Tuesday, 31 January, 2012

ದ್ವಾರದಲ್ಲಿ ಭಿಕ್ಷುಕ

ದ್ವಾರದಲ್ಲಿ  ಭಿಕ್ಷುಕನೊಬ್ಬ ಬಂದಿದ
ನನ್ನನ್ನು ನೋಡಿ ಅವನ ಮುಖದಲಿ ಮೂಡಿತು ಮಂದಹಾಸ
ಹೇಳಿದ "ಅಮ್ಮ ಇನ್ನೂ ಬರಲಿಲ್ಲವೇ,ಯಾವಾಗ ಮುಗಿಯುವುದೋ ನನ್ನ ಉಪವಾಸ "
by ಹರೀಶ್ ಶೆಟ್ಟಿ, ಶಿರ್ವ

ನನ್ನದು ಏನಿಲ್ಲ

ನನ್ನದು ಏನಿಲ್ಲ ಈಗ ಈ ಮನೆಯಲ್ಲಿ
ಅವಳು ಹೋಗುವಾಗ ಸುಖ, ನೆಮ್ಮದಿ, ಎಲ್ಲವೂ ಒಟ್ಟಿಗೆ ಹೊರಟು ಹೋಗಿದೆ
by ಹರೀಶ್ ಶೆಟ್ಟಿ, ಶಿರ್ವ

ನನ್ನ ಪ್ರೀತಿ

ಪ್ರೀತಿಯನ್ನು ಹುಡುಕುತ್ತಿದ್ದೆ
ಅವಳು ಹೋದ ನಂತರ ತಿಳಿಯಿತು
"ಅವಳೇ ನನ್ನ ಪ್ರೀತಿಯೆಂದು "
by ಹರೀಶ್ ಶೆಟ್ಟಿ, ಶಿರ್ವ

Monday, 30 January, 2012

ಬಂಗಾರದ ಒಡವೆ

ಕಪಾಟಿನಲ್ಲಿ ಅವಳ ಬಂಗಾರದ ಒಡವೆಗಳನ್ನು ಕಂಡೆ
ಅವಳು ತನ್ನ ಎಲ್ಲ ಒಡವೆಗಳನ್ನು ಬಿಟ್ಟು ಹೋಗಿದ್ದಳು
ನನಗೆ ಅವಳು ಹೇಳಿದ ಮಾತು ನೆನಪಾಯಿತು
"ನೀವೆ ನನ್ನ ಬಂಗಾರ, ಈ ಒಡವೆಗಳಲ್ಲ " ವೆಂದು..
by ಹರೀಶ್ ಶೆಟ್ಟಿ, ಶಿರ್ವ

ಅವಳು ಬಂದಳೆಂದು

ಬಾಗಿಲ ಶಬ್ದ ಕೇಳಿ ಅವಳು ಬಂದಳೆಂದು ಓಡೋಡಿ ಹೋದೆ
ಅಂಚೆ ಅಣ್ಣ ಬಂದಿದ....ಅವಳ ಕಾಗದ ಕೊಡಲು ಅಲ್ಲ....
ದೀಪಾವಳಿಯ ಕೊಡುಗೆ ಕೇಳಲು ...
by ಹರೀಶ್ ಶೆಟ್ಟಿ, ಶಿರ್ವ

ಶಾಂತ ಒಲೆ

ಅಡುಗೆ ಮನೆಯಲ್ಲಿ ಶಾಂತ ಒಲೆ
ಅವಳಿಲ್ಲದೆ ಪಸರಿದೆ ಶಾಂತತೆಯ ಅಲೆ
by ಹರೀಶ್ ಶೆಟ್ಟಿ, ಶಿರ್ವ

ನನ್ನದೇ ಚಿಂತೆ

ಅವಳು ಬಿಟ್ಟು ಹೋಗುವಾಗಲು ನನ್ನದೇ ಚಿಂತೆ
ಹೇಳಿದು ಇಷ್ಟೇ ....
"ದಯವಿಟ್ಟು ನಿಮ್ಮ ಆರೋಗ್ಯದ ಕಾಳಜಿ ಇಡಿ "
by ಹರೀಶ್ ಶೆಟ್ಟಿ, ಶಿರ್ವ

ಅಪರಿಚಿತರು

ಅವರಿಗೆ ಈಗ ನಾನು ಅಪರಿಚಿತ
ನನಗೂ ಅವರು ಅಪರಿಚಿತರು
ಆಪ್ತ ಮಿತ್ರರು
ಒಂದೇ ದೋಣಿಯ ನಾವಿಕರು
ಪ್ರೀತಿಯ ದೋಣಿಯನ್ನು ಮುಳುಗಿಸಿದರು

ಕಂಡು ಕಾಣದಂತೆ ಮನೋಭಾವ ಅವರ
ಒಟ್ಟಿಗೆ ಇದ್ದು ಪ್ರತ್ಯೇಕ ವ್ಯವಹಾರ
ಸಾಮಿಪ್ಯ ಪಡೆದರು ಹೊಸ ಮಿತ್ರರ
ಮುನಿದು ಕಣ್ಣಿಗೆ ಬಟ್ಟೆ ಕಟ್ಟಿದರು
ಕಣ್ಣಿದ್ದು ಅಂಧರಾದರು

ನಾನು ಈಗಲೂ ನಾನೇ
ಅವರು ಈಗಲೂ ಅವರೇ
ಒಬ್ಬ ಸ್ನೇಹಿತ ಇದ್ದನೆಂದು ಮರೆತರು
ಸ್ನೇಹದ ಬಂಧನ ಮುರಿದರು
ಅವರ ಮಟ್ಟಿಗೆ ಅವರು ಸ್ವತಂತ್ರರಾದರು
by ಹರೀಶ್ ಶೆಟ್ಟಿ, ಶಿರ್ವ

Sunday, 29 January, 2012

ಹಳೆ ಪತ್ರ

ಪುಸ್ತಕದಲ್ಲಿ ಹಳೆ ಪತ್ರ ಒಂದು ಸಿಕ್ಕಿತು
ಅದರಲ್ಲಿ ಅವಳು ತಮಾಷೆಯಿಂದ ಬರೆದದ್ದು ಈಗ ಸತ್ಯವೆಂದು ಎನಿಸಿತು
"ನನ್ನನ್ನು ಬಿಟ್ಟು ನೀವು ಇರಲಾರರು "
by ಹರೀಶ್ ಶೆಟ್ಟಿ, ಶಿರ್ವ

Saturday, 28 January, 2012

ಕೋಗಿಲೆ ಸ್ವರ

ಅವಳಿರುವಾಗ ಮುಂಜಾನೆ ಕೋಗಿಲೆ ಹಾಡುವ ಸಿಹಿ ಮಧುರ ಸ್ವರ ನನಗೆ ನಿತ್ಯ ಸುಮಂಗಳ
ಅವಳಿಲ್ಲದೆ ಅದು ಈಗ ನನಗೆ ಕೊಡುತ್ತಿದೆ ಕಿರುಕುಳ
by ಹರೀಶ್ ಶೆಟ್ಟಿ, ಶಿರ್ವ

ಅನುಕಂಪ

ಅವಳ ತಲೆದಿಂಬುಗೂ ನನ್ನ ಮೇಲೆ ಅನುಕಂಪ
ನನ್ನ ಕಣ್ಣೀರಿನಿಂದ ಒದ್ದೆ ಆಗಿಯೂ
ರಾತ್ರಿ ನನಗೆ ಪುನಃ ಅಳಲು ಒಣಗುತ್ತದೆ
by ಹರೀಶ್ ಶೆಟ್ಟಿ, ಶಿರ್ವ

ನಿನ್ನ ಸೇವೆ

ನಾನು ನಗುವಾಗ ನೀ ನಗುವೇ
ನಾ ಅಳುವಾಗ ನೀ ಅಳುವೇ
ನನಗೂ ಒಂದು ಅವಕಾಶ ನೀಡು ಪ್ರಿಯೇ
ಹೃದಯದಿಂದ ಮಾಡುವೆ ನಿನ್ನ ಸೇವೆ
by ಹರೀಶ್ ಶೆಟ್ಟಿ, ಶಿರ್ವ

ಕಲ್ಲಾಗಿ ಹೋದೆ

ಕಲ್ಲಿನ ಮನಸ್ಸು ನನ್ನದು
ಕೋಮಲ ಹೃದಯ ಅವಳದು
ನೋವು ಕೊಟ್ಟೆ ಅವಳಿಗೆ
ಅವಳಿಲ್ಲದೆ ಈಗ ಕಲ್ಲಾಗಿ ಹೋದೆ
by ಹರೀಶ್ ಶೆಟ್ಟಿ, ಶಿರ್ವ

ಸಮುದ್ರದ ಕಣ್ಣೀರು

ಕೇಳಿದೆ ನಾ ಸಮುದ್ರಕ್ಕೆ
"ನೀ ಎಂದೂ ಪ್ರೀತಿಸಿದಿಯೇ ?
ಸಮುದ್ರ ಹೇಳಿತು ನಕ್ಕು
"ನಾನೂ ನಿನ್ನ ಹಾಗೆ ಪ್ರೀತಿಯಲಿ ಸೋತವನು
ಹರಿಸುತ್ತಿದ್ದೇನೆ ಈಗಲೂ ನನ್ನ ಕಣ್ಣೀರನ್ನು"
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯಲಿ ಸೋತು

ಪ್ರೀತಿಯಲಿ ಸೋತು ಅಳುತ್ತಿದ್ದೆ ಸಮುದ್ರದ ತೀರ ಬಂದು
ಸಮುದ್ರ ಹೇಳಿತು "ಅಳಬೇಡ ಇಲ್ಲಿ ,ನಿನ್ನ ಕಣ್ಣೀರಿನಿಂದ ನನ್ನ ಪ್ರವಾಹವೂ ಏರಬಹುದು"
by ಹರೀಶ್ ಶೆಟ್ಟಿ, ಶಿರ್ವ

Thursday, 26 January, 2012

ನಾನೊಬ್ಬನೇ !

ನಾನೊಬ್ಬನೇ !
ನಡೆಯುತ್ತಿದ್ದೇನೆ, ಹಾದಿ ಗೊತ್ತಿಲ್ಲ
ಹಿಂದೆ ಮುಂದೆ ಯಾರೂ ಇಲ್ಲ
ಎಲ್ಲಿ ಹೋಗುತ್ತಿದ್ದೇನೆ ತಿಳಿದಿಲ್ಲ 
ನಾನೊಬ್ಬನೇ !
ಅವರು ನನ್ನನ್ನು ಬಿಟ್ಟು ಬಿಟ್ಟರು
ಸಣ್ಣ ಮನಸ್ತಾಪ
ಅಪವಾದ ನನಗಿಟ್ಟರು
ನಾನೊಬ್ಬನೇ !
ತಾಣದ ಅರಿವಿಲ್ಲ
ಗುರಿಯ ಗೋಚರವಿಲ್ಲ
ಸಹಯಾತ್ರಿಯರಲ್ಲಿ ಯಾರೂ ನನ್ನವರಿಲ್ಲ
ನಾನೊಬ್ಬನೇ !
ಕಣ್ಣಿನ ಕಣ್ಣೀರು ಒಣಗಿದ
ದುರ್ಬಲ ಹೃದಯ ಸೊರಗಿದೆ
ಶರೀರದಲ್ಲಿ ತ್ರಾಣ ಇಲ್ಲದಾಗಿದೆ
ನಾನೊಬ್ಬನೇ !
by ಹರೀಶ್ ಶೆಟ್ಟಿ, ಶಿರ್ವ

Wednesday, 25 January, 2012

ಉತ್ಸವದ ಸಡಗರ

ಹೊರಗೆ ನಡೆಯುತ್ತಿದೆ ಉತ್ಸವದ ಸಡಗರ
ಅವಳಿಲ್ಲದೆ ನನಗೆ ಉತ್ಸವದಲ್ಲೂ ಬೇಜಾರ
by ಹರೀಶ್ ಶೆಟ್ಟಿ, ಶಿರ್ವ

ಋಣಿ

ನಾನು ಅವಳ ಋಣಿ
ನನ್ನಿಂದ ದೂರವಾಗಿ ಪ್ರೀತಿಯ ಅರ್ಥ ತಿಳಿಸಿದಕ್ಕೆ
by ಹರೀಶ್ ಶೆಟ್ಟಿ, ಶಿರ್ವ

Tuesday, 24 January, 2012

ಪಾರಿವಾಳ ಸಂದೇಶ

ಪಾರಿವಾಳ ಒಂದು ಹಾರಿ ಬಂದು ಕಿಟಕಿಯಲ್ಲಿ ಕುಳಿತು ಕೊಂಡಿತು
ಮನದಲ್ಲಿ ಒಂದು ಅಸ್ವಾಭಾವಿಕ ಪುಟ್ಟ ಆಸೆ ಮೂಡಿತು "ಅವಳ ಸಂದೇಶ ತಂದಿತೆ ಎಂದು"
by ಹರೀಶ್ ಶೆಟ್ಟಿ, ಶಿರ್ವ

ಪಂಜರದ ಗಿಳಿ

ಪಂಜರದ ಗಿಳಿ ನನಗೆ ಹೇಳಿತು
"ಅವಳು ನಿನ್ನನ್ನು ಬಿಟ್ಟು ಹೋದಳು
ಈಗ ನೀನು ಸ್ವತಂತ್ರ ಇದ್ದು ನನ್ನ ಹಾಗೆ ಕೈದಿ"
by ಹರೀಶ್ ಶೆಟ್ಟಿ, ಶಿರ್ವ

ನನ್ನ ಕಣ್ಣೀರು

ನನ್ನ ಕಣ್ಣೀರು
ಅವಳು ನನ್ನನ್ನು ಬಿಟ್ಟು ಹೋದಲೆಂದಲ್ಲ
ಅವಳು ಇನ್ನೂ ಮರಳಿ ಬರುದಿಲ್ಲವೆಂದು ಹೇಳಿದಕ್ಕೆ
by ಹರೀಶ್ ಶೆಟ್ಟಿ, ಶಿರ್ವ

ಅವಳ ಹೃದಯ

ನಾನು ಅಳುತ್ತಿದ್ದೆನೆಂದು
ಅವಳಿಗೆ ಹೇಳ ಬೇಡಿ
ಅವಳ ಹೃದಯವೂ ಅಳಬಹುದು
by ಹರೀಶ್ ಶೆಟ್ಟಿ, ಶಿರ್ವ

ನನ್ನ ವ್ಯಥೆ

ಬರೆದೆ ಹಲವು ಕವನ ಅವಳ ಅಗಲಿಕೆಯಲ್ಲಿ ನೊಂದು
ಜನರೆಲ್ಲ ಹೇಳಿದರು ನಾ ಕವಿಯಾದೆಯೆಂದು
ನಾ ಹೇಳಿದೆ ನಾನು ಬರೆದದ್ದು ಕವನ ಅಲ್ಲ ನನ್ನ ವ್ಯಥೆಯೆಂದು
by ಹರೀಶ್ ಶೆಟ್ಟಿ, ಶಿರ್ವ

Monday, 23 January, 2012

ನಾನು ಇಲ್ಲಿ ಅವಳು ಅಲ್ಲಿ

ನಾನು ಇಲ್ಲಿ ಅವಳು ಅಲ್ಲಿ
ಆದರೆ ....
ಅವಳ ಮನಸ್ಸು ನನ್ನಲ್ಲಿ
ನನ್ನ ಮನಸ್ಸು ಅವಳಲ್ಲಿ
by ಹರೀಶ್ ಶೆಟ್ಟಿ, ಶಿರ್ವ

ವಿಶ್ವಾಸ

ನೀನು ನನ್ನನ್ನು ಮರೆಯ ಬೇಕೆಂದಲ್ಲ ನಾ ನಿನ್ನನ್ನು ಬಿಟ್ಟು ಹೋದದು
ನೀ ನನ್ನನ್ನು ಹಿಂತಿರುಗಿ ಕರೆಯುವಿ ಎಂಬ ವಿಶ್ವಾಸದಿಂದ ಹೋದದು....
by ಹರೀಶ್ ಶೆಟ್ಟಿ, ಶಿರ್ವ

Sunday, 22 January, 2012

ಅವಳು

ಯಾರೆಂದು ಹೇಳಲಿ ಅವಳು
ಕವಿಯ ಕಲ್ಪನೆಯ ಹರಳು
ನೀ ಯೋಚಿಸಿದರೆ ನಿನ್ನವಳು
ನಾ ಯೋಚಿಸಿದರೆ ನನ್ನವಳು
by ಹರೀಶ್ ಶೆಟ್ಟಿ, ಶಿರ್ವ

ಅವಳ ಚಿತ್ರ ನೋಡುತ್ತಲೇ

ಅವಳ ಚಿತ್ರ ನೋಡುತ್ತಲೇ
ಅವಳು ಹೇಳಿದ ಮಾತು ನೆನಪಾಯಿತು
"ನಾನು ನಿಮ್ಮಿಂದ ದೂರ ಇರುವೆ ಆದರೆ ನಿಮ್ಮನ್ನು ನೋಡುತ್ತಲೇ ಇರುವೆ"
by ಹರೀಶ್ ಶೆಟ್ಟಿ, ಶಿರ್ವ

ನೆನಪಿನಲ್ಲಿ

ಮರೆಯಲು ಪ್ರಯತ್ನಿಸಿದೆ ನಾ ಅವಳನ್ನು
ನನ್ನನ್ನೆ ಮರೆತೆ ಆದರೆ ಅವಳು ಇನ್ನೂ ಇದ್ದಳು ನೆನಪಿನಲ್ಲಿ
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿ ಇರಬೇಕು

ಪ್ರೀತಿ ಇರಬೇಕು
ಆದರೆ ಪ್ರೀತಿಯ ಬರದಲ್ಲಿ ಪ್ರಿತಿಸುವವರಿಗೆ ನೋವನ್ನು ಕೊಡಬಾರದು
ಪ್ರಿತಿಸುವವರಿಗೆ ಸಂತಸ ನೀಡಿ ಸ್ವತ ನೋವನ್ನು ಅನುಭವಿಸ ಬೇಕು
by ಹರೀಶ್ ಶೆಟ್ಟಿ, ಶಿರ್ವ

Thursday, 19 January, 2012

ಕನ್ನಡಿ

ಮನೆಯಲ್ಲಿದ್ದ ಕನ್ನಡಿಗೂ ಈಗ ನನ್ನಿಂದ ಬೇಜಾರ
ಪ್ರತಿದಿನ ನನ್ನ ದುಃಖಾರ್ತ ಮುಖ ಕಂಡು ಬೇಸರ
ಪುನಃ ಅವಳ ಸುಂದರ ಮುಖ ಕಾಣಲು ಆತುರ
by ಹರೀಶ್ ಶೆಟ್ಟಿ, ಶಿರ್ವ

ಮನೆ ಬೆಕ್ಕು

ಮನೆ ಬೆಕ್ಕು ಶಾಂತತೆಯಿಂದ ಕುಳಿತುಕೊಂಡಿದೆ
ಅದರ ಮೃದು ಶರೀರ ಅವಳ ಕೈಯ ಸ್ಪರ್ಶವನ್ನು ನೆನಪಿಸುತ್ತಿದೆ
by ಹರೀಶ್ ಶೆಟ್ಟಿ,ಶಿರ್ವ

Wednesday, 18 January, 2012

ನಗು

ನನ್ನಿಂದ ಕೋಪ ಈಗ ನಗುವಿಗೆ
ಯಾವಾಗಲೊಮ್ಮೆ ಕಿರು ನಗೆ ಮೂಡುವುದು
ಕೇವಲ ಅವಳ ನೆನಪಿನೊಂದಿಗೆ
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರೆ

ನಾನು ಕೇಳಿದೆ ಸಮುದ್ರಕ್ಕೆ
ನೀನು ಪ್ರೀತಿ ಮಾಡಲಿಲ್ಲವೇ
ಸಮುದ್ರ ಮರು ಉತ್ತರಿಸಿತು
"ಮೂರ್ಖ ಈ ಎಲ್ಲ ನೀರು ನನ್ನ ಕಣ್ಣೀರೆ "
by ಹರೀಶ್ ಶೆಟ್ಟಿ ,ಶಿರ್ವ

Humne samundar se poocha
kya tumne kabie pyar kiya hai
samundar ne palat kar jawab diya
bewakoof ye itna saara paani mere ansoo hi tho hai.......
by Harish Shetty, Shirva

ಮನೆಯ ಗಿಡಗಳು

ಮನೆಯಲ್ಲಿದ್ದ ಗಿಡಗಳು ಬಾಡಿದೆ
ನೀರಿನ ಕೊರತೆಯಿಂದ ಅಲ್ಲ
ಅವುಗಳಿಗೆ ನೀರು ನೀಡುವ ಅವಳ ನೆನಪಿನಿಂದ
by ಹರೀಶ್ ಶೆಟ್ಟಿ, ಶಿರ್ವ

Tuesday, 17 January, 2012

ಮೋಹ

ಸೆಳೆಯುತ್ತಿದೆ ಅನೇಕ ಮೋಹಪಾಶಗಳು ಅವಳಿಲ್ಲದೆ
ಆದರೆ ನಾನು ಇನ್ನೂ ಕೇವಲ ಅವಳ ಮೋಹ ಬಂಧನದಲ್ಲಿದ್ದೆ
by ಹರೀಶ್ ಶೆಟ್ಟಿ, ಶಿರ್ವ

Monday, 16 January, 2012

ನನ್ನ ವಿಚಾರ

ಸಮುದ್ರದ ಅಲೆಗಳು ಸಮುದ್ರ ತಟಕ್ಕೆ ಅಪ್ಪಳಿಸಿ ಮರಳಿ ಸಮುದ್ರಕ್ಕೆ ಸೇರುವುದು
ನನ್ನ ವಿಚಾರವೂ ಹಾಗೆಯೇ ಅವಳ ನೆನಪನ್ನು ಅಪ್ಪಳಿಸಿ ಅವಳಲ್ಲಿಯೇ ಮರಳುವುದು
by ಹರೀಶ್ ಶೆಟ್ಟಿ, ಶಿರ್ವ

ಕ್ಷಮೆ ಕೇಳು

ಈಗ ಏಕಾಂತವೂ ನನಗೆ ಹೇಳುತ್ತಿದೆ
"ಇನ್ನು ಎಷ್ಟು ದಿವಸ ನನ್ನೊಟ್ಟಿಗೆ ಇರುವಿ ಹೇಳು
ಹೋಗು ಅವಳಿಂದ ಕ್ಷಮೆ ಕೇಳು "
by ಹರೀಶ್ ಶೆಟ್ಟಿ, ಶಿರ್ವ

ಕಣ್ಣೀರು

ನನ್ನ ಕಣ್ಣಿನ ಕಣ್ಣೀರು ಈಗ ಒಣಗಿ ಹೋಗಿದೆ
ಈಗ ಅವಳು ಬಂದ ನಂತರವೇ ಹರಿಯುವುದು
by ಹರೀಶ್ ಶೆಟ್ಟಿ, ಶಿರ್ವ

Sunday, 15 January, 2012

ಅವಳ ಹೊರತು

ಮಂದಿರ ಬಂದರು ಮನಸ್ಸಲ್ಲಿ ದೇವರಿಲ್ಲ
ಮನಸ್ಸಲ್ಲಿ ಅವಳ ಹೊರತು ಬೇರೆ ವಿಷಯವಿಲ್ಲ.....
by ಹರೀಶ್ ಶೆಟ್ಟಿ, ಶಿರ್ವ

ಪ್ರತಿ ಸಂಜೆ

ಮೊದಲು ಪ್ರತಿ ಸಂಜೆ ಬೇಗ ಮನೆಗೆ ಹೋಗುವ ತವಕ
ಆದರೆ ಅವಳ ವಿನಃ ಈಗ ಅಲೆಯುತ್ತೇನೆ ಹೀಗೆಯೇ ಬೀದಿಯಲಿ ರಾತ್ರಿ ತನಕ
by ಹರೀಶ್ ಶೆಟ್ಟಿ, ಶಿರ್ವ

Friday, 13 January, 2012

ಮಕರ ಸಂಕ್ರಾಂತಿ

ಇಂದು ಮಕರ ಸಂಕ್ರಾಂತಿ
ಆದರೆ ಅವಳಿಲ್ಲದೆ ಮನದಲ್ಲಿ ಅಶಾಂತಿ ಮನೆಯಲ್ಲಿ ಶಾಂತಿ......
by ಹರೀಶ್ ಶೆಟ್ಟಿ, ಶಿರ್ವ

ಸೌಭಾಗ್ಯ

ಅವಳು ಹೋದಳು
ಒಟ್ಟಿಗೆ ಮನೆಯ ಸೌಭಾಗ್ಯ ಕೊಂಡು ಹೋದಳು
by ಹರೀಶ್ ಶೆಟ್ಟಿ, ಶಿರ್ವ

ಮನೆ ನಾಯಿ

ರಿಕ್ಷ ಬರುವ ಸ್ವರ ಕೇಳಿ
ದುರ್ಬಲವಾಗಿದ್ದ ಮನೆ ನಾಯಿ ಹರ್ಷದಿಂದ ಓಡಿ ಹೋಗಿ ನೋಡಿತು
ಅದಕ್ಕೆ ಅನ್ನ ಕೊಡುವವಳು ಬಂದಳೇ ಎಂದು ಯೋಚಿಸುತ್ತ.....
by ಹರೀಶ್ ಶೆಟ್ಟಿ, ಶಿರ್ವ

ಕಾಗೆಯ ಕಾವ್ ಕಾವ್ ಕಾವ್

ಮುಂಜಾನೆ ಎದ್ದಾಗ
ಮನೆ ಕಿಟಕಿಯಲಿ ಕಾಗೆ ಬಂದು ಕಾವ್ ಕಾವ್ ಕಾವ್ ಎಂದು ಕೂಗಿತು
ಅವಳು ಬರುತ್ತಾಳೆಯೇ??????
by ಹರೀಶ್ ಶೆಟ್ಟಿ, ಶಿರ್ವ

ಕನಸು

ಅವಳಿಲ್ಲದೆ ....
ಈಗ ಕನಸು ಕಾಣುವ ಮನಸಿಲ್ಲ
ನೋಡಿದ ಕನಸು ನನಸಾಗಬೇಕೆಂದು ಆಸೆಯೂ ಇಲ್ಲ
ಕನಸು ಕಾಣಲು ನಿದ್ರೆಯೂ ಇಲ್ಲ
ಅವಳಿಲ್ಲದೆ ಕನಸಿಗೂ ಬರುವ ಮನಸಿಲ್ಲ
by ಹರೀಶ್ ಶೆಟ್ಟಿ, ಶಿರ್ವ

Thursday, 12 January, 2012

ಕಬೀರ ಪ್ರೇಮ ಗೀತೆ

Kabir Love Songs
Supne Mein Sayeen Mile, Sovat Liya Lagaye
Aankh Na Khoolun Darpatta, Mat Sapna Hai Jaye
Sayeen Mera Bahut Gun, Likhe Jo Hirde Mahin
Piyoon Na Pani Darpatta, Mat Veh Dhoye Jahin
Naina Bheeter Aav Tu, Nain Jhaamp Tohe Layoon
Na Mein Dekhun Aur Ko, Na Tehi Dekhan Deyoon
__________________________
ನನ್ನ ಪ್ರೀತಿ ಬಂದಳು ಕನಸಲಿ
ಸಂಪರ್ಕಿಸಿದೆ ಅವಳನ್ನು ನಿದ್ದೆಯಲಿ
ಕಣ್ಣನ್ನು ತೆರೆಯಲು ಹೆದರುವೆ
ಕನಸು ಮಾಯವಾಗಿ ಹೋದರೆ

ನನ್ನವಳು ತುಂಬಾ ಜಾಣೆ
ಬರೆಯುವಳು ನನ್ನ ಹೃದಯದಲಿ
ನೀರನ್ನು ಕುಡಿಯಲು ಹೆದರುವೆ
ಅವಳು ಬರೆದ ಸಂದೇಶ ತೊಳೆದು ಹೋದರೆ

ನನ್ನ ಕಣ್ಣಲ್ಲಿ ಪ್ರವೇಶಿಸು
ಕಣ್ಣ ರೆಪ್ಪೆಗಳಿಂದ ನಿನ್ನನ್ನು ಅಡಗಿಸುವೆ
ನಾನು ಯಾರನ್ನು ನೋಡಲಾರೆ
ನಿನ್ನನ್ನು ನೋಡಲು ಯಾರನ್ನು ಬಿಡಲಾರೆ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಅವಳಿಲ್ಲದೆ

ಮನೆಯಲ್ಲಿ ಬೆಳಕಿದ್ದು ಕತ್ತಲೆ
ಅವಳಿಲ್ಲದೆ ..........
by ಹರೀಶ್ ಶೆಟ್ಟಿ, ಶಿರ್ವ

ನಕ್ಷತ್ರ

ನಕ್ಷತ್ರ ಒಂದು ತುಂಡಾಗಿ ಬಿತ್ತು
ಕೈ ಮುಗಿದು ಬೇಡಿದೆ "ಅವಳು ಹಿಂತಿರುಗಿ ಬರಲಿ" ಎಂದು
by ಹರೀಶ್ ಶೆಟ್ಟಿ, ಶಿರ್ವ

Wednesday, 11 January, 2012

ಸೋಲು ಗೆಲುವು

ರೇಸಲ್ಲಿ ಓಡುವುದಕ್ಕೆ ಹೊಸ ಯುವ ಕುದುರೆ ಬಂದಿತ್ತು.
ಕುದುರೆಯ ಒಡೆಯ ಅದರ ಹೆಸರು "ರೋಕಿ" ಅಂತ ಇಟ್ಟ ಹಾಗು ಕೆಲಸಗಾರರಿಗೆ ಕುದುರೆಯನ್ನು ಒಳ್ಳೆ ರೀತಿಯಲ್ಲಿ ನೋಡಲಿಕ್ಕೆ ಹೇಳಿದ.
ಕೆಲಸಗಾರರೆಲ್ಲ ರೋಕಿಯ ಬಹಳ ಒಳ್ಳೆ ರೀತಿಯಲಿ ಸೇವೆ ಮಾಡುತ್ತಿದ್ದರು.
ಅಲ್ಲಿಯೇ ಇನ್ನೊಂದು ಮುದಿ ಕುದುರೆ ಇತ್ತು, ಕೆಲಸಗಾರರೆಲ್ಲ ಅದರ ಕಡೆ ಗಮನನೆ ಕೊಡುತ್ತಿರಲಿಲ್ಲ. ರೋಕಿಗೆ ಕೆಲಸಗಾರರ ಮಾತು ಕೇಳಿ ಗೊತ್ತು ಆಯಿತು, ಆ ಕುದುರೆಯ ಹೆಸರು "ಜಾನಿ" ಹಾಗು ಯುವ ವಯಸ್ಸಿನಲ್ಲಿ ಅದಕ್ಕೆ  ೫೦ ರಿಂದ ಹೆಚ್ಚು ರೇಸಲ್ಲಿ ಗೆಲುವು ಸಿಕ್ಕಿದೆ ಎಂದು.
ಒಂದು ದಿವಸ ರೋಕಿ ಜಾನಿಯ ಹತ್ತಿರ ಹೋಗಿ "ನೀನು ಇಷ್ಟು ರೇಸ್ ಜಯಿಸಿ  ಇಂದು ನಿನ್ನ ಅವಸ್ಥೆ ಹೀಗೆಯೇ?
ಜಾನಿ ಶಾಂತತೆಯಿಂದ ಕಿರು ನಗೆ ಬೀರಿ  "ರೇಸಲ್ಲಿ ಓಡಿದು ನನ್ನ ಯುವ ವಯಸ್ಸುಹಾಗು ಜಯಿಸಿದ್ದು ನನ್ನ ಒಡೆಯ, ಈಗ  ಜಯಿಸುತ್ತಿದೆ ನನ್ನ ಮುದಿ ವಯಸ್ಸು ಸೋಲುತ್ತಿದ್ದಾನೆ ನನ್ನ ಒಡೆಯ " ಎಂದು ಉತ್ತರಿಸಿತು.
by  ಹರೀಶ್ ಶೆಟ್ಟಿ, ಶಿರ್ವ

Tuesday, 10 January, 2012

ಅವಳ ಸುವಾಸನೆ

ತಂಗಾಳಿ ಬೀಸಿತು
ಅದರಲ್ಲಿದ್ದ ಸುವಾಸನೆಯಿಂದ ತಿಳಿಯಿತು ಅವಳು ಬರುತ್ತಿದ್ದಲೆಂದು .....
by ಹರೀಶ್ ಶೆಟ್ಟಿ, ಶಿರ್ವ

ಅವಳ ನಾಮ

ನನ್ನ ಕೊಳಲಲ್ಲಿ ಒಂದೇ ಸ್ವರ
"ಅವಳ ನಾಮ"
by ಹರೀಶ್ ಶೆಟ್ಟಿ, ಶಿರ್ವ

ಕಬೀರ ಪ್ರೇಮ ಗೀತೆ

Kabir Love Songs
Sayeen Bin Darad Karejae Hoye
Din Nahin Chain Raat Nahin Nindia, Kase Kahun Dukh Hoye
Aadhi Ratia Pichle Paharva, Sayeen Bin Taras Rahi Soye
Kahat Kabir Suno Bhai Sadho,Sayeen Mile Sukh Hoye
_________________________
ಪ್ರಿಯತಮ ಇಲ್ಲದೆ ವೇದನೆ ಹೃದಯದಲಿ

ದಿವಸದಲ್ಲಿಲ್ಲ ನೆಮ್ಮದಿ ನಿದ್ದೆ ಇಲ್ಲ ರಾತ್ರಿಯಲಿ
ದುಃಖ ನನ್ನ ಯಾರ ಹತ್ತಿರ ಹೇಳಲಿ

ನಿನ್ನೆ ಮಧ್ಯ ರಾತ್ರಿಯ ಅಮೃತ ಗಳಿಗೆಯಲಿ
ಮಲಗಿದೆ ನಾ ಪ್ರೀತಿಯ ವಿರಹದಲಿ

ಕಬೀರ ಹೇಳುವನು ಕೇಳಿ ಮಿತ್ರರೇ
ನನ್ನ ಸಂತೋಷ ಅಡಗಿದೆ ಒಲವಿನ ಬೇಟಿಯಲಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ತೇಜ

ಕೋಟಿ ಸೂರ್ಯನ ಕಿರಣದಿಂದಲೂ ಸಾದ್ಯವಿಲ್ಲ
ನನ್ನವಳ ಮುಖದಲ್ಲಿದ್ದ ತೇಜ ತರಲು........
by ಹರೀಶ್ ಶೆಟ್ಟಿ, ಶಿರ್ವ

Monday, 9 January, 2012

ಸಂಪಿಗೆ ಹೂವು

ಈಗ ಸಂಪಿಗೆ ಹೂವು ನನಗೆ ಬರಿ ಹೂವು
ಅದರ ಸುಗಂಧ ಅವಳೊಟ್ಟಿಗೆ ಹೋಗಿದೆ
by  ಹರೀಶ್ ಶೆಟ್ಟಿ, ಶಿರ್ವ

ಅಸ್ತಿತ್ವ

ನಾನು ಯೋಚಿಸಿದೆ ನನ್ನ ಜೀವನ ನೀನೇ ಎಂದು
ಆದರೆ ಕಣ್ಣೀರು ಹರಿಯಿತು ಕೇಳಿ ನಿನ್ನ ಜೀವನದಲ್ಲಿ ನನ್ನ ಅಸ್ತಿತ್ವವೇ ಇಲ್ಲವೆಂದು...
by ಹರೀಶ್ ಶೆಟ್ಟಿ, ಶಿರ್ವ

ಕಬೀರ ಪ್ರೇಮ ಗೀತೆ

Kabir Love Songs
Mein Ka Se Bujhon, Aapne Piya Ki Baat Ri
Jaan Sujaan Pranpriya Priya Bin, Sabe Bataun Jaat Ri
Aasa Nadi Agadh Kumati Bahe, Roki Kahu Pe Na Jaat Ri
Kam Krodh Dou Bhaye Karare, Padhen Bisaye Rus Maat Ri
Je Panche Aapmaan Ke Sungi, Sumiran Ko Alsaat Ri
Kahe Kabir Bichuri Nahin Milihe, Jyon Taruvar Bin Paat Ri
_____________
ಯಾರಿಂದ ಪರಿಹರಿಸಲಿ
ನನ್ನ ಪ್ರೀತಿಯ ಒಗಟನ್ನು
ಅವಳಿಲ್ಲದೆ ಜೀವನ ಜೀವರಹಿತ
ಎಲ್ಲರಿಂದ ಹೇಳುವೆ ಈ ಮಾತನ್ನು
ಭರವಸೆಯ ನದಿಯಲ್ಲಿ ಹರಿಯುತ್ತಿದೆ ಬಾಗಿದ ಆಸೆಗಳು
ತಡೆಗಟ್ಟಲು ಸಾದ್ಯವಿಲ್ಲ ಅದನ್ನು
ಕಾಮ ಕ್ರೋಧ ಎರಡೂ ತನ್ನ ಪೂರ್ಣ ಶಕ್ತಿಯಿಂದ ಪ್ರಯತ್ನಿಸುತ್ತಿದೆ
ಅನೈತಿಕ ಕಾರ್ಯದಲ್ಲಿ ಸಿಲುಕಿಸಲು ನನ್ನನ್ನು
ಅಪಮಾನದ "ಐದರ" ಸಂಘ ಒಟ್ಟಿಗೆ ಬಂದು
ಭಕ್ತಿಯನ್ನು ಕಳೆದು ಹುಟ್ಟಿಸುತ್ತಿದೆ ಆಲಸ್ಯವನ್ನು
ಕಬೀರ ಹೇಳುವನು ಮರದಿಂದ ಬಿದ್ದ ಎಲೆಯ ಹಾಗೆ
ಒಟ್ಟುಗೂಡಿಸಲು ಸಾದ್ಯವಿಲ್ಲ ಒಮ್ಮೆ ಆದ ಒಡಕನ್ನು
ಅನುವಾದ : by ಹರೀಶ್ ಶೆಟ್ಟಿ, ಶಿರ್ವ
"ಐದು" ಅಂದರೆ ಕಾಮ, ಕ್ರೋಧ ,ಲೋಭ ,ಮದ, ಮತ್ಸರ
ಈ "ಐದರ" ಸಂಘ ಮನುಷ್ಯನನ್ನು ಸ್ವಾರ್ಥತೆ ಹಾಗು ಅಂಧಕಾರದ ಮಾರ್ಗಕ್ಕೆ ದೂಡುವುದು.

ಉಸಿರು

ತುಂಡಾದ ಹೃದಯ ಹೇಳಿತು ನನಗೆ
"ನನ್ನ ಮೇಲೆ ಬರೆದ ಅವಳ ಹೆಸರು ಅಳಿಸಿ ಬಿಡು"
ನಾನು ಹೇಳಿದೆ
"ಹೆಸರು ಅಳಿಸಿದರೆ ಉಸಿರು ಉಳಿಯದು"
by ಹರೀಶ್ ಶೆಟ್ಟಿ, ಶಿರ್ವ

Sunday, 8 January, 2012

ಕಬೀರ ಪ್ರೇಮ ಗೀತೆ

Kabir Love Songs
Baalam Avo Humre Geh Re, Tum Bin Dukhiya Deh Re
Sab Koi Kahet Tumhari Nari, Mo Ko Eehe Andeh Re
Dil Se Nahin Dil Lagayo,Tub Laga Kaisa Sneh Re
Ek mek Ve Sej Na Soyo,Tub Lug Kaisa Neh Re
Anna Na Bhave Neend Na Aave, Ghar Bar Dhare Na Dheer Re
Kamin Hai Balam Pyara, Jyon Pyase Ko Neer Re
Hai Koi Aisa Upkari, Piv Se Kahun Sunaye Re
Ab To Behal Kabir Bhayo Hai, Bin Dekhe Jiya Jaye Re

ಪ್ರಿಯೆ ಬಾ ನನ್ನ ಮನೆಗೆ
ನಿನ್ನ ವಿನಃ ದೇಹಕ್ಕೆ ವೇದನೆ  !!
ಎಲ್ಲ ಹೇಳುವರು ನೀ ನನ್ನ ಮಡದಿ
ನನಗೆ ಯಾಕೆ ಸಂಶಯದ ಮತಿ   !!
ಹೃದಯ ಹೃದಯ ಸೇರದಿದ್ದರೆ
ಯಾವ ರೀತಿಯ ಈ ಮೋಹ !!
ಒಂದು ಶಯನದಲ್ಲಿ ಮಲಗದಿದ್ದರೆ
ಹೇಗೆ ಆಗುವುದು ಕಣ್ಣು ಕಣ್ಣಿನ ಸ್ನೇಹ !!
ಆಹಾರದಲ್ಲಿ ರುಚಿ ಇಲ್ಲ ನಿದ್ದೆ ಬರುದಿಲ್ಲ
ಸ್ವಂತ ಮನೆಯಲ್ಲಿ ಇಲ್ಲ ತೃಪ್ತ ಮನೋಭಾವ!!
ಭಾವೋದ್ದೀಪ್ತ ನನ್ನ ಪ್ರೀತಿ
ನೀರಿಗಾಗಿ ಬಾಯಾರಿದ ಮನುಷ್ಯನಂತೆ !!
ಯಾರಿದ್ದಾರೆ ಇಲ್ಲಿ ಪರೋಪಕಾರಿ
ಅವಳಿಗೆ ನನ್ನ ವ್ಯಥೆ ಹೇಳುವ ಉಪಕಾರಿ !!
ಇನ್ನೂ ಕಬೀರ ಯಾತನೆಯಲ್ಲಿ ಇರುವನು
ಅವಳನ್ನು ಕಾಣದೆ ಹೋದರೆ ಸಾಯುವನು !!
ಅನುವಾದ :ಹರೀಶ್ ಶೆಟ್ಟಿ, ಶಿರ್ವ

Saturday, 7 January, 2012

ಮುತ್ತುಗಳು

ಅವಳ ಕಣ್ಣೀರು ಮುತ್ತುಗಳು
ಆದರೆ ನಾನು ಇನ್ನೂ ಬಡವ........
by ಹರೀಶ್ ಶೆಟ್ಟಿ, ಶಿರ್ವ

ಕಬೀರ ಪ್ರೇಮ ಗೀತೆ

Kabir Love Songs
________________
Samajh Dekh Man Meet Piyarva, Aashiq Ho Kar Sona Kya Re?
Paya Ho To Den Le Pyare, Paye Paye Fir Khona Kya Re?
Rookha Sookha Gumka Tukra, Feeka Aur Salona Kya Re?
Jab Ankhiyan Me Neend Ghaneri, Takiya Aur Bichona Kya Re?
Kahet Kabir Prem Ka Marag, Sir Dena To Rona Kya Re?
ಕಬೀರ ಪ್ರೇಮ ಗೀತೆ
_________________
ಓ ಪ್ರೀತಿಯ ಮನಸ್ಸೇ ಅರ್ಥೈಸು
ಪ್ರೇಮಿಯಾಗಿ ನಿದ್ರಿಸುವಿ ಏನು  ?
ಪಡೆದುದನ್ನು ಹಂಚಿಕೊಳ್ಳು
ಪಡೆದ ನಂತರ ಕಳೆದುಕೊಳ್ಳುವಿ ಏನು ?
ಹೇಗೋ ಇದು ದುಃಖದ ಅಂಶ
ರುಚಿ ಇಲ್ಲದ್ದಿದ್ದರೇನು ರುಚಿ ಇದ್ದರೇನು ?
ಕಣ್ಣಲ್ಲಿ ನಿದ್ರೆ ತುಂಬಾ ತುಂಬಿದೆ
ತಲೆದಿಂಬು ಹಾಸಿಗೆ  ಬೇಕೇನು ?
ಕಬೀರ ಹೇಳುವನು ಪ್ರೇಮದ ಮಾರ್ಗದಲ್ಲಿ
ಹೃದಯ ಸೋತ ನಂತರ ಅಳುವ ಅಗತ್ಯ ಇದೆಯೇನು ?
ಅನುವಾದ : ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಸಂಕೋಲೆ

ನಿನಗಾಗಿ ಚಂದ್ರ ನಕ್ಷತ್ರಗಳನ್ನೂ ತರಲು ನಾ ಸಿದ್ದನಾಗಿರುವೆ
ಇದು ಬರಿ ನಾಟಕ ಅಲ್ಲ ಕೋಮಲೆ
ಇದು ಪ್ರೀತಿಯ ಸಂಕೋಲೆ......
by ಹರೀಶ್ ಶೆಟ್ಟಿ, ಶಿರ್ವ

ಮಹತ್ವ

ಹಾರುವ ಹಕ್ಕಿಯಿಂದ ಕಲಿಯಿರಿ
ದುಡಿಮೆಯ ಮಹತ್ವ
ಅರಳುವ ಹೂವಿನಿಂದ ಕಲಿಯಿರಿ
ನಗುವ ಮಹತ್ವ
ಪಾತರಗಿತ್ತಿಯ ಉಲ್ಲಾಸದಿಂದ ಕಲಿಯಿರಿ
ಅಲ್ಪ ಜೀವನದ ಮಹತ್ವ
ಮುಳುಗಿ ಪುನಃ ಉದಯವಾಗುವ ಸೂರ್ಯನ ಹಠದಿಂದ ಕಲಿಯಿರಿ
ತನ್ನ ವ್ಯಕ್ತಿತ್ವದ ಮಹತ್ವ
by ಹರೀಶ್ ಶೆಟ್ಟಿ, ಶಿರ್ವ

Friday, 6 January, 2012

ನೆನಪು

ನಿನ್ನ ಬಗ್ಗೆ ಯೋಚಿಸಿ
ಮುಖದಲಿ ನಗು ಒಂದು ಮೂಡಿ ಬಂತು
ನಗುವಿನೊಂದಿಗೆ
ಅನೇಕ ನೆನಪುಗಳು ಒಟ್ಟಿಗೆ ಬಂತು
ನೆನಪಿನೊಂದಿಗೆ
ಹೀಗೆಯೇ ಕಣ್ಣೀರು ತುಂಬಿ ಬಂತು
by ಹರೀಶ್ ಶೆಟ್ಟಿ, ಶಿರ್ವ

ಹೃದಯ ಬಡಿತ

ನಿನ್ನ ಮಾತಿನಿಂದ
ನನ್ನ ಹೃದಯ ಹಾಡುತ್ತದೆ ಕವಿತ
ನಿನ್ನ ಮೌನದಿಂದ
ನಿಲ್ಲುತ್ತದೆ ನನ್ನ ಹೃದಯ ಬಡಿತ
by ಹರೀಶ್ ಶೆಟ್ಟಿ, ಶಿರ್ವ

Wednesday, 4 January, 2012

ಅಳಿಸಿದ ನೆನಪು

ಅಳಿಸಿದ ನೆನಪು ಪುನಃ ಭುಗಿಲೆದ್ದಿತು
ಇದ್ದಕ್ಕಿದ್ದಂತೆ ಅವಳನ್ನು ಕಂಡು......
by ಹರೀಶ್ ಶೆಟ್ಟಿ, ಶಿರ್ವ

Tuesday, 3 January, 2012

ಹಳೆಯ ಪುಸ್ತಕ

ಹಳೆಯ ಪುಸ್ತಕ ಓದಲೆಂದು ತೆಗೆದೆ
ಓದುವ ಮುನ್ನವೇ ಪುಸ್ತಕದಲ್ಲಿದ್ದ
ಒಣಗಿದ ಗುಲಾಬಿಯ ಹೂವು
ಒಂದು ಕಥೆಯನ್ನು ನೆನಪಿಸಿತು ........
by  ಹರೀಶ್ ಶೆಟ್ಟಿ, ಶಿರ್ವ

ನಿನ್ನ ಮುಖ

ನನ್ನ ಹೃದಯ ಹೂವನ್ನು ನೀನು ತುಂಡು ಮಾಡಿ ಎಸೆದೆ
ಆದರೆ ಹೂವಿನ ಪ್ರತಿ ದಳಗಳಲ್ಲಿ ನಿನ್ನ ಮುಖವನ್ನೇ ಕಂಡೆ
by ಹರೀಶ್ ಶೆಟ್ಟಿ, ಶಿರ್ವ

Monday, 2 January, 2012

ಅವಳು ಬಂದಳೇ???

ಹರಡಿದೆ ಮಲ್ಲಿಗೆಯ ಪರಿಮಳ
ಅವಳು ಬಂದಳೇ???
by ಹರೀಶ್ ಶೆಟ್ಟಿ, ಶಿರ್ವ

ಮೆಲ್ಲ ಮೆಲ್ಲನೆ

ಸೂರ್ಯ ಮುಳುಗುತ್ತಿದೆ......
ಒಟ್ಟಿಗೆ ನನ್ನ ಹೃದಯವು
ಮೆಲ್ಲ ಮೆಲ್ಲನೆ.....
by ಹರೀಶ್ ಶೆಟ್ಟಿ, ಶಿರ್ವ

ಈ ಜೀವನ ನನ್ನದಲ್ಲ

ಮರೆಯುವೆ ಗೆಳತಿ
ನಿನ್ನನ್ನಲ್ಲ .....ನನ್ನನ್ನೇ
ನಿನ್ನ ವಿನಃ ಈ ಜೀವನ ನನ್ನದಲ್ಲ......
by ಹರೀಶ್ ಶೆಟ್ಟಿ, ಶಿರ್ವ