Thursday, 19 July, 2012

ಅಮಾವಾಸ್ಯೆ

ಇಂದು ಅಮಾವಾಸ್ಯೆ
ಚಂದಿರ ರವಿಯ ಹಿಂದೆ ಕುಳಿತ್ತಿದ್ದಾನೆ ಅಡಗಿ
ಇಬ್ಬರು ಒಂದೇ ಸ್ಥಾನದಲಿ ಇಂದು
ಸುತ್ತ ಮುತ್ತ ಕತ್ತಲ ಸಾಮ್ರಾಜ್ಯ
ಆಕಾಶ ಕಂಗಾಲು
ನಕ್ಷತ್ರಗಳ ಸಾಲು
ಕೆಲವು ಮಿನುಗುತಿದೆ
ಪುಟ್ಟ ಪ್ರಕಾಶ
ಕೊಡುತ್ತಿದೆ ಅವಕಾಶ
ಕನಸು ಕಟ್ಟಲೆಂದು
ಕಾಯುತ್ತಿದ್ದೇನೆ
ನಿದ್ದೆ ಬರಲೆಂದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment