Saturday 15 December 2012

ಪ್ರೇಮ ಗಿಡ

ಗೆಳತಿ
ಅಂದು
ನಾವು ರಸ್ತೆಯಲಿ
ನಡೆಯುತ್ತಿದ್ದಂತೆ
ಏಕಾಏಕಿ
ಮಳೆ ಬಂದು
ನಮ್ಮ
ಜೀವನ ಮರುಭೂಮಿಯಲಿ
ಪ್ರಥಮವಾಗಿ
ಪ್ರೇಮ ಬೀಜ ಮೊಳಕೆಯೊಡೆಯಿತು !

ದಿನ
ಉರುಳಿದಂತೆ
ನಮ್ಮ
ಪ್ರೀತಿಯ ಗಿಡ
ಕನಸ ಪುಷ್ಪಗಳನ್ನು
ಅರಳಿಸುತ
ನಮ್ಮನ್ನು ಅದರ
ಸುಗಂಧದಲ್ಲಿ
ಮೈ ಮನಸ್ಸು
ಮರೆಯುವಂತೆ ಮಾಡಿತು!

ಆದರೆ
ಸಮಾಜದ
ರೂಢಿ ಪರಂಪರೆಯ
ಬಿರಿಸು ಬಿರುಗಾಳಿ
ನಮ್ಮ ಪ್ರೀತಿಯ ಗಿಡವನ್ನು
ಒಂದೇ ಕ್ಷಣದಲ್ಲಿ
ನೆಲದಿಂದ ಕಿತ್ತು ಹಾಕಿ
ನಮ್ಮನ್ನು ಬೇರೆ ಬೇರೆ
ದಿಶೆಯಲಿ ಎಸೆಯಿತು !
 
ಒಟ್ಟಿಗೆ
ಕಳೆದ ಪ್ರೀತಿಯ
ದಿನಗಳ ನೆನಪು 
ನಮ್ಮ ಜೀವನ ಸಾಗರದಲಿ
ನೋವ ಅಲೆಗಳನ್ನು ಎಬ್ಬಿಸುತ್ತಿದ್ದರೂ 
ಇಂದು
ಕೇವಲ ಆ ನೆನಪೆ
ನಮ್ಮ ಬದುಕಾಯಿತು !
by ಹರೀಶ್ ಶೆಟ್ಟಿ, ಶಿರ್ವ
 

No comments:

Post a Comment