Friday, April 27, 2012

ಕ್ಷಣ ಒಂದೆರಡು ಕ್ಷಣದ ಕವಿ ನಾನು

ಕ್ಷಣ ಒಂದೆರಡು ಕ್ಷಣದ  ಕವಿ ನಾನು
ಕ್ಷಣ ಒಂದೆರಡು ಕ್ಷಣ ನನ್ನ ಕಥೆ
ಕ್ಷಣ ಒಂದೆರಡು ಕ್ಷಣ ನನ್ನ ಜೀವನ
ಕ್ಷಣ ಒಂದೆರಡು ಕ್ಷಣ ನನ್ನ ಯೌವನ
ಕ್ಷಣ ಒಂದೆರಡು ಕ್ಷಣದ  ಕವಿ ನಾನು......

ನನ್ನಿಂದ ಮೊದಲು
ಎಷ್ಟೋ ಕವಿಗಳು ಬಂದಿದ್ದರು
ಹಾಗು ಬಂದೋದರು
ಕೆಲವರು ನಿಟ್ಟುಸಿರು ಬಿಟ್ಟು ಹೋದರು
ಕೆಲವರು ಕವಿತೆ ಪಠಿಸಿ ಹೋದರು
ಅವರೂ ಆ ಕ್ಷಣದ ಕಥೆಯಾಗಿದ್ದರು  
ನಾನೂ ಈ ಕ್ಷಣದ ಕಥೆಯಾಗಿದ್ದೇನೆ 
ನಾಳೆ ನಿಮ್ಮಿಂದ ಅಗಲಿ ಹೋಗುವೆ
ಇಂದು ನಿಮ್ಮದೇ ಭಾಗವಾಗಿದ್ದೇನೆ
ಕ್ಷಣ ಒಂದೆರಡು ಕ್ಷಣದ  ಕವಿ ನಾನು...

ನನ್ನಿಂದ ನಂತರ
ಇನ್ನೇಷ್ಟೋ ಕವಿಗಳು ಬಂದು
ತನ್ನ ಭಾವ ಪುಷ್ಪಗಳನ್ನು ಅರಳಿಸುವರು
ನನ್ನಿಂದ ಒಳ್ಳೆ ಬರೆಯುವವರು
ನಿಮ್ಮಿಂದ ಒಳ್ಳೆ ಕೇಳುವವರು
ನಾಳೆ ಯಾರು ನನ್ನನ್ನು ನೆನಪಿಸುವರು
ಯಾಕೆ ನನ್ನನ್ನು ನೆನಪಿಸುವರು
ಬಿಡುವಿಲ್ಲದ ಈ ಜೀವನದಲಿ ನನಗಾಗಿ
ಯಾಕೆ ತನ್ನ ಸಮಯ ವ್ಯರ್ಥ ಮಾಡುವರು
ಕ್ಷಣ ಒಂದೆರಡು ಕ್ಷಣದ  ಕವಿ ನಾನು ......


ಮೂಲ ರಚನೆ : ಸಾಹಿರ್ ಲುಧ್ಯಾನ್ವಿ 
ಅನುವಾದ :ಹರೀಶ್ ಶೆಟ್ಟಿ,ಶಿರ್ವ

Main pal do pal ka shayar hoon
pal do pal meri kahani hai
pal do pal meri hasti hai
pal do pal meri jawani hai
main pal do pal ka shayar hoon

Mujhse pahele kitne shayar aaye aur aakar chaley gaye
kuch anhein barkar laut gaye kuch nagme gaa kar chaley gaye
woh bhi ek pal ka kissa thhey main bhi ek pal ka kissa hoon
kal tumse jhuda ho jaunga jo aaj tumhara hissa hoon
main pal do pal ka shayar hoon

Kal aur ayenge nagmon ki khilti kaliyan chunnewale
mujhese behetar kahenewale tumse behetar sunnewale
kal koi mujhko yaad karhey kyon koi mujhko yaad karhey
masroof zamana mere liye kyon waqt apna barbadh kare
main pal do pal ka shayar hoon
ಮೂಲ ರಚನೆ : ಸಾಹಿರ್ ಲುಧ್ಯಾನ್ವಿ 

2 comments:

  1. ಈ ಕವಿತೆಯ ಭಾವಾರ್ಥ ತುಂಬಾ ಚೆನ್ನಾಗಿದೆ. ವಂದನೆಗಳು ಹರೀಶಣ್ಣ.

    ReplyDelete
    Replies
    1. ತಮಗೆ ಕೋಟಿ ಕೋಟಿ ಧನ್ಯವಾದಗಳು ರವಿ ಸರ್.......ನಿಮ್ಮನ್ನು ತುಂಬಾ ಮಿಸ್ ಮಾಡುತ್ತಿದ್ದೇನೆ .......ಹಿಂತುರುಗಿ ಪುನಃ ಫೇಸ್ ಬುಕ್ ಗೆ ಬನ್ನಿ ಸರ್.....:(

      Delete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...