Wednesday, 29 February, 2012

ಆಸೆ ಆಕಾಂಕ್ಷೆ

ಅವನಿಲ್ಲದೆ......
ಮನಸ್ಸಲಿಲ್ಲ ಈಗ ಆಸೆ ಆಕಾಂಕ್ಷೆ
ಅವನಿಲ್ಲದೆ ಜೀವನ ಒಂದು ಶಿಕ್ಷೆ
by ಹರೀಶ್ ಶೆಟ್ಟಿ, ಶಿರ್ವ

Tuesday, 28 February, 2012

ಅಡುಗೆ ಮನೆಯಲ್ಲಿ

ಅವನಿಲ್ಲದೆ .......
ಈಗ ಊಟ ತಿಂಡಿಯ ನನಗಿಲ್ಲ ಗೋಚರ
ಅವನಿಲ್ಲದೆ ಅಡುಗೆ ಮನೆಯಲ್ಲೂ ಬೇಸರ
by ಹರೀಶ್ ಶೆಟ್ಟಿ ,ಶಿರ್ವ

Monday, 27 February, 2012

ತಾಳ್ಮೆ

ತಾಳ್ಮೆ
ಮನುಷ್ಯನಲ್ಲಿ ಇದ್ದರೆ ಗೆಲುವು ಅವನ ದಾಸ
ಇಲ್ಲದಿದ್ದರೆ ಸೋಲಿನ ಅವನಲ್ಲಿ ವಾಸ
by ಹರೀಶ್ ಶೆಟ್ಟಿ, ಶಿರ್ವ

Sunday, 26 February, 2012

ಅವನ ಹೆಸರು

ಅವನಿಲ್ಲದೆ....
ಮುಂಜಾನೆಯ ಜಾವದಲೂ ಮನೆಯಲಿ ಪಸರಿದೆ ಶಾಂತಿ
ಹಕ್ಕಿಗಳ ಚಿಲಿಪಿಲಿಯಲ್ಲೂ ಅವನ ಹೆಸರು ಕರೆಯುವ ಭ್ರಾಂತಿ
by ಹರೀಶ್ ಶೆಟ್ಟಿ, ಶಿರ್ವ

ಅವನಿಲ್ಲದೆ

ಅವನಿಲ್ಲದೆ......
ಈಗ ಹಗಲು ಇರುಳು ನನಗಿಲ್ಲ ಶೃಂಗಾರ
ಅವನಿಲ್ಲದೆ ಮನಸ್ಸು ಹೃದಯ ಭಾರ ಭಾರ
by ಹರೀಶ್ ಶೆಟ್ಟಿ, ಶಿರ್ವ

Saturday, 25 February, 2012

ಉದ್ಯಾನದ ಗಿಡ

ನಾನೂ ಆ ಉದ್ಯಾನದ
ಗಿಡವಾಗಿದೆ
ದಿನ ನಿತ್ಯ 
ಪುಷ್ಪಗಳನ್ನು ಹೆತ್ತು
ಅರಳಿಸಿ ಅನೇಕರ
ಮನ ಸೆಳೆಯುತ್ತಿದ್ದೆ!

ನನ್ನ ಹೂವನ್ನು 
ಕಿತ್ತುವಾಗ ನನ್ನ
ಮುಳ್ಳಿಂದ ಅವರಿಗೆ
ಗಾಯವಾಗಿ
ಅಜ್ಞಾನದಿಂದ ಮನಸ್ತಾಪದ
ರಕ್ತವ  ಸೋರಿಸಿದೆ !

ನನ್ನ ಹೂವಿನ ಪರಿಮಳ
ಈಗ ಅವರಿಗೆ  ದ್ವೇಷದ
ಗಬ್ಬು ವಾಸನೆಯಾಗಿ
ಉದ್ಯಾನದಲಿ ನನ್ನ ಉಪಸ್ಥಿತಿ
ಬೇಡವಾಗಿ ಹೊರ ಬಿದ್ದು
ಕಣ್ಣೀರ ಸುರಿಸಿದೆ !

ಭೂಮಿ ಮಣ್ಣ ಕಡಿಮೆ ಇಲ್ಲದೆ
ಹೇಗೋ ಪುನಃ ಜೀವವಾದೆ
ಪುಷ್ಪಗಳನ್ನು ಹುಟ್ಟಿಸಿದೆ  
ಆದರೆ ಅರಳಿದ ಹೂವು ಹೀಗೆಯೇ
ಬಿದ್ದು ಮಣ್ಣಿಗೆ ಸೇರಿದ ನಂತರ
ನೋವಿಂದ ಬಳಲಿದೆ !
by ಹರೀಶ್ ಶೆಟ್ಟಿ, ಶಿರ್ವ

ಆಪ್ತ

ಅವನು ನನ್ನ ಆಪ್ತ ಏನು ಆಗಿರಲಿಲ್ಲ
ಆದರೆ ಯಾಕೆ ಅವನ ನೆನಪಿನಿಂದ ನನ್ನ ಕಣ್ಣೀರು ಹರಿಯುತ್ತದೆ
by ಹರೀಶ್ ಶೆಟ್ಟಿ, ಶಿರ್ವ

Friday, 24 February, 2012

ನನ್ನದೇನಿದೆ ಪಾಂಡುರಂಗ

ನನ್ನದೇನಿದೆ ಪಾಂಡುರಂಗ
ಎಲ್ಲ ನಿನ್ನದೆ........

ಜೀವ ನಿನ್ನದೇ ಉಸಿರು ನಿನ್ನದೆ
ಬಾಳು ನಿನ್ನದೆ ಬದುಕು ನಿನ್ನದೆ
ಕಣ್ಣು ನಿನ್ನದೆ ನೋಟ ನಿನ್ನದೆ
ಮನಸ್ಸು ನಿನ್ನದೆ ಭಾವ ನಿನ್ನದೆ

ನನ್ನದೇನಿದೆ  ಪಾಂಡುರಂಗ
ಎಲ್ಲ ನಿನ್ನದೆ.........

ಸುಖವು ನಿನ್ನದೆ ದುಃಖವು ನಿನ್ನದೆ
ನಡೆಯು  ನಿನ್ನದೆ ನುಡಿಯು ನಿನ್ನದೆ
ಸತ್ಯವು ನಿನ್ನದೆ ಮಿಥ್ಯವು  ನಿನ್ನದೆ
ಜ್ಞಾನವು ನಿನ್ನದೆ ಅಜ್ಞಾನವು ನಿನ್ನದೆ

ನನ್ನದೇನಿದೆ ಪಾಂಡುರಂಗ
ಎಲ್ಲ ನಿನ್ನದೆ.........
by  ಹರೀಶ್ ಶೆಟ್ಟಿ, ಶಿರ್ವ

"ತಾಯಿ"

ಹಕ್ಕಿ ಒಂದು
ಮನೆಯ ಕಿಟಕಿಯಲಿ ಬಂದು
ಗೂಡೊಂದು ಕಟ್ಟಿ
ಮೊಟ್ಟೆಯ ಇಟ್ಟು
ಪುಟ್ಟ ಮರಿ ಒಂದು
ಹೊರ ಬರುವುದನ್ನು
ಕಾಯುತಿದೆ.....
ಭೂಮಿಯಲಿ ಸೃಷ್ಟಿಕರ್ತ
ಎಲ್ಲ ಜೀವಿಗಳಿಗೆ
ನೀಡಿದ ದೇವರು
"ತಾಯಿ"
by ಹರೀಶ್ ಶೆಟ್ಟಿ, ಶಿರ್ವ

Thursday, 23 February, 2012

ಅಜ್ಞಾತ

ಅವನು ಮೌನ
ಎಲ್ಲಿಂದಲೋ ಬಂದಿದ
ಕುರಚಲು ಗಡ್ಡ
ಹರಿದ ಬಟ್ಟೆ
ಕೆಂಪು ಕಣ್ಣು
ಅದರಿಂದ ಹರಿಯುವ ಕಣ್ಣೀರು

ಅವನು ಅಲ್ಲೇ ಬಿದ್ದಿದ್ದ
ಆ ಕಲ್ಲ ಹಾಸಿಗೆಯಲಿ
ಬಿಸಿಲು ನೆರಳು
ಯಾವುದರ ಚಿಂತೆ ಇಲ್ಲ
ಬರು ಹೋಗುವವರ ಗೋಚರ ಇಲ್ಲ
ಹಸಿವೆ ಬಾಯಾರಿಕೆ ಏನೂ ಇಲ್ಲ
ಅವನ ಪರಿಚಿತರಿಲ್ಲ ಯಾರೂ

ಅಲ್ಲೇ ಬಿದ್ದು ಸತ್ತ
ಮುಗಿಯಿತು ಅವನ ಜೀವನ ಲೀಲೆ
ಯಾರಿಗೂ ತಿಳಿಯಲಿಲ್ಲ
ತಿಳಿಯುವ ಆಸಕ್ತಿಯು ಇಲ್ಲ
ಅವನ ಕಣ್ಣೀರ ವ್ಯಥೆ
ಅವನ ವೇದನೆ
ರಹಸ್ಯವಾಗಿ ಉಳಿಯಿತು ಅವನ ಜೀವನದ ಕಥೆ
by ಹರೀಶ್ ಶೆಟ್ಟಿ, ಶಿರ್ವ

Wednesday, 22 February, 2012

ಹಲಸಿನ ಮರ

ನನ್ನ  ಮನೆಯ
ಹಿಂದೆ ಇತ್ತು
ಒಂದು ಹಲಸಿನ ಮರ

ಅದರ ಮೇಲೆ
ಒಂದು ಪಕ್ಷಿಯ
ಗೂಡು ಸುಂದರ

ನಮ್ಮ ಹಸುಗಳಿಗೆ
ಇಷ್ಟವಾಗುತ್ತಿತ್ತು
ಅದರ ಎಲೆಗಳ ಆಹಾರ

ಆಶ್ರಯವಾಗಿತ್ತು
ಅದರ ಛಾಯೆ
ದಣಿದ ಪ್ರವಾಸಿಗರ

ಅದರ ಸಿಹಿ
ರುಚಿ ಹಣ್ಣು
ಅತ್ಯಂತಪ್ರಿಯ ಎಲ್ಲರ

ಅದರ ಶಾಕೆಯಲಿ
ಕಟ್ಟಿದ ಉಯ್ಯಾಲೆ
ಆಟಿಕೆ ಆಗಿತ್ತು ತುಂಟ ಮಕ್ಕಳ

ಪಕ್ಷಿಗೆ ಗೂಡು
ಪಶುಗಳಿಗೆ ಆಹಾರ
ಪ್ರವಾಸಿಗರಿಗೆ ಛಾಯೆ
ಹಸಿದವರಿಗೆ ಹಣ್ಣು
ಮಕ್ಕಳಿಗೆ ಉಯ್ಯಾಲೆ
ಒಲೆಗೆ ಕಟ್ಟಿಗೆ
ಅದರ ಮರ ಮನೆ ಬಾಗಿಲ ಕಿಟಕಿಗೆ

ಎಲ್ಲರಿಗೆ ಎಲ್ಲವನ್ನು
ನೀಡುತ್ತಿತ್ತು
ಈ ಹಲಸಿನ ಮರ
by ಹರೀಶ್ ಶೆಟ್ಟಿ, ಶಿರ್ವ

Tuesday, 21 February, 2012

ನಾನು ನಿಶ್ಚಿಂತ

ಈಗ ಮನಸ್ಸಿಗೆ ಸಮಾಧಾನ ಆಗಿದೆ ಚಿಂತೆಗಳ ಅಂತ
ಅವಳು ಆಗಮನದ ನಂತರ ಈಗ ನಾನು ನಿಶ್ಚಿಂತ
by ಹರೀಶ್ ಶೆಟ್ಟಿ, ಶಿರ್ವ

ಸಾಗಲಿ ನಿನ್ನ ಪ್ರವಾಸ

ಸಾಗಲಿ ನಿನ್ನ ಪ್ರವಾಸ
ಶರೀರದಲ್ಲಿ ಪ್ರಾಣ ಇರುವ ತನಕ
ಇಲ್ಲಿ ಯಾರಿಗೂ ಎಲ್ಲಾ ಸಿಗುವುದಿಲ್ಲ
by ಹರೀಶ್ ಶೆಟ್ಟಿ, ಶಿರ್ವ

Monday, 20 February, 2012

ನೆನಪಿನ ಅಂಗಳದಲಿ

ನೆನಪಿನ ಅಂಗಳದಲಿ
ಅವಳ ಹೆಜ್ಜೆಯ ಸ್ವರ ಕೇಳುತ್ತಿದೆ
ಮನಸ್ಸಿನ ದ್ವಾರದಲಿ
ಅನೇಕ ಭಾವನೆಗಳು ನಲಿಯುತ್ತಿದೆ 
ಈ ಕಣ್ಣೇರು ಹೀಗೆಯೇ
ಹೇಳದೆ ಕೇಳದೆ ಬರುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

ಹಣೆ ಬರಹ

ನನ್ನ ಹೃದಯವನ್ನು ಆಡಿಸಿ
ನನ್ನನ್ನು ಬಿಟ್ಟು ನೀ ಹೊರಟು ಹೋದೆ
ನನ್ನ ಕಣ್ಣೀರನ್ನು ಶಾಯಿಯಂತೆ ಉಪಯೋಗಿಸಿ
ನನ್ನ ಹಣೆ ಬರಹ ನೀ ಬರೆದೆ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯಲಿ ಸೋತು

ಪ್ರೀತಿಯಲಿ ಸೋತು
ಮರೆತಿದೆ ಅವಳನ್ನು ಅತ್ತು ಅತ್ತು
ಅವಳು ಆಗಿದಳು ಈಗ ಇನ್ನೊಬ್ಬರ ಸೊತ್ತು !

ಸಮಯದ ಮದ್ದು
ಎಲ್ಲವೂ ಸರಿ ಆಗಿದೆ ಎಂಬ ತಪ್ಪು ಅನಿಸಿಕೆ ಇತ್ತು 
ಅದರೂ ತುಂಡಾದ ಹೃದಯದಲಿ ನೋವು ಈಗಲೂ ಇತ್ತು !

ಜೀವನ ಹೀಗೆಯೇ ಸಾಗಿತು
ಒಂದು ದಿವಸ ಹಠಾತ್ ಅವಳೊಂದಿಗೆ ಬೇಟಿ ಆಯಿತು
ನೋಡಿ ಅವಳನ್ನು ಹೃದಯದ ಬಡಿದ ವೇಗವಾಯಿತು !

ಸಮಯ ಹಿಂದೆ ಓಡಿತು
ಪ್ರೇಮ ಲೋಕದ ಬಾಗಿಲು ತೆರೆದಂತಾಯಿತು
ನೆನಪುಗಳ ಪುಟಗಳನ್ನು ಪುನಃ ಓದಿದಂತಾಯಿತು !

ಕನಸಿನ ಕನ್ನಡಿ ಒಡೆಯಿತು
ಅವಳ ಮಾಂಗಲ್ಯ ನನಗೆ ನೆನಪಾಯಿತು
ಈಗ ಕೇವಲ ಅವಳ ನೆನಪೇ ನನ್ನ ಸಂಪತ್ತಾಯಿತು  !
by ಹರೀಶ್ ಶೆಟ್ಟಿ, ಶಿರ್ವ

Sunday, 19 February, 2012

ನಿನ್ನಲಿದ್ದ ಹೃದಯ

ರಾಧೆ......
ನಿನ್ನಲಿದ್ದ ಹೃದಯ
ನನ್ನದಲ್ಲವೇ
ಅದರಲ್ಲಿ ಕೇವಲ ನಿನ್ನದೇ ವಾಸ ಅಲ್ಲವೇ ....
ಹಾಗಾದರೆ ನೀನು ಅಂದರೆ ನಾನೇ ಅಲ್ಲವೇ....
"ಕೃಷ್ಣ ಕೃಷ್ಣ " ಎಂದು ನೀ ಕರೆಯುವೆ
ನಾನು ಅಲ್ಲೇ ಇದ್ದದ್ದು ನೀ ನೋಡಲಿಲ್ಲವೇ....
by ಹರೀಶ್ ಶೆಟ್ಟಿ, ಶಿರ್ವ

Saturday, 18 February, 2012

ನಾನು ದೇವದಾಸನಲ್ಲ

ನಾನು ದೇವದಾಸನಲ್ಲ
ನಾನೊಬ್ಬ ಸಾಧಾರಣ ಪ್ರೇಮಿ
ದೇವದಾಸ ಶ್ರೀಮಂತ
ನಾನು ಬಡಪಾಯಿ

ಪಾರೋ ದೇವದಾಸನ
ಬಾಲ್ಯ ಗೆಳತಿ
ನನ್ನವಳು ಈಗ ನನ್ನ
ಮನೆ ಒಡತಿ

ಪ್ರೀತಿಯಲಿ ಸೋತ ನಂತರ
ದೇವದಾಸನಿಗೆ  ಸಿಕ್ಕಿದ ಗೆಳೆಯ ಚುನ್ನಿಲಾಲ್
ಮದುವೆ ಆದ ನಂತರ
ನನ್ನ ಮಿತ್ರರೆಲ್ಲ ನನ್ನಿಂದ ಗಡಿ ಪಾರ್

ವಿರಹ ವೇದನೆ ತಾಳಲಾರದೆ
ದೇವದಾಸ ಕುಡುಕನಾದ
ಮದುವೆ ಆದ ನಂತರ
ಮೌನವೇ ನನ್ನ ಗೆಳೆಯನಾದ 

ದೇವದಾಸನಿಗೆ ಪಾರೋ ಇಲ್ಲಾದಾಗ
ಚಂದ್ರಮುಖಿ
ನನಗೆ ನನ್ನವಳು ಇಲ್ಲದಾಗ
ನಾನು ಕೇವಲ ದುಃಖಿ

ದೇವದಾಸ ಕುಡಿದು ಕುಡಿದು
ಅಮರನಾದ
ನಾನು ಸಂಸಾರದ ಜಾಲದಲಿ
ಸಿಲುಕಿ ನನ್ನವಳ ಬಂದಿಯಾದೆ
by ಹರೀಶ್ ಶೆಟ್ಟಿ, ಶಿರ್ವ

ಕೃಷ್ಣ ನಿನ್ನ ಸ್ಮರಣೆಯಲಿ

ಕೃಷ್ಣ ನಿನ್ನ ಸ್ಮರಣೆಯಲಿ
ರಾಧೆ ಸ್ವತಃ ತನ್ನನ್ನು ಕೃಷ್ಣ ಎಂದು ಭಾವಿಸಿ
"ರಾಧೆ ರಾಧೆ" ಎಂದು ಕೂಗಾಡಿದಳು
ಚೇತರಿಸಿದಾಗ
ಪುನಃ "ಕೃಷ್ಣ ಕೃಷ್ಣ"  ಎಂದು ಕರೆದು ವಿಲಾಪಿಸಿದಳು
by ಹರೀಶ್ ಶೆಟ್ಟಿ, ಶಿರ್ವ

ದೇಶ ಭಕ್ತಿ

ಗುರಿಯನ್ನು ಗಳಿಸುವ
ಆಸೆಯಲಿ
ತನ್ನ ಮುಗ್ಧ ಬಾಲ್ಯವನ್ನು
ಮುಗಿಸಿದರು !

ದೇಶ ಭಕ್ತಿಯ 
ಭಾವನೆಯಲಿ
ತನ್ನ ಆತ್ಮಿಯರನ್ನು  
ಮರೆತರು !

ದೇಶವನ್ನು ರಕ್ಷಿಸಲು
ಹೋರಾಟದಲಿ
ತನ್ನ ಜೀವ ಕೊಟ್ಟು
ಹುತಾತ್ಮರಾದರು!

ಆ ವೀರರ ಹೆಸರನ್ನು
ಸರಕಾರ 
ಕೇವಲ ರಸ್ತೆಯ ಹೆಸರಿಡಲು
ಬಳಸಿದರು !
by ಹರೀಶ್ ಶೆಟ್ಟಿ, ಶಿರ್ವ

Wednesday, 15 February, 2012

ಪ್ರೀತಿಯ ಪರಾಕಾಷ್ಟ

"ರಾಧೆ"
ನಿನ್ನ ಹೆಸರೆ
ಪ್ರೀತಿಯ ಪರಾಕಾಷ್ಟ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಅಂದರೆ

ಪ್ರೀತಿ
ಅಂದರೆ
ನನ್ನ ಮೌನ
ಅವಳ ಮೌನ
ಆದರು ಮುಗಿಯದ ಸಂವಾದಗಳು
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಎಂಬ ಭಾವ

ಪ್ರೀತಿ ಎಂಬ ಭಾವ
ನೋಡಿ ಮಗುವಿನ ಮುಗ್ಧ ಮುಖದಲಿ
ನೋಡಿ ತಾಯಿಯ ಮಮತೆಯಲಿ
ನೋಡಿ ತಂದೆಯ ಸುಳ್ಳು ಕೋಪದಲಿ
ನೋಡಿ ಪ್ರೇಮಿಯ ಕಣ್ಣಲ್ಲಿ
ಹುಡುಕ ಬೇಡಿ ಪ್ರೀತಿ ಇನ್ನೆಲ್ಲೋ ಜಗದಲಿ
ಎಲ್ಲಿಯೂ ಕಾಣದಿದ್ದರೆ
ಇಣುಕಿ ನೋಡಿ ನಿಮ್ಮ ಹೃದಯದಲಿ
by ಹರೀಶ್ ಶೆಟ್ಟಿ, ಶಿರ್ವ

ಒಂದು ಪ್ರೀತಿ ಅಲ್ಲದೆ

और भी ग़म है ज़माने में
एक मोहब्बत के सिवा
मिर्ज़ा ग़ालिब
ಅನೇಕ ದುಃಖಗಳಿವೆ ಪ್ರಪಂಚದಲಿ
ಒಂದು ಪ್ರೀತಿ ಅಲ್ಲದೆ
ಅನುವಾದ : ಹರೀಶ್ ಶೆಟ್ಟಿ , ಶಿರ್ವ

Monday, 13 February, 2012

ಅವಳ ಪ್ರೀತಿ

ಪ್ರೇಮದ ಲೋಕ 
ನನಗೆ ಬೇಡ
ನನಗೆ ಅವಳ ಪ್ರೀತಿಯೇ ಸಾಕು!

ಸೂರ್ಯನ ಕಿರಣದ
ಹೊಳಪು ಬೇಡ
ನನಗೆ ಅವಳ ಮುಖದ ಕಾಂತಿಯೇ ಸಾಕು!

ಮೋಹಕ ಚಂದ್ರನ
ಸೌಂದರ್ಯ ಬೇಡ
ನನಗೆ ಅವಳ ಸರಳ ರೂಪವೇ ಸಾಕು !

ಕನಸು ಕಾಣಲು
ನಿದ್ದೆ ಬೇಡ
ನನಗೆ ಅವಳ ನೆನಪೆ ಸಾಕು!

ಜೀವನ ಕಳೆಯಲು
ಜೀವ ಬೇಡ
ನನಗೆ ಅವಳ ಉಸಿರೆ ಸಾಕು !
by ಹರೀಶ್ ಶೆಟ್ಟಿ, ಶಿರ್ವ

ಅವಳ ಸೊತ್ತು

ನನ್ನ ಮನಸ್ಸು ಈಗ ನನ್ನದಲ್ಲ
ಅದು ಈಗ ಅವಳ ಸೊತ್ತು

 by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಸಾಗರದಲಿ

ತೇಲಾಡುತ ಇದ್ದೇನೆ ಪ್ರೀತಿಯ ಸಾಗರದಲಿ
ಯಾವ ತಟಕ್ಕೆ ಹೋಗಿ ಸೇರುತ್ತೇನೋ
 
by ಹರೀಶ್ ಶೆಟ್ಟಿ, ಶಿರ್ವ

Sunday, 12 February, 2012

ಪ್ರೀತಿ ಮಾಡಿದ ನಂತರ

ಪ್ರೀತಿ ಮಾಡಿದ ನಂತರ ಅರಿವಾಯಿತು
ನಾನು ನಾನಾಗಿ ಉಳಿಯಲಿಲ್ಲವೆಂದು
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಅಲ್ಲ ವ್ಯಾಪಾರ

ಪ್ರೀತಿಯಲಿ ಬೇಡ ಲೆಕ್ಕಾಚಾರ
ಕೊಟ್ಟು ಪಡೆಯುವ ಆಸೆ ಏಕೆ
ಪ್ರೀತಿ ಅಲ್ಲ ವ್ಯಾಪಾರ
by ಹರೀಶ್ ಶೆಟ್ಟಿ, ಶಿರ್ವ

ಮರಿ ಆಡಿನ ವ್ಯಥೆ

ಹುಲ್ಲು ಮೇಯಲು ಬಂದಿದೆ
ದಾರಿ ತಪ್ಪಿ ಹೋದೆ
ಎಲ್ಲಿದೆ ನೀ ಒಡೆಯ
ಹುಡುಕುತ್ತಿದ್ದೇನೆ ನಾನು

ಸೂರ್ಯ ವಿಶ್ರಾಮಿಸಲು ಸಿದ್ದ
ಕತ್ತಲೆ ಕವಿಯಲು ಬದ್ಧ
ನೀನೆಲ್ಲಿ ಒಡೆಯ
ಚಿಂತೆಯಲ್ಲಿದ್ದೇನೆ ನಾನು

ಮೋಡಗಳ ಆರ್ಭಟ
ಗುಡುಗು ಮಿಂಚಿನ ಚಟಪಟ
ಬೇಗ ಬಾ ಒಡೆಯ
ಭಯಬೀತನಾಗಿದ್ದೇನೆ ನಾನು

ಇನ್ನು ನಿನ್ನ ಬಿಟ್ಟು ದೂರ ಹೋಗಲಾರೆ
ನಿನ್ನ ಕಾವಲು ಛಿದ್ರ ಮಾಡಲಾರೆ
ಕ್ಷಮಿಸು ಒಡೆಯ
ಲಜ್ಜಿತನಾಗಿದ್ದೇನೆ ನಾನು
by ಹರೀಶ್ ಶೆಟ್ಟಿ , ಶಿರ್ವ

ನೆಮ್ಮದಿ

ಸಿಗಲಿಕ್ಕಿಲ್ಲ ಶಾಂತಿ ಕಪಟ ಮನಸ್ಸಿಂದ ದೇವರಿಗೆ ಅರ್ಪಣೆ ಕೊಟ್ಟರೆ
ಸಿಗುವುದು ನೆಮ್ಮದಿ ಹಸಿದ ಹೊಟ್ಟೆಗೆ ಎರಡು ರೊಟ್ಟಿ ಕೊಟ್ಟರೆ
by ಹರೀಶ್ ಶೆಟ್ಟಿ, ಶಿರ್ವ

Saturday, 11 February, 2012

ನೋವು

ಅವನು ಬಂದಿದ ನನ್ನ ನೋವನ್ನು ಅಳಿಸಲು
ತನ್ನ ನೋವೆ ಕೊಟ್ಟು ಹೋದ
by ಹರೀಶ್ ಶೆಟ್ಟಿ, ಶಿರ್ವ

ಹೂದೋಟದಲಿ

ಈಗ ಮನೆಯ ಹೂದೋಟದಲಿ ಉಲ್ಲಾಸದ ವಾತಾವರಣ
ಅವಳ ಪೋಷಣೆಯಿಂದ ಗಿಡಗಳಿಗೆ ಸಿಕ್ಕಿದೆ ಪುನರ್ಜೀವನ
ಪರಿಮಳ ಬೀರುತ್ತಿರುವ ಸುಂದರ ಅರಳಿದ ಹೂಗಳ ಸಂಭ್ರಮ
by ಹರೀಶ್ ಶೆಟ್ಟಿ, ಶಿರ್ವ

ಹೃದಯ

ಜೀವನ ನೀನು
ಬಿಟ್ಟು ಹೋದ
ನಂತರವೇ
ಮುಗಿದಿತ್ತು.......
ಈ ಹೃದಯವು
ದಿನ ಹೀಗೆಯೇ
ತನ್ನ ರೂಢಿ ಪ್ರಕಾರ
ಬಡಿಯುತಿತ್ತು.....
by ಹರೀಶ್ ಶೆಟ್ಟಿ, ಶಿರ್ವ

ಅವಳು ಬಂದ ನಂತರ

ಅವಳು ಬಂದ ನಂತರ ಸಂಬಂಧಿಕರು ಎಲ್ಲ ಬಳಿ
ಅವಳಿಲ್ಲದಾಗ ನಾನೊಬ್ಬನೇ ಆಗಿದೆ ಬಲಿ
ಏನೇ ಇರಲಿ ನಾನೀಗ ಇದ್ದೇನೆ ತೃಪ್ತಿಯಲಿ
by ಹರೀಶ್ ಶೆಟ್ಟಿ, ಶಿರ್ವ

Thursday, 9 February, 2012

ದೈನಂದಿನದ ಕಾರ್ಮಿಕರು

ದೈನಂದಿನದ ಕಾರ್ಯಗಳು
ಹೊಟ್ಟೆ ಪಾಡಿಗಾಗಿ ದಿನಾಲು
ನಡೆದೆ ಕೆಲಸ ಹುಡುಕಲು

ಸಿಕ್ಕಿದ ಕೆಲಸ ಮಾಡಲು
ದಕ್ಕಿದ ಹಣ ಪಡೆಯಲು
ಒಕ್ಕಿದ ರೊಟ್ಟಿ ತಿನ್ನಲು

ಬಿಸಿ ಬಿಸಿ ಬಿಸಿಲು
ತಲೆಯಲಿ ಮಣ್ಣಿನ ಬಾಣಲು
ಬೆವರಿನ ಹೊನಲು

ಸಂಜೆಯ ಮಡಿಲು
ಸೋತ ಕೈ ಕಾಲು
ಸಿಕ್ಕಿತು ಭಾಗ್ಯದ ಪಾಲು
by  ಹರೀಶ್ ಶೆಟ್ಟಿ, ಶಿರ್ವ

ಸಂತೋಷ ನೆಮ್ಮದಿ

ಈಗ ಅವಳು ಅರಳಿದ ಹೂವಿನ ಹಾಗೆ
ಸಂತೋಷ ನೆಮ್ಮದಿಯಿಂದ ಕೂಡಿದೆ ಅವಳ ಮೊಗೆ
by ಹರೀಶ್ ಶೆಟ್ಟಿ, ಶಿರ್ವ

ಕನಸುಗಳು

ಚಂದ್ರ ಬಾನಲ್ಲಿ
ಸುತ್ತ ಮುತ್ತ ನಕ್ಷತ್ರಗಳು
ನಾನು ನಿದ್ದೆಯಲ್ಲಿ
ಸುತ್ತ ಮುತ್ತ ಕನಸುಗಳು
by  ಹರೀಶ್ ಶೆಟ್ಟಿ, ಶಿರ್ವ

Wednesday, 8 February, 2012

ಅಳಿಲು ಸೇವೆ !

ತಾಯಿ
ನನಗೋಸ್ಕರ
ನೀ ಮಾಡಿರುವೆ ಅನೇಕ ತ್ಯಾಗ
ನನ್ನ ಬಾಳ ಬದುಕಿನ ನೀನೆ ದೈವೆ !

ಬಿಸಿಲಲ್ಲಿ ಮಳೆಯಲ್ಲಿ
ನನಗೆ ಕೊಡೆ ಇಡಿದು
ಸ್ವತಃ ಕಷ್ಟ ತಾಪ ಪಡೆದೆ
ಸಿಕ್ಕಿದು ನಿನಗೆ ಕೇವಲ ನೋವೆ !

ಸ್ವತಃ ಉಪವಾಸ ಇದ್ದು
ನನಗೆ ಊಟ ಬಡಿಸಿ
ಕಣ್ಣೀರ ಕುಡಿದೆ
ಅಡಗಿಸಿದೆ ನನ್ನಿಂದ ನಿನ್ನ ಹಸಿವೆ !

ನಿನ್ನ ಮಗನಾಗಿ ಹುಟ್ಟಿದ್ದು ನನ್ನ ಭಾಗ್ಯ
ಪೂರ್ಣ ಜೀವನ ನಿನಗೆ ಅರ್ಪಿಸುವೆ
ಸ್ವೀಕರಿಸು
ನನ್ನ ಸಣ್ಣ ಅಳಿಲು ಸೇವೆ !
by ಹರೀಶ್ ಶೆಟ್ಟಿ, ಶಿರ್ವ

Tuesday, 7 February, 2012

ಜೀವನದ ಪರೀಕ್ಷೆ

ನನ್ನೆಲ್ಲ ಪ್ರಯತ್ನ ವ್ಯರ್ಥವಾಯಿತು
ಒಂದು ಸಣ್ಣ ತಪ್ಪಾಯಿತು
ಜೀವನ ಬೀದಿ ಪಾಲಾಯಿತು

ಮುಳ್ಳುಗಳ ಹಾದಿ ಪಾರಾಗಿತ್ತು
ಗಾಯಗಳೆಲ್ಲ ಮಾಯವಾಗಿತ್ತು
ಭಾಗ್ಯದ ತಿರುವು ಪುನಃ ಮುಳ್ಳಾಯಿತು

ಹಲವು ಕಣ್ಣುಗಳು ಅನುಮಾನವಾಯಿತು
ಬೇಡದ ಅಪವಾದಗಳೆಲ್ಲ ನನ್ನದಾಯಿತು
ಅವರ ಪ್ರಶ್ನೆಗಳೆಲ್ಲ ನನ್ನ ಕಣ್ಣೀರಾಯಿತು

ಎದುರಿಸುವೆ ಒದಗಿದ ಈ ಪರೀಕ್ಷೆ
ಜೀವನದ ಈ ವ್ಯರ್ಥ ಶಿಕ್ಷೆ
ನಿಷ್ಕಳಂಕ ಎಂದು ಸಾಬೀತು ಮಾಡುವುದು ನನ್ನ ಗುರಿಯಾಯಿತು
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ದೃಡವಾಯಿತು

ಇಬ್ಬರಿಗೂ ಅವರವರ ತಪ್ಪುಗಳ ಅರಿವಾಯಿತು
ದೂರ ದೂರ ಇದ್ದು ಪ್ರೀತಿ ಇನ್ನೂ ದೃಡವಾಯಿತು
by ಹರೀಶ್ ಶೆಟ್ಟಿ, ಶಿರ್ವ

ದೀಪಗಳು ಬೆಳಗಿತು

ಅವಳು ಹಿಂತಿರುಗಿ ಬಂದು
ಮನೆಗೊಂದು ಕಲೆ ಬಂತು
ನಂದಿಸದ ದೀಪಗಳು ಬೆಳಗಿತು
by ಹರೀಶ್ ಶೆಟ್ಟಿ, ಶಿರ್ವ

ಸಂಜೆಯ ಸಮಯ

ಸಂಜೆಯ ಸಮಯ
ಸೂರ್ಯ ಸೋತು ನಡೆದ ಮೀಯಲು
ಅವಳಿಲ್ಲದೆ ನಾನೂ ನಡೆದೆ ವ್ಯರ್ಥ ಅಲೆದಾಡಲು
by ಹರೀಶ್ ಶೆಟ್ಟಿ, ಶಿರ್ವ

Sunday, 5 February, 2012

ಪ್ರೀತಿಯ ನಿರ್ಗಮನ

ಅವಳ ಸ್ವಾಭಿಮಾನ
ನನ್ನ ಅಭಿಮಾನ
ಪರಸ್ಪರ ಪ್ರೀತಿಯ ನಿರ್ಗಮನ
by ಹರೀಶ್ ಶೆಟ್ಟಿ, ಶಿರ್ವ

ಅಹಂ

ನನ್ನಲ್ಲಿ ಅವಳಲ್ಲಿ ಇಲ್ಲ ಸಂವಾದ
ಮನಸ್ಸು ಕೋರುತ್ತಿದೆ ಒಪ್ಪಂದ
ಆದರೆ ಅಹಂ ಮಾಡುತ್ತಿದೆ ಪ್ರತಿರೋಧ
by ಹರೀಶ್ ಶೆಟ್ಟಿ, ಶಿರ್ವ

Saturday, 4 February, 2012

ಕನ್ನಡಿಯ ಪ್ರತಿಬಿಂಬ

ನಾನು ನೋಡುವ ಕನ್ನಡಿಯಲ್ಲೂ ಪ್ರತಿಬಿಂಬ ಅವಳದೆ
ಜೀವನ ಚಿತ್ರ ಇಲ್ಲದ ಖಾಲಿ ಚೌಕಟ್ಟು ಅವಳಿಲ್ಲದೆ
by ಹರೀಶ್ ಶೆಟ್ಟಿ, ಶಿರ್ವ

Friday, 3 February, 2012

ಅವಳೇ ಪ್ರೇರಣೆ

ಅವಳಿಲ್ಲದೆ ಮನಸ್ಸಲಿ ಮೂಡುತಿದೆ ಅನೇಕ ಕಾವ್ಯ ರಚನೆ
ಅದಕ್ಕೂ ಹೃದಯದಲಿ ವಾಸವಾಗಿದ ಅವಳೇ ಪ್ರೇರಣೆ
by ಹರೀಶ್ ಶೆಟ್ಟಿ, ಶಿರ್ವ

ಅವಳಿಲ್ಲವೆಂದು

ಮುಂಜಾನೆ ಎದ್ದಾಗ ಅರ್ಧ ನಿದ್ದೆಯಲಿ ಕರೆದೆ ಅವಳನ್ನು
ಎಚ್ಚರಾದಾಗ ನೆನಪಾಯಿತು ಅವಳಿಲ್ಲವೆಂದು
by ಹರೀಶ್ ಶೆಟ್ಟಿ, ಶಿರ್ವ

ನಾನಾದೆ ತಬ್ಬಲಿ

ಅವಳಿಲ್ಲ ಬಳಿ
ಅವಳಿಲ್ಲದೆ ನಾನಾದೆ ತಬ್ಬಲಿ
by ಹರೀಶ್ ಶೆಟ್ಟಿ, ಶಿರ್ವ

Thursday, 2 February, 2012

ಮೌನ

ಅವಳ ಪ್ರಶ್ನೆಗೆ
 "ಮೌನ" ನನ್ನ ಉತ್ತರವಾಗಿತ್ತು
ಅವಳ ಕಣ್ಣಿಂದ ಸುರಿದ ಕಣ್ಣೀರಿಂದ ತಿಳಿದೆ
ಅವಳಿಗೆ ನನ್ನ ಉತ್ತರ ಅರ್ಥವಾಗಿತ್ತು
by  ಹರೀಶ್ ಶೆಟ್ಟಿ, ಶಿರ್ವ

ಹುಡುಕ ಬೇಡ

ಹುಡುಕ ಬೇಡ ನನ್ನನ್ನು ಬಿಟ್ಟು ಬಿಟ್ಟ ಹಾದಿಯಲಿ
ಆ ಹಾದಿಯಲಿ ನಾ ಸಿಗಲ್ಲ
ಹುಡುಕು ನನ್ನನ್ನು ನಿನ್ನ ಮನಸ್ಸಲ್ಲಿ
ನೆಲೆಸಿದ್ದೇನೆ ನಾ ನಿನ್ನ ಹೃದಯದಲ್ಲಿ
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರ ಮೌಲ್ಯ

ಅವಳ ಕಣ್ಣೀರ ಮೌಲ್ಯ ನನಗೆ ಗೊತ್ತು
ಅವಳ ಕಣ್ಣೀರು ಹರಿಸಿ ನಾನಾದೆ ಅವಳ ಋಣಿ
by ಹರೀಶ್ ಶೆಟ್ಟಿ, ಶಿರ್ವ

Wednesday, 1 February, 2012

ದೋಸೆಯ ಪರಿಮಳ

ಮುಂಜಾನೆಯ ಗಳಿಗೆ
ನೆರೆ ಮನೆಯಿಂದ ಬರುತ್ತಿದೆ ದೋಸೆಯ ಪರಿಮಳ
ಮನೆಯಲ್ಲಿಲ್ಲ ಅಡುಗೆ
ಅವಳಿಲ್ಲದೆ ತಿನ್ನುವ ಆಸೆಯು ಇಲ್ಲ ಮನಸ್ಸಲಿ ಕೇವಲ ವಿಚಾರ ಅವಳ
by ಹರೀಶ್ ಶೆಟ್ಟಿ, ಶಿರ್ವ

ಮುಂಜಾನೆಯ ಬೆಳಕು

ಮುಂಜಾನೆಯ ಬೆಳಕು
ಗಿಡ, ಮರ, ಹಕ್ಕಿಗಳಲ್ಲಿ ತುಂಬಿತು ಜೀವನ ಛಲ
ಅವಳಿಲ್ಲದೆ ನನ್ನ ಬದುಕು
ಒಣಗಿದ ಸರೋವರ ಇಲ್ಲ ಅದರಲ್ಲಿ ಜಲ
by ಹರೀಶ್ ಶೆಟ್ಟಿ, ಶಿರ್ವ