Monday 30 January 2012

ಅಪರಿಚಿತರು

ಅವರಿಗೆ ಈಗ ನಾನು ಅಪರಿಚಿತ
ನನಗೂ ಅವರು ಅಪರಿಚಿತರು
ಆಪ್ತ ಮಿತ್ರರು
ಒಂದೇ ದೋಣಿಯ ನಾವಿಕರು
ಪ್ರೀತಿಯ ದೋಣಿಯನ್ನು ಮುಳುಗಿಸಿದರು

ಕಂಡು ಕಾಣದಂತೆ ಮನೋಭಾವ ಅವರ
ಒಟ್ಟಿಗೆ ಇದ್ದು ಪ್ರತ್ಯೇಕ ವ್ಯವಹಾರ
ಸಾಮಿಪ್ಯ ಪಡೆದರು ಹೊಸ ಮಿತ್ರರ
ಮುನಿದು ಕಣ್ಣಿಗೆ ಬಟ್ಟೆ ಕಟ್ಟಿದರು
ಕಣ್ಣಿದ್ದು ಅಂಧರಾದರು

ನಾನು ಈಗಲೂ ನಾನೇ
ಅವರು ಈಗಲೂ ಅವರೇ
ಒಬ್ಬ ಸ್ನೇಹಿತ ಇದ್ದನೆಂದು ಮರೆತರು
ಸ್ನೇಹದ ಬಂಧನ ಮುರಿದರು
ಅವರ ಮಟ್ಟಿಗೆ ಅವರು ಸ್ವತಂತ್ರರಾದರು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment