Monday, October 29, 2012

ಅಭಿಮಾನ

ಅನ್ನ ನೀರಿಗೆ ಪರದಾಟ 
ಪದೇ ಪದೇ ಸಂಕಟ
ಬಳಿ ಇಲ್ಲ ಒಂದು ತುಂಡು ಸೊತ್ತು!

ದಿನನಿತ್ಯ ಮನೆಯಲ್ಲಿ ಕದನ
ಮಡದಿ ಮಕ್ಕಳ ರೋದನ
ಹಿಂದೆ ಸಾಲಗಾರರು ಹತ್ತು!

ರಗಳೆ ಜಗಳ ಅಪಾರ
ಹೇಳದೆ ಕೇಳದೆ ಆದ ಪಾರ
ಪರಿವಾರ ಊರಲ್ಲಿ ಬಿಟ್ಟು !

ಹೇಗೋ ಪರದೇಶ ಬಂದ
ಜೀವನದಲಿ ತಿರುವು ತಂದ
ಮೆಲ್ಲ ಮೆಲ್ಲ ಭಾಗ್ಯ ಚಕ್ರ ತಿರುಗಿತು !

ಜೀವನ ಈಗ ಸುಖಮಯ
ಏರತೊಡಗಿತು ಆದಾಯ
ಈಗ ಕೇವಲ ದೊಡ್ಡವರ ಸಂಗ ಬೇಕಾಯಿತು !

ಅಲ್ಲಲ್ಲಿ ಮಾನ ಸನ್ಮಾನ
ಅನ್ಯರಿಗೆ ಕೊಡ ತೊಡಗಿದ ಜ್ಞಾನ 
ತಾನಾಗಿಯೇ ಬಂತು ಗತ್ತು !

ಶ್ರೀಮಂತಿಕೆಯ ನಶೆಯಲಿ ತೇಲಾಡಿದ
ಬಡವರನ್ನು ಕಾಲ ಕಸದಂತೆ ನೋಡಿದ 
ಮರೆತ ಮೊದಲ ಅಂತಸ್ತು !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...