Thursday, 27 September, 2012

ಜೀವನ ಮರಣ


ಜೀವನಕ್ಕಿಂತ ಮರಣ ಉತ್ತಮ ಎನಿಸುತ್ತಿದೆ
ಜೀವನದ ಸುಖ ಮರಣದಲ್ಲಿ ನೀಡುತ್ತಿದ್ದಾರೆ

ಜೀವವಿದ್ದಾಗ ಯಾರು ಕರೆಯಲಿಲ್ಲ ಕೇಳಲಿಲ್ಲ
ಇಂದು ಸಾವಲ್ಲಿ ನೂರಾರು ಜನ ಬಂದಿದ್ದಾರೆ

ಜೀವವಿದ್ದಾಗ ಯಾರು ಕಣ್ಣೀರು ಒರೆಸಲಿಲ್ಲ
ಇಂದು ಅವರೆಲ್ಲ ಕಣ್ಣೀರು ಹರಿಸುತ್ತಿದ್ದಾರೆ

ಜೀವವಿದ್ದಾಗ ಯಾರು ಮುಖ ಕಾಣಲು ಬರಲಿಲ್ಲ
ಇಂದು ಅವರೆಲ್ಲ ಶವಕ್ಕೆ ಹೂಮಾಲೆ ಹಾಕುತ್ತಿದ್ದಾರೆ

ಜೀವವಿದ್ದಾಗ ಯಾರು ಒಂದು ವೇಳೆಯ ಅನ್ನ ಹಾಕಲಿಲ್ಲ
ಇಂದು ಅವರೆಲ್ಲ ಶವದ ಬಾಯಿಗೆ ಬೆಣ್ಣೆ ಸುರಿಯುತ್ತಿದ್ದಾರೆ

ಜೀವವಿದ್ದಾಗ ಯಾರು ಒಂದು ಸಣ್ಣ ಕರವಸ್ತ್ರ ನೀಡಲಿಲ್ಲ
ಇಂದು ಅವರೆಲ್ಲ ಶವಕ್ಕೆ ದೊಡ್ಡ ಶ್ವೇತ ಬಟ್ಟೆ ಹೊದಿಸುತ್ತಿದ್ದಾರೆ

ಜೀವನಕ್ಕಿಂತ ಮರಣ ಉತ್ತಮ ಎನಿಸುತ್ತಿದೆ
ಜೀವನದ ಸುಖ ಮರಣದಲ್ಲಿ ನೀಡುತ್ತಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ
(ಒಂದು ಹಿಂದಿ ಕವಿತೆ ಓದಿ ಬರೆದದ್ದು )

No comments:

Post a Comment