Sunday, 4 November, 2012

ವಿವಾಹ ವಾರ್ಷಿಕೋತ್ಸವ

ಇಂದು ನಮ್ಮ ವೈವಾಹಿಕ
ಜೀವನದ ಹನ್ನೆರಡು
ವರುಷ ಕಳೆದರೂ
ನೀನು ನನಗೆ
ನಾನು ನಿನಗೆ ಅವಲಂಬಿತ!

ನೀನು ನನ್ನ
ಸುಖ ದುಃಖದ ಗೆಳತಿ
ಸರಿ ಮಾರ್ಗ ತೋರಿಸುವ ಕನ್ನಡಿ
ನನ್ನ ಜೀವನದ ಪ್ರಕಾಶ
ನನ್ನ ಜೀವನ ಸಂಗಾತಿ!

ನೀನು ನನಗೆ
ದೇವರು ನೀಡಿದ ಅನುಗ್ರಹ
ನಿನ್ನಿಂದಲೇ ಸುಖಮಯ ನನ್ನ ಗೃಹ
ಜೀವನದ ನನ್ನ ಪ್ರತಿ ಹೆಜ್ಜೆಯ ಒಟ್ಟಿಗೆ ನಿನ್ನ ಹೆಜ್ಜೆ ಇರಲಿ
ಕೊನೆ ಉಸಿರು ತನಕ ನಿನ್ನ ಜೊತೆ ಇರಲಿ !
by ಹರೀಶ್ ಶೆಟ್ಟಿ, ಶಿರ್ವ

 

No comments:

Post a Comment