Tuesday, June 26, 2012

ಕನಸು

ಕನಸು ಸಾಕು ಇನ್ನು
ಬರಬೇಡ ಇನ್ನು
ಮೊಳಕೆ ಬಿಡದ ಆಸೆಯ ಬೀಜವನ್ನು ನೀಡಿ
ಬೆಳೆಸು ಎಂದು ಹೇಳಿ
ನೀ ಪರಾರಿ ಆಗುವೆ!

ಶಕ್ತಿ ಸಾಮರ್ಥ್ಯವೆಲ್ಲವನ್ನು
ನಿನ್ನ ಬಾಳನ್ನು ರಚಿಸಲು ನೀಡುವೆ
ಆದರೂ ನೀನು ಮರೀಚಿಕೆಯಂತೆ ಬಂದು
ಇನ್ನೊಂದು ದಾರಿಯತ್ತ ನನ್ನನ್ನು ದೂಡಿ
ನೀನು ನೀನಾಗಿಯೇ ಉಳಿಯುವೆ!

ಕನಸು ನೀನೆಂತ ಪಾಪಿ
ಸತ್ಯ ಧರ್ಮ ಪಾಲಿಸುವವರಿಗೆ ನೀನು ನೀನೆ
ತುಂಬಾ ಕಷ್ಟ ಪಟ್ಟ ನಂತರ ನನಸಾಗುವೆ
ಪಾಪ ಕರ್ಮ ಮಾಡುವವರಿಗೆ
ನೀನು ಬೇಗನೆ ದಯಾ ಪಾಲಿಸುವೆ!

ಕನಸು ನೀನು ಹುಚ್ಚ ಸಹ
ಬೇಡವಾದ ಭಯಕೆ ನಿರ್ಮಿಸುವೆ
ನಿನ್ನನ್ನು ಆಚೆ ದೂಡುವಂತೆ ಸಹ ಇಲ್ಲ
ನಿನ್ನನ್ನು ನಿರ್ಲಕ್ಷಿಸಿದರೆ ನಾನು ಮೂರ್ಖನೆಂದು ಅರ್ಥ
ಆದರೆ ನಿನ್ನ ಹುಚ್ಚಾಟದಿಂದ ಸೋತೆ ನಾನು !

ಕನಸು ನೀನು ಬಹು ಜಾಣ
ನಾನು ಸಹ ಪ್ರಯತ್ನ ಪಡಬೇಕೆಂದು ಹೇಳುವೆ
ಹೌದು ಸತ್ಯ
ಪಡುದಿಲ್ಲವೇ?
ತುಂಬಾ ಪ್ರಯತ್ನ ಪಡುತ್ತೇನೆ!

ಕನಸು ನನ್ನನ್ನು ಒತ್ತಾಯಿಸ ಬೇಡ
ಹಾಳು ಕೆಲಸ ಮಾಡಲಾರೆ
ನಿನ್ನನ್ನು ನಗ್ನ ಮಾಡಿ ಬಿಕ್ಷೆ ಬೇಡಲಾರೆ
ಮಣ್ಣಿಗೆ ಪಾಲಾದರೂ ನಿನಗಾಗಿ
ದುಷ್ಟ ಕಾರ್ಯ ಮಾಡಲಾರೆ!
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಕನಸುಗಳನ್ನೂ ಪ್ರಶ್ನಿಸುವ ಪರಿ ಬಹಳ ಚನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಕವನದಲ್ಲಿ .ಮನ ಮುಟ್ಟಿತು .

    ReplyDelete
  2. ತುಂಬಾ ತುಂಬಾ ಧನ್ಯವಾದಗಳು ಆರತಿಯವರೇ.....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...