Friday, 30 December, 2011

ಹೊಸ ವರುಷ

ಜೀವನದ ಇನ್ನೊಂದು ಅಧ್ಯಾಯ ಮುಗಿಯಿತು
ಹೊಸ ವರುಷದ ಆಗಮನ ಆಯಿತು
ಹಾಳು ಪ್ರಸಂಗಗಳನ್ನು ಮರೆತು ಆಯಿತು
ಒಳ್ಳೆಯ ನೆನಪಿನೊಂದಿಗೆ ಜೀವನ ಮುಂದುವರಿಸಲಾಯಿತು

ಇನ್ನೂ ಬೇಡ ದ್ರೋಹ, ಹಗರಣ
ಬೇಡ ಅನಾವಶ್ಯಕ ರಕ್ತ ಪಾತ
ಇನ್ನೂ ಬೇಡ ಭ್ರಷ್ಟಾಚಾರದ ಕಾಟ
ಹೊಸ ವರುಷದಲಿ ಮುಗಿಯಲಿ ದುಷ್ಟರ ಆಟ

ಹಸಿವೆಯಿಂದ ನರಳುವ ಮಕ್ಕಳಿಗೆ ಸಿಗಲಿ ಆಹಾರ 
ಸಿಗಲಿ ಅನಾಥ ಮಕ್ಕಳಿಗೆ ವಿದ್ಯೆಯ ದಾನ
ಮುಗಿಯಲಿ ಸ್ತ್ರೀಯರ ಮೇಲೆ ಆಗುವ ಅತ್ಯಾಚಾರ
ಹೊಸ ವರುಷದಲಿ ಆಗಲಿ ದುಷ್ಟರ ಸಂಹಾರ

ಬನ್ನಿ ಹೊಸ ವರುಷದಲಿ ಸಂಕಲ್ಪ ಮಾಡೋಣ
ಹೊಟ್ಟೆ ಪಾಡಿಗಾಗಿ ಕಷ್ಟಪಟ್ಟು ದುಡಿಯೋಣ
ನಿರುದ್ಯೋಗವನ್ನು ಆಚೆ ದೂಡೋಣ
ಹೊಸ ವರುಷದಲಿ ಹೊಸ ಭಾರತ ನಿರ್ಮಾಣ ಮಾಡೋಣ
by ಹರೀಶ್ ಶೆಟ್ಟಿ, ಶಿರ್ವ

ವರ್ಷ ೨೦೧೨

ವರ್ಷ ೨೦೧೨....
ನೀನು ಮೆಲ್ಲ ಮೆಲ್ಲನೆ ಬರಲು ಇಡುವ ಹೆಜ್ಜೆಯಿಂದ
ನಾ ತೀರ್ಮಾನಿಸಲಾರೆ
ನೀನು ಏನು ಆಟ ಆಡುವಿ ಎಂದು...
by ಹರೀಶ್ ಶೆಟ್ಟಿ, ಶಿರ್ವ

ಎಲ್ಲಿದ್ದಿ ನೀ ಮುಕುಂದ ?

ಎಲ್ಲಿದ್ದಿ ನೀ ಮುಕುಂದ ?
ಹುಡುಕುವೆ ಅಲ್ಲಿ ಇಲ್ಲಿ
ಅಲೆಯುತ್ತಿದ್ದೇನೆ ಗಲ್ಲಿ ಗಲ್ಲಿ...
ಹೇ ಕಳ್ಳ....
ನೀನು ಅಡಗಿ ಕುಳಿತ್ತಿದ್ದಿ ನನ್ನ ಹೃದಯದಲ್ಲಿ .
by ಹರೀಶ್ ಶೆಟ್ಟಿ, ಶಿರ್ವ

Thursday, 29 December, 2011

ಪ್ರಸಾದ ಹಾಗು ಇತರ ಕಥೆಗಳು

ಪ್ರಸಾದ
_______
ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ".
ಗಂಡ "ಇಲ್ಲಿ ನಿಲ್ಲು ತರುತ್ತೇನೆ" ಎಂದು ಹೇಳಿ ತನ್ನ ಜೇಬಲ್ಲಿ ಕೈ ಹಾಕಿ ಇದ್ದ ಹಣ ತೆಗೆದ "ಕೇವಲ ೧೫ ರೂಪಾಯಿ " ಇತ್ತು, ಆಗಲಿ ಇದು ದೇವರಿಗೆ ಎಂದು ವಿಚಾರಿಸಿ ನಕ್ಕು ಪ್ರಸಾದ ತರಲು ಅಂಗಡಿಗೆ ಹೋದ.
ಆಗಲೇ ಅವನಿಗೆ ಒಂದು ಸಣ್ಣ ಮಗು ಅಳುವ ಶಬ್ದ ಕೇಳಿತು, ರಸ್ತೆಯ ಕೊನೆಯಲ್ಲಿ ಒಂದು ಮಗು ಅಳುತ್ತಿತ್ತು , ಅವನು ಮಗುವ ಬಳಿ ಹೋಗಿ "ಏನು ...ಯಾಕೆ ನೀ ಅಳುವುದು. ಮಗು ಅಳುತ " ಹಸಿವೆ ಆಗುತ್ತಿದೆ". ಮಗುವನ್ನು ನೋಡಿ ಅವನು " ಪಾಪ" ಎಂದು ಅವನು ಹೋಟೆಲ್ ಹೋಗಿ ತನ್ನಲ್ಲಿ ಇದ್ದ ೧೫ ರೂಪಾಯಿಯ ತಿಂಡಿ ತಂದು ಮಗುವಿಗೆ ಕೊಟ್ಟ.
ಹೆಂಡತಿ ಗಂಡನನ್ನು ಬರಿ ಕೈ ಬರುವುದನ್ನು ನೋಡಿ "ಎಲ್ಲಿ ಪ್ರಸಾದ ಎಲ್ಲಿ"??
ಗಂಡ " ಪ್ರಸಾದ ದೇವರಿಗೆ ಕೊಟ್ಟು ಬಂದೆ , ಬಾ ಇನ್ನು ಒಳಗೆ ಹೋಗಿ ದರ್ಶನ ಮಾಡೋಣ" ಎಂದು ಹೇಳಿ ನಕ್ಕ.
__________________
ಹೂವು
_______
ಅವನು ಬಹಳ ದೂರದಿಂದ ಹೆಂಡತಿ ಒಟ್ಟಿಗೆ ಶಿರಡಿಗೆ ಸಾಯಿ ಬಾಬಾರ  ದರ್ಶನಗೊಸ್ಕರ ಬಂದಿದ್ದ .ಅವರ ಆರ್ಥಿಕ ಸ್ಥಿತಿ ಅಷ್ಟು ಸರಿಯಾಗಿರಲಿಲ್ಲ ,  ದೇವಸ್ಥಾನದ ಅಂಗಡಿಯಲ್ಲಿ ಹೂವಿಗೆ ವಿಪರೀತ ಬೆಲೆ ಹೇಳುತ್ತಾರೆ ಎಂದು ಕೇಳಿದ ಅವನು  ತನ್ನ ಊರಿನ ಪೇಟೆಗೆ ನಡೆದು ಕೊಂಡು ಹೋಗಿ ತನ್ನಲ್ಲಿದ್ದ ೫ ರೂಪಾಯಿಯ ಹೂವು ಒಟ್ಟಿಗೆ ತಂದಿದ . 
ಅವನ ಹೆಂಡತಿ " ಏನೂ ನೀವು ಇಷ್ಟು ದೂರ ಹೋಗಿ ಹೂವು ತಂದಿದ್ದೀರಿ ,  ಅಲ್ಲಿ ಸಿಗುದಿಲ್ಲವೇ , ಎಂದು ಹೇಳಿ ನಕ್ಕಳು. 
ದೇವಸ್ಥಾನದಲ್ಲಿ  ತುಂಬಾ ಜನರು ದೊಡ್ಡ ದೊಡ್ಡ ಹೂವಿನ ಮಾಲೆ ಪ್ರಸಾದದ ಒಟ್ಟಿಗೆ ಸರದಿ ಸಾಲಲ್ಲಿ ನಿಂತಿದ್ದರು.
ಅರ್ಚಕರು ಎಲ್ಲ ಭಕ್ತರ ಹೂವಿನ ಮಾಲೆ ತೆಗೊಂಡು ಸಾಯಿ ಬಾಬಾರ  ವಿಗ್ರಹದ ಮುಂದೆ ಇದ್ದ ಸಮಾದಿಯ ಮೇಲೆ ಬಿಸಾಡುತ್ತಿದ್ದರು. ಅವನ ಹೆಂಡತಿ  "ಈ ದೊಡ್ಡ ದೊಡ್ಡ ಹೂವಿನ ಮಾಲೆ ಹೀಗೆ ಬಿಸಾಡುವಾಗ , ನೀವು  ತಂದಿದ ಮುಷ್ಠಿ ಹೂವಿನ ಗತಿ ಏನೋ" ಎಂದು ನಕ್ಕಳು.
ನೂಕು ದೂಡು ಸಹಿಸಿ ಅವರ ಸರದಿ ಬಂತು, ಆಶ್ಚರ್ಯವೆಂದರೆ ಅರ್ಚಕರು ಅವನ ಕೈಯಲ್ಲಿದ್ದ ಹೂವು ತೆಗೊಂಡು ಬಹಳ ಶ್ರದ್ದೆಯಿಂದ ಸಾಯಿ ಬಾಬಾರ ಪಾದದಲ್ಲಿ ಹೋಗಿ ಇಟ್ಟರು ಹಾಗು ಅಲ್ಲಿ ಇದ್ದ ಸಿಹಿ ಪ್ರಸಾದ ತಂದು ಅವನಿಗೆ ಕೊಟ್ಟು ಆಶಿರ್ವಾದಿಸಿದರು.
ಇದನ್ನು ನೋಡಿ ಹೆಂಡತಿಯ ಕಣ್ಣಿನಿಂದ ನೀರು ಸುರಿಯಲಾರಂಬಿಸಿತು,ದೇವರು ಇವರ ಭಕ್ತಿ ಮೆಚ್ಚಿದರಲ್ಲವೇ..... ಅವರು  ಶ್ರದ್ದೆಯಿಂದ ಸಾಯಿ ಬಾಬಾರಿಗೆ  ನಮಸ್ಕರಿಸಿ ಹೊರ ಬಂದರು.
______________________
ಆರತಿಯ ಪದ್ಧತಿ
__________
ಹೊಸ ಅರ್ಚಕ ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡ ತೊಡಗಿದ. ಇದನ್ನು ಗಮಿನಿಸಿದ ಹಳೆಯ ಅರ್ಚಕ ಪೂಜೆ ಆದ ನಂತರ ಹೊಸ ಅರ್ಚಕನಲ್ಲಿಗೆ ಬಂದು " ನೋಡು ನೀನು ದೇವರ ಮುಂದೆ ನಿಂತು ಆರತಿ ಮಾಡಬಾರದು  , ಇದು ಸರಿ ಅಲ್ಲ, ಯಾವಾಗಲು ನಾವು ದೇವರ ವಿಗ್ರಹದ ಬದಿಯಲ್ಲಿ ನಿಂತು ಆರತಿ ಮಾಡ ಬೇಕು, ಇದರಿಂದ ದೇವರಿಗೆ ಬರಲು ಹಾದಿ ಸುಗಮವಾಗುತ್ತದೆ.
ಇದನ್ನು ಕೇಳಿ ಹೊಸ ಅರ್ಚಕ "ಸ್ವಾಮಿ, ದೇವರು ನನ್ನ ಹೃದಯದಲ್ಲಿ ವಾಸವಾಗಿದ್ದಾರೆ, ದೇವರು ಸುಲಭವಾಗಿ ನನ್ನ ಹೃದಯದಿಂದ ಈ ವಿಗ್ರಹಕ್ಕೆ ಸೇರಿ ನನ್ನ ಪೂಜೆ ಬೇಗ ಸ್ವೀಕರಿಸಲೆಂದು ನಾನು ದೇವರ ವಿಗ್ರಹದ ಮುಂದೆ ನಿಂತು ಆರತಿ ಮಾಡುವುದು" ಎಂದು ಉತ್ತರಿಸಿದ.
by ಹರೀಶ್ ಶೆಟ್ಟಿ, ಶಿರ್ವ

Wednesday, 28 December, 2011

ಕೊರತೆ

ಪ್ರೀತಿಸಿ ಅವಳನ್ನು ಬರೆದೆ ಅನೇಕ ಕವನ , ಕಥೆ
"ಪ್ರೀತಿಸುವೆ" ಎಂದು ಅವಳಿಗೆ ಹೇಳಲು ಹೋದಾಗ
ಉಂಟಾಯಿತು ಪದಗಳ ಕೊರತೆ
by ಹರೀಶ್ ಶೆಟ್ಟಿ, ಶಿರ್ವ

ನಿನ್ನದೆ

ನೀ ಬಿಟ್ಟು ಹೋಗಿ ಕಳೆದಿದೆ ಹಲವು ವರ್ಷಗಳು
ಆದರೆ ಹೃದಯದ ದ್ವಾರದಲಿ ಇಂದೂ ನಿನ್ನದೆ ಕಾವಲು

ಮಳೆಯಲ್ಲಿ ಒಟ್ಟಿಗೆ ನೆನೆದು ಉರುಳಿದವು ಬಹಳ ದಿನಗಳು 
ಆದರೆ ಮಳೆಯ ಹನಿಗಳಲ್ಲಿ ಇಂದೂ ನಿನ್ನದೆ ಪ್ರತಿಬಿಂಬಗಳು 

ನೀನಿಲ್ಲದೆ ಬಾಡಿದೆ ಇಂದು ಹೂದೋಟದ ಸುಮಗಳು
ಆದರೆ ಉದ್ಯಾನದಲ್ಲಿ ಇಂದೂ ನಿನ್ನದೆ ಸುಗಂಧಗಳು 

ಮಾಸಿ ಹೋಗಿದೆ ನಿದ್ದೆ ಇಲ್ಲದ ಆ ಅನೇಕ ರಾತ್ರಿಗಳು
ಆದರೆ ರಾತ್ರಿಯ ನಕ್ಷತ್ರಗಳಲ್ಲಿ ಇಂದೂ ನಿನ್ನದೆ ರೂಪಗಳು
by ಹರೀಶ್ ಶೆಟ್ಟಿ ,ಶಿರ್ವ 

Saturday, 24 December, 2011

ಕನಸಲ್ಲಿ ಸಂತ ಕ್ಲೋಸ್

ಒಂದು ಮಗು ಚರ್ಚ್ ಗೆ ಬಂದ, ಚರ್ಚ್ ಲ್ಲಿ ತುಂಬಾ ಜನರಿದ್ದರು.
ಮಗು ಬಂದು ಪಾದ್ರಿ ಹತ್ತಿರ ಕೇಳಿದ"ಫಾದರ್ ....ನನಗೆ ಸಂತ ಕ್ಲೋಸ್ ಅವರನ್ನು ಬೇಟಿ ಮಾಡಲಿಕ್ಕೆ ಇದೆ ".
ಪಾದ್ರಿ ಚರ್ಚ್ ಲ್ಲಿ ತುಂಬಾ ಜನರು ಇದ್ದುದ್ದನ್ನು ಕಂಡು : "ಮಗು ....ಅವರು ನಿನ್ನ ಕನಸಲ್ಲಿ ಬರುತ್ತಾರೆ, ಈಗ ನೀನು ಹೋಗು" ಎಂದು ಹೇಳಿ ಅವನನ್ನು ರವಾನಿಸಿದರು.
ಆ ಮಗು ಪುನಃ ಮರುದಿನ ಚರ್ಚ್ ಬಂದ.
ಪಾದ್ರಿ ಅವನಿಗೆ:" ಸಂತ ಬಂದಾರ ಕನಸಲಿ "?.
ಮಗು : ಹೌದು ಅವರು ಬಂದಿದ್ದರು , ಅವರು ನಿಮ್ಮ ಹತ್ತಿರ ೫೦೦೦೦ ರೂಪಾಯಿ ತೆಗೆದು ಕೊಳ್ಳಬೇಕೆಂದು ಹೇಳಿದ್ದಾರೆ " .
ಈಗ ಪಾದ್ರಿಗೆ ಏನು ಮಾಡ ಬೇಕೆಂದು ಅರ್ಥ ಆಗಲಿಲ್ಲ .
ಹಣ ಕೊಡದ್ದಿದ್ದರೆ ಅವರು ಮಗುವಿಗೆ ಹೀಗೆಯೇ ಲುಭಾಯಿಸಿದು ಎಂದು ಬಯಲಾಗುತ್ತದೆ ಹಾಗು ಎಲ್ಲರ ಎದುರು ಫಜೀತಿ ಆಗುತ್ತದೆ.
ಹಣ ಕೊಟ್ಟರೆ ಅವರ ಹೇಳಿದ ಮಾತಿನ ಮಾನ ಉಳಿಯುತ್ತದೆ.
ಅವರು ಸುಮ್ಮನೆ ಒಳಗೆ ಹೋಗಿ ೫೦೦೦೦ ರುಪಾಯಿ ತಂದು ಮಗುವಿನ ಕೈಯಲ್ಲಿ ಇಟ್ಟರು. ಮಗು ನಗು ನಗುತಲೇ ಅಲ್ಲಿಂದ ಹೋದ.
by ಹರೀಶ್ ಶೆಟ್ಟಿ, ಶಿರ್ವ

Friday, 23 December, 2011

ಶುಭ ಮುಂಜಾನೆ

ಮುಂಜಾನೆಯ ಸೂರ್ಯ ಇಂದು ನಗುತ್ತಿದೆ
ತನ್ನ ಅಪ್ಪಟ ಕಿರಣವನ್ನು ವ್ಯಾಪಕವಾಗಿ ಬೀರುತ್ತಿದೆ

ಮಂಜಿನ ಹನಿಗಳು ಕರಗುತ್ತಿದೆ
ಹೂವುಗಳು ಅರಳುತ್ತಿದೆ
ಹಕ್ಕಿಗಳ ಚಿಲಿಪಿಲಿ ಕೇಳುತ್ತಿದೆ
ಚಿಟ್ಟೆಗಳು ನಲಿಯುತ್ತಿದೆ

