Thursday, December 29, 2011

ಪ್ರಸಾದ ಹಾಗು ಇತರ ಕಥೆಗಳು

ಪ್ರಸಾದ
_______
ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ".

ಗಂಡ "ಇಲ್ಲಿ ನಿಲ್ಲು ತರುತ್ತೇನೆ" ಎಂದು ಹೇಳಿ ತನ್ನ ಜೇಬಲ್ಲಿ ಕೈ ಹಾಕಿ ಇದ್ದ ಹಣ ತೆಗೆದ "ಕೇವಲ ೧೫ ರೂಪಾಯಿ" ಇತ್ತು, ಆಗಲಿ ಇದು ದೇವರಿಗೆ ಎಂದು ವಿಚಾರಿಸಿ ನಕ್ಕು ಪ್ರಸಾದ ತರಲು ಅಂಗಡಿಗೆ ಹೋದ.

ಆಗಲೇ ಅವನಿಗೆ ಒಂದು ಸಣ್ಣ ಮಗು ಅಳುವ ಶಬ್ದ ಕೇಳಿತು, ರಸ್ತೆಯ ಕೊನೆಯಲ್ಲಿ ಒಂದು ಮಗು ಅಳುತ್ತಿತ್ತು, ಅವನು ಮಗುವ ಬಳಿ ಹೋಗಿ "ಏನು ...ಯಾಕೆ ನೀ ಅಳುವುದು.

ಮಗು ಅಳುತ " ಹಸಿವೆ ಆಗುತ್ತಿದೆ". ಮಗುವನ್ನು ನೋಡಿ ಅವನು " ಪಾಪ" ಎಂದು ಅವನು ಹೋಟೆಲ್ ಹೋಗಿ ತನ್ನಲ್ಲಿ ಇದ್ದ ೧೫ ರೂಪಾಯಿಯ ತಿಂಡಿ ತಂದು ಮಗುವಿಗೆ ಕೊಟ್ಟ.

ಹೆಂಡತಿ ಗಂಡನನ್ನು ಬರಿ ಕೈ ಬರುವುದನ್ನು ನೋಡಿ "ಎಲ್ಲಿ ಪ್ರಸಾದ ಎಲ್ಲಿ"??

ಗಂಡ " ಪ್ರಸಾದ ದೇವರಿಗೆ ಕೊಟ್ಟು ಬಂದೆ, ಬಾ ಇನ್ನು ಒಳಗೆ ಹೋಗಿ ದರ್ಶನ ಮಾಡೋಣ" ಎಂದು ಹೇಳಿ ನಕ್ಕ.
__________________
ಹೂವು
----------
ಅವನು ಬಹಳ ದೂರದಿಂದ ಹೆಂಡತಿ ಒಟ್ಟಿಗೆ ಶಿರಡಿಗೆ ಸಾಯಿ ಬಾಬಾರ  ದರ್ಶನಗೊಸ್ಕರ ಬಂದಿದ್ದ, ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ,  ಶಿರಡಿ ದೇವಸ್ಥಾನದ ಅಂಗಡಿಯಲ್ಲಿ ಹೂವಿಗೆ ವಿಪರೀತ ಬೆಲೆ ಹೇಳುತ್ತಾರೆ ಎಂದು ಕೇಳಿದ ಅವನು  ತನ್ನ ಊರಿನ ಪೇಟೆಗೆ ನಡೆದು ಕೊಂಡು ಹೋಗಿ  ೫ ರೂಪಾಯಿಯ ಹೂವು ಒಟ್ಟಿಗೆ ತಂದಿದ.

ಅವನ ಹೆಂಡತಿ " ಏನೂ ನೀವು ಇಷ್ಟು ದೂರ ಹೋಗಿ ಹೂವು ತಂದಿದ್ದೀರಿ ,  ಅಲ್ಲಿ ಸಿಗುದಿಲ್ಲವೇ , ಎಂದು ಹೇಳಿ ನಕ್ಕಳು. 

ದೇವಸ್ಥಾನದಲ್ಲಿ ತುಂಬಾ ಜನರು ದೊಡ್ಡ ದೊಡ್ಡ ಹೂವಿನ ಮಾಲೆ ಪ್ರಸಾದದ ಒಟ್ಟಿಗೆ ಸರದಿ ಸಾಲಲ್ಲಿ ನಿಂತಿದ್ದರು.

ಅರ್ಚಕರು ಎಲ್ಲ ಭಕ್ತರ ಹೂವಿನ ಮಾಲೆ ತೆಗೊಂಡು ಸಾಯಿ ಬಾಬಾರ  ವಿಗ್ರಹದ ಮುಂದೆ ಇದ್ದ ಸಮಾದಿಯ ಮೇಲೆ ಬಿಸಾಡುತ್ತಿದ್ದರು,  ಅವನ ಹೆಂಡತಿ  "ಈ ದೊಡ್ಡ ದೊಡ್ಡ ಹೂವಿನ ಮಾಲೆ ಹೀಗೆ ಬಿಸಾಡುವಾಗ, ನೀವು  ತಂದಿದ ಮುಷ್ಠಿ ಹೂವಿನ ಗತಿ ಏನೋ" ಎಂದು ನಕ್ಕಳು.

ನೂಕು ದೂಡು ಸಹಿಸಿ ಅವರ ಸರದಿ ಬಂತು, ಆಶ್ಚರ್ಯವೆಂದರೆ ಅರ್ಚಕರು ಅವನ ಕೈಯಲ್ಲಿದ್ದ ಹೂವು ತೆಗೊಂಡು ಬಹಳ ಶ್ರದ್ದೆಯಿಂದ ಸಾಯಿ ಬಾಬಾರ ಪಾದದಲ್ಲಿ ಹೋಗಿ ಇಟ್ಟರು ಹಾಗು ಅಲ್ಲಿದ್ದ ಸಿಹಿ ಪ್ರಸಾದ ತಂದು ಅವನಿಗೆ ಕೊಟ್ಟು ಆಶಿರ್ವಾದಿಸಿದರು.

ಇದನ್ನು ನೋಡಿ ಹೆಂಡತಿಯ ಕಣ್ಣಿನಿಂದ ನೀರು ಸುರಿಯಲಾರಂಬಿಸಿತು, ದೇವರು ಇವರ ಭಕ್ತಿ ಮೆಚ್ಚಿದರಲ್ಲವೇ..... ಅವರು  ಶ್ರದ್ದೆಯಿಂದ ಸಾಯಿ ಬಾಬಾರಿಗೆ  ನಮಸ್ಕರಿಸಿ ಹೊರ ಬಂದರು.

______________________
ಆರತಿಯ ಪದ್ಧತಿ
--------------------
ಹೊಸ ಅರ್ಚಕ ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡ ತೊಡಗಿದ, ಇದನ್ನು ಗಮಿನಿಸಿದ ಹಳೆಯ ಅರ್ಚಕ ಪೂಜೆ ಆದ ನಂತರ ಹೊಸ ಅರ್ಚಕನಲ್ಲಿಗೆ ಬಂದು "ನೋಡು ನೀನು ದೇವರ ಮುಂದೆ ನಿಂತು ಆರತಿ ಮಾಡಬಾರದು, ಇದು ಸರಿಯಲ್ಲ, ಯಾವಾಗಲು ನಾವು ದೇವರ ವಿಗ್ರಹದ ಬದಿಯಲ್ಲಿ ನಿಂತು ಆರತಿ ಮಾಡ ಬೇಕು, ಇದರಿಂದ ದೇವರಿಗೆ ಬರಲು ಹಾದಿ ಸುಗಮವಾಗುತ್ತದೆ".

ಇದನ್ನು ಕೇಳಿ ಹೊಸ ಅರ್ಚಕ "ಸ್ವಾಮಿ, ದೇವರು ನನ್ನ ಹೃದಯದಲ್ಲಿ ವಾಸವಾಗಿದ್ದಾರೆ, ದೇವರು ಸುಲಭವಾಗಿ ನನ್ನ ಹೃದಯದಿಂದ ಈ ವಿಗ್ರಹಕ್ಕೆ ಸೇರಿ ನನ್ನ ಪೂಜೆ ಬೇಗ ಸ್ವೀಕರಿಸಲೆಂದು ನಾನು ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡುವುದು" ಎಂದು ಉತ್ತರಿಸಿದ.

by ಹರೀಶ್ ಶೆಟ್ಟಿ, ಶಿರ್ವ

4 comments:

  1. ಸರ್ ನಿಮ್ಮಗೆ ಧನ್ಯವಾದಗಳು

    ReplyDelete
  2. ಸರ್ ನಿಮ್ಮಅನುಮತಿ ಇದರೆ ನಿಮ್ಮ ಬ್ಲಾಗ್ನಲ್ಲಿ ಇರುವ ಬರಹಗಳನ್ನು ನಾನು ನನ್ನ ಪೆಸ್ ಬುಕ್ ಗೆ ಅಪ್ಡೇಟ್ ಮಾಡುತೆನೆ

    ReplyDelete
  3. ಸರ್ ನಿಮ್ಮಅನುಮತಿ ಇದರೆ ನಿಮ್ಮ ಬ್ಲಾಗ್ನಲ್ಲಿ ಇರುವ ಬರಹಗಳನ್ನು ನಾನು ನನ್ನ ಪೆಸ್ ಬುಕ್ ಗೆ ಅಪ್ಡೇಟ್ ಮಾಡುತೆನೆ

    ReplyDelete
  4. ಖಂಡಿತವಾಗಿ ಮಾಡಿ,ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...