Monday, September 10, 2012

ನಾನೊಂದು ಹಳೆಯ ಪತ್ರ


ನಾನೊಂದು ಹಳೆಯ ಪತ್ರ
ಇನ್ನೂ ತಲುಪದ
ಅಂಚೆ ಅಣ್ಣನ ಚೀಲದಲ್ಲಿ ಸುರಕ್ಷಿತ !

ಸುಂದರ ಅಕ್ಷರದಿಂದ ಲಿಖಿತ
ಭಾವ ನೋವ ಸಂಗಮ
ಸುಖ ದುಃಖ ವರ್ಣಿತ !

ಬರೆದಿದೆ
ಹಸು ಕರು ಹಾಕಿದೆ ಎಂದು
ಮಾವಿನ ಮರದಲ್ಲಿ ಈ ಸಲ ಮಾವಿಲ್ಲವೆಂದು
ಬರೆದಿದೆ ಮನೆ ನಾಯಿಯ ವರ್ತನೆ ವಿಚಿತ್ರ !

ಬರೆದಿದೆ
ಅಜ್ಜಿಯ ಅರೋಗ್ಯ ಕೆಟ್ಟಿದೆ
ಅಮ್ಮನ ಕಣ್ಣು ನಿನ್ನ ಕಾಯುತಿದೆ
ಬರೆದಿದೆ ತಂದೆಯ ಮೌನ ಸತತ !

ಬರೆದಿದೆ
ಮಳೆಯ ಸುದ್ದಿ ಇಲ್ಲ
ಸಾಗುವಳಿ ಆಗಲಿಲ್ಲ
ಬರೆದಿದೆ ಮನೆಯಲ್ಲಿ ಧಾನ್ಯವಿಲ್ಲದೆ ಉಪವಾಸ ವೃತ!

ಬರೆದಿದೆ
ನಿನ್ನ ಹಣ ಇನ್ನೂ ಬರಲಿಲ್ಲ
ವಿಧ್ಯುತ್ ಬಿಲ್ ಕಟ್ಟಲಿಲ್ಲ
ಬರೆದಿದೆ ದೀಪಕ್ಕೂ ಎಣ್ಣೆಯ ಕೊರೆತ !

ಬರೆದಿದೆ
ಎಲ್ಲವೂ ತೊರೆದು ಬಿಡು
ನೀ ಸೌಖ್ಯವಾಗಿ ಬೇಗ ಬಂದು ಬಿಡು
ಬರೆದಿದೆ ನೀನಿಲ್ಲದೆ ಇಲ್ಲಿ ಎಲ್ಲ ವಿಚಲಿತ !

ಆದರೆ
ನಾನು ಇನ್ನೂ ಅವನ ಕೈಗೆ ಸಿಕ್ಕಲಿಲ್ಲ
ಅವನಿಗೆ ವಿಷಯ ತಿಳಿದಿಲ್ಲ
ಈಗಲೂ ಅವನಲ್ಲಿ ಇವರಿಲ್ಲಿ ಚಿಂತಿತ !
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...