Saturday, June 2, 2012

ಜೀವನ ತುಂಬಿದ ನಿನ್ನ ಕಣ್ಣು

ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತಿದೆ  ಜೀವಿಸಲು ...ಜೀವಿಸಲು
ಸಾಗರವೂ ಹಂಬಲಿಸುತ ಇರುತ್ತದೆ
ನಿನ್ನ ರೂಪ ರಸವನ್ನು ಸವಿಯಲು ...ಸವಿಯಲು!

ಯಾರೆಂಥ ಚಿತ್ರ ಬಿಡಿಸಲಿ
ಯಾರು ಬರೆಯಲಿ ನಿನ್ನ ಕುರಿತು ಕವಿತೆ
ಬಣ್ಣ ಪದಗಳಲ್ಲಿ ಬಣ್ಣಿಸಲಾಗದು
ಅದ್ಭುತ ನಿನ್ನ ಸುಂದರತೆ....ಸುಂದರತೆ
ಒಂದು ಸಿಹಿ ಮಿಡಿತ ನೀನು ಹೃದಯದ
ಒಂದು ಜೀವ ನೀನು ಜೀವಿಸಲು....ಜೀವಿಸಲು!
ಜೀವನ ತುಂಬಿದ...

ಹೂದೋಟದ ಸುಗಂಧ ನಿನ್ನ ಶ್ವಾಸದಲಿ
ಕಮಲದ ಸೌಮ್ಯತೆ ನಿನ್ನ ಅಲಿಂಗನದಲಿ
ಕಿರಣದ ತೀವ್ರತೆ ನಿನ್ನ ಮುಖದಲಿ
ಜಿಂಕೆಯಂತೆ ನಿನ್ನ ಚಂಚಲತೆ .......ಚಂಚಲತೆ
ನಿನ್ನ ಸೆರಗಿನ ಅಮೃತ ಗಾಳಿಯೇ ಸಾಕು
ಹೃದಯದ ಅಗ್ನಿ ತಣಿಸಲು ....ತಣಿಸಲು

ಜೀವನ ತುಂಬಿದ ನಿನ್ನ ಕಣ್ಣು
ಒತ್ತಾಯಿಸುತ್ತಿದೆ ಜೀವಿಸಲು ...ಜೀವಿಸಲು

ಮೂಲ ರಚನೆ : ಇಂದೀವರ್, ಚಿತ್ರ : ಸಫರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್

Jeevan Se Bhari Teri Aankhen
Majboor Karen Jeene Ke Liye
Saagar Bhi Taraste Rehte Hain
Tere Hoth Ka Ras Peene Ke Liye

Tasveer Banaye Kya Koi
Kya Koi Likhe Tujh Pe Kavita
Rangon Chhandon Mein Samayegi
Kis Tarah Se Itni Sundarta
Ek Dhadkan Hai Tu Dil Ke Liye
Ek Jaan Hai Tu Jeene Ke Liye
Jeevan Se Bhari Teri Aankhen

Madhuban Ki Sugandh Hai Saanson Mein
Baahon Mein Kamal Ki Komalta
Kirnon Ka Tej Hai Chehre Pe
Hirnon Si Hai Tujh Mein Chanchalta
Aanchal Ka Tere Hai Saar Bahut
Koi Chaak Jigar Seene Ke Liye
Jeevan Se Bhari Teri Aankhen
www.youtube.com/watch?v=W8_Z1pqj558



No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...