬಂಡೆಯಲಿ
ಹೇಗೆ ಹೂವು ಅರಳಿಸಲಿ!

ಮೌನದ ಮಾತಿಗೆ
ಹೇಗೆ ಉತ್ತರಿಸಲಿ
ಶಾಂತ ಸರೋವರದಲಿ
ಹೇಗೆ ಕಲ್ಲು ಎಸೆಯಲಿ!

ಕೋಪದ ಜ್ವಾಲೆಯನ್ನು
ಹೇಗೆ ತಣಿಸಲಿ
ದುಃಖದ ಏರು ಸಮುದ್ರದಲಿ
ಹೇಗೆ ದೋಣಿ ಸಾಗಿಸಲಿ!
by ಹರೀಶ್ ಶೆಟ್ಟಿ, ಶಿರ್ವ

ಮನಸ್ಸು

ಮನುಜ...
ಮನಸ್ಸನ್ನು ದುರ್ಬಲ ಮಾಡದಿರು
ಉಂಟಾಗಬಹುದು ಅನೇಕ ಸಮಸ್ಯೆಗಳು
ಮನಸ್ಸು ಸಂತುಲಿತ ಇರಲಿ
ನಿನ್ನ ಪರವಾಗಿರುತ್ತದೆ ಪರಿಸ್ಥಿತಿಗಳು
ನಿನ್ನ ಮನಸ್ಸು ದೃಢ ಇದ್ದರೆ
ನೀಡುವುದು ನಿನಗೆ ಅನೇಕ ಅವಕಾಶಗಳು
ಯಾವಾಗಲು ಮನಸ್ಸನ್ನು ನಿನ್ನ ಹತೋಟಿಯಲ್ಲಿ ಇಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸ್ವಲ್ಪ ಭೂಮಿ ಸ್ವಲ್ಪ ಆಕಾಶ

ಸ್ವಲ್ಪ ಭೂಮಿ ಸ್ವಲ್ಪ ಆಕಾಶ
ಒಣಹುಲ್ಲಿನ ಒಂದು ವಸತಿ

ಕೇಳಿದದ್ದು ನಿನ್ನಿಂದ ಹೆಚ್ಚು ಅಲ್ಲವಲ್ಲ
ಕೊಡುವುದಾದರೆ ಜೀವ ಕೊಡುವ
ಭರವಸೆ ಇಲ್ಲವಲ್ಲ
ಯಾರು ನಿನ್ನ ಭರವಸೆಯಲ್ಲಿ
ಎಲ್ಲಿ ಬದುಕುವರು
ಒಣಹುಲ್ಲಿನ ಒಂದು ವಸತಿ 
ಸ್ವಲ್ಪ ಭೂಮಿ ಸ್ವಲ್ಪ ಆಕಾಶ...

ನನ್ನ ಮನೆಯ ಅಂಗಳದಲಿ 

ಒಂದು ಉಯ್ಯಾಲೆ
ಮಣ್ಣಿನ ಸುಗಂಧ ಅಲ್ಲಿ  

ಅಡುಗೆ ಮನೆಯಲ್ಲಿ ಒಲೆ
ಸ್ವಲ್ಪ ಸ್ವಲ್ಪ ಬೆಂಕಿ ಇರಲಿ  

ಸ್ವಲ್ಪ ಹೊಗೆಯ
ಒಣಹುಲ್ಲಿನ ಒಂದು ವಸತಿ

ಸ್ವಲ್ಪ ಭೂಮಿ ಸ್ವಲ್ಪ ಆಕಾಶ...

ರಾತ್ರಿ ಆದ ನಂತರ 

ಹೇಗೆ ದಿನ ಕಳೆಯುವ
ರಾಗಿಯ ಹೊಲದಲ್ಲಿ 

ಕಾಗೆಯನ್ನು ಓಡಿಸುವ
ರಾಗಿಯ ಬೆಳೆಯಂತೆ 

ಮಕ್ಕಲಾಗಲಿ ಯುವ
ಒಣಹುಲ್ಲಿನ ಒಂದು ವಸತಿ

ಸ್ವಲ್ಪ ಭೂಮಿ ಸ್ವಲ್ಪ ಆಕಾಶ...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
थोडीसी जमीन, थोड़ा आसमान
तिनकों का बस, एक आशियाँ

माँगा हैं जो तुम से वो ज्यादा तो नहीं है
देने को तो जान दे दे, वादा तो नहीं है
कोई तेरे वादों पे जीता हैं कहाँ

मेरे घर के आँगन में, छोटा सा झूला हो
सौंधी सौंधी मिट्टी होगी, लेपा हुआ चूल्हा हो
थोड़ी थोड़ी आग होगी, थोड़ा सा धुवां

रात कट जायेगी तो कैसे दिन बिताएंगे
बाजरे के खेतों में कौए उड़ायेंगे
बाजरे के सिट्टों जैसे, बेटे हो जवान
गीतकार
- गुलजार
गायक
- लता - भूपेंद्र
संगीतकार
- राहुलदेव बर्मन
चित्रपट
- सितारा - 1980
http://www.dailymotion.com/video/xniuwc_thodi-si-zameen-thoda-aasman-tinkon-ka-bas-ik-ashiyan-bhupinder-singh-lata-gulzar-s_music

Thursday, June 21, 2012

ಯಶಸ್ಸು

ಮನುಜ....
ಪ್ರಯತ್ನವೇ ಯಶಸ್ಸಿನ ದಾರಿ
ಯಶಸ್ಸಿನ ದರ್ಶನ ಪಡೆ
ಸೋಲಿನ ಮೆಟ್ಟಿಲು ಏರಿ
ಯಶಸ್ಸು ಸುಲಭವಾಗಿ ಸಿಗದು
ಇದು ನಿನ್ನ ಸರಿಯಾದ ಮತ್ತು ಪರಿಪೂರ್ಣ ಪ್ರಯತ್ನದಿಂದಲೇ ಸಿಗುವುದು
ಯಶಸ್ಸು ಪಡೆಯಲು ತನ್ನ ಜ್ಞಾನ, ಕೌಶಲ್ಯ ಮತ್ತು ಪ್ರಯತ್ನ ಬಳಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, June 20, 2012

ಯುದ್ದ

ಅವಳು ನಗುತ್ತಿದ್ದಳು
ಸ್ವಲ್ಪ ಆಶ್ಚರ್ಯಪಟ್ಟೆ
ಅವಳು ನಗುವುದು ಸಹಜ
ಆದರೆ ಇಂದು ಸ್ವಲ್ಪ ಅಸಹಜ 
ನನ್ನ ಅವಳಲ್ಲಿ ಯಾವ ಬಂಧವೋ
ಅವಳನ್ನು ಕಂಡು ತಿಳಿದೇ
ಏನೋ ಮಾತಿದೆ ಎಂದು
ಅವಳನ್ನು ಕೇಳಿದೆ
ಅವಳು ಪುನಃ ನಕ್ಕು ನುಡಿದಳು
ಏನಿಲ್ಲ ಎಂದು
ಆದರೆ ನನಗೆ ಖಾತ್ರಿ
ಏನೋ ಅಡಗಿಸುತ್ತಿದ್ದಾಳೆ ಎಂದು 
ಇವಳ ನಗುವಿನ ಹಿಂದೆ ಅಡಗಿದ
ರಹಸ್ಯ ಏನು
ಯಾಕೋ ನನಗೆ ದುಃಖ ಉಕ್ಕಿ ಬಂತು
ಅವಳನ್ನು ವೇದನೆಯಲ್ಲಿ ನಾ ನೋಡಲಾರೆ
ಇದು ಅವಳಿಗೂ ಗೊತ್ತು
ಅದಕ್ಕೆ ಅವಳು ನಗುವುದು
ಕೋಪದಿಂದ ಒಳ ಕೋಣೆಗೆ ಹೋದೆ
ಅಲ್ಲೊಂದು ಪತ್ರ ಇತ್ತು
ನನ್ನ ಸೇನೆಯ ಪರವಾಗಿ
"ಈಗಲೇ ಬನ್ನಿ ,ಯುದ್ದ ಪ್ರಾರಂಭವಾಗಲಿದೆ ಎಂದು "
ಒಂದೇ ಕ್ಷಣದಲ್ಲಿ ನನಗೆ ಎಲ್ಲ ಅರ್ಥವಾಯಿತು
by ಹರೀಶ್ ಶೆಟ್ಟಿ, ಶಿರ್ವ

ಜೀವನ ಒಂದು ಪಾಠಶಾಲೆ

ಮನುಜ...
ಜೀವನ ಒಂದು ಪಾಠಶಾಲೆ
ದಿನ ನಮಗೆ ಹೊಸ ಪಾಠ ಕಲಿಸುತ್ತದೆ
ನೀನೊಂದು ಒಳ್ಳೆ ವಿಧ್ಯಾರ್ಥಿ ಆಗು
ಜೀವನದ ಅನುಭವ ಪಾಠದಿಂದ ಬದುಕು ಸುಂದರ ಮಾಡು
ಈ ಬದುಕಿಂದ ನೀ ನಿತ್ಯ ಕಲಿ
ಕಲಿತು ನೀ ಇರು ಆನಂದದಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Tuesday, June 19, 2012

ಗೆಳತಿ

ಗೆಳತಿ...
ನಾನಲ್ಲ ನಾಯಕ
ನಿನ್ನ ಜೀವನದ
ಆದರೆ ನೀ ನಾಯಕಿ
ನನ್ನ ಹೃದಯ ಮಂದಿರದ
_____________
ಗೆಳತಿ ...
ನಾನೀಗ
ಒಬ್ಬ ಕವಿ
ಪ್ರೇಮಿ ಅಲ್ಲ
ಆದರೆ ನನ್ನ ಪೆನ್ನು
ಬರೆಯುವುದು ಪ್ರೇಮ ಭಾಷೆಯೆ
______________
ಗೆಳತಿ...
ನೀನು
ನನ್ನನ್ನು ಬಿಟ್ಟ ನಂತರ
ಸನ್ಯಾಸಿ ಆಗುವೆ ಎಂದು 
ಒಂದು ಆಶ್ರಮಕ್ಕೆ ಹೋದೆ
ಅದು ಹುಚ್ಚರ ಆಸ್ಪತ್ರೆ ಎಂದು
ನಂತರ ಗೊತ್ತಾದದ್ದು
_______________
ಗೆಳತಿ...
ನೀನೀಗ
ನನ್ನಿಂದ ದೂರ ದೂರ
ಆದರೆ ನಿನ್ನ
ನೆನಪು
ನನ್ನ ಹತ್ತಿರ ಹತ್ತಿರ
by ಹರೀಶ್ ಶೆಟ್ಟಿ, ಶಿರ್ವ

ಏಕೆ ಬೇಸರ

ಎಲ್ಲವೂ ಇದೆ ನನ್ನ ಹತ್ತಿರ
ಯಾವುದೇ ಆಸೆ ಇಲ್ಲ
ಯಾವುದೇ ಆಕಾಂಕ್ಷೆ ಇಲ್ಲ
ಆದರೂ ಈ ಮನಸ್ಸಲಿ ಏಕೆ ಬೇಸರ !

ನೀರಸ ವಾತಾವರಣ
ಓಡುತ್ತಿರುವ ಮನ
ದಾಹ ಇಲ್ಲದ ಭೂಮಿ ಬಂಜರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸುಖ ಸಂತೋಷ ಮನೆಯಲಿ
ದುಃಖ ಏನೆಂದು ಗೊತ್ತಿಲ್ಲ
ಪ್ರಶ್ನೆ ಹಲವು ಸಿಗುವುದಿಲ್ಲ ಉತ್ತರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸುತ್ತ ಮುತ್ತ ಹಾವಳಿ ನನ್ನವರ
ಸುಖ ಸೌಕರ್ಯ
ಉತ್ತಮ ಉಪಚಾರ
ಆದರೂ ಈ ಮನಸ್ಸಲಿ ಏಕೆ ಬೇಸರ !

ಸೋತಿದೆ ಕಣ್ಣುಗಳು
ಉಳಿಯಲಿಲ್ಲ ಕನಸುಗಳು
ತುಂಬಿದ ಜೀವನ ಖಾಲಿ ಕರ
ಆದರೂ ಈ ಮನಸ್ಸಲಿ ಏಕೆ ಬೇಸರ !
by ಹರೀಶ್ ಶೆಟ್ಟಿ, ಶಿರ್ವ




ಮಾನವತೆ

ಮನುಜ...
ಜಾತಿ ಅಂದರೆ ಭೇದ ಅಲ್ಲ
ಮನುಷ್ಯತ್ವ ಇಲ್ಲದ ಬದುಕು ಬದುಕಲ್ಲ
ಯಾರೂ ಶ್ರೆಷ್ಟನಲ್ಲ
ಯಾರೂ ನೀಚನಲ್ಲ
ನಿನ್ನ ಮತಿಯಲ್ಲಿ ಗೊಂದಲ ಯಾಕೆ
ಎಲ್ಲರ ರಕ್ತ ಕೆಂಪು
ಅನ್ಯರ ಕಣ್ಣೀರು ಒರೆಸಿದ ನಂತರ ತನ್ನ ಬಗ್ಗೆ ಯೋಚಿಸುವವನೆ ಮನುಷ್ಯ
ಮಾನವತೆಯಿಂದ ದೊಡ್ಡ ಧರ್ಮವಿಲ್ಲ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಏಕಾಂಗಿ

ನನ್ನ ಸುತ್ತ ಮುತ್ತ ತುಂಬಿದೆ ಜನ
ಆದರೆ ಏಕಾಂಗಿ ನಾನು ಮತ್ತು ನನ್ನ ಮನ
ರಸ್ತೆಯಲಿ ಓಡುತ್ತಿದೆ ವಾಹನ
ಅವರ ಮೇಲೆ ಇಲ್ಲ ನನ್ನ ಗಮನ
ವೇಗದಿಂದ ಚಲಿಸುತ್ತಿದೆ ನನ್ನ ಯೋಚನಾ
ಮುಖದಲ್ಲಿ ಬೇಸರ ಕಾಲಲ್ಲಿ ಕಂಪನ
ತುಂಬಿದೆ ಕಣ್ಣೀರು ಕಣ್ಣಲ್ಲಿ
ಹೃದಯದಲಿ ಯಾತನ
by ಹರೀಶ್ ಶೆಟ್ಟಿ, ಶಿರ್ವ

Monday, June 18, 2012

ಸುಳ್ಳ ದೋಣಿ

ಮನುಜ...
ಸುಳ್ಳ ದೋಣಿಯಲಿ ಪ್ರವಾಸ ಮಾಡ ಬೇಡ
ದೋಣಿ ಮುಳುಗುವುದು ಖಚಿತ
ಸತ್ಯದ ದೋಣಿಯಲಿ ಸಂಚರಿಸು
ಶಾಂತಿಯ ಪಥದಲಿ ನಡೆ
ಮುಕ್ತಿಯ ಮಾರ್ಗವನ್ನು ಪಡೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ನಕರಾತ್ಮಕ ಸಕಾರಾತ್ಮಕ

ಮನುಜ...
ಜಗದ ನಕರಾತ್ಮಕ
ನಿನ್ನ ಒಳಗೆ ಪ್ರವೇಶಿಸಲು ಬಿಡ ಬೇಡ
ನಿನ್ನ ಅನುಮತಿ ಇಲ್ಲದೆ ಅದು ನಿನ್ನ ಒಳಗೆ ಪ್ರವೇಶಿಸಲಾರದು
ಹಡಗಿನ ಒಳಗೆ ನೀರು ನುಗ್ಗುವ ಹೊರತು
ಸಾಗರದ ಎಲ್ಲ ನೀರೂ ಕೂಡ ಹಡಗು ಮುಳುಗಿಸಲಾರದು
ಜಗದ ಎಲ್ಲ ನಕರಾತ್ಮಕದಿಂದ ದೂರವಿರು
ಸಕಾರಾತ್ಮಕ ಮನೋಭಾವ ಇಟ್ಟಿರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, June 16, 2012

ಗೆಳತಿ

ಗೆಳತಿ
ನೀ ನಕ್ಕರೆ
ಮೋಡದ ಮರೆಯಲ್ಲಿ ತಾರೆ ಮಿನುಗುವ ಹಾಗೆ
_________
ಗೆಳತಿ
ನಿನ್ನ ಪತ್ರದಲಿ ಬರೆದ
ಕೇವಲ ನಾಲ್ಕು ಅಕ್ಷರಗಳು
ನನಗೆ ಓದಿ ಮುಗಿಯದ ಪ್ರೀತಿ ಕಾದಂಬರಿ
___________
ಗೆಳತಿ
ನೀನು
ಕೊಟ್ಟ ಕ್ಯಾಡ್ಬರಿ ಚಾಕ್ಲೇಟ್
ತಿನ್ನದೆಯೇ ಸವಿ ರುಚಿ ನೀಡುತ್ತಿದೆ
____________
ಗೆಳತಿ
ನಿನ್ನ ಕೋಪ
ಒಂದೇ ನನ್ನ ಹೃದಯಕ್ಕೆ ಪೆಟ್ಟು
ಇಲ್ಲಾದರೆ ನನ್ನ ಕಿಸೆಗೆ ಪೆಟ್ಟು
_____________
ಗೆಳತಿ
ನಿನ್ನನ್ನು
ಕಾಯುವುದು ಅಂದರೆ
ಒಣ ಭೂಮಿ ಮಳೆಯನ್ನು ಕಾಯುವಂತೆ
by ಹರೀಶ್ ಶೆಟ್ಟಿ, ಶಿರ್ವ

ನಂಬಿಕೆ

ಮನುಜ...
ಹಕ್ಕಿ ಕುಳಿತಿದೆ ಮರದ ಶಾಖೆಯಲಿ
ಅಲುಗಾಡುವ ಶಾಖೆಯಿಂದ ಭಯವಿಲ್ಲ
ಅದಕ್ಕೆ ವಿಶ್ವಾಸ ತನ್ನ ರೆಕ್ಕೆಯಲಿ
ಮರದ ಶಾಖೆಯಲಿ ಅಲ್ಲ  
ಇತರರ ಮೇಲೆ ಅವಲಂಬನ ಆಗದಿರು
ತನ್ನ ಮೇಲೆ ಯಾವಾಗಲು ನಂಬಿಕೆ ಇಡು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಕಲಿಯುಗ

ಮನುಜ...
ಕಾಲ ಕೆಟ್ಟವೆಂದರೆ ಆಯಿತೆ
ನೀನು ಕೆಟ್ಟವನಲ್ಲವೇ
ಕಲಿಯುಗವೆಂದು ನಿರ್ಲಕ್ಷಿಸದಿರು
ಈ ಯುಗಕ್ಕೆ ಪ್ರೇರಣೆಯಾಗು
ಕಲಿ ಕಾಲದ ಕತ್ತಲೆಯಲ್ಲಿ
ನೀನೊಂದು ಮಿನುಗುವ ದೀಪವಾಗು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Thursday, June 14, 2012

ಸತ್ಯ ಸುಳ್ಳು


ಅವರು ಮಹಾಪುರುಷ, ಆಧ್ಯಾತ್ಮಿಕ ಗುರು, ಸತ್ಯವಂತರು.

ನ್ಯೂಸ್ ಸಂದರ್ಶನ ಮಾಡುವವರು ಅವರನ್ನು ಕೇಳಿದರು " ಗುರುಗಳೇ ಇಂದು ಹಲವು ಸ್ವಾಮಿಗಳ , ಗುರುಗಳ ಒಳ ಗುಟ್ಟು ಬಹಿರಂಗವಾಗುತ್ತಿದೆ, ಇದರಿಂದ ನಿಮ್ಮ ಇಮೇಜ್ ಹಾಳಾಗುದಿಲ್ಲವೇ , ಇದರ ಬಗ್ಗೆ ನೀವೇನು ಹೇಳುವಿರಿ.

ಗುರುಗಳು ಶಾಂತವಾಗಿ ನಕ್ಕರು ಹಾಗು ಕೇಳಿದರು " ಸತ್ಯದ ವಿರುದ್ದ ಏನು" ?

ಸಂದರ್ಶಕ : ಸುಳ್ಳು

ಗುರುಗಳು : ರಾಮ ರಾವಣರಲ್ಲಿ ವಿಜಯಿ ಆದದ್ದು ಯಾರೂ ?

ಸಂದರ್ಶಕ : ರಾಮ

ಗುರುಗಳು : ಹಾಗಾದರೆ ನಾನು ಸತ್ಯ ಆದರೆ ನನಗೆ ಚಿಂತೆ ಮಾಡಬೇಕಾಗಿಲ್ಲ  ಸತ್ಯದ ಜಯವಾಗುವುದು, ನಾನು ಸುಳ್ಳಾದರೆ ನನ್ನ ವಿನಾಶ ನಿಶ್ಚಿತ.

by ಹರೀಶ್ ಶೆಟ್ಟಿ, ಶಿರ್ವ

_________________________

ದೇವರು

ಮನುಜ....
ಹುಡುಕುವೆ ದೇವರನ್ನು
ಮಂದಿರ ,ಮಸ್ಜಿದ್ ,ಚರ್ಚ್ ,ಗುರುದ್ವಾರದಲ್ಲಿಯೇ
ಹೇಗೆ ಸಿಗುವರು ಅವರು ಅಲ್ಲಿ
ಅಡಗಿದ್ದಾರೆ ಅವರು ನಿನ್ನಲ್ಲಿಯೇ
ಸಿಗಲಿಕ್ಕಿಲ್ಲ ದೇವರು ನಿನಗೆ ಪೂಜ್ಯ ಸ್ಥಳದಲಿ
ನೆಲೆಸುವರು ಅವರು ನಿನ್ನ ಮನ ಮಂದಿರದಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, June 13, 2012

ನಾನು ಬುದ್ಧನಲ್ಲ

ನಾನು ಬುದ್ಧನಲ್ಲ
ಬುದ್ಧನಾಗುವ ಬಯಕೆಯು ಇಲ್ಲ
ಬುದ್ಧ ಮಹಾನ
ನಾನು ತುಚ್ಛ
ನನಗೆ ಈ ಪದವಿ ಬೇಡ !

ನನಗೆ ಸನ್ಯಾಸ ಬೇಡ
ಸಂಸಾರ ನನ್ನ ಕರ್ತವ್ಯ
ನಿಷ್ಠೆಯಿಂದ ಪಾಲಿಸುವೆ
ಸುಖವನ್ನು ಆನಂದಿಸುವೆ
ಕಷ್ಟಗಳನ್ನು ಧೈರ್ಯದಿಂದ ಎದುರಿಸುವೆ !

ಪ್ರವಚನೆ ಮಾಡಲಾರೆ
ಕೇಳಿದ ಓದಿದ ಯೋಚಿಸಿದ
ಹಿತ ವಚನ ನುಡಿಯುವೆ
ಸ್ವಲ್ಪ ಬರೆಯುವ ಆಸಕ್ತಿ
ಕಾವ್ಯ ಕವನಗಳನ್ನು ಸೃಷ್ಟಿಸುವೆ !

ನಾನು ಸಾಧಾರಣ ಮಾನವ
ತಪ್ಪು ಕೆಲಸ ಮಾಡಲು ಹಿಂಜರಿಯುವೆ
ನೆಮ್ಮದಿಯಿಂದ ಇರಲು ಬಯಸುವೆ
ನನ್ನ ಪುಟ್ಟ ಸಂಸಾರದಲ್ಲಿ ಶಾಂತಿ ಹುಡುಕುವೆ
ತೃಪ್ತಿಯಿಂದ ಜೀವನ ಕಳೆಯುವೆ !

ನಾನು ದೇವ ದೂತನಲ್ಲ
ಮನುಷ್ಯ ಜಾತಿ
ಆಸೆ ಆಕಾಂಕ್ಷೆ ತುಂಬಿದೆ ನನ್ನಲ್ಲಿ
ಮೋಹ ಮಾಯೆ ತ್ಯಜಿಸಲಾರೆ
ನಾನು ಬುದ್ಧ ಆಗಲಾರೆ !
by ಹರೀಶ್ ಶೆಟ್ಟಿ, ಶಿರ್ವ

ಮುತ್ತಿನಂತೆ ಹೊಳೆ

ಮನುಜ...
ಸರೋವರದಲ್ಲಿದ್ದ
ಒಂದು ನೀರ ಹನಿಯ ಮೌಲ್ಯ ಏನಿದೆ 
ಆದರೆ ಅದೇ ನೀರ ಹನಿ
ಕಮಲದ ಹೂವ ಮೇಲೆ ಬಿದ್ದರೆ
ಮುತ್ತಿನಂತೆ ಹೊಳೆಯುತ್ತದೆ
ಮುತ್ತಿನಂತೆ ಹೊಳೆಯಲು
ತನಗಾಗಿ ಅತ್ಯುತ್ತಮ ಜಾಗದ ಆಯ್ಕೆ ಮಾಡೆಂದ ಶ್ರೀ ಹರಿ
by ಹರೀಶ್ ಶೆಟ್ಟಿ,ಶಿರ್ವ

Tuesday, June 12, 2012

ನನ್ನ ಬರಹ

ನಾನು ಮೌನ
ಆದರೆ ನನ್ನ ಮನಸ್ಸು ಮೌನವಿಲ್ಲ
ಭಾವನೆಗಳು ಸುಮ್ಮನಿರುವುದಿಲ್ಲ
ನನ್ನ ಕೈ ಶಾಂತವಾಗುವುದಿಲ್ಲ
ನನ್ನ ಬರಹ ನಿಲ್ಲುವುದಿಲ್ಲ
by ಹರೀಶ್ ಶೆಟ್ಟಿ, ಶಿರ್ವ

ನನ್ನ ಜೀವನ ಖಾಲಿ ಹಾಳೆ

ನನ್ನ ಜೀವನ ಖಾಲಿ ಹಾಳೆ-೨
ಖಾಲಿಯೇ  ಉಳಿಯಿತು
ಬರೆದ ಪದಗಳು
ಬರೆದ ಪದಗಳು ಕಣ್ಣೀರಲ್ಲಿ ಹರಿಯಿತು
ನನ್ನ ಜೀವನ ಖಾಲಿ ಹಾಳೆ .....

ಹೊಯ್ಗಾಳಿಯ ಅಲೆ ಬೀಸಿತು-೨
ರೆಂಬೆಯಿಂದ ಹೂವು ಬಿತ್ತು-೨
ಪವನದ ಅಲ್ಲ ನಭದ ಅಲ್ಲ
ಯಾರದು ಈ ತಪ್ಪು-೨
ಮರೆಯಾಯಿತು
ಮರೆಯಾಯಿತು ಸುಗಂಧ
ಗಾಳಿಯಲಿ ಬರಿ ನೆನಪು ಉಳಿಯಿತು
ನನ್ನ ಜೀವನ ಖಾಲಿ ಹಾಳೆ-೨
ಖಾಲಿಯೇ  ಉಳಿಯಿತು......

ಹಾರುವ ಹಕ್ಕಿಯ ನೆಲೆ ಅಲ್ಲಿ-೨
ಇಲ್ಲ ವಸತಿ ನನ್ನಲ್ಲಿ-೨
ಗುರಿ ಗೊತ್ತಿಲ್ಲ ತಾಣದ ಅರಿವಿಲ್ಲ
ಹೋಗಲಿದೆ ನನಗೆ ಎಲ್ಲಿ-೨
ಕನಸಾಗಿ ಒಂದು
ಕನಸಾಗಿ ಒಂದು
ಜೊತೆಗಾರನ ಸಹವಾಸ ಉಳಿಯಿತು
ನನ್ನ ಜೀವನ ಖಾಲಿ ಹಾಳೆ-೨
ಖಾಲಿಯೇ  ಉಳಿಯಿತು......

ದುಃಖದ ಒಳಗೆ ಸುಖದ ಜ್ಯೋತಿ-೨
ದುಃಖವೆ ಸುಖದ ಜ್ಞಾನ-೨
ವೇದನೆ ಸಹಿಸಿ ಹುಟ್ಟುವನು
ಪ್ರತಿಯೊಬ್ಬ ಮನುಷ್ಯ-೨
ಸುಖದಲಿರುವನು
ಸುಖದಲಿರುವನು
ಸಂತೋಷದಿಂದ ನೋವ ಸಹಿಸುವವನು
ನನ್ನ ಜೀವನ ಖಾಲಿ ಹಾಳೆ-೨
ಖಾಲಿಯೇ  ಉಳಿಯಿತು......

ಮೂಲ ರಚನೆ :ಎಂ .ಜಿ .ಹಶ್ಮತ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ 


Mera jeevan kora kaagaz kora hi reh gaya -2
Jo likha tha
Jo likha tha aansoon sang beh gaya
Mera jeevan 
Mera jeevan kora kaagaz kora hi reh gaya

Ik hawa jhoonka aaya -2
Tuut dali se phool -2
Na pavan ki na chaman ki
Kiski hai ye bhool -2
Kho gayi kho gayi
Khushboo hawa mein kuch na reh gaya
Mera jeevan kora kaagaz kora hi reh gaya

Udte panchi ka thikana -2
Mera na koijahan -2
Na dagar hai na khabar hai
Jana hai mujhko kahan -2
Ban ke sapna -2
Humsafar ka saath reh gaya
Mera jeevan kora kaagaz kora hi reh gaya

Dukh ke andar sukh ki jyoti
Dukh hi sukh ka gyan -2
Dard sah ke janm leta
Har koi insan -2
Vo sukhi hai -2
Jo khushi se dard sah gaya
Mera jeevan kora kaagaz kora hi reh gaya 
www.youtube.com/watch?v=81v-RHKZbiw 


ಜೀವನ ಸೂರ್ಯ

ಮನುಜ...
ನಿನ್ನ ಜೀವನ ಸೂರ್ಯನಂತೆ ಆಗಲಿ
ಸ್ವತಃ ಬೆಂದು ಅನ್ಯರಿಗೆ ಜೀವನ ಪ್ರಕಾಶ ನೀಡಲಿ
ನೀ ನಿನ್ನ ಸಂಸಾರದ ಸೂರ್ಯನಾಗು
ನಿನ್ನಿಂದ ಅವರ ಜೀವನ ಬೆಳಗಲಿ
ನೀನು ಅವರ ಬದುಕಿಗೆ ದಾರಿ ದೀಪವಾಗು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Monday, June 11, 2012

ನಾನೊಬ್ಬ ಸಾಧಾರಣ ಮನುಷ್ಯ

ನಾನು ಒಳ್ಳೆ ಮನುಷ್ಯನಲ್ಲ
ನನ್ನಲ್ಲಿ ಅನೇಕ ಅವಗುಣ
ನನ್ನಲ್ಲಿ ಉತ್ತಮ ಗುಣವೇನಿಲ್ಲ
ನಾನೇನು ಸಂಭಾವಿತ ಪುರುಷನಲ್ಲ
ಯಾಕೆಂದರೆ ನಾನೊಬ್ಬ ಸಾಧಾರಣ ಮನುಷ್ಯ !!

ನನ್ನ ಅಲ್ಪ ಬುದ್ಧಿ ನನಗೆ ಗೊತ್ತು
ಕೇವಲ ದೊಡ್ಡ ದೊಡ್ಡ ಮಾತು
ಒಳಗೆ ಮೋಸ ವಂಚನೆಯ ಕಟ್ಟು
ಇದೇ ನನ್ನ ಅಂತಸ್ತು
ಯಾಕೆಂದರೆ ನಾನೊಬ್ಬ ಸಾಧಾರಣ ಮನುಷ್ಯ !!

ನನ್ನ ವಿಚಾರ ಎಲ್ಲರಿಂದ ಭಿನ್ನ
ಸುಂದರ ಅದ್ಭುತ ಮನ ಮೋಹಿಸುವ
ಆದರೆ ನಾನು ಹೇಳುವುದು ಒಂದು
ಮಾಡುವುದು ಒಂದು
ಯಾಕೆಂದರೆ ನಾನೊಬ್ಬ ಸಾಧಾರಣ ಮನುಷ್ಯ !!

ನನ್ನ ಅಹಂಕಾರ ನನ್ನತನ
ನನ್ನ ಬೆನ್ನಟ್ಟಿ ಬರುತ್ತದೆ
ಲೋಭ ಆಸೂಯೆ ಆಸೆ
ನೆಂಟನಂತೆ ನನ್ನಲ್ಲಿ ನೆಲೆಸಿದೆ
ಯಾಕೆಂದರೆ ನಾನೊಬ್ಬ ಸಾಧಾರಣ ಮನುಷ್ಯ !
by ಹರೀಶ್ ಶೆಟ್ಟಿ,ಶಿರ್ವ
(ಒಂದು ಹಿಂದಿ ಕವಿತೆ ಓದಿ ಅದರಿಂದ ಪ್ರೇರಿತವಾಗಿ ಬರೆದದ್ದು.)


ದೇವರ ದರ್ಶನ

ಮನುಜ...
ನಿತ್ಯ ದೇವರ ದರ್ಶನ ಮಾಡು
ಗಾಢ ಧ್ಯಾನದಿಂದ
ನಿನ್ನ ಜೀವನದ ಪ್ರತಿ ಕರ್ತವ್ಯಪರ
ಚಟುವಟಿಕೆ ಸಫಲವಾಗುವುದು
ದೇವರ ಪ್ರೀತಿ ಮಾರ್ಗದರ್ಶನ ಅನುಸರಿಸುವುದರಿಂದ
ಸಿಗುವುದು ನಿನಗೆ ಶಾಂತಿ ಮತ್ತು ಸಂತೋಷ
ಶಾಶ್ವತವಾಗಿ ಇದರಿಂದ
by ಹರೀಶ್ ಶೆಟ್ಟಿ, ಶಿರ್ವ

Sunday, June 10, 2012

ಅರ್ಥವಿಲ್ಲದ ಸಂಬಂಧ

ಮನುಜ...
ಜೀವಿತ ಇರುವಾಗ ನಿನ್ನಲ್ಲಿ ಕರೆಯಲಿಲ್ಲ
ಜೀವಿತ ಇರುವಾಗ ಅವನಲ್ಲಿ ಹೋಗಲಿಲ್ಲ
ಜೀವಿತ ಇರುವಾಗ ಜೀವನ ಪೂರ್ತಿ ಮಾಡಿದೆ ಅವನ ಪರಿಹಾಸ
ಇಂದು ಮರಣದ ನಂತರ ಅವನ ಅಂತ್ಯ ಸಂಸ್ಕಾರಕ್ಕೆ ಹೋಗುವೆ
ಅಲ್ಲಿ ನಿನ್ನ ಏನು ಕೆಲಸ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Saturday, June 9, 2012

ವಿಫಲ ಪ್ರೇಮದ ಮಳೆಗಾಲ

ಮನಸ್ಸಿನ ಮೋಡಗಳು
ಇಂದು ಭಾವನೆಗಳ
ಮಳೆ ಹನಿಗಳನ್ನು
ಕಣ್ಣ ಮೂಲಕ ಧಾರಾಳವಾಗಿ
ಹೊರ ಚೆಲ್ಲುತ್ತಿದೆ!

ಹೃದಯದ ಗುಡುಗು
ಅರ್ಭಟ ದೊಂದಿಗೆ
ಕಣ್ಣಿಂದ
ವಿಫಲ ಪ್ರೇಮದ
ನೋವ ಮಳೆ ಸುರಿಯುತ್ತಿದೆ !

ಪ್ರೀತಿಯ ಮಿಂಚು
ಬಡಿದು
ಸುಟ್ಟು ಹೋದ
ನನ್ನ ಜೀವನ ಬೂದಿಯಲ್ಲಿ 
ಇಂದೂ ಪ್ರೇಮ ಜ್ವಾಲೆಯ ಕಿಡಿ ಮಿನುಗುತ್ತಿದೆ !
by ಹರೀಶ್ ಶೆಟ್ಟಿ, ಶಿರ್ವ 

ಕಷ್ಟ ಸುಖ

ಮನುಜ...
ಕಷ್ಟ ಸುಖ ಸಮಯದ ಚಕ್ರ
ಇಂದು ಕಷ್ಟ ನಾಳೆ ಸುಖ
ಸುಖದಲ್ಲಿ ಎಲ್ಲರೂ ಬರುವರು
ಕಷ್ಟದಲ್ಲಿ ಯಾರೂ ಇಲ್ಲ ಸಖ
ಜೀವನ ಅನುಭವದ ಸಾಗರ
ಶಕ್ತಿ ಧೈರ್ಯದಿಂದ ಭಯ ಪಡದೆ ಮುಂದುವರಿಯುವವನೆ
ಪಡೆಯುವನು ಅಮೃತ ಜೀವನದ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಅಸೂಯೆ

ಮನುಜ,
ಅಸೂಯೆಯ ಮರ ಬೆಳೆಸದಿರು
ಹೃದಯ ಮನಸ್ಸಿನ ಅಂಗಳದಲ್ಲಿ
ಇದರ ಹಣ್ಣು ಕಹಿ ಕಹಿ
ರುಚಿಯಾಗದು ಯಾರಿಗೂ
ನಿನ್ನಲ್ಲಿಯ ಅಸುರಕ್ಷಿತ ಭಾವೆನೆಯನ್ನು ಹೊರ ದೂಡು
ಮಾತ್ಸರ್ಯ ಬೇಡ ಪ್ರೀತಿಯ ಮರ ಬೆಳೆಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Thursday, June 7, 2012

ಯೋಚನೆಯ ಸೂರ್ಯ

ಜೀವನದ ಏಕಾಂತ ಸಂಜೆಯಲಿ
ಹೀಗೆಯೇ ಯೋಚಿಸುತ್ತಿದ್ದೇನೆ 
ಯೋಚನೆಯ ಸೂರ್ಯ
ತಲುಪಿತು ಗತ ಜೀವನದಲಿ !

ಪ್ರೀತಿಯಲ್ಲಾದ ಸೋಲಿನಿಂದ
ಸ್ವತಃ ನನ್ನನ್ನೇ ಮರೆತ್ತಿದ್ದೇನೆ  
ಆದರೂ ಇಂದೂ ಕೇವಲ
ಅವಳದ್ದೇ ವಿಚಾರ ಮನಸ್ಸಲ್ಲಿ  !

ತುಂಡಾದ ಹೃದಯವನ್ನು
ಕಣ್ಣೀರಿಂದ ಮೀಯಿಸುತ್ತಿದ್ದೇನೆ 
ಆದರೂ ಆ ಎಲ್ಲ ನೆನಪುಗಳು
ಇಂದೂ ಅಡಗಿದೆ ಆದೇ ಹೃದಯದಲಿ!

ತೀರದ ಬಯಕೆಗಳನ್ನು
ಮನದ ಬುಟ್ಟಿಯಲ್ಲಿ ಬಚ್ಚಿಟ್ಟಿದ್ದೇನೆ
ಆದರೂ ಆಸೆಯ ಅಲೆಗಳು
ಅಪ್ಪಳಿಸುತ್ತದೆ ಈ ದುರ್ಬಲ ಮನಸ್ಸಲಿ!

ಅನೇಕ ಗಾಯಗಳ ವೇದನೆಯಲಿ
ಇಂದೂ ಬಳಲುತ್ತಿದ್ದೇನೆ 
ಆದರೂ ಬದುಕು ಹೀಗೆಯೇ ವ್ಯರ್ಥ ಮಾಡುತ್ತಿದ್ದೇನೆ
ಪ್ರೀತಿ ಎಂಬ ಔಷದಿಯ ಹುಡುಕಾಟದಲಿ!
by ಹರೀಶ್ ಶೆಟಿ, ಶಿರ್ವ

ಒಂದು ಬೆವರ ನೀರು

ಮನುಜ...
ಇಂದಿನ ಯೌವನದ ನಿನ್ನ ಒಂದು ಬೆವರ ನೀರು
ಮುಂದಿನ ವೃದ್ಧಾಪ್ಯದಲ್ಲಿ ನಿನ್ನ ಹತ್ತು ಕಣ್ಣೀರನ್ನು ಒರೆಸುವುದು
ಯೌವನ ಹೀಗೆಯೇ ಹಾಳು ಮಾಡದಿರು
ಇಳಿ ವಯಸ್ಸಲ್ಲಿ ಅಸಹಾಯಕ ಆಗದಿರು
ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, June 6, 2012

ಪಂಜರ

ಯಾಕೆ ಹೀಗೆಯೇ
ಜೀವನ ಕಳೆಯುವೆ
ಎಲ್ಲ ಆಸೆ ಆಕಾಂಕ್ಷೆಯನ್ನು
ಹೃದಯದಲ್ಲಿ ಅಡಗಿಸುವೆ
ಮನಸ್ಸಲ್ಲಿದ್ದ ಭಾವನೆಗಳನ್ನು
ಹೊರ ಚಿಮ್ಮಲು ಬಿಡು
ಮಲಗಿದ ಬಯಕೆಗಳನ್ನು ಎಬ್ಬಿಸು
ಒಣಗಿದ ರೆಂಬೆಯಲ್ಲಿ
ಪುನಃ ಎಲೆ ಚಿಗುರಬಹುದು
ನಂದಿ ಹೋದ ಬೂದಿಯಲ್ಲಿ 
ಜ್ವಾಲೆ ಧಗಧಗಿಸಬಹುದು
ಬಾಡಿದ ಹೂಗಳು
ಪುನಃ ಪರಿಮಳಿಸಬಹುದು 
ಪ್ರಪಂಚದ ರೂಢಿ ಪರಂಪರೆಯನ್ನು ಬಿಟ್ಟು ಬಿಡು
ಹೃದಯದ ಮಾರ್ಗ ಅನುಸರಿಸು
ಮುಚ್ಚಿದ ಪಂಜರ ತೆರೆ
ಸ್ವಚ್ಚ ನಿರ್ಮಲ ಗಾಳಿಯಲ್ಲಿ ಉಸಿರಾಡು
ಜೀವನದ ಮಧುರ ಗೀತೆ ಹಾಡು
by ಹರೀಶ್ ಶೆಟ್ಟಿ, ಶಿರ್ವ




ತಾಳ್ಮೆ

ಮನುಜ...
"ತಾಳ್ಮೆ" ಎಂಬ ವಾಹನದಲ್ಲಿ ಸವಾರಿ ಮಾಡು
ಇದು ತನ್ನ ಪ್ರಯಾಣಿಕರನ್ನು ಯಾವಾಗಲು ಬೀಳಲು ಬಿಡುದಿಲ್ಲ
ಯಾರ ಕಾಲಿಗೂ ಅಲ್ಲ
ಯಾರ ದೃಷ್ಟಿಯಿಂದಲೂ ಅಲ್ಲ
"ತಾಳ್ಮೆ" ಒಂದು ಗುರು
ನೀನು "ತಾಳ್ಮೆ" ಯ ಶಿಷ್ಯನಾಗು ಎಂದ ಶ್ರೀ ಹರಿ
(ತಾಳ್ಮೆ = ಸಹನಶೀಲತೆ)
by ಹರೀಶ್ ಶೆಟ್ಟಿ, ಶಿರ್ವ

Tuesday, June 5, 2012

ಅವಳಿಗಾಗಿ

ಅಂದವಾಗಿ ಅರಳಿ
ಅವಳ ಮನ ಸೆಳೆಯುವೆ
ಅವಳ ಜಡೆಯಲ್ಲಿ
ನಾ ಮೆರೆಯುವೆ
ನಾನೊಂದು ಪರಿಮಳದ ಹೂವಾಗುವೆ !

ಸುಂದರ ಪದಗಳಿಂದ
ಅವಳ ಸೌಂದರ್ಯ ವರ್ಣಿಸುವೆ
ಅವಳನ್ನು ಹೊಗಳಿ
ಅದ್ಭುತ ಕಾವ್ಯ ರಚಿಸುವೆ
ನಾನೊಂದು ಪ್ರೇಮ ಕವಿಯಾಗುವೆ!

ರಾತ್ರಿಯಲಿ ಅವಳ
ನಿದ್ದೆಯಲಿ ನಾ ಬರುವೆ
ಅವಳು ಕಾಣುವ
ಸ್ವಪ್ನದಲಿ ನಾ ಇರುವೆ
ನಾನೊಂದು ಸುಂದರ ಕನಸಾಗುವೆ!
by ಹರೀಶ್ ಶೆಟ್ಟಿ, ಶಿರ್ವ

ಮಕ್ಕಳು


ಮನುಜ
ಮಕ್ಕಳು ಕಚ್ಚಾ ಮಡಕೆಯಂತೆ
ನೀ ಕುಂಬಾರನಾಗು
ಮಾಡಬೇಡ ಅವರಿಗೆ ಕಿರಿಕಿರಿ
ನೀನೂ ಅವರೊಂದಿಗೆ ಮಕ್ಕಳಾಗು
ಸಮಯ ಬಂದಂತೆ ಅವರು ಪರಿಪಕ್ವ ಆಗುವರು
ನೀನು ತನ್ನ ಕರ್ತವ್ಯ ನಿಭಾಯಿಸಿ ನಿಶ್ಚಿಂತನಾಗು
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...