ಕೋಗಿಲೆ ಹಾಡು ಹಾಡುತ್ತಿದೆ
ದುಂಬಿಯ ಝೇಂಕಾರ ಕೇಳುತ್ತಿದೆ

ರೈತನ ನೇಗಿಲು ಚಲಿಸುತ್ತಿದೆ
ಮಣ್ಣಿನ ಸುಗಂಧ ಹರಡುತ್ತಿದೆ

ಶುಭ ಮುಂಜಾನೆ......
by ಹರೀಶ್ ಶೆಟ್ಟಿ, ಶಿರ್ವ

Thursday, 22 December, 2011

ಗಲ್ಲು ಹಾಗು ಇತರ ಕಥೆಗಳು

ಗಲ್ಲು
____
ಅವನು ಅನೇಕ ಕೊಲೆ ಮಾಡಿದ ಕೊಲೆಗಾರ.
ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.
 ಗಲ್ಲಿಗೆ ಏರಿಸುವಾಗ ಅವನ ಹತ್ತಿರ ಕೇಳಲಾಯಿತು  "ಇಂದು ನಿನ್ನ ಜೀವನದ ಅಂತಿಮ ದಿವಸ, ನಿನಗೆ ಏನು ಹೇಳಲಿದೆಯೇ ?
ಅವನು ಹೇಳಿದ "ನಾನು ಮೊದಲ ಕೊಲೆ ಮಾಡಿದ ದಿನವೇ ನಾನು ಸತ್ತಿದೆ, ಈಗ ನೀವು ಗಲ್ಲಿಗೆ ಏರಿಸುವುದು ನನ್ನ ಶರೀರವನ್ನು ಮಾತ್ರ " .
________________________
ಅಪರಾಧ
________
ಅವನ ಅಪರಾಧ ಸಾಬೀತಾಯಿತು.
ಯಾರೋ ಅವನಿಗೆ ಕೇಳಿದರು.
"ನೀನು ಮಾಡಿದ ಅಪರಾಧ ಏನು ?
ಅವನು " ನನ್ನ ಅಪರಾಧ ನ್ಯಾಯಾಲಯದಲ್ಲಿ ಸತ್ಯ ಹೇಳಿದ್ದು" 
_________________________
ವಂಚಕ
______
ಅವನು ವಂಚಕ .
ಅವನು ಜನರನ್ನು ತನ್ನ ಜಾಣತನದಿಂದ ವಂಚಿಸಿ ಇಡಿ ಜೀವನ ಸಾಗಿಸಿದ.
ಈಗ ಅವನು ಮುದುಕ.
ಯಾರೋ ಅವನಿಗೆ ಕೇಳಿದರು.
"ನೀನು ನಿನ್ನ ಈ ಜಾಣತನವನ್ನು ಒಳ್ಳೆ ಕೆಲಸಕ್ಕೆ ಯಾಕೆ ಉಪಯೋಗಿಸಲಿಲ್ಲ "
ಅದಕ್ಕೆ ಅವನು ನಗುತ ಹೇಳಿದ  " ಮೊದಲು ನಾನು ಒಳ್ಳೆ ಕೆಲಸ ಮಾಡಲು ಹೋಗಿದ್ದೆ,  ಜನರು ನಾನು ಅವರಿಗೆ ಮೋಸ  ಮಾದುತ್ತಿದೇನೆ ಎಂದು ತಿಳಿದು ನನ್ನನ್ನು ತಿರಸ್ಕರಿಸಿದರು ".
______________________
ಕಪಟ
________
ಅವನು ಕಪಟಿ .
ಅವನ ಕಪಟತನ ಜನರ ಮುಂದೆ ಬಹಿರಂಗ ವಾಯಿತು.
ಯಾರೋ ಅವನಿಗೆ ಕೇಳಿದರು.
"ನಿನ್ನ ಈ ಕಪಟತನದಿಂದ ಎಷ್ಟೋ ಜನರನ್ನು ಮೂರ್ಖ ಮಾಡಿದಿ ಅಲ್ಲವೇ "
ಅವನು " ನಾನು ಮೂರ್ಖ ಮಾಡಿದು ಅಲ್ಲ ಅವರೇ ಮೂರ್ಖರಾದದ್ದು".
by  ಹರೀಶ್ ಶೆಟ್ಟಿ, ಶಿರ್ವ

ಅವಳ ಹೆಜ್ಜೆ

ಅವಳ ಹೆಜ್ಜೆ ಪಾವನ
ಬಂದ ಕೂಡಲೇ
ಮನೆ ಆಯಿತು ದೇವಾಲಯ ಸಮಾನ
by ಹರೀಶ್ ಶೆಟ್ಟಿ, ಶಿರ್ವ

Wednesday, 21 December, 2011

ಅವಳ ಆಗಮನ

ಬೆಳಕೇ ಇಂದು ನೀ ತುಂಬಾ ಬೆಳಗುತ್ತಿದ್ದಿ
ಇದು ಸ್ವಾಭಾವಿಕವೆ .....ಅಥವಾ
ನಿನಗೆ ಅವಳ ಆಗಮನದ ಸಂತೋಷವೇ
by ಹರೀಶ್ ಶೆಟ್ಟಿ, ಶಿರ್ವ

ಅವಳು ಬರುವ ಸುದ್ದಿ

ಅವಳು ಬರುವ ಸುದ್ದಿ ಕೇಳಿ
ಸೂರ್ಯ ಇಂದು ನಗುತ್ತಲೇ ಮುಳುಗುತ್ತಿದ್ದಾನೆ
ನಾಳೆ ಅವಳ ಮುಖ ಕಾಣಲಿದೆ ಎಂದು.....
by ಹರೀಶ್ ಶೆಟ್ಟಿ, ಶಿರ್ವ

ಅವಳ ಉಪಸ್ಥಿತಿ

ಅಡುಗೆ ಮನೆಯಲ್ಲಿ ಶಾಂತತೆ.......
ಆದರೆ ಅವಳ ಉಪಸ್ಥಿತಿ ಇಲ್ಲದೆ ಉಪಸ್ಥಿತಿ.....
by ಹರೀಶ್ ಶೆಟ್ಟಿ, ಶಿರ್ವ

Tuesday, 20 December, 2011

ಸಂದೇಶ

ಹಾರಾಡುವ ಪಕ್ಷಿಯೇ
ನನ್ನ ಸಂದೇಶ ಅವಳಿಗೆ ಹೋಗಿ ಕೊಡು
ಮರಳಿ ಬಾ ಎಂದು ನನ್ನ ಪರವಾಗಿ ಬೇಡು
by ಹರೀಶ್ ಶೆಟ್ಟಿ, ಶಿರ್ವ

ದೀಪಾವಳಿ

ಈಗ ಹಬ್ಬದ ಇಲ್ಲ ಆಸಕ್ತಿ ನನ್ನ ಬಳಿ
ನೀ ಮರಳಿ ಬಂದ ದಿನವೇ ಆಚರಿಸುವೆ ದೀಪಾವಳಿ
by ಹರೀಶ್ ಶೆಟ್ಟಿ, ಶಿರ್ವ

Monday, 19 December, 2011

ಮಂದಹಾಸ

ಅಳಿಸಲಾಗದ ನೆನಪು
ನನ್ನ ಮೇಲೆ ಮಂದಹಾಸ ಬೀರುತ್ತಿದೆ.
by ಹರೀಶ್ ಶೆಟ್ಟಿ, ಶಿರ್ವ

ರೇಸ್ ಕೋರ್ಸ್ ಹಾಗು ಇತರ ಕಥೆಗಳು

ರೇಸ್ ಕೋರ್ಸ್
_________
ರೇಸ್ ಕೋರ್ಸ್ ಲ್ಲಿ ಕುದುರೆಗಳು ಓಡುತ್ತಿದ್ದವು.
ಒಬ್ಬ ಅವನಲ್ಲಿಗೆ ಬಂದು ಕೇಳಿದ " ನಿಮ್ಮ ಬಾಜಿ ಯಾವ ಕುದುರೆಯ ಮೇಲೆ ".
ಅವನು "ನನ್ನ ಬಾಜಿ ಕುದುರೆಯ ಮೇಲೆ ಅಲ್ಲ .......ನನ್ನ ಬಾಜಿ ನನ್ನ ಜೀವನದ ಮೇಲೆ " ಎಂದು ಉತ್ತರಿಸಿದ.
__________
ಮುಷ್ಟಿಯುದ್ಧ
__________
ಮಗ ಮುಷ್ಟಿಯುದ್ಧ ಆಡಿ ಮನೆಗೆ ಬಂದ.
ಮನೆಯಲ್ಲಿ ತಂದೆ ತಾಯಿ ಜಗಳ ಮಾಡುತ್ತಿದ್ದರು. ಮಗನನ್ನು ನೋಡಿ ತಾಯಿ "ಮಗ....ಮುಗಿಸಿ ಬಂದೆಯಾ"
ಮಗ "ಹೌದು ....ನಾನು ಮುಗಿಸಿ ಬಂದೆ, ಇಲ್ಲಿ ನಿಮ್ಮ ಶುರು ಆಗಿದೆ ಅಲ್ಲ " ಎಂದು ಉತ್ತರಿಸಿದ.
____________
ಜೂಜು
____________
ಅವನು ಜೂಜು ಆಡಿ ಎಲ್ಲ ಸೋತ.
ಎದುರು ಗೆದ್ದ ಮನುಷ್ಯ ಜಂಬದಿಂದ "ಹ ಹಃ ಹ .....ಇನ್ನೂ ಏನು ಇಲ್ಲ ನಿನ್ನಲ್ಲಿ ಸೋಲಲು" ಎಂದು ಹೇಳಿದ.
ಅವನು ಶಾಂತಿಯಿಂದ  "ಹೌದು....ನನ್ನಲ್ಲಿ ಏನೂ ಇಲ್ಲ ಸೋಲಲು ....ಆದರೆ ನಿನ್ನಲ್ಲಿ ತುಂಬಾ ಇದೆ ಸೋಲಲು" ಎಂದು ಉತ್ತರಿಸಿದ.
_____________
ಹಾಸ್ಯಗಾರ
_________
ಒಬ್ಬ ಹಾಸ್ಯಗಾರ ಮರಣ ಶೋಕ ಸಭೆಗೆ ಹೋದ.
ಅಲ್ಲಿ ಎಲ್ಲರೂ ಮಂಕು ಮುಖ ಮಾಡಿ ಕೂತು ಕೊಂಡಿದ್ದರು.
ಹಾಸ್ಯಗಾರನನ್ನು ನೋಡಿ ಮೃತನ ಮಗ ಅವನಲ್ಲಿಗೆ ಬಂದು " ದಯಮಾಡಿ ಇಂದೂ ಸ್ವಲ್ಪ ನೀವು ಗಂಭೀರ ವಾಗಿರಿ" ಎಂದು ಹೇಳಿದ.
ಹಾಸ್ಯಗಾರ "ಚಿಂತೆ ಬೇಡ ಮಾನ್ಯರೇ ......ಇಂದೂ ನಾನು ಹಾಸ್ಯಗಾರನಲ್ಲ, ಇಂದೂ ಇಲ್ಲಿ ಕುಳಿತು ಕೊಂಡವರೆಲ್ಲ ಹಾಸ್ಯಗಾರರು" ಎಂದು ಉತ್ತರಿಸಿದ.
____________
ದೊಡ್ಡ ಕಳ್ಳ
________
ಒಬ್ಬ ಕಳ್ಳ ತಾನು ಕದ್ದ ಎಲ್ಲ ವಸ್ತುಗಳನ್ನು ಮಾರಲು ಒಬ್ಬ ವ್ಯಾಪರಿಯಲ್ಲಿಗೆ ಬಂದ.
ವ್ಯಾಪಾರಿ ಅವನು ತಂದ ವಸ್ತುಗಳನೆಲ್ಲ ನೋಡಿ ಅದರ ಮೂಲ್ಯ ಕಡಿಮೆ ಅಂಕಿಸಿ "ನೀನು ಕಳ್ಳ ತಾನೇ.....ಕದ್ದ ವಸ್ತುವಿಗೆ ಬೆಲೆ ಇಷ್ಟೆ " ಎಂದು ಹೇಳಿದ.
ಇದನ್ನು ಕೇಳಿ ಕಳ್ಳ " ಹೌದು....ನಾನು ಕಳ್ಳ , ಆದರೆ ನಿನ್ನಷ್ಟು ದೊಡ್ಡ ಕಳ್ಳನಲ್ಲ " ಎಂದು ಉತ್ತರಿಸಿದ.
by ಹರೀಶ್ ಶೆಟ್ಟಿ, ಶಿರ್ವ 

Sunday, 18 December, 2011

ಅವಳಿಲ್ಲವೆಂದು

ಹಾಸಿಗೆಯಿಂದ ಎದ್ದೇಳುವ ಮನಸ್ಸಿಲ್ಲ
ನಿದ್ದೆ, ಆಲಸ್ಯವೆಂದಲ್ಲ .......ಅವಳಿಲ್ಲವೆಂದು......
by ಹರೀಶ್ ಶೆಟ್ಟಿ, ಶಿರ್ವ

ನಿದ್ದೆ ನನ್ನ ವೈರಿ

ಅವಳಿಲ್ಲದೆ...
ಈಗ ನಿದ್ದೆ ನನ್ನ ವೈರಿ
ಚಂದಿರ ನನ್ನ ಆಪ್ತ
ನಕ್ಷತ್ರಗಳು ನನ್ನ ಗೆಳೆಯರು
by ಹರೀಶ್ ಶೆಟ್ಟಿ, ಶಿರ್ವ  

ಬಂಧಿಖಾನೆ

ಒಪ್ಪಿಗೆ ಇಲ್ಲದೆ ಬಿಡಲಾರೆ ತಂದೆ ತಾಯಿಯ ಮನೆ
ನನಗೆ ಬೇಡ ಆ ಪ್ರೀತಿಯ ಅರಮನೆ
ಅವರ ಆಶೀರ್ವಾದ ಇಲ್ಲದ ಜೀವನ ಬಂಧಿಖಾನೆ
by ಹರೀಶ್ ಶೆಟ್ಟಿ, ಶಿರ್ವ

Saturday, 17 December, 2011

ಅವಳಿಲ್ಲವೇ ?

