Wednesday 28 November 2012

ನಮಗೆ ನಾವೇ ಪ್ರೇರಣೆ

ನಮಗೆ ನಾವೇ ಪ್ರೇರಣೆ
ನಮ್ಮ ತಪ್ಪುಗಳೆ ನಮ್ಮ ಮಾರ್ಗದರ್ಶಕ
ನಮ್ಮ ಆತ್ಮ ಸಂತುಷ್ಟಿಯೆ ನಮ್ಮ ಪ್ರಶಂಸೆ 
ನಮ್ಮ ಕೈಗಳೆ ನಮ್ಮ ಸೊತ್ತು 
ನಮ್ಮ ದೇಹವೆ ನಮ್ಮ ಸಾಮ್ರಾಜ್ಯ
ನಮ್ಮ ನಾಲಗೆ ನಮ್ಮ ಶಸ್ತ್ರ 
ನಮ್ಮ ಹೃದಯದ ನುಡಿಯೆ ಸತ್ಯ ನುಡಿ 
ನಮ್ಮ ಕಣ್ಣೀರು ನಮ್ಮ ನೋವು 
ನಮ್ಮ ಭಯ ನಮ್ಮ ರೋಗ 
ನಮ್ಮ ಧೈರ್ಯವೆ ನಮ್ಮ ಔಷದಿ 
ನಮ್ಮ ಛಲ ನಮ್ಮ ಗೆಲುವು
ನಮ್ಮ ಆಲಸ್ಯ ನಮ್ಮ ಸೋಲು 
ನಮ್ಮ ಹಠ, ಕೋಪ ನಮ್ಮ ಶತ್ರು 
ನಮ್ಮ ತಾಳ್ಮೆ ನಮ್ಮ ಮಿತ್ರ 
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment