Friday, 23 November, 2012

ಜೀವನ

ಬಂಜರ ಭೂಮಿಯ
ಅಡಿಯಲ್ಲಿ ಒಂದು
ಒಣಗಿದ ಬೀಜ
ಜೀವನಕ್ಕಾಗಿ ಒದ್ದಾಡುತ ಇದೆ !

ನೀರ ಒಸರು ಹೆಚ್ಚಾಗಿ
ಹೂವಿನ ಗಿಡದ ಬೇರು
ಮಣ್ಣಿಂದ ಅಗಲಿ ಬಿದ್ದು
ಜೀವನದ ಕೊನೆ ಉಸಿರು ಎಳೆಯುತ್ತಿದೆ !

ದೊಡ್ಡ ಮರವೊಂದು
ಬಿರುಗಾಳಿಯಲ್ಲಿ ಸಿಕ್ಕಿ
ತನ್ನ ಫಲ ಪುಷ್ಪ ಹಾಗು
ಭೂಮಿಯಿಂದ ತನ್ನ ಆಧಾರ ಕಳೆದು
ಇಂದು ಜೀವನ ಮರಣದ ಮಧ್ಯೆ ಸಿಲುಕಿದೆ!

ದೀರ್ಘ ಸಮಯದಿಂದ
ಹಾರುತ್ತಿದ್ದ ಗಾಳಿಪಟವೊಂದು
ಹಿಂಬಾಲಿಸಿ ಬಂದ ಗಾಳಿಪಟದ ದಾರಕ್ಕೆ ಸಿಕ್ಕಿ ತುಂಡಾಗಿ
ಹಾರಾಡುತ ಬಂದು ವಿದ್ಯುತ್ ಕಂಬಕ್ಕೆ ಸಿಲುಕಿ
ಇನ್ನೊಂದು ಜೀವನಕ್ಕಾಗಿ ಬೇಡುತ್ತಿದೆ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment