Tuesday, 4 December, 2012

ಯಾರನ್ನು ಕಾಯುತ್ತಿರುವೆ

ಯಾರನ್ನು ಕಾಯುತ್ತಿರುವೆ
ಹೇ ಮನಸ್ಸೇ ಹೇ ಮರುಳು 
ಮೈಲುಗಟ್ಟಲೆ ಮೌನವಿದೆ 
ವರ್ಷಗಟ್ಟಲೆ ಏಕಾಂತವಿದೆ  
ಮರೆತ್ತಿದ್ದಾರೆ  ಜಗವೆಲ್ಲ
ನಿನ್ನನ್ನೂ ನನ್ನನ್ನೂ
ಮತ್ಯಾಕೆ ಕಣ್ಣು ತುಂಬಿ ಬಂದಿದೆ

ಯಾವುದೇ ನೆರಳಿಲ್ಲ ಹಾದಿಯಲಿ
ಯಾರೂ ಬರಲಾರರು ಬಾಹುಗಳಲಿ
ನಿನಗಾಗಿ ನನಗಾಗಿ
ಯಾರಿಲ್ಲ ಅಳುವವರು
ಸುಳ್ಳು ಬಂಧವೆಂದಿಲ್ಲ ಪ್ರೀತಿಯಲಿ 
ನೀನ್ಯಾಕೆ ಮುಳುಗಿರುವೆ ದುಃಖದಲಿ
ಒಬ್ಬರು ಇನ್ನೊಬ್ಬರಿಗಾಗಿ ಸಾಯುವರು
ಹೀಗೆ ಎಂದೂ ಆಗಲಿಕ್ಕಿಲ್ಲ
ಯಾರಿಲ್ಲ ಈ ಜಗದಲಿ
ಅನ್ಯರ ವೇದನೆ ಹಂಚುವವರು
ಓ ಯಾರನ್ನು  ಕಾಯುತ್ತಿರುವೆ...

ನಿನಗೇನು ಕಳೆದೋದ ರಾತ್ರಿಯಿಂದ
ನನಗೇನು ಮರೆಯಾಗಿದ ಮಾತಿನಿಂದ
ಶಯನ ಅಲ್ಲದೆ ಚಿತೆಯೇ ಇರಲಿ
ಮಲಗಲೇ  ಬೇಕು
ಸರಿದೋಯಿತು ಜಾರಿ ಹೋದ ಹಗ್ಗ ಕೈಯಿಂದ
ಏನಾಗ ಬೇಕಿದೆ ಬಿಟ್ಟೋದ ಜತೆಯಿಂದ  
ಖುಷಿ ಎಲ್ಲಿ ಕೇಳಿದೆ ನೀನು
ಅಲ್ಲಿಯೇ ನನಗೆ ಅಳಬೇಕಾಗುವುದು
ಯಾರಿಲ್ಲ ನಿನ್ನ ಯಾರಿಲ್ಲ ನನ್ನ
ಮತ್ಯಾರ ನೆನಪು ಬಂದಿದೆ
ಓ ಯಾರನ್ನು ಕಾಯುತ್ತಿರುವೆ...

ಮೂಲ : ಸಾಹಿರ್ ಲುದ್ಯನ್ವಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಆರ್.ಡಿ.ಬರ್ಮನ್
ಚಿತ್ರ : ಜೋಶಿಲೇ

Kiska Rasta Dekhe
Ae Dil Ae Saudaai
Meelon Hai Khamoshi
Barson Hai Tanhaai
Bhuli Duniya Kabhi Ki Tujhe Bhi Mujhe Bhi
Phir Kyon Aankh Bhar Aai
O Kiska Rasta Dekhe...

Koi Bhi Saaya Nahin Raahon Mein
Koi Bhi Aayega Na Baahon Mein
Tere Liye Mere Liye Koi Nahin Rone Waala Ho
Jhuta Bhi Naata Nahin Chaahon Mein
Tu Hi Kyon Dubaa Rahey Aahon Mein
Koi Kisi Sang Marey Aisa Nahin Hone Waala
Koi Nahin Jo Yunhi Jahaan Mein Baante Peer Paraee
Ho Kiska Rasta Dekhe...

Tujhe Kya Beeti Hui Raaton Se
Mujhe Kya Khoyi Hui Baaton Se
Sej Nahin Chita Sahi Jo Bhi Miley Sona Hoga Ho
Gai Jo Dori Chhuti Haathon Se O
Lena Kya Chhute Hue Saathon Se
Khushi Jahaan Maangi Tuney Wahin Mujhe Rona Hoga
Na Koi Tera Na Koi Mera Phir Kiski Yaad Aaee
O Kiska Rasta Dekhe...
http://www.youtube.com/watch?v=n72UXTTqHjc

No comments:

Post a Comment