ಕಿಟಕಿಯಲ್ಲಿ ಬಂದು ಕುಳಿತ ಪಕ್ಷಿ
ಬೇಸರದಿಂದ ಕೇಳಿತು.....ಅವಳಿಲ್ಲವೇ ?
by ಹರೀಶ್ ಶೆಟ್ಟಿ, ಶಿರ್ವ

ಕನ್ನಡಿ

ಕನ್ನಡಿ ನೀನೇಕೆ ಸತ್ಯವಾದಿ.?
ನನ್ನ ನೋವನ್ನು ಅಡಗಿಸ ಬಾರದೆ......
by ಹರೀಶ್ ಶೆಟ್ಟಿ, ಶಿರ್ವ

ಅಶ್ರು ಧಾರೆ

ಅವಳ ಒಂದು ಅಶ್ರು ಧಾರೆಯಿಂದ
ನನ್ನಲ್ಲಿ ತುಂಬಿದ ಕೋಪದ ಜ್ವಾಲೆ ತಣ್ಣಗಾಯಿತು
by  ಹರೀಶ್ ಶೆಟ್ಟಿ, ಶಿರ್ವ

Friday, 16 December, 2011

ದೋಷಿ

ನಲ್ಲೆ ನಾ ಬಲ್ಲೆ ......
ನೀನಲ್ಲ.... ನಾನು ನಿನ್ನ ದೋಷಿಯೆಂದು
ಆದರೆ ನಮ್ಮ ಈ ಬಂಧ ಜನ್ಮ ಜನ್ಮದ ಅಲ್ಲವೇ.........
by ಹರೀಶ್ ಶೆಟ್ಟಿ, ಶಿರ್ವ

ಬೆಳಗುವ ದೀಪ

ಬೆಳಗುವ ದೀಪಗಳಿಗೆ ಗೊತ್ತಿಲ್ಲ
ಬೆಳಗುವುದು ನನ್ನ ಜೀವನ ಅವಳಿಂದಲೇ ಎಂದು......
by ಹರೀಶ್ ಶೆಟಿ, ಶಿರ್ವ

Thursday, 15 December, 2011

ಸೂರ್ಯನ ಕಿರಣ

ಸೂರ್ಯನ ಕಿರಣಗಳು ಕೇಳುತ್ತಿದೆ ನನ್ನಿಂದ
ದಿನಾಲೂ ನನ್ನನ್ನು ಪೂಜಿಸಿ ಸ್ವಾಗತ ಮಾಡುವವಳು ಎಲ್ಲಿದ್ದಾಳೆಂದು ?
by ಹರೀಶ್ ಶೆಟ್ಟಿ, ಶಿರ್ವ

ಸಂಚಾರ

ನಿನ್ನ ಪ್ರೀತಿಯ ಪ್ರವಾಸವಿಲ್ಲದೆ
ನನ್ನ ಹೃದಯ ಮಾರ್ಗದಲ್ಲಿ ಕೇವಲ ದುಃಖದ ಸಂಚಾರ...
by ಹರೀಶ್ ಶೆಟ್ಟಿ, ಶಿರ್ವ

ಪ್ರೀತಿಯ ಅನುಬಂಧ

ಕಬ್ಬಿಣಕ್ಕೆ ತುಕ್ಕು ಹಿಡಿದಂತೆ 
ಆಗಿದೆ ಈಗ ನಮ್ಮ ಪ್ರೀತಿಯ ಸಂಬಂಧ
ಬೇಗ ಒಪ್ಪಂದದ ಎಣ್ಣೆ ಹಚ್ಚು ಪ್ರಿಯೆ
ಇಲ್ಲದಿದ್ದರೆ ಮುರಿಯುವುದು ನಮ್ಮ ಈ ಪ್ರೀತಿಯ ಅನುಬಂಧ....
by ಹರೀಶ್ ಶೆಟ್ಟಿ, ಶಿರ್ವ

Wednesday, 14 December, 2011

ದೇವರ ಭಜನೆ

ಅವಳಿಲ್ಲದೆ ......
ಮುಂಜಾನೆ ಕೇಳುದಿಲ್ಲ ದೇವರ ಭಜನೆ
ಸೂರ್ಯ ಮೂಡಿದರು ಕತ್ತಲೆ ಮನೆ
by ಹರೀಶ್ ಶೆಟ್ಟಿ, ಶಿರ್ವ

ಕಾಂತಿ

ಆಕಾಶದಲಿ ಮಿನುಗುವ ನಕ್ಷತ್ರಗಳಲ್ಲಿ ಹುಡುಕುತ್ತಿದ್ದೇನೆ
ಅವಳ ಸುಂದರ ಮುಖದಲ್ಲಿ ಕಾಣುತ್ತಿದ್ದ ಕಾಂತಿ
by ