Tuesday, July 31, 2012

ಮೊಗ್ಗು ಕುಸುಮ

ಮೊಗ್ಗು ಕುಸುಮ
ಅರಳುವ ಮುನ್ನವೇ
ಪರಿಮಳ ಘಮ ಘಮ

ಅವರ ಕಣ್ಣಿಗೆ ಬಿತ್ತು
ಮಾಡಲೆಂದು ಗಮ್ಮತ್ತು
ಕೀಳಲು ಪ್ರಯತ್ನಿಸಿದ್ದರು

ಮೊಗ್ಗು ಕೋಮಲ
ಕೇವಲ ಆದರ ಮುಳ್ಳು ಅದಕ್ಕೆ ಆಧಾರ
ಮುಳ್ಳು ಪ್ರತಿಕ್ರಿಯಿಸಿತು

ರಕ್ತ ಸೋರಿತು ಅವರ 
ಅವರು ಕುಪಿತರಾದರು
ಮೊಗ್ಗನ್ನು ಕಿತ್ತು ಬಿಸಾಕಿದರು

ಮೊಗ್ಗು ಕುಸುಮ ಕಂಗಾಲು
ಕಣ್ಣೀರಿಡುತ ಆಯಿತು ಮಣ್ಣು ಪಾಲು
ಮುಗಿಯಿತು ಅದರ ಬಾಳು
by ಹರೀಶ್ ಶೆಟ್ಟಿ, ಶಿರ್ವ







ದೃಡ ಸಂಕಲ್ಪ

ಮನುಜ...
ದೃಡ ಸಂಕಲ್ಪ ಇಡುವ ವ್ಯಕ್ತಿ ಧೈರ್ಯವಂತ
ಅವನಿಗೆ ಈ ಪ್ರಪಂಚ ಒಂದು ಉದ್ಯಾನ ಸಮಾನ
ಯಾವಾಗ ಬೇಕಾದಾಗ ತಿರುಗಿ ಮನ ಉಲ್ಲಾಸಗೊಳಿಸುವನು
ಸಮುದ್ರ ನದಿಯ ಸಮಾನ
ಯಾವಾಗ ಬೇಕಾದಾಗ ಈಜಿಕೊಂಡು ದಾಟಿ ಹೋಗುವನು
ಪಾತಾಳ ಲೋಕ ಒಂದು ಪರ್ಯಟನ ಸ್ಥಳ
ಯಾವಾಗ ಬೇಕಾದಾಗ ತಿರುಗಿ ಬರುವನು
ಪರ್ವತ ಒಂದು ಇರುವೆ ಸಮಾನ
ಯಾವಾಗ ಬೇಕಾದಾಗ ಸುಲಭವಾಗಿ ಏರುವನು
ನಿನ್ನ ಜೀವನ ದೋಣಿ ಧೈರ್ಯದಿಂದ ಸಾಗಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿ

Monday, July 30, 2012

ಜೀವನ ರಸ

ಮನುಜ...
ಜೀವನ ಇರುವುದು
ಜನ್ಮ ಹಾಗು ಮೃತ್ಯು ಇದರ ಮಧ್ಯೆ
ಜೀವನ ನಿನಗೆ ಸಿಕ್ಕಿದ ಅಮೂಲ್ಯ ಕೊಡುಗೆ
ಜೀವನ ಕಪಟ ವಂಚನೆಯ ಬೀಜ ಬಿತ್ತುವುದಿಲ್ಲ
ವಿನಾಶ ಬಯಸುವುದಿಲ್ಲ
ಜೀವನದ ಅರ್ಥ ತಿಳಿದುಕೊಳ್ಳು
ಅರ್ಥದ ಅನರ್ಥ ಮಾಡಬೇಡ
ಸ್ವಾರ್ಥ ಅಹಂಕಾರದ ಕಹಿ ಕಷಾಯ ಕುಡಿಯಬೇಡ
ಜೀವನದ ಸಿಹಿ ರಸವನ್ನು ಹೀರುತ ಇರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಹೇ ಮುಗಿಲೇ

ಹೇ ಮುಗಿಲೇ
ಮಳೆಯನ್ನು ಸುರಿಸು
ಬೇಗ ಬಾ ನನ್ನ ಊರಿಗೆ
ಬುವಿಯನ್ನು ತಣಿಸಲು
ರೈತರ ನಗು ಹಿಂತಿರುಗಿಸಲು

ಹೇ ಮುಗಿಲೇ
ಮಳೆಯನ್ನು ಸುರಿಸು
ಎಲ್ಲರನ್ನು ತನ್ನ ಧಾರೆಯಲ್ಲಿ ಮೀಯಿಸು
ಎಲ್ಲರ ದಾಹ ತೀರಲಿ
ಈ ಭೂಮಿ ಹಸಿರ ವಸ್ತ್ರ ಧರಿಸಲಿ
by ಹರೀಶ್ ಶೆಟ್ಟಿ, ಶಿರ್ವ

Sunday, July 29, 2012

ದಾನ

ಮನುಜ...
ದಾನ ಒಂದು ಉತ್ತಮ ಕಾರ್ಯ
ದಾನದ ಮಹತ್ವ ಶ್ರೇಷ್ಠ
ಸ್ನಾನ ಮಾಡಿದ ನಂತರ ಮೈ ಶುದ್ಧ ಆಗುವ ಹಾಗೆ
ದಾನ ಮಾಡಿದರೆ ಧನ ಶುದ್ಧ ಆಗುತ್ತದೆ
ಕಪಟ ಮನಸ್ಸಿಂದ ಮಾಡಿದ ದಾನ ದಾನ ಅಲ್ಲ
ನಿಷ್ಕಪಟ ಮನಸ್ಸಿಂದ ಮಾಡಿದ ದಾನವೇ ನಿಜ ದಾನ
ದಾನ ಅಂದರೆ ತ್ಯಾಗ
ದಾನ ಮನಸ್ಸು ಪವಿತ್ರ ಮಾಡುವ ಯೋಗ
ದಾನ ದೇವರ ಪೂಜೆ ಸಮಾನ
ಕೈಲಾದಷ್ಟು ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಸಾವಿರ ಕನಸು

ಗೆಳತಿ
ಅಂದು ನಾವು ಕಂಡ
ಸಾವಿರ ಕನಸುಗಳು
ಇಂದು ಅಳುತ್ತಿದೆ
ನನಸಾಗಲಿಲ್ಲವೆಂದು
by ಹರೀಶ್ ಶೆಟ್ಟಿ, ಶಿರ್ವ

ಗಲಾಟೆ

ಗೆಳತಿ..
ನೀನು
ಒಂದು ಶಬ್ದ ನುಡಿಯಲಿಲ್ಲ
ನಾನು
ಒಂದು ಶಬ್ದ ಹೇಳಲಿಲ್ಲ
ಆದರೂ ಇಷ್ಟು ಗಲಾಟೆ ಯಾಕೆ ಇದೆ?
by ಹರೀಶ್ ಶೆಟ್ಟಿ, ಶಿರ್ವ

Saturday, July 28, 2012

ನಕಾರಾತ್ಮಕ ಸಕಾರಾತ್ಮಕ

ಮನುಜ...
ನಕಾರಾತ್ಮಕ ಚಿಂತನೆ ಅಂದರೆ
ಒಂದು ಅಂಟು ರೋಗ
ಇದರಿಂದ ದೂರವಿರು
ಸಕಾರಾತ್ಮಕ ಚಿಂತನೆ ಮಾಡು
ಆದರೆ ಸಕಾರಾತ್ಮಕ ಚಿಂತನೆಯಿಂದ
ಒಳ್ಳೆಯದೇ ಸಂಭವಿಸುವುದು ಎಂಬ ಇಡಬೇಡ ತಪ್ಪುಗ್ರಹಿಕೆ
ಏನು ಆಗುವುದೋ ಎಲ್ಲ ಒಳ್ಳೆಯದೇ ಆಗುವುದು ಎಂದು ಇಡು ನಂಬಿಕೆ
ನಕಾರಾತ್ಮಕ ಚಿಂತನೆಯಿಂದ ಒಳಗಾಗುವೆ ತೊಂದರೆಗೆ  
ಸಕಾರಾತ್ಮಕ ಚಿಂತನೆಯಿಂದ ನೀನು ನಡೆ ಯಶಸ್ಸಿನ ದಾರಿಗೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಪ್ರೇಮ ಪತ್ರ

ಕರುಣಾಮಯಿ ಬರೆಯಲಿ
ಸುಂದರಿ ಬರೆಯಲಿ
ನನ್ನ ಹೃದಯ ಬರೆಯಲಿ
ಗೊಂದಲದಲ್ಲಿದ್ದೇನೆ ಈ ಪತ್ರದಲಿ
ನಿನಗೆ ಏನನ್ನು ಬರೆಯಲಿ ?

ಈ ನನ್ನ ಪ್ರೇಮ ಪತ್ರ ಓದಿ
ನೀನು ಮುನಿಸ ಬೇಡ
ಅಂದರೆ ನೀನೆ ನನ್ನ ಜೀವನ
ನೀನೆ ನನ್ನ ಪ್ರೀಯತಮ-2

ನಿನ್ನನ್ನು ಚಂದಿರ ಕರೆದೆ
ಆದರೆ ಅದರಲ್ಲೂ ಕಲೆ ಇದೆ-2
ನಿನ್ನನ್ನು ಸೂರ್ಯ ಕರೆದೆ
ಆದರೆ ಅದರಲ್ಲೂ ಜ್ವಾಲೆ ಇದೆ
ನಿನಗೆ ಕೇವಲ ಇಷ್ಟು ಹೇಳುವೆ
ನಿನ್ನೊಂದಿಗೆ ಪ್ರೀತಿ ಆಗಿದೆ .....ಪ್ರೀತಿ ಆಗಿದೆ.... ಪ್ರೀತಿ ಆಗಿದೆ
ಈ ನನ್ನ ಪ್ರೇಮ ಪತ್ರ ಓದಿ......

ನಿನ್ನನ್ನು ಗಂಗೆ ಎಂದು ತಿಳಿಯುವೆ
ನಿನ್ನನ್ನು ಜಮುನೆ ಎಂದು ತಿಳಿಯುವೆ-2
ನೀ ಹೃದಯದ ಹತ್ತಿರ ಇರುವೆ
ನಿನ್ನನ್ನು ನನ್ನ ಎಂದು ತಿಳಿಯುವೆ
ಒಂದು ವೇಳೆ ನಾನು ಸತ್ತರೂ ಆತ್ಮ ಅಲೆಯುವುದು
ನಿನ್ನದೆ ನಿರೀಕ್ಷೆಯಲಿ....
ನಿರೀಕ್ಷೆಯಲಿ.......ನಿರೀಕ್ಷೆಯಲಿ 
ಈ ನನ್ನ ಪ್ರೇಮ ಪತ್ರ ಓದಿ....... 

ಮೂಲ :ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು :ಮೊಹಮ್ಮದ್ ರಫಿ
ಸಂಗೀತ : ಶಂಕರ್ ಜೈಕಿಶನ್
ಚಿತ್ರ : ಸಂಗಮ್
Meherbaan likhoon, haseena likhoon, ya dilrooba likhoon
Hairaan hoon ke aap ko is khat mein kya likhoon
(Yeh mera prempatr padhkar ke tum naaraaz na hona
Ke tum meri zindagi ho, ke tum meri bandagi ho) - 2
Tujhe main chaand kehta tha, magar us mein bhi daag hai - 2
Tujhe sooraj main kehta tha, magar us mein bhi aag hai
Tujhe itna hi kehta hoon ke mujhko tumse pyaar hai
Tumse pyaar hai, tumse pyaar hai
Yeh mera prempatr padhkar ke tum naaraaz na hona
Ke tum meri zindagi ho, ke tum meri bandagi ho
Tujhe ganga main samjhoonga, tujhe jamuna main samjhoonga - 2
Tu dil ke paas hai itni, tujhe apna main samjhoonga
Agar mar jaoon rooh bhatkegi tere intezaar mein
Intezaar mein, intezaar mein
(Yeh mera prempatr padhkar ke tum naaraaz na hona
Ke tum meri zindagi ho, ke tum meri bandagi ho) - 2
www.youtube.com/watch?v=XNuu9ykkpGQ

Friday, July 27, 2012

ಅನುಕಂಪ

ಗೆಳತಿ...
ಎಲ್ಲರೂ ಯಾಕೆ
ನನಗೆ ಹೀಗೆ ಅನುಕಂಪದಿಂದ ನೋಡುತ್ತಿದ್ದಾರೆ
ಹೌದು....ಸರಿ
ನೀ ಬಿಟ್ಟು ಹೋದ ನಂತರ
ಈಗ ನನ್ನ ಅವಸ್ಥೆ  
ಪ್ರೀತಿಯನ್ನು ಬೇಡುವ
ಭಿಕ್ಷುಕನಂತೆ
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರ ಹನಿ

Thursday, July 26, 2012

ರೋಗಿಯ ಅವಸ್ಥೆ

Unke dekhe se jo aa jaatee hai munh per raunaq
woh samajhte hain ke beemaar ka haal achcha Hain
Mirza Ghalib
ಅವಳನ್ನು ಕಂಡು ಬರುತ್ತದೆ ಮುಖದಲಿ ಕಾಂತಿ
ಅವಳು ಭಾವಿಸುತ್ತಾಳೆ ರೋಗಿಯ ಅವಸ್ಥೆ ಒಳ್ಳೆಯದಿದೆ ಎಂದು
by ಹರೀಶ್ ಶೆಟ್ಟಿ, ಶಿರ್ವ


ಶರೀರ

ಮನುಜ...
ನಿನ್ನ ಶರೀರ ಒಂದು ಅಮೂಲ್ಯ ಕೊಡುಗೆ
ಇದು ಒಂದು ಕ್ರಿಯಾತ್ಮಕ ದೇವಾಲಯ
ಇದನ್ನು ಪವಿತ್ರವಾಗಿ ಇಡು
ನಿನ್ನ ಮನಸ್ಸು ನಿರ್ಮಲ ಶಾಂತವಾಗಿರಲಿ
ಮನಸ್ಸು ಉದ್ವೇಗ ಮುಕ್ತವಾಗಿದ್ದರೆ
ನಿನ್ನ ಶರೀರ ಶಕ್ತಿ ನಿರ್ಮಾಣ ಮಾಡುವ ಮನೆ ಆಗುತ್ತದೆ
ನಿನ್ನ ಆರೋಗ್ಯ ನಿನ್ನ ಕೈಯಲ್ಲಿ
ದಿನ ನಿತ್ಯ ಸ್ವಲ್ಪ ಸಮಯ ಕಳೆ ವ್ಯಾಯಾಮ ಹಾಗು ಧ್ಯಾನದಲಿ
ಶರೀರವೆ ನಿನ್ನ ಸಂಪತ್ತು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Wednesday, July 25, 2012

ಮುಗ್ಧ ಹೃದಯ

Dil-e-naadaan tujhe hua kya hai ?
Aakhir is dard  ki dawa kya hai
Mirza Ghalib
ಹೇ ಮುಗ್ಧ ಹೃದಯ ನಿನಗೆ ಏನಾಗಿದೆ ?
ಮದ್ದು ಏನು ಈ ಎಲ್ಲಾ ವೇದನೆಗೆ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಸಮಸ್ಯೆ ಏನೆಂದು ?

Main bi munh mein zabaan rakhta hoon
kaash !   poocho  ki   “muddaa kya hai” ?
Mirza Ghalib
ನಾನು ಸಹ ಬಾಯಿಯಲ್ಲಿ ನಾಲಿಗೆ ಇಡುತ್ತೇನೆ
ಒಂದು ವೇಳೆ ನನಗೆ !  ಕೇಳಲಿ ಸಮಸ್ಯೆ ಏನೆಂದು ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಈ ವಿಷಯ ಏನು ?

Hum hain mushtaaq aur woh bezaar
ya ilaahee ! yeh maajra kya  hai ?
Mirza Ghalib
ನನಗೆ ಆಸಕ್ತಿ ಹಾಗು ಅವಳಿಗೆ ಬೇಸರ
ಒಹ್ ದೇವರೇ !ಈ ವಿಷಯ ಏನು ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ
________________________
ನಾನು ಆಸಕ್ತಿಯಲಿ ಹಾಗು ಅವಳು ಬೇಸರದಲಿ
ಒಹ್ ದೇವರೇ !ವಿಷಯ ಏನಿಲ್ಲಿ ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಸಮಯ ಬಂದಾಗ

ಮನುಜ...
ಇಷ್ಟು ಅವಸರ ಯಾಕೆ?
ಮನಸ್ಸು ಓಡುತ್ತಿದೆಯೇ
ಮನಸ್ಸನ್ನು ಹತೋಟಿಯಲ್ಲಿ ಇಡು
ಎಲ್ಲ ಕಾರ್ಯ ಸಮಯ ಬಂದಾಗಲೇ ಆಗುವುದು
ಸಮಯ ಬರದೆ ಯಾವುದೇ ಕೆಲಸ ಆಗದು
ಉಪಯುಕ್ತ ಸಮಯ ಬಂದಾಗಲೇ ನಿನಗೆ ಬೇಕಾದ ವಸ್ತು ಸಿಗುವುದು
ರೈತ ದುಡಿಯುವನು ದಿನ ರಾತ್ರಿ ಹೊಲದಲ್ಲಿ
ಆದರೆ ಋತು ಬಂದಾಗಲೇ ಬೆಳೆ ಆಗುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ
(ಸಂತ ಕಬೀರ್ ಅವರ ಒಂದು ದೋಹದ ಆದಾರಿತ )

ಒಹ್ ಇನಿಯ ಬಾರೋ ಸನಿಹ

ಒಹ್ ಇನಿಯ ಬಾರೋ ಸನಿಹ
ನನ್ನ ಜೀವ ಹುಚ್ಚಾಗುತ್ತಿದೆ-೨
ಒಹ್ .....

ನಿನ್ನ ರೂಪ ಚಂದ ಚಂದ
ಹೇಗೆ ಹೊಗಳಲಿ ನಿನ್ನ ಅಂದ
ಬಾ ಬಳಿಗೆ ನನ್ನ ಮುಂದ
ಈ ಹೃದಯದಲಿ ದ್ವಂದ
ಒಹ್...

ನನ್ನ ಸ್ವಪ್ನದಲಿ ನೀನೆ
ಹೃದಯ ಮನಸ್ಸಲಿ ನೀನೆ
ನನ್ನ ಜೀವನದ ಆಧಾರ ನೀನೆ
ನನ್ನ ಸರ್ವಸ್ವವೂ ನೀನೆ
ಒಹ್...

by ಹರೀಶ್ ಶೆಟ್ಟಿ, ಶಿರ್ವ

Tuesday, July 24, 2012

ಕಷ್ಟ ಕಾಲ

Kyoon  gardish-e-mudaam se ghabra na jaaye dil ?
Insaan hoon, pyaala-o-saaghar nahin hoon main
Mirza Ghalib
ಯಾವಾಗಲೂ ಇದ್ದ ಕಷ್ಟ ಕಾಲದಿಂದ ಯಾಕೆ ಹೃದಯ ನಡುಗಬಾರದು ?
ಮನುಷ್ಯ ನಾನು , ಲೋಟ ಹಾಗು ಗಿಂಡಿ ಅಲ್ಲ ನಾನು
by ಹರೀಶ್ ಶೆಟ್ಟಿ, ಶಿರ್ವ
ಕಷ್ಟ ಕಾಲ =ಹಾಳು ಸಮಯ

ಪ್ರೀತಿಯ ಹೋರಾಟ

Huye hain paanv hi pehle nabard-e-ishq mein zakhmi
na bhaga jaaye hai mujhse, na tehra jaaye hai mujhse
Mirza Ghalib
ಈ ಕಾಲುಗಳು ಮೊದಲೇ ಗಾಯಗೊಂಡಿವೆ ಪ್ರೀತಿಯ ಹೋರಾಟದಲಿ
ಸಾದ್ಯವಿಲ್ಲ ನನ್ನಿಂದ ಓಡಲು , ಸಾದ್ಯವಿಲ್ಲ ನನ್ನಿಂದ ನಿಂತುಕೊಳ್ಳಲು
by ಹರೀಶ್ ಶೆಟ್ಟಿ, ಶಿರ್ವ 

ಅಲ್ಲಿ ಅವಳು ಇಲ್ಲಿ ಇವನು

Udhar woh bad_Ghumaani hai, idhar yeh naatavaani hai
na poocha jaaye hai usse, na bola jaaye hai mujhse
Mirza Ghalib
ಅಲ್ಲಿ ಅವಳು ಅನುಮಾನದಲಿ , ಇಲ್ಲಿ ಇವನು ಅಸಾಮರ್ಥ್ಯ
ಅವಳಿಂದ ಕೇಳಲಾಗಲಿಲ್ಲ ,ನನ್ನಿಂದ ಹೇಳಲಾಗಲಿಲ್ಲ
ಅನುವಾದ: ಹರೀಶ್ ಶೆಟ್ಟಿ, ಶಿರ್ವ

ಜೀವನದ ಶರತ್ಕಾಲ

ಮನುಜ..
ಕಷ್ಟದಿಂದ ಹೆದರುವೆ ಯಾಕೆ ?
ಕಷ್ಟ ಬರದೆ ಇಷ್ಟ ಸಿಗುವುದೇ ?
ನಿನ್ನ ಈ ಕಷ್ಟ ತಾತ್ಕಾಲಿಕ
ನಿನಗೆ ಒದಗಿದ ಈ ಹಾಳು ಸಮಯ ಒಂದು ಪರೀಕ್ಷೆ
ನೀನು ಈ ಪರೀಕ್ಷೆಯಲ್ಲಿ ಉತ್ತಿರ್ಣನಾಗು
ನಿನ್ನ ಸಹ ಒಳ್ಳೆ ಸಮಯ ಬರುವುದು
ಜೀವನದ ಶರತ್ಕಾಲ ಮುಗಿದು
ನಿನ್ನ ಒಣಗಿದ ಈ ಬದುಕು ಶಾಖೆಗಳಲ್ಲಿ ಹೊಸ ಮೊಗ್ಗುಗಳು ಬರುವುದು
ಪುನಃ ನಿನ್ನ ಜೀವನದಲಿ ಖುಷಿಯ ಹೂವು ಅರಳುವುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಕೈ ನನ್ನ ಕೈಯಲ್ಲಿ

ನಿನ್ನ ಕೈ ನನ್ನ ಕೈಯಲ್ಲಿ
ಬೇರೆ ಎಂಥ ಸುಖ ಬೇಕು ಈ ಜೀವನದಲಿ
ಎಷ್ಟು ಆನಂದ ನಿನ್ನ ನನ್ನ ಜೊತೆಯಲಿ
ಬದುಕಿನ ದೋಣಿ ಹೀಗೆಯೇ ಸಾಗಲಿ
by ಹರೀಶ್ ಶೆಟ್ಟಿ, ಶಿರ್ವ

Monday, July 23, 2012

ರತ್ನ ಮಾಣಿಕ್ಯ ಚಿನ್ನ ವಜ್ರ

Kis  waaste   " azeez "  nahin  jaante mujhe ?
laal-o-zumarrud-o-zar-o-gauhar nahin hoon main
Mirza Ghalib
ಯಾಕೆ ನನ್ನ ಅತ್ಮಿಯರಿಗೆ ನನ್ನ ಪರಿಚಯವಿಲ್ಲ
ರತ್ನ ಮಾಣಿಕ್ಯ ಚಿನ್ನ ವಜ್ರ ಅಲ್ಲ ನಾನು
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಸ್ವರ್ಗ ಸುಖ

Woh cheez jiske liye hamko ho bahisht azeez
siwaay baada-e-gul_faam-e-mushkaboo kya hai ?
Mirza Ghalib
ಆ ವಸ್ತು ಅದರಿಂದ ನನಗೆ ಸ್ವರ್ಗ ಸುಖ ಸಿಗುವುದೋ
ಮದ್ಯ ಹೊರತು ಕೋಮಲ ಹೂಗಳ ಪರಿಮಳ ಹಾಗು ಕಸ್ತೂರಿ ಸುಗಂಧ ಏನಿದೆ ?
by  ಹರೀಶ್ ಶೆಟ್ಟಿ, ಶಿರ್ವ

ಉಡುಪು

ಮನುಜ...
ಕಲ್ಮಶ ತುಂಬಿದ ಈ ದೇಹದ ಮೇಲೆ
ನವ ನವೀನ ಉಡುಪು ಧರಿಸುವೆ
ಧರಿಸಿದ ಬಟ್ಟೆಗಳಲ್ಲಿ ಇಲ್ಲ ನಿನ್ನ ಸಂಸ್ಕೃತಿ
ನೀನು ಮಾಡುವ ಆಡಂಬರದಿಂದ ಸಿಗದು ನಿನಗೆ ಉನ್ನತಿ
ನಿನ್ನ ವ್ಯವಹಾರದಲ್ಲಿ ನಿನ್ನ ಯೋಗ್ಯತೆ ಕಂಡು ಬರಲಿ
ನಿನ್ನ ಒಳ್ಳೆ ಕಾರ್ಯದಿಂದ ಜನರು ನಿನ್ನನ್ನು ಗುರುತಿಸಲಿ
ನಿನ್ನ ಮನಸ್ಸು ನದಿಯ ನೀರಿನಂತೆ ನಿರ್ಮಲವಾಗಿರಲಿ
ನಿನ್ನ ಜೀವನ ದೀಪದಂತೆ ಬೆಳಕಲಿ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

Sunday, July 22, 2012

ಬಯಕೆ ಏನಿದೆ ?

jala hai jism jahaan dil bi jal gaya hoga
kuredate ho jo ab raakh, justjoo kya hai?
Mirza Ghalib
ಉರಿದಿದೆ ದೇಹ ಜಗತ್ತು ಈ ಹೃದಯ ಸಹ ಉರಿದಿರಬೇಕು
ಬೂದಿಯನ್ನು ಈಗ ಹೊಕ್ಕುವೆ, ಬಯಕೆ ಏನಿದೆ ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಮುನಿಸು ವರ್ತನೆ

Na shole mein yeh karishma na barq mein yeh ada
koee batao ki woh shokh-e-tund_khoo kya hai?
Mirza Ghalib
ಜ್ವಾಲೆಯಲ್ಲಿ ಇಲ್ಲ ಆ ಮಾಯೆ , ಮಿಂಚಿನಲ್ಲಿ ಇಲ್ಲ ಆ ಸೊಬಗು
ಯಾರು ಹೇಳಲಿ ಆ ಸೌಮ್ಯ ಮುನಿಸು ವರ್ತನೆ ಏನೆಂದು ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಶರಾಬು

‘Ghalib’ chutee sharaab, par ab bhee kabhee-kabhee
peeta hoon roz-e-abr -o- shab-e-maahtaab mein
Mirza Ghalib
"ಗಾಲೀಬ್" ಶರಾಬು ಬಿಟ್ಟು ಹೋಗಿದೆ , ಆದರೆ ಈಗಲೂ ಕೆಲವೊಮ್ಮೆ
ಕುಡಿಯುತ್ತೇನೆ ಮೋಡಗಳ ಮರೆಯಲಿ ರಾತ್ರಿಯ ಚಂದಿರ ಕಂಡಾಗ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
 

ನೀನು ಏನೆಂದು ?

Har ek baat pe kehte ho tum ke ‘too kya hai’ ?
tumheen kaho ke yeh andaaz-e-guftgoo kya hai?
Mirza Ghalib
ಪ್ರತಿಯೊಂದು ಮಾತಿನಲ್ಲಿ ಹೇಳುವೆ "ನೀನು ಏನೆಂದು"?
ನೀನೆ ಹೇಳು ಈ ಸಂಭಾಷಣೆಯ ಶೈಲಿ ಏನೆಂದು ?
ಅನುವಾದ : ಹರೀಶ್ ಶೆಟ್ಟಿ ,ಶಿರ್ವ

ಹಗಲು ಕನಸು

ಮನುಜ
ರಾತ್ರಿ ನಿದ್ದೆಯಲಿ ಕನಸು ಕಂಡದು ಸಾಲದೆ
ಹಗಲಲ್ಲೂ  ಕನಸು ಕಾಣುವೆ
ಕೇವಲ ಕನಸು ಕಂಡು
ಕನಸು ನನಸಾಗುವುದು ಎಂದು
ಹೀಗೆಯೇ ಕೈ ಕಟ್ಟಿ ಕುಳಿತುಕೊಳ್ಳ ಬೇಡ
ನಿನ್ನ ಕನಸಿನ ನೀನೆ ವಾರಸುದಾರ
ನಿನ್ನ ಕನಸನ್ನು ಸಾಕಾರ ಮಾಡಲು ಪರಿಶ್ರಮ ಪಡೆ
ನಿನ್ನ ಕನಸಿನ ಮಾರ್ಗದಲಿ ನೀ ನಡೆ
ಮನಸ್ಸು ಮಾಡಿದರೆ ಏನನ್ನು ಸಾಧಿಸ ಬಹುದು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

ಅವಳ ಉತ್ತರ

qaasid ke aate-aate Khat ik aur likh rakhoon
main jaanta hoon jo woh likhenge jawaab mein
Mirza Ghalib
ಸಂದೇಶಕ ಬರುವ ತನಕ ಪತ್ರ ಇನ್ನೊಂದು ಬರೆದು ಇಡುವೆ
ನನಗೆ ಗೊತ್ತಿದೆ ಅವಳು ಏನು ಬರೆದಿರಬಹುದು ಉತ್ತರದಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

ಸಮಸ್ಯೆಗಳ ಪ್ರಪಂಚ

kab se hoon, kya bataaoon jahaan-e-Kharaab mein ?
shab haaye hijr ko bhee rakhoon gar hisaab mein
Mirza Ghalib
ಯಾವಾಗದಿಂದ ಇದ್ದೇನೆ , ಹೇಗೆ ಹೇಳಲಿ ಈ ಸಮಸ್ಯೆಗಳ ಪ್ರಪಂಚದಲಿ ?
ಅಗಲಿಕೆಯ ರಾತ್ರಿಗಳನ್ನು ಸಹ ಒಂದು ವೇಳೆ ಇಟ್ಟರೆ ಲೆಕ್ಕದಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 

Saturday, July 21, 2012

ವಚನ

ನಿನ್ನ ಸೌಂದರ್ಯ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...