Friday 13 July 2012

ನಾನು ಸಾಧಾರಣ ನಾರಿ

ನಾನಲ್ಲ ದ್ರೌಪದಿಯಂತೆ ಪತಿವ್ರತೆ
ನಾ ಕೊಡಲಾರೆ ಸೀತೆಯಂತೆ ಅಗ್ನಿ ಪರೀಕ್ಷೆ
ಬೇಡ ನನಗೆ ಅರ್ಜುನ, ಯುಧಿಷ್ಟರ
ಬೇಡ ನನಗೆ ಮರ್ಯಾದಮ ಪುರೋಷತ್ತಮ ರಾಮ
ಸಹಿಸಲಾರೆ ನಾನು ಇನ್ನು ಅಪಮಾನ
ಬೇಕು ನನಗೆ ಸನ್ಮಾನ
ನನಗೆ ನನ್ನ ಇಷ್ಟದ
ಸಾಧಾರಣ ಪುರುಷನನ್ನು
ವರಿಸಲು ಕೊಡಿ
ನಾನು ಸಾಧಾರಣ ನಾರಿ
ನಾನು ತಾಯಿ
ನಾನು ಮಗಳು
ನಾನು ಅಕ್ಕ
ನಾನು ಪತ್ನಿ
ನಾನು ಕೇವಲ ನನ್ನ ಕರ್ತವ್ಯ ನಿಭಾಯಿಸುವೆ
ನಾನು ನನ್ನ ಸಂಸಾರದಲ್ಲಿ ಸಂತೋಷ ಹಂಚುವೆ
ನನ್ನ ಜೀವನ ನಾನು ಸಿಂಗಾರಿಸುವೆ
ನನ್ನ ಕನಸನ್ನು ನಾನೇ ನನಸು ಮಾಡುವೆ
ನಾನು ಮುಗ್ದ ಹಕ್ಕಿ
ನನ್ನನ್ನು ಹಾರಲು ಬಿಡಿ
ಈ ಲೋಕ ವನದಲ್ಲಿ
ನನ್ನನ್ನು ವಿಹರಿಸಲು ಬಿಡಿ
ನನ್ನನ್ನು ಪ್ರಪಂಚದ ಬೇಡಿಯಲ್ಲಿ
ಬಂಧಿಸ ಬೇಡಿ
ನನಗೆ ನನ್ನ ಇಚ್ಛೆ ಪೂರೈಸಲು ಬಿಡಿ
ನನಗೆ ಸ್ವತಃ ನನ್ನ ಕಾಲಲ್ಲಿ ನಿಲ್ಲಲು ಬಿಡಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment