Sunday, December 30, 2012

ಈ ದೀಪ ಬೆಳಗುತ ಇರಲಿ

ಸೋತಿದೆ ಒಂದು ಜೀವನ 
ಅನೇಕರ ಮನಸ್ಸು ಜಯಿಸಿ 

ಶ್ವೇತ ವಸ್ತ್ರ ಧರಿಸಿತು ಒಂದು ಜೀವನ 
ಅನೇಕ ಹೃದಯ ಬೆಳಗಿಸಿ 

ಹೋರಾಟ ನಿಲ್ಲಿಸಿತು ಒಂದು ಜೀವನ 
ಅನೇಕರಿಗೆ ಹೋರಾಡುವ ಸಾಹಸ ನೀಡಿ 

ಕಣ್ಣು ಮುಚ್ಚಿತು ಒಂದು ಜೀವನ 
ಅನೇಕ ಕಣ್ಣು ತೆರೆಯಿಸಿ 

ನಂದಿತು ಒಂದು ಜೀವನ ಜ್ವಾಲೆ 
ಅನೇಕ ದೀಪ ಪ್ರಜ್ವಲಿಸಿ 

ಈ ದೀಪ ಬೆಳಗುತ ಇರಲಿ 
ಈ ದೀಪವನ್ನು ನಂದಿಸದಿರಿ 
by ಹರೀಶ್ ಶೆಟ್ಟಿ, ಶಿರ್ವ

Saturday, December 29, 2012

ಇಂದು ಒಂದು ಜೀವ ಸತ್ತಿದೆ

ಇಂದು ಒಂದು ಜೀವ ಸತ್ತಿದೆ 
ಮಾನವ ರೂಪ ರಕ್ಕಸರ ಬಲಿಯಾಗಿ
ಮಾನವತೆ ಅಳುತ್ತಿದೆ!

ಈಗ ತಾನೇ ಜೀವನ ಆರಂಭವಾಗಿತ್ತು
ಯೌವನದ ಮೊಗ್ಗು ಅರಳಲಿತ್ತು
ಹೂವೊಂದು ಅರಳುವ ಮುನ್ನ ಬಾಡಿದೆ !

ಹರಿಯುವ ನದಿಯಂತೆ ಇತ್ತು ಜೀವನ
ಸುಂದರ ಮನೋಹರ
ಅತ್ಯಾಚಾರದ ಪ್ರಕೋಪದಿಂದ ಬತ್ತಿ ಹೋಗಿದೆ!

ಸತ್ತಿದೆ ಒಂದು ಸುಂದರ ಕನಸು
ಸತ್ತಿದೆ ಬಡ ಅಮ್ಮ ಅಪ್ಪನ ಕೂಸು
ಅವರ ನೋವು ತಾಳಲಾಗದೆ ಕಣ್ಣೀರು ಸಹ ಸ್ತಬ್ಧವಾಗಿದೆ !

ಈ ಸಾವು ಕೇವಲ ಆ ಜೀವದ ಅಲ್ಲ
ಇದು ನಮ್ಮ ಸಮಾಜದ ಶವ
ಇಲ್ಲಿ ಪ್ರತಿ ಘಟನೆಯೂ ಇಂದಿನ ರಾಜಕೀಯವಾಗಿದೆ !
by ಹರೀಶ್ ಶೆಟ್ಟಿ, ಶಿರ್ವ


Thursday, December 27, 2012

ನಿನ್ನದೆ ಹೆಸರು

ಗೆಳತಿ 
ನನಗೆ ಗೊತ್ತು 
ನೀ ನನ್ನ ಮನೆಯೊಳಗೆ
ಇಣುಕಿಯೂ ನೋಡುವುದಿಲ್ಲವೆಂದು
ಆದರೂ 
ಮನೆಯ ಗೋಡೆಯಲಿ 
ನಿನ್ನದೆ ಹೆಸರು ಬರೆಯುತ್ತಿರುವೇನು
by ಹರೀಶ್ ಶೆಟ್ಟಿ, ಶಿರ್ವ

ನಾನು ಸೋತೆ

ಗೆಳತಿ 
ನಾನು ಸೋತೆ 
ನೀನು ಗೆದ್ದೆ
ನಿನ್ನ ಹಠ ಸ್ವಭಾವ 
ನನಗೆ ಗೊತ್ತು
ನೀನೆಂದೂ ಮುಂದೆ ಬಂದು 
ಕ್ಷಮೆ ಕೇಳಲಾರೆ ಎಂದು!

ನಿನ್ನ ಅಭ್ಯಾಸ 
ಆಗಿದೆ ಗೆಳತಿ 
ನಿನ್ನ ಮಾತಿನ 
ರಸ ಹೀರದೆ
ನನ್ನ ಕಿವಿ ಹಪಹಪಿಸುತ್ತಿದೆ 
ಮನಸ್ಸು ಹೃದಯ ಹಸಿದಿದೆ !

ಗೊತ್ತು ನನಗೆ
ನಿನಗೆ ರುಚಿ ಇಲ್ಲವೆಂದು 
ಮಾತಲ್ಲಿ ನನ್ನ
ಬೇಸರ ಆದರೂ 
ಪುಸಲಾಯಿಸುವೆ ನಾನು 
ಮನವನ್ನು ನನ್ನ !

ಕಲ್ಲಲ್ಲ 
ಈ ಹೃದಯ 
ನೀನಿದ್ದಿ ಅಲ್ಲಿ 
ಹೆಚ್ಚು ನೋವಲ್ಲಿ ಇಡಲಾರೆ 
ನಾನು ಅದನ್ನು 
ಭಾವಿಸುವೆ ನೀನು 
ಅರ್ಥೈಸಿಕೊಳ್ಳುವೆ ಇದನ್ನು!

ನಿನಗೆ ಗೊತ್ತು 
ನೀ ದೂರವಾದರೆ 
ನಾ ಓಡಿ ಬರುವೆ ಎಂದು 
ನಿನ್ನ ವಿನಃ 
ನಾ ಇರಲಾರೆ ಎಂದು 
ನಾನು ನಿನ್ನ ಹೃದಯ ಸಮುದ್ರದಲ್ಲಿ 
ಓಡಾಡುವ ಮೀನೆಂದು !
by ಹರೀಶ್ ಶೆಟ್ಟಿ, ಶಿರ್ವ

Wednesday, December 26, 2012

ಭಾವ ಕವಿ

ಮೋಡವೆಂಬ 
ಭಾವ ಕವಿಗೆ 
ಸಿಡಿಲೆಂಬ
ವಿಮರ್ಶಕರು 
ಗರ್ಜಿಸಿದಕ್ಕೆ 
ಮಳೆಯೆಂಬ 
ಕವನ ಕಣ್ಣೀರು 
ಸುರಿಯಿತು
by ಹರೀಶ್ ಶೆಟ್ಟಿ, ಶಿರ್ವ

Tuesday, December 25, 2012

ಜೀವನ ಸರಿದು ಹೋಗುತ್ತಿದೆ !!!

ನಮ್ಮ ಮೆಚ್ಚಿನ ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿರವರು ಒಂದು ಉತ್ತಮ ಕವಿ, ಅವರ ಒಂದು ಕವಿತೆ ಕನ್ನಡದಲ್ಲಿ ಅನುವಾದಿಸಲು ಪ್ರಯತ್ನಿಸಿದೆ .

ಜೀವನ ಸರಿದು ಹೋಗುತ್ತಿದೆ !!!

ನಾಳೆ ನಾಳೆ ಎಂದು ಇಂದು 
ಕೈಯಿಂದ ಜಾರಿ ಹೋಯಿತೆಲ್ಲ
ಭೂತ ಭವಿಷ್ಯದ ಚಿಂತೆಯಲಿ 
ವರ್ತಮಾನದ ಆಟ ಸೋತರೆಲ್ಲ
ಸಮಯ ಯಾವುದೇ ಕೆಲಸಕ್ಕಾಗಲಿಲ್ಲ 
ಯೌವನದ ಋತು ಸೋರಿ ಹೋಗುತ್ತಿದೆ 
ಜೀವನ ಸರಿದು ಹೋಗುತ್ತಿದೆ !

ಹಾನಿ ಲಾಭದ ತಕ್ಕಡಿಯಲಿ 
ತೂಗುವ ಜೀವನ ವ್ಯಾಪಾರವಾಗಿದೆ 
ಬೆಲೆ ಇಟ್ಟರು ಮಾರಾಟವಾಗುವವನ 
ಮಾರಾಟವಾಗದೆ ಹಾಳಾಗಿ ಹೋಗಿದೆ 
ನನ್ನನ್ನು ಮಾರುಕಟ್ಟೆಯಲ್ಲಿ ಒಬ್ಬಂಟಿ ಬಿಟ್ಟು 
ಒಬ್ಬೊಬ್ಬರಾಗಿ ಮಿತ್ರರು ಹೊರಟಾಗಿದೆ
ಜೀವನ ಸರಿದು ಹೋಗುತ್ತಿದೆ !
ಮೂಲ : ಶ್ರೀ ಅಟಲ್ ಬಿಹಾರಿ ವಾಜಪೇಯಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
jeevan beet chala !!!

kal kal karte aaj
haath se nikle saare
bhoot, bhavishya ki chinta mein
vartmaan ki baazi haare
pahra koi kaam na aaya
rasghat reet chala
jeevan beet chala.

haani-laabh ke paldon mein
tulta jeevan vyapar ho gaya
mol laga biknewale ka
bina bikaa bekar ho gaya
mujhe hot mein chhod akela
ek ek kar meet chala
jeevan beet chala.

ಪ್ರಯಾಣಿಕ ನಾನು ಗೆಳೆಯರೇ

ಪ್ರಯಾಣಿಕ ನಾನು ಗೆಳೆಯರೇ
ಮನೆ ಇಲ್ಲ
ಇಲ್ಲ ನೆಲಸು
ಪ್ರಯಾಣಿಕ ನಾನು ಗೆಳೆಯರೇ
ಮನೆ ಇಲ್ಲ
ಇಲ್ಲ ನೆಲಸು
ನನಗೆ ನಡೆಯುತ್ತಲೇ ಹೋಗಲಿದೆ
ಕೇವಲ ನಡೆಯುತ್ತಲೇ ಹೋಗಲಿದೆ -೨

ಒಂದು ಹಾದಿ ನಿಲ್ಲಿದರೆ
ಇನ್ನೊಂದು ಸೇರಿತು
ನಾನು ತಿರುಗಿದರೆ
ಒಟ್ಟೊಟ್ಟಿಗೆ ಹಾದಿ ತಿರುಗಿತು-೨ 
ಗಾಳಿಯ ರೆಕ್ಕೆಯಲಿ
ನನ್ನ ನಿವಾಸ ಸ್ಥಾನ
ಪ್ರಯಾಣಿಕ ನಾನು ಗೆಳೆಯರೇ ...

ಹಗಲು ಕೈ ಹಿಡಿದು
ಇಲ್ಲಿ ಕೂರಿಸಿತು
ರಾತ್ರಿ ಸಂಕೇತ ಮಾಡಿ
ಅಲ್ಲಿ ಕರೆಯಿತು-೨
ಹಗಲಿಂದ ಸಂಜೆಯಿಂದ ನನ್ನ ಗೆಳೆತನ
ಪ್ರಯಾಣಿಕ ನಾನು ಗೆಳೆಯರೇ ......

ಮೂಲ :ಗುಲ್ಶಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ :ಆರ್ .ಡಿ.ಬರ್ಮನ್
ಚಿತ್ರ : ಪರಿಚಯ್

Musafir Hoon Yaaron Na Ghar Hai Na Tikhana
Hm Hm He
Musafir Hoon Yaaron Na Ghar Hai Na Tikhana
Mujhe Chalte Jaana Hai Bas Chalte Jaana -2

Ek Raah Rukh Gayi To Aur Jud Gayi
Main Muda To Saath Saath Raah Mudh gayi -2
Hawaon Ke Paron Par Mera Ashiana
Musafir Hoon Yaaron Na Ghar Hai Na Thikhana
Mujhe Chalte Jaana Hai Bas Chalte Jaana

Din Ne Haath Thaam Kar Idhar Bithaliya
Raat Ne Ishaare Se Udhar Bula liya  -2
Subah se Shaam Se Mera Dostana
Musafir Hoon Yaaron Na Ghar Hai Na Tikhana
Mujhe Chalte Jaana Hai Bas Chalte Jaana
Musafir Hoon Yaaron Na Ghar Hai Na Tikhana
Mujhe Chalte Jaana Hai Bas Chalte Jaana
http://www.youtube.com/watch?v=_nCi5kwD1Y8

Monday, December 24, 2012

ಬದುಕ ಬಂಡಿ

ಗೆಳತಿ
ನನ್ನ ನಿನ್ನ
ಈ ಸಂಬಂಧ
ಕಚ್ಚಾ ದಾರದಂತೆ ನಾಜೂಕಲ್ಲ
ಮುರಿಯಲಾರದು ಅಷ್ಟು ಬೇಗ !

ಕ್ಷಣಿಕ ಕೋಪದಿಂದ
ನೀನು ಈ ಸಂಬಂಧ
ಬೇಡವೆಂದರೂ
ಪಶ್ಚಾತಾಪ ಪಡುವೆ ನಂತರ
ಇಳಿಯುವಾಗ ನಿನ್ನ ರೋಷದ ಆವೇಗ !

ಕೇವಲ ನಿನ್ನ
ಹೃದಯಕ್ಕೆ ವೇದನೆ ಆಗುವುದೇ
ನನ್ನ ಹೃದಯ
ಹೃದಯ ಅಲ್ಲವೇ ?
ಈ ನೋವ ಬಂಧನಕ್ಕೆ ಮಾಡಬೇಡ ಸಂದೇಹ !

ನಮ್ಮ ಈ ಪ್ರೀತಿ
ಗುಲಾಬಿ ಹೂವಂತೆ ಅರಳಲಿ
ಅದರಲ್ಲಿಯ ಮುಳ್ಳು
ನಮಗಿಬ್ಬರಿಗೆ ಚುಚ್ಚಿದರೂ
ನಮ್ಮ ಕೈ ಒಬ್ಬರನೊಬ್ಬರ ಕಣ್ಣೀರು ಒರೆಸಲಿ !

ಹೀಗೆ ನನ್ನ ಬಿಟ್ಟು
ಹೊರಡದಿರು ಪ್ರಿಯೆ
ಜೀವನದ ಈ ಪ್ರಯಾಣದಲ್ಲಿ
ಒಬ್ಬಂಟಿ ನಡೆಯಲು ನನ್ನಿಂದಾಗದು
ನೀನಿಲ್ಲದೆ ನನ್ನ ಬದುಕ ಬಂಡಿ ಸಾಗದು !
by ಹರೀಶ್ ಶೆಟ್ಟಿ, ಶಿರ್ವ

Saturday, December 22, 2012

ಓ ಮನ ಪಕ್ಷಿ

ಓ ಮನ ಪಕ್ಷಿ
ನನ್ನ ಮನ ಪಕ್ಷಿ
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು
ನನ್ನ ಬಯಕೆಯ ರೆಕ್ಕೆ ಸೇರಿಸಿಕೊಂಡು
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು -೨

ಬಾ ನನ್ನ ಉಸಿರಲಿ ಸುವಾಸಿಸುತ್ತಿದೆ
ನಿನ್ನ ಹೂಮಾಲೆ ಚಂದ
ಓ ಬಾ ನನ್ನ ರಾತ್ರಿಯಲಿ ಹೊಳೆಯುತ್ತಿದೆ
ನಿನ್ನ ಕಣ್ಣ ಅಂದ-೨
ಓ ಮನ ಪಕ್ಷಿ
ನನ್ನ ಮನ ಪಕ್ಷಿ
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು
ನನ್ನ ಬಯಕೆಯ ರೆಕ್ಕೆ ಸೇರಿಸಿಕೊಂಡು
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು

ಎಷ್ಟೋ ಹೊತ್ತಿನಿಂದ ತರಂಗದಿಂದ 
ಕಾಪಾಡುತ್ತಿದ್ದೇನೆ ಕಮಲ ಮನಸ್ಸಿನ
ಜೀವನ ಲಯದಲಿ ಅಲೆಯುತ್ತಿದ್ದಾನೆ
ನಿನ್ನ ಪ್ರೀಯತಮ ಕನಸಿನ
ಓ ಮನ ಪಕ್ಷಿ
ನನ್ನ ಮನ ಪಕ್ಷಿ
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು
ನನ್ನ ಬಯಕೆಯ ರೆಕ್ಕೆ ಸೇರಿಸಿಕೊಂಡು
ಎಲ್ಲಿಗೆ ಹಾರಿ ಹೋಗುತ್ತಿರುವೆ ನೀನು

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ / ಪರ್ವೀನ್ ಸುಲ್ತಾನ
ಸಂಗೀತ : ಆರ್ .ಡಿ.ಬರ್ಮನ್
O Hansni Meri Hansni, Kahaan Ud Chali
Mere Aramaanon Ke Pankh Lagaake, Kahaan Ud Chali

Aaja Meri Saanson Mein Mahak Raha Re Tera Gajra
O Aaja Meri Raaton Mein Lahak Raha Re Tera Kajra
O Hansni Meri Hansni, Kahaan Ud Chali
Mere Aramaanon Ke Pankh Lagaake, Kahaan Ud Chali

Der Se Lehron Mein Kamal Sambhaale Hue Man Ka
Jeevan Taal Mein Bhatak Raha Re Tera Hansaa
O Hansni Meri Hansni, Kahaan Ud Chali
Mere Aramaanon Ke Pankh Lagaake, Kahaan Ud Chali
www.youtube.com/watch?v=LAwZVUOPrSA

ನನಗೆ ನಿನ್ನಿಂದ ಪ್ರೀತಿ ಎಷ್ಟು

ನನಗೆ ನಿನ್ನಿಂದ ಪ್ರೀತಿ ಎಷ್ಟು
ಇದು ನಾನು ಅರಿಯೆನು
ಆದರೆ ಜೀವಿಸಲಾರೆ ನಾನು
ನಿನ್ನ ವಿನಾಃ

ಕೇಳಿದ್ದೇನೆ ದುಃಖ ಅಗಲಿಕೆಯ
ಸಹಿಸುತ್ತಾರೆ ಜನರು
ಹೇಗೆ ಜೀವನ
ಕಳೆಯುತ್ತಾರೆ ಅವರು
ದಿನವೂ ಇಲ್ಲಿ ಕಾಣುತ್ತದೆ
ವರುಷ ಸಮಾನ
ನನಗೆ ನಿರೀಕ್ಷೆ ಎಷ್ಟು
ಇದು ನಾನು ಅರಿಯೆನು
ಆದರೆ ಜೀವಿಸಲಾರೆ ನಾನು
ನಿನ್ನ ವಿನಾಃ

ನಿನ್ನನ್ಯಾರು ನೋಡಿದರೆ
ಉರಿಯುತ್ತದೆ ಹೃದಯ
ತುಂಬಾ ಕಷ್ಟದಿಂದ ನಂತರ
ನಿಭಾಯಿಸುತ್ತದೆ ಹೃದಯ
ಏನೇನು ಪೋಷಿಸುವೆ ನಾನು
ನಿನಗೇನು ತಿಳಿದಿದೆ
ಈ ಹೃದಯದಲ್ಲಿ ಚಡಪಡಿಕೆ ಎಷ್ಟು
ಇದು ನಾನು ಅರಿಯೆನು
ಆದರೆ ಜೀವಿಸಲಾರೆ ನಾನು
ನಿನ್ನ ವಿನಾಃ

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್ / ಪರ್ವೀನ್ ಸುಲ್ತಾನ
ಸಂಗೀತ : ಆರ್ .ಡಿ.ಬರ್ಮನ್
ಚಿತ್ರ : ಕುದರತ್

hame tum se pyar kitana yeh ham nahee janate
magar jee nahee sakate tumhare bina

suna gam judayee ka uthhate hain log
jane jindagee kaise bitate hain log
din bhee yaha toh lage baras ke saman
hame intajar kitana yeh ham nahee janate
magar jee nahee sakate tumhare bina

tumhe koyee aur dekhe toh jalata hain dil
badee mushkilo se fir sanbhalata hain dil
kya kya jatan karate hai tumhe kya pata
yeh dil bekarar kitana yeh ham nahee janate
magar jee nahee sakate tumhare bin
www.youtube.com/watch?v=xdEs8KexpY8

ಪ್ರಳಯದ ಭಯ ಇಲ್ಲ

ಗೆಳತಿ 
ನನ್ನ ಮಿತ್ರರಿಗೆ 
ಪ್ರಳಯದ ಭಯ ಇಲ್ಲ 
ಅವರು ಮೊದಲೇ 
ನನ್ನ ಬರಹದ 
ಪ್ರಳಯದಿಂದ 
ಸೋತು ಹೋಗಿದ್ದಾರೆ
by ಹರೀಶ್ ಶೆಟ್ಟಿ, ಶಿರ್ವ

Friday, December 21, 2012

ಜಟಕಾ ಬಂಡಿ

ಮತ್ತದೇ ಮುಂಜಾನೆ
ಅದೇ ದಿನಚರಿ
ಅದೇ ಕಿರಿ ಕಿರಿ
ಅದೇ ಕೆಲಸದ ಒತ್ತಡ
ಅದೇ ಜೀವನದ ಸಂಘರ್ಷ
ಪ್ರಳಯ ....
ನಿನ್ನಿಂದ ಬೇಗ ಮುಕ್ತಿ ಪಡೆಯಬಹುದೆಂದು
ಆಶಿಸಿದೆ ಬಂತು
ಆದರೆ ಬದುಕು
ಅದೇ ಜಟಕಾ ಬಂಡಿ
ಹೀಗೆಯೇ ಸಾಗುತ್ತಿದೆ ,ಸಾಗಲಿದೆ, ಸಾಗಲಿ  
by ಹರೀಶ್ ಶೆಟ್ಟಿ, ಶಿರ್ವ

Thursday, December 20, 2012

ನನಗೆ ಜೀವಿಸಲಿದೆ ಅಮ್ಮ

ಅಮ್ಮ
ನನಗೆ ಜೀವಿಸಲಿದೆ ಅಮ್ಮ
ನನ್ನದೇನೂ ತಪ್ಪಿಲ್ಲ ಅಮ್ಮ
ಮತ್ಯಾಕೆ ನನಗೆ ಈ ಶಿಕ್ಷೆ ಅಮ್ಮ
ನನಗೆ ಮರಣ ಶಿಕ್ಷೆ ಬೇಡ ಅಮ್ಮ
ಈ ನೋವನ್ನು ತಾಳಲಾಗುವುದಿಲ್ಲ ಅಮ್ಮ
ನಿನ್ನ ಮಡಿಲಲ್ಲಿ ತಲೆ ಇಟ್ಟು ಮಲಗಿ ಈ ನೋವನ್ನು ಓಡಿಸಲಿಕ್ಕೆ ಇದೆ ಅಮ್ಮ
ಜೀವನದ ಈ ಯುದ್ದ ನಾ ಗೆಲ್ಲುವೆ ಅಮ್ಮ
ನ್ಯಾಯಕ್ಕಾಗಿ ಹೋರಾಡುವೆ ಅಮ್ಮ
ನನಗೆ ಕಲಿಯಲಿದೆ ಅಮ್ಮ
ನನಗೆ ನನ್ನ ಕನಸು ನನಸಾಗಬೇಕೆಂದು ಆಸೆ ಇದೆ ಅಮ್ಮ
ನೀನು ಹೆದರ ಬೇಡ ಅಮ್ಮ
ನೀನು ಅಳಬೇಡ ಅಮ್ಮ
ನಾನು ಸೌಖ್ಯವಾಗುವೆ ಅಮ್ಮ
ನನಗೆ ನೀನು ಮಾಡಿದ ಊಟ ತಿನ್ನಲಿಕ್ಕೆ ಇದೆ ಅಮ್ಮ
ನನಗೆ ಅಪ್ಪನ ಊರುಗೋಲು ಆಗಲಿಕ್ಕೆ ಇದೆ ಅಮ್ಮ 
ಅಮ್ಮ
ನನಗೆ ಜೀವಿಸಲಿದೆ ಅಮ್ಮ
by ಹರೀಶ್ ಶೆಟ್ಟಿ, ಶಿರ್ವ

ದಿವ್ಯತೆ

ಗೆಳತಿ  
ನೀ ನನ್ನನ್ನು 
ತ್ಯಜಿಸಿದ ನಂತರ 
ಈ ಸಂಸಾರದ 
ಎಲ್ಲ ಮೋಹ ಲೋಭವನ್ನು 
ತ್ಯಜಿಸಿ ಸಾಧು ಆದೆ 
ಈಗ ಸುತ್ತ ಮುತ್ತ 
ನನ್ನ ಅನುಯಾಯಿಗಳು 
ಆದರೆ ಅವರು ಪ್ರೀತಿಸುವುದು,
ಪೂಜಿಸುವುದು  
ನನ್ನನ್ನಲ್ಲ 
ನನ್ನ ಒಳಗೆ ಇದ್ದ 
ದಿವ್ಯತೆಯನ್ನು 
by ಹರೀಶ್ ಶೆಟ್ಟಿ, ಶಿರ್ವ

Wednesday, December 19, 2012

ಪ್ರಶ್ನೆ ?

ಗೆಳತಿ
ನಿನ್ನ ಪ್ರಶ್ನಿಸುವ
ಈ ಪರಿ
ನನಗೆ ತುಂಬಾ ಇಷ್ಟ
ಆದರೆ ಅದರ
ಉತ್ತರ
ನೀನು ಎನಿಸಿದ
ಪ್ರಕಾರ ಸಿಗಬೇಕೆಂದು
ನೀನು ಅಪೇಕ್ಷಿಸುವುದು
ತಪ್ಪಲ್ಲವೆ !

ಸತ್ಯವನ್ನು ಸುಳ್ಳೆಂದು
ಸುಳ್ಳನ್ನು ತಪ್ಪೆಂದು
ಹೇಳಿ
ನಿನ್ನನ್ನು ತಪ್ಪು
ಮಾರ್ಗಕ್ಕೆ ನಾ ದೂಡಲಾರೆ
ನಿನ್ನನ್ನು ಪ್ರಶ್ನಿಸುವಂತೆ
ಕೇವಲ ಪ್ರೇರಿಸಿ
ಹಿಂದಿನಿಂದ ನಗುವವನು
ನಾನಲ್ಲ !

ಅಸ್ತಿಕಳಾಗಿ 
ನಾಸ್ತಿಕಳಂತೆ  ನುಡಿದು
ಅದರ ಬಗ್ಗೆ
ಜ್ಞಾನ ಸಂಪಾದಿಸುವ
ನಿನ್ನ ಈ ರುಚಿಗೆ ನನ್ನ ಮಾನ್ಯ
ಆದರೆ ನಿನಗೆ ರುಚಿಯಾಗಲೆಂದು
ನಿನ್ನ ಬಾಯಿಗೆ ಸಿಹಿ ಉತ್ತರದ
ಸಕ್ಕರೆ ನಾ ಕೊಡಲಾರೆ !

ಈ ಜಗದ
ಎಲ್ಲ ಪ್ರಶ್ನೆಗಳ ಉತ್ತರ
ನಮ್ಮಲಿಲ್ಲ
ಅದಕ್ಕೆ ಗೊತ್ತಿಲ್ಲದ
ಸೂಕ್ಷ್ಮ ಸಂವೇದನಾಶೀಲ
ವಿಷಯಗಳ ಬಗ್ಗೆ
ಪ್ರಶ್ನಿಸುವಾಗ
ನಿನ್ನ ಈ ಮೋಜಿನ ಸ್ವಭಾವ
ಆ ಪ್ರಶ್ನೆಯಲ್ಲಿ ಇರದಿರಲಿ
ಅಲ್ಲಿ ಕೇವಲ ನಿನ್ನ ಇನ್ನೂ
ತಿಳಿಯುವ ಹಂಬಲ ಇರಲಿ !

ಅನೇಕ ಕಾಲದಿಂದ
ಉಳಿದು ಬಂದಿದ
ಪ್ರಥೆಗೆ
ನಿನ್ನ ನಂಬಿಕೆ ಅಪನಂಬಿಕೆಯ
ಅವಶ್ಯಕತೆ ಇದೆಯೇ ?
ಮೂಢನಂಬಿಕೆಯೆಂದು
ಕೇವಲ ಪ್ರಸ್ತುತ
ಸ್ಥಿತಿಯನ್ನು ತಿಳಿದು
ಅದನ್ನು ಹೀಯಾಳಿಸುವುದು ಸರಿಯೇ ?
by ಹರೀಶ್ ಶೆಟ್ಟಿ, ಶಿರ್ವ

ಬಲಾತ್ಕಾರ

ಬಲಾತ್ಕಾರ
ಹಿಂಸಕ ವಿಕಾರ
ಕ್ರೂರ ಅತ್ಯಾಚಾರ
ಅಮಾನವೀಯ ವ್ಯವಹಾರ 
ಮುದ್ದು ಮನಸ್ಸಿಗೆ ಪ್ರಹಾರ
ಮುಗ್ಧ ಬಾಳಿನ ಸಂಹಾರ
ಪಾಪರಹಿತ ಹೃದಯದ ಚಿತ್ಕಾರ !

ಬಲಾತ್ಕಾರ
ಹೆಣ್ಣು ಎಂಬ ಜೀವಿಯ ಕೊಲೆ
ಸುಂದರ ಜೀವನಕ್ಕೆ ಸಂಕೋಲೆ
ದುಃಖ ಕಷ್ಟಗಳ ಅಲೆ
ನಿಷ್ಕಳಂಕ ದೇಹಕ್ಕೆ ಕಲೆ
ಬಲವಂತವಾಗಿ ಹಾಕಿದ ಬಲೆ
ನಿಷ್ಕಪಟ ನಿರ್ದೋಷಿ ಅಬಲೇ !

ಬಲಾತ್ಕಾರ
ಕಣ್ಣೀರ ಸಾಗರ
ನ್ಯಾಯಕ್ಕಾಗಿ ಹಾಹಾಕಾರ
ಮಾಡಬೇಡಿ ಅವಳನ್ನು ದೂರ
ಜೀವಿಸಲಿದೆ ಅವಳಿಗೆ ಕೊಡಿ ಸಹಕಾರ
ಆಗುವುದು ನಿಮ್ಮ ಉಪಕಾರ
ಅವಳ ಹೊಸ ಜೀವನ ಆಗಲಿ ಉದ್ಧಾರ !
by ಹರೀಶ್ ಶೆಟ್ಟಿ, ಶಿರ್ವ

Tuesday, December 18, 2012

ಅಮೃತ ವಿಷ

ಗೆಳತಿ
ನೀನು ಕುಡಿಯುವ
ಮೌನ ಅಮೃತ
ನನ್ನಲ್ಲಿ
ವಿಷವಾಗಿ ಸೇರಿ
ನನ್ನನ್ನು
ಮಾಡುತ್ತಿದೆ
ಅರ್ಧ ಮೃತ
by ಹರೀಶ್ ಶೆಟ್ಟಿ, ಶಿರ್ವ

ಶೇರು ಮಾರ್ಕೆಟ್

ಮುಂಜಾನೆಯ ೯ ಗಂಟೆಯ ಸಮಯ, ಟೀವಿಯಲ್ಲಿ ಸಿ.ಏನ್.ಬಿ .ಸಿ ಚಾನೆಲಲ್ಲಿ ಶೇರು ಮಾರ್ಕೆಟಿನ ಸುದ್ದಿ ನಡೆಯುತ್ತಿತ್ತು,

ಆಗ ಮೊಬೈಲ್ ಫೋನ್ ರಿಂಗಾಯಿಸಿತು, ನಾನು ಆತುರದಿಂದ "ಹೇಳಿ ಶಾಹ್ ಸಾಬ್ ಏನಾಯಿತು?"

ಶಾಹ್ "ಗುಡ್ ನ್ಯೂಸ್ ಸಾಹೇಬರೇ,ನಿಮಗೆ ೨೦ ಸಾವಿರ ಲಾಭ ಬಂದಿದೆ."

ನಾನು ಸಂತೋಷದಿಂದ  "ತುಂಬಾ ಧನ್ಯವಾದಗಳು ಶಾಹ್ ಸಾಬ್."

ಮೊಬೈಲ್ ಕಟ್ ಮಾಡಿ ನಾನು ಆನಂದದಿಂದ "ಸುಮಾ, ನೋಡಿದಿಯ ನನ್ನ ಕಮಾಲ್, ಏನೂ ಬಂಡವಾಳ ಮಾಡದೆ ನನಗೆ ಇಂದು ೨೦ ಸಾವಿರ ಲಾಭ ಆಯಿತು."

ಸುಮಾ ಅಡುಗೆ ಮನೆಯಿಂದ ಹೊರ ಬಂದು  "ಅದು ಹೇಗೆ ??"

"ನಿನಗೆ ಗೊತ್ತುಂಟಲ್ಲ ನನ್ನ ಮಿತ್ರ ಜೆಥಾನಿ ಹೇಗೆ ಶೇರ್ ಟ್ರೇಡಿಂಗ್ (ವ್ಯಾಪಾರ ) ಮಾಡುತ್ತೇನೆ ಹಾಗು ದಿನ ಎಷ್ಟು ಸಂಪಾದನೆ ಮಾಡುತ್ತಾನೆ ಎಂದು, ನಾನೂ ಇಂದು ಹಾಗೆ ಮಾಡಿದೆ."

"ಹಾಗೆ ಅಂದರೆ ಹೇಗೆ?" ಸುಮಾ ಪುನಃ ಆಶ್ಚರ್ಯದಿಂದ ಕೇಳಿದಳು.

"ಅರೆ,  ಇಂದು ಹೊಸ ಒಂದು ಶೇರ್ ಲಿಸ್ಟಿಂಗ್ ಆಗಿದೆ, ಲಿಸ್ಟ್ ಆದ ದಿನ ಏನಾಗುತ್ತದೆ ಗೊತ್ತ, ಒಮ್ಮೆಲೇ ಅದರ ರೇಟ್ ಏರುತ್ತದೆ, ಅಂದರೆ ೨೦೦ ರೂಪಾಯಿಗೆ ಲಿಸ್ಟ್ ಆದದ್ದು ಒಮ್ಮೆಲೇ ಸಾವಿರ ತನಕ ಆಗುದೂ ಉಂಟೂ, ಆಗ ನಾವು ಆ ಶೇರ್ ಮಾರಬೇಕು ಹಾಗು ಅದರ ರೇಟ್ ಕಮ್ಮಿ ಆದ ಕೂಡಲೇ ಪುನಃ ಆ ಶೇರ್ ಖರೀದಿ ಮಾಡಬೇಕು, ನಾನು ಇಂದು ಹೀಗೆಯೇ ಮಾಡಿದೆ."

"ಆದರೆ ಇಂದು ಲಿಸ್ಟ್ ಆದದ್ದು ಶೇರ್ ನಿಮ್ಮ ಡಿಮೇಟ್ ಅಕೌಂಟ್'ಲ್ಲಿ (ಶೇರ್ ಇಡುವ ಖಾತೆ) ಹೇಗೆ ಬಂತು?" ಎಂದು ಆಶ್ಚರ್ಯದಿಂದ ಕೇಳಿದ್ದಳು.

"ಇಂಟ್ರ ಡೇ ಶೇರ್ ಟ್ರೇಡಿಂಗ್ ಮಾಡಲು ನಮ್ಮ ಡಿಮೇಟ್ ಅಕೌಂಟ್'ಲ್ಲಿ ಶೇರ್ ಇರುವ ಅಗತ್ಯ ಇಲ್ಲ, ನೀನು ಇರದೇ ಖರೀದಿ ಹಾಗು ಮಾರ ಬಹುದು, ಆದರೆ ಅದೇ ದಿವಸ ಶೇರ್ ಮಾರ್ಕೆಟ್ ಮುಚ್ಚುವ ಮುಂಚೆ ನೀನು ಮಾರಿದ ಶೇರ್ ಪುನಃ ಖರೀದಿ ಮಾಡಬೇಕು.

ನಾನಿಂದು ಹೀಗೆಯೇ ಮಾಡಿದ್ದು,  ಲಿಸ್ಟ್ ಆದ ೧೦೦೦ ಶೇರ್ ರೂಪಾಯಿ ೬೦೦ ಇರುವಾಗ ಮಾರಿದೆ ಹಾಗು ರೂಪಾಯಿ ೫೮೦ ಇರುವಾಗ ಪುನಃ ಖರೀದಿ ಮಾಡಿದೆ, ಸಿಕ್ಕಿತ್ತಲ್ಲ ೨೦ ಸಾವಿರ ಲಾಭ"ಎಂದು ಜಂಬ ಕೊಚ್ಚಿಕೊಂಡೆ.

ಇದನ್ನು ಕೇಳಿ ಸುಮಾ " ಹಾಗಾದರೆ ಇವತ್ತು ೨೦ ಸಾವಿರ ಲಾಭ ಆಯಿತಲ್ಲ, ಇನ್ನು ಏನು ಬೇರೆ ಶೇರ್ ಟ್ರೇಡಿಂಗ್ ಮಾಡಲು ಹೋಗ ಬೇಡಿ, ಆಸೆಗೆ ಒಳಗಾಗಬೇಡಿ" ಎಂದು ಹೇಳಿದಳು .

ನಾನು "ಓಕೆ ಡಾರ್ಲಿಂಗ್, ಈಗ ನಾನು ಕೆಲಸಕ್ಕೆ ಹೊರಡುತ್ತೇನೆ, ಇವತ್ತು ಲೇಟ್ ಆಯಿತು" ಎಂದು ಖುಷಿಯಲ್ಲಿ ಹೇಳಿ ಮನೆಯಿಂದ ಹೊರಡಿದೆ .

೨೦ ಸಾವಿರ ಲಾಭ ಸಿಕ್ಕಿದ ಖುಷಿಯಲ್ಲಿ ಆ ದಿವಸ ನಾನು ಟ್ಯಾಕ್ಸಿಯಲ್ಲಿ ಆಫೀಸ್ ಬಂದೆ.

ಆಫೀಸ್ ಬಂದ ಕೂಡಲೇ ಮೊಬೈಲ್ ರಿಂಗಾಯಿಸಿತು, ಶಾಹ್ ಇದ್ದ "ಸಾಹೇಬರೇ , ಈಗ ಆ ಶೇರ್ ದರ  ೧೧೦೦ ನಡೆಯುತ್ತಿದೆ,  ಏನ್ ಮಾಡ್ಲಿಕ್ಕಿದೆ, ಇಂದು ನಿಮ್ಮ ದಿನ ಒಳ್ಳೆಯದಿದೆ " ಎಂದು ಕೇಳಿದ .

ನನ್ನ ಕಣ್ಣು ಅಗಲವಾಯಿತು, ಆಸೆ ತಲೆ ಏರಿತು, ಯೋಚಿಸ ತೊಡಗಿದೆ ಇಂದು ನನ್ನ ಅದೃಷ್ಟದ ದಿನ, ಇನ್ನೂ ಹೆಚ್ಚು ಲಾಭ ಪಡೆಯ ಬೇಕು ಎಂದು ಆತುರದಿಂದ   "ಶಾಹ್ ಸಾಬ್ ೫೦೦೦ ಶೇರ್ ಮಾರಿ ಬಿಡಿ " ಎಂದು ಹೇಳಿದೆ.

ಶಾಹ್ "ಎಷ್ಟು ?"

"೫೦೦೦"

ಶಾಹ್ " ಯೋಚಿಸಿ "

"ಇಲ್ಲ ಇಲ್ಲ ನೀವು ಮಾರಿ ಬಿಡಿ, ಆದದ್ದು ಆಗುತ್ತದೆ " ಎಂದು ಗತ್ತಿನಿಂದ ಹೇಳಿದೆ.

ಶಾಹ್ " ಓಕೆ , ೫೦೦೦ ಶೇರ್ ನಿಮ್ಮ ಸೇಲ್ ಆಯಿತು " ಎಂದು ಹೇಳಿ ಮೊಬೈಲ್ ಕಟ್ ಮಾಡಿದ .

ಸ್ವಲ್ಪ ಹೊತ್ತು ನಂತರ ಶಾಹ್ ಪುನಃ ಫೋನ್ ಮಾಡಿದ , ಅವನ ಸ್ವರದಲ್ಲಿ ವ್ಯಥೆ ಇತ್ತು "ಸಾಹೇಬರೇ ಶೇರ್ ದರ ಇನ್ನು ಏರಿದೆ ೧೨೫೦ ನಡೆಯುತ ಇದೆ , ನೀವು ಏಳೂವರೆ ಲಕ್ಷ ಲುಕ್ಸಾನಲ್ಲಿ ಇದ್ದೀರಿ ,ಏನ್ ಮಾಡುವುದು ಈಗ ಬೇಗ ಹೇಳಿ".

ನನ್ನ ಹೃದಯ ಒಮ್ಮೆ ನಿಂತು ಹೋಯಿತು , ಆದರೂ ತನ್ನನ್ನು ಸಾವರಿಸಿ " ಈಗ ಏನು ಮಾಡ ಬೇಡಿ,ಇನ್ನು ಶೇರ್ ಮಾರ್ಕೆಟ್ ಮುಚ್ಚುವ ಟೈಮ್ ಆಗಲಿಲ್ಲ , ಕಡಿಮೆ ಆಗಬಹುದು " ಎಂದು ಹೇಳಿದೆ.

ಶಾಹ್ ಫೋನ್ ಇಟ್ಟ ನಂತರ ನನ್ನ ತಲೆ ತಿರುಗಲು ಶುರು ಆಯಿತು,  ಈಗ ಏನು ಮಾಡುವುದು ಎಂದು.

ಆಗ ಶಾಹ್ ಪುನಃ ಫೋನ್ ಮಾಡಿದ " ೧೧೫೦ ಆಗಿದೆ , ಎರಡುವರೆ ಲಕ್ಷ  ಲುಕ್ಸಾನಲ್ಲಿ ಇದ್ದೀರಿ , ಏನ್ ಮಾಡ ಬೇಕು "

"ಇಲ್ಲ ಇಲ್ಲ ನಿಲ್ಲಿ , ನಾನು ಹೇಳುತ್ತೇನೆ " ಎಂದು ಚಿಂತೆಯಲ್ಲಿ ಹೇಳಿದೆ .

ಈಗ ಏನು ಮಾಡುವುದು ಎಲ್ಲಿಂದ ಲುಕ್ಸಾನ ಪೂರ್ಣ ಮಾಡುವುದು, ಬೆಳ್ಳಿಗೆ ಬಂದ ಲಾಭವೂ ಹೋಯಿತು, ಪುನಃ ತಲೆ ತಿರುಗಲು ಶುರು ಆಯಿತು. ಆಗ ಪುನಃ ಶಾಹ್ ಫೋನ್ ಮಾಡಿದ "ಸಾಹೇಬರೇ ೧೨೨೫, ಏನು ಮಾಡಬೇಕು, ಬೇಗ ಹೇಳಿ ಮಾರ್ಕೆಟ್ ಕ್ಲೋಸ್ ಆಗಲು ೧೫ ನಿಮಿಷ ಇರುವುದು "

"ಇಲ್ಲ ಶಾಹ್ ಸಾಹೇಬ್ ಕಡಿಮೆ ಆಗ ಬಹುದು, ನಾನು ಹೇಳುತ್ತೇನೆ " ಎಂದು ಹೇಳಿ ಫೋನ್ ಇಟ್ಟೆ.

ಆಗ ಜಥಾನಿಯ ಫೋನ್ ಬಂತು " ಏನು ಮಿತ್ರ , ಇದೇನು ನೀನು ಮಾಡಿದೆ, ಶಾಹ್ ನನಗೆ ಹೇಳಿದ , ಇದು ನಿನ್ನ ಕೆಲಸ ಅಲ್ಲ, ಯಾಕೆ ಹೀಗೆ ಮಾಡಿದೆ, ಬೇಗ ಖರೀದಿ ಮಾಡು ಆ ಶೇರ್, ಇಲ್ಲದ್ರೆ ಇನ್ನು ಹೆಚ್ಚು ಲುಕ್ಸಾನ ಆಗಬಹುದು "

ನಾನು " ಜಥಾನಿ ಸಾಹಬ್, ನಾನು ನಿಮಗೆ ಫೋನ್ ಮಾಡುತ್ತೇನೆ " ಎಂದು ಹೇಳಿ ಫೋನ್ ಇಟ್ಟೆ.

ನನಗೆ ಜ್ವರ ಏರಿತು, ಏನು ಮಾಡುವುದು, ಶಾಹ್ ಫೋನ್ ಪುನಃ ಬಂತು " ಸಾಹೇಬರೇ , ೧೨೧೫, ಐದು  ಲಕ್ಷ ೭೫ ಸಾವಿರ ಲುಕ್ಸಾನಲ್ಲಿ ಇದ್ದೀರಿ, ಟೈಮ್ ಮುಗಿಯುತ ಬಂತು ಈಗ ಖರೀದಿ ಮಾಡ ಬೇಕಾಗುತ್ತದೆ, ಇಲ್ಲದ್ರೆ ಸ್ಕ್ವೇರ್ ಅಪ್ ಆಗುತ್ತದೆ, ಆಗ ಇನ್ನು ಹೆಚ್ಚು ಲುಕ್ಸಾನ ಆಗುತ್ತದೆ, ಖರೀದಿ ಮಾಡುತ್ತೇನೆ ".

ನಾನು ಸತ್ತ ಸ್ವರದಲ್ಲಿ " ಮಾಡಿ ... ಮಾಡಿ  ಶಾಹ್ ಸಾಹಬ್ " ಎಂದು ಹೇಳಿ ಕುರ್ಚಿಯಲ್ಲಿ ಕುಸಿದು ಬಿದ್ದೆ .

ಅಂದು ಊಟ ಸಹ ಮಾಡಲಿಲ್ಲ, ಟಿಫನ್ ತಂದದ್ದು ಹಾಗೆಯೇ ಇತ್ತು, ಈಗ ಏನು ಮಾಡುವುದು, ಎಲ್ಲಿಂದ ಹಣ ತರುವುದು, ಕಣ್ಣಿನಿಂದ ಕಣ್ಣೀರು ಹರಿಯಲಾರಂಭಿಸಿತು.

ಅರ್ಧ ಗಂಟೆಯ ನಂತರ ಶಾಹ್ ಸಾಹೇಬರ ಫೋನ್ ಬಂತು " ಸಾಹೇಬರೇ , ನಿಮ್ಮ ಶೇರ್ ೧೨೨೦  ಕ್ಕೆ ಖರೀದಿ ಆಯಿತು, ನಿಮ್ಮ ಲುಕ್ಸಾನ ಆರು ಲಕ್ಷ, ೨೦ ಸಾವಿರ ಲಾಭ ಕಟ್ ಮಾಡಿ ಚಾರ್ಜ್ ಎಲ್ಲ ಸೇರಿ ಐದು  ಲಕ್ಷ,  ೮೭ ಸಾವಿರ ನಾಳೆ ತನಕ ಕಳಿಸಿ ಕೊಡಿ ನನಗೆ".

ನಾನು "ಓಕೆ " ಎಂದು ಹೇಳಿ ಫೋನ್ ಇಟ್ಟೆ.

ಏನೂ ತೋಚುತ್ತಿರಲಿಲ್ಲ, ಏನು ಮಾಡಬೇಕೆಂದು, ಹಣದ ವ್ಯವಸ್ಥೆ ಹೇಗೆ ಮಾಡಬೇಕೆಂದು , ಸುಮಾಳಿಗೆ ಹೇಗೆ ಹೇಳಲಿ? ಅವಳ ಅವಸ್ಥೆ ಏನಾಗಬಹುದು? ಪಾಪ ಮುಂಜಾನೆ ಎಷ್ಟು ಖುಷಿಯಲ್ಲಿದ್ದಳು, ಈಗ ಹೇಗೆ ಹೇಳುವುದು, ತಲೆ ನೋವು ಶುರು ಆಯಿತು.

ಸ್ವಲ್ಪ ಸಮಯ ನಂತರ ಜಥಾನಿಯ ಫೋನ್ ಬಂತು "ಮಿತ್ರ ಏನು ಮಾಡಿದೆ ನೀನು, ನಾವು ವ್ಯಾಪಾರೀ ನಮಗೆ ಲಾಭ ಲುಕ್ಸಾನು ಎಲ್ಲ ತಿಳಿದಿದೆ, ನೀನು ಯಾಕೆ ಇದರಲ್ಲಿ ಕೈ ಹಾಕಿದೆ, ನಿನ್ನ ಚಿಕ್ಕ ಪುಟ್ಟ ಶೇರ್ ಡೀಲಿಂಗ್ ಒಳ್ಳೆಯದಿತ್ತಲ್ಲವೇ".

ನನ್ನ ಮೌನ ಕಂಡು ಅವನು ಕೇಳಿದ "ಮಿತ್ರ ಹಣ ಇದೆಯಲ್ಲ ನಿನ್ನ ಹತ್ತಿರ ಶಾಹ್ ನಿಗೆ ಕೊಡಲು, ಅವನಿಗೆ ಹೇಗಾದರೂ ಕೊಡಲೇ ಬೇಕು, ಅವನು ಈ ವ್ಯಾಪಾರದಲ್ಲಿ ತುಂಬಾ ಸ್ಟ್ರಿಕ್ಟ್, ಕೊಡದಿದ್ದರೆ ಗುಂಡಾನವರಿಗೆ ಕಳಿಸುತ್ತಾನೆ ".

ನನಗೆ ಅವನಿಗೆ ಏನು ಹೇಳ ಬೇಕೆಂದು ತಿಳಿಯಲಿಲ್ಲ, ಫೋನ್ ಇಟ್ಟೆ ಹಾಗು ಮೊಬೈಲ್ ಸ್ವಿಚ್ ಆಫ್ ಮಾಡಿದೆ  .

ಒಂದೇ ಕ್ಷಣದಲ್ಲಿ ಎಲ್ಲವನ್ನು ಕಳೆದೆ ಕೊಂಡೆ  ಅಲ್ಲವೇ, ಈಗ ನನ್ನ ಹಾಗು ನನ್ನ ಪರಿವಾರದ ಗತಿ ಏನು, ಯಾಕೆ ಹೀಗೆ ಮಾಡಿದೆ, ಅಯ್ಯೋ!  ಜೋರು ಜೋರಿನಿಂದ ಅಳಲು ಶುರು ಮಾಡಿದೆ, ಆದರೆ ಅಲ್ಲಿ ನನ್ನನ್ನು ಸಾವರಿಸುವವರು ಯಾರೂ ಇರಲಿಲ್ಲ .

ಸಂಜೆ ಹೇಗೋ ಮನೆಗೆ ಬಂದೆ, ಬಂದ  ಕೂಡಲೇ ಸುಮಾ "ನಿಮ್ಮ ಮೊಬೈಲ್ ಯಾಕೆ ಸ್ವಿಚ್ನ್ನ ಆಫ್ ಇದೆ, ನಾನೆಷ್ಟು ಫೋನ್ ಮಾಡಿದೆ ಗೊತ್ತ " ಎಂದು ಕೋಪದಿಂದ ಕೇಳಿದಳು, ನಂತರ ನನ್ನ  ಪೆಚ್ಚಾದ ಮುಖ ಕಂಡು ಸುಮಾಳಿಗೆ ಏನೋ ಆಗಿದೆ ಎಂದು ತಿಳಿಯಿತು.

"ಏನಾಯಿತು ನಿಮಗೆ ???" ಎಂದು ಚಿಂತೆಯಿಂದ ಕೇಳಿದಳು .

"ಸುಮಾ ....,ಸುಮಾ " ಅಳು ಬಂದು ಬಾಯಿಯಿಂದ ಶಬ್ದ ಹೊರಡಲಿಲ್ಲ .

" ಏನ್ರೀ ಏನಾಯಿತು, ಬೇಗ ಹೇಳಿ?"

ನಾನು ಜೋರಾಗಿ ಅತ್ತೆ  " ಸುಮಾ, ನಮ್ಮ ಎಲ್ಲವೂ ಹೋಯಿತು".

" ಏನು ಏನಾಯಿತು , ಹೇಳಿ ?", ನಾನು ಅಳುತ ಅಳುತ ಎಲ್ಲ ವಿಷಯ ಅವಳಿಗೆ ಹೇಳಿದೆ.

ಅವಳು ಮೌನವಾದಳು.

"ಈಗ ಏನು ಮಾಡುವುದು ಸುಮಾ ,ಅವನಿಗೆ ನಾಳೆ ತನಕ ಹಣ ಕೊಡಲಿಕ್ಕೆ ಇದೆ ".

ಸುಮಾಳ ಕಣ್ಣಿನಿಂದ ಕಣ್ಣೀರು ಹೊರ ಬಂತು "ಮಾಡುವ ಮುಂಚೆ ಯೋಚಿಸಲಿಲ್ಲವೇ, ಈಗ ನನ್ನಿಂದ ಏನು ಕೇಳುವುದು , ಅತಿ ಆಸೆಗೆ ಹೋಗಿ ನೋಡಿದ್ದೀರಾ ಏನಾಯಿತೆಂದು".

ಅವಳು ಎದ್ದು ಒಳ ಕೋಣೆಗೆ ಹೋದಳು. 

ನಾನು ಹಾಗೆಯೇ ಕೂತು ಕೊಂಡೆ, ಕತ್ತಲಾಗುತ ಬಂತು, ಆದರೆ ನಾನಾಗಲಿ, ಸುಮಾ ಆಗಲಿ ಲೈಟ್  ಆನ್ ಮಾಡಲು ಹೋಗಲಿಲ್ಲ .

ಆಗ ಯಾರೋ ಬೆಲ್ ಬಾರಿಸಿದ್ದರು, ನಾನು ಎದ್ದು ಲೈಟ್ ಆನ್ ಮಾಡಿ ಬಾಗಿಲು ತೆರೆದೇ, ಜಥಾನಿ ಬಂದಿದ್ದ.

"ಏನು ಆಯ್ತಾ ಹಣದ ವ್ಯವಸ್ಥೆ , ಏನು ಮಾಡುವೆ ಈಗ ?"

ನಾನು ಮೆಲ್ಲನೆ " ನಾಳೆ ತನಕ ನೋಡುವ."

"ವ್ಯವಸ್ಥೆ ಮಾಡು ಮಹರಾಯ, ಇಲ್ಲಾದರೆ ಶಾಹ್ ಹೀಗೆಯೇ ಬಿಡೋಲ್ಲ" ಎಂದು ಹೆದರಿಸಿದ.

ನಾನು " ನಾಳೆ ಕೊಡುತ್ತೇನೆ " ಎಂದು ಹೇಳಿದೆ, ಸ್ವಲ್ಪ ಹೊತ್ತು ಹೀಗೆಯೇ ನನ್ನನ್ನು ಹೆದರಿಸಿ ಜಥಾನಿ ಹೋದ.

ಮಗ ಆಟ ಆಡಿ ಬಂದ, ನನ್ನನ್ನು ಮೌನ ಕಂಡು ಒಳಗೆ ಹೋದ. ಒಳಗೆ ಮೌನ ಕೂತು ಕೊಂಡ ಸುಮಾಳಿಗೆ ಅವನ ದಿನಚರ್ಯ ಹೇಳ ತೊಡಗಿದ, ಅವಳು ಕೇವಲ "ಹ... ಹೂ" ಎಂದು ಹೇಳುತ್ತಿದ್ದಳು.

ರಾತ್ರಿ ಎಂಟು ಗಂಟೆ ಆಯಿತು, ನಾನು ಅಲ್ಲಿಯೇ ಕೂತು ಕೊಂಡಿದೆ, ಆಗ ಸುಮಾ ಹೊರಗೆ ಬಂದಳು, ಅವಳ ಕೈಯಲ್ಲಿ ಏನೋ ಇತ್ತು, ಅದನ್ನು ನನ್ನ ಕೈಗೆ ಕೊಟ್ಟು "ಇದು ನನ್ನ ಚಿನ್ನದ ಒಡವೆ, ಇದನ್ನು ಅಡವು ಇಟ್ಟು ಶಾಹನ ಹಣ ಕೊಟ್ಟು ಬಿಡಿ, ದಯಾ ಮಾಡಿ ಪುನಃ ಹೀಗೆ ಮಾಡಬೇಡಿ " ಎಂದು ಹೇಳಿ ಕಣ್ಣೀರು ಒರೆಸುತ ಪುನಃ ಒಳಗೆ ಹೋದಳು.

ಕೈಯಲ್ಲಿ ಆಭರಣದ ಪೆಟ್ಟಿಗೆ ಹಿಡಿದು ನಾನು ಪುನಃ ಅಳಲು ಶುರು ಮಾಡಿದೆ.

by ಹರೀಶ್ ಶೆಟ್ಟಿ, ಶಿರ್ವ  


Monday, December 17, 2012

ಮನಸ್ತಾಪ

ಗೆಳತಿ
ಈ ನಮ್ಮ
ಕಣ್ಣು ಮುಚ್ಚಾಲೆಯ
ಆಟದಲ್ಲಿ
ನನ್ನ
ಸೋಲು ನಿಶ್ಚಿತ
ಎಂದು ಗೊತ್ತಿದರೂ
ನಾನ್ಯಾಕೆ ಸತತ
ನಿನ್ನನ್ನು ಒಲಿಸಲು
ಪ್ರಯತ್ನಿಸುತ್ತಲೇ ಇರುತ್ತೇನೆ !

ನಿನ್ನ ಕೋಪದ
ಅಲೆಗಳ
ಪ್ರಹಾರದಿಂದ
ನನ್ನ ದೇಹ
ವೇದನೆಯಿಂದ
ಬಳಲುತ್ತಿದ್ದರು
ನಿನಗೆ ತೃಪ್ತಿ ಸಿಗಲಿ
ಎಂದು ನಾನು ಸ್ಥಿರವಾಗಿ
ನಿನ್ನ ಪ್ರೀತಿ ಸಾಗರದ ತೀರದಲ್ಲಿಯೇ 
ನಿಲ್ಲಿ ಕೊಂಡಿರುತ್ತೇನೆ !

ನನಗೆ ಗೊತ್ತು
ನಿನ್ನಲ್ಲಿ ಎದ್ದ
ಮನಸ್ತಾಪದ ಬಿರುಗಾಳಿಯಲ್ಲಿ
ನಮ್ಮ ಪ್ರೇಮ
ಮರೆಯಾಗಿದೆ ಎಂದು
ನೀ ಇಂದು ನನ್ನನ್ನು
ದ್ವೇಷಿಸುವೆ ಎಂದು 
ಆದರೂ
ನೀ ಬೇಗನೆ ಶಾಂತವಾಗುವೆ
ಎಂದು ನಿರೀಕ್ಷಿಸುತ್ತೇನೆ !

ಅರಿಯದೆ
ಮಾಡಿದ
ನನ್ನ ತಪ್ಪಿಗೆ
ಕ್ಷಮೆ ಇಲ್ಲವೇ ?
ನಿನ್ನ ವಿಶಾಲ
ಕಡಲ ಮನಸ್ಸಲ್ಲಿ
ಮೀನಾಗಿ
ತೇಲುತ್ತಿದ್ದ ನನಗೆ
ನೀನು
ಅಗಲಿಕೆಯ ಜಾಲದಲ್ಲಿ ಸಿಕ್ಕಿಸಿ
ನಮ್ಮ ಪ್ರೀತಿಯನ್ನು ಮುಗಿಸ ಬೇಡವೆಂದು 
ಪದೇ ಪದೇ ನಿನ್ನಿಂದ ಬೇಡುತ್ತೇನೆ !
by ಹರೀಶ್ ಶೆಟ್ಟಿ, ಶಿರ್ವ

ಅದ್ಯಾಕೆ ನೀನಿಷ್ಟು ನಗುತ್ತಿರುವೆ


ಅದ್ಯಾಕೆ ನೀನಿಷ್ಟು...
ಅದ್ಯಾಕೆ ನೀನಿಷ್ಟು ನಗುತ್ತಿರುವೆ 
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ

ಕಣ್ಣಲ್ಲಿ ಕಣ್ಣೀರು ನಗು ತುಟಿಯಲಿ -೨
ಅದೇನು ಅವಸ್ಥೆಯೋ
ಅದೇನನ್ನು ತೋರಿಸುತ್ತಿರುವೆ -೨ 
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ 

ವಿಷ ಆಗಬಹುದು ಕುಡಿದು ಕುಡಿದು-೨
ಈ ಕಣ್ಣೀರನ್ನು ಹೀಗೆ ಕುಡಿಯುತ್ತಿರುವೆ-೨

ಯಾವ ಗಾಯಗಳ ಸಮಯ ತುಂಬಿದೆಯೋ -೨
ನೀನ್ಯಾಕೆ ಅದನ್ನು ಕೆದಕುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ  

ರೇಖೆಗಳ ಆಟವಾಗಿದೆ ಈ ವಿಧಿ-೨
ರೇಖೆಗಳಿಂದ ಸೋತು ಹೋಗುತ್ತಿರುವೆ-೨
ಅದ್ಯಾವ ದುಃಖವನ್ನು ಅಡಗಿಸುತ್ತಿರುವೆ -೨
ಅದ್ಯಾಕೆ ನೀನಿಷ್ಟು ನಗುತ್ತಿರುವೆ 

ಮೂಲ :ಕೈಫಿ ಆಜ್ಮಿ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು /ಸಂಗೀತ : ಜಗಜಿತ್ ಸಿಂಗ್ 
ಚಿತ್ರ : ಅರ್ಥ 

Tum Itna Jo Muskura Rahe Ho
kya Gham Hai Jisko Chhupa Rahe Ho

aankhon Mein Nami, Hansi Labon Par
kya Haal Hai Kya Dikha Rahe Ho

ban Jayenge Zehar Peete Peete
yeh Ashq Jo Piye Ja Rahe Ho

jin Zakhmon Ko Waqt Bhar Chala Hai
tum Kyon Unhe Chhedhe Ja Rahe Ho

rekhaon Ka Khel Hai Muqaddar
rekhaon Se Maat Kha Rahe Ho

tum Itna Jo... 
www.youtube.com/watch?v=3unptPIAdMk

ಸ್ಪರ್ಶಿಸಲು ಕೊಡು ಕೋಮಲ ತುಟಿಯನ್ನು

ಸ್ಪರ್ಶಿಸಲು ಕೊಡು ಕೋಮಲ ತುಟಿಯನ್ನು 
ಇನ್ನೇನೂ ಅಲ್ಲ ಮದ್ಯ ಇದು -೨
ಪ್ರಕೃತಿ ನಮಗೆ ನೀಡಿದ 
ಎಲ್ಲರಿಂದ ಸುಂದರ ಉಡುಗೊರೆ ಇದು 
ಸ್ಪರ್ಶಿಸಲು ಕೊಡು....

ಲಜ್ಜಿಸಿ ಹೀಗೆಯೇ ಕಳೆದುಕೊಳ್ಳದಿರು 
ವರ್ಣಮಯ ಯೌವನದ ಈ ಸಮಯ-೨
ಅಧೀರ ಬಡಿಯುವ ಹೃದಯದ
ಬಯಕೆ ತುಂಬಿದ ಸಂದೇಶ ಇದು 
ಸ್ಪರ್ಶಿಸಲು ಕೊಡು....

ಒಳ್ಳೆಯವರನ್ನು ಕೆಟ್ಟವನೆಂದು ಸಾಬೀತಿಸುವುದು 
ಪ್ರಪಂಚದ ಹಳೆಯ ಸ್ವಭಾವ ಇದು
ಈ ಸಾರಾಯಿಗೆ ಪಾವನ ವಸ್ತು ತಿಳಿ 
ಒಪ್ಪುವೆ ತುಂಬಾ ಅಪಕೀರ್ತಿಗೊಳಗಾಗಿದೆ ಇದು 
ಸ್ಪರ್ಶಿಸಲು ಕೊಡು....

ಮೂಲ :ಸಾಹಿರ್ ಲುದ್ಯಾನ್ವಿ 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಹಾಡಿದವರು : ಮೊಹಮ್ಮದ್ ರಫಿ 
ಸಂಗೀತ : ರವಿ 
ಚಿತ್ರ : ಕಾಜಲ್ 

chhoo lene do nazuk honthon ko
kuch aur nahi hai jaam hai ye-2
kudrat ne jo hum ko baksha hai
wo sabse haseen inaam hai ye
chhoo lene do.....

sharma ke na yunhi kho dena
rangeen jawani ki ghadiyan-2
betaab dhadakte seeno ka
armaan bhara paigam hai ye
chhoo lene do......

achon ko bura sabit karna
duniya ki purani aadat hai-2
is may ko mubarak cheez samajh
mana ke bohot badnaam hai ye
chhoo lene do ....
http://www.youtube.com/watch?v=eQeItXONOVg

Sunday, December 16, 2012

ಪ್ರೀತಿಯ ರಕ್ಷಣೆ

ಗೆಳತಿ 
ನಾ ನಿನ್ನಿಂದ 
ದೂರ ದೂರ 
ಆಗುವ ಕಾರಣ 
ನಿನ್ನ ಒಳಿತಕ್ಕೆ ಅಲ್ಲದೆ 
ಬೇರೆ ಯಾವೂದಕ್ಕೂ ಅಲ್ಲ ! 

ನಿನ್ನ 
ಹೊಸ 
ಸುಖ ಸಂಸಾರಕ್ಕೆ 
ನನ್ನ ಶಾಪಗ್ರಸ್ತ 
ಜೀವನದ ಛಾಯೆ 
ಬೀಳಬಾರದೆಂದು 
ನನ್ನ ಆಶಯ ಅಲ್ಲದೆ ಬೇರೇನಲ್ಲ !

ನಿನ್ನ ಹತ್ತಿರವಾಗಿ 
ನಿನ್ನ ಹೃದಯದಲ್ಲಿ 
ಪುನಃ ಪ್ರೀತಿಯ ಮಿಡಿತ 
ಉಂಟಾಗುವಂತೆ ಮಾಡಿ 
ನಾ ನಿನ್ನ ಹೊಸ ಸಂಸಾರಕ್ಕೆ 
ದ್ರೋಹ ಮಾಡಲಾರೆ !

ಕ್ಷಮಿಸು ಪ್ರಿಯೆ 
ಈ ಪಾವನ ಪ್ರೀತಿಯ 
ರಕ್ಷಣೆಯೇ 
ಇಂದು ನಮ್ಮಿಬ್ಬರ 
ದ್ಯೇಯವಾಗಲಿ !
by ಹರೀಶ್ ಶೆಟ್ಟಿ, ಶಿರ್ವ

Saturday, December 15, 2012

ಪ್ರೇಮ ಗಿಡ

ಗೆಳತಿ
ಅಂದು
ನಾವು ರಸ್ತೆಯಲಿ
ನಡೆಯುತ್ತಿದ್ದಂತೆ
ಏಕಾಏಕಿ
ಮಳೆ ಬಂದು
ನಮ್ಮ
ಜೀವನ ಮರುಭೂಮಿಯಲಿ
ಪ್ರಥಮವಾಗಿ
ಪ್ರೇಮ ಬೀಜ ಮೊಳಕೆಯೊಡೆಯಿತು !

ದಿನ
ಉರುಳಿದಂತೆ
ನಮ್ಮ
ಪ್ರೀತಿಯ ಗಿಡ
ಕನಸ ಪುಷ್ಪಗಳನ್ನು
ಅರಳಿಸುತ
ನಮ್ಮನ್ನು ಅದರ
ಸುಗಂಧದಲ್ಲಿ
ಮೈ ಮನಸ್ಸು
ಮರೆಯುವಂತೆ ಮಾಡಿತು!

ಆದರೆ
ಸಮಾಜದ
ರೂಢಿ ಪರಂಪರೆಯ
ಬಿರಿಸು ಬಿರುಗಾಳಿ
ನಮ್ಮ ಪ್ರೀತಿಯ ಗಿಡವನ್ನು
ಒಂದೇ ಕ್ಷಣದಲ್ಲಿ
ನೆಲದಿಂದ ಕಿತ್ತು ಹಾಕಿ
ನಮ್ಮನ್ನು ಬೇರೆ ಬೇರೆ
ದಿಶೆಯಲಿ ಎಸೆಯಿತು !
 
ಒಟ್ಟಿಗೆ
ಕಳೆದ ಪ್ರೀತಿಯ
ದಿನಗಳ ನೆನಪು 
ನಮ್ಮ ಜೀವನ ಸಾಗರದಲಿ
ನೋವ ಅಲೆಗಳನ್ನು ಎಬ್ಬಿಸುತ್ತಿದ್ದರೂ 
ಇಂದು
ಕೇವಲ ಆ ನೆನಪೆ
ನಮ್ಮ ಬದುಕಾಯಿತು !
by ಹರೀಶ್ ಶೆಟ್ಟಿ, ಶಿರ್ವ
 

ರಂಗೋಲಿ

ಗೆಳತಿ 
ಮನೆ ಮುಂದೆ 
ಅಂಗಳದಲ್ಲಿ ರಂಗೋಲಿ 
ಬಿಡಿಸಲು ಹೋದೆ 
ನಿನ್ನ ಚಿತ್ರ 
ಬಿಡಿಸಿ ಬಿಟ್ಟೆ 
by ಹರೀಶ್ ಶೆಟ್ಟಿ, ಶಿರ್ವ

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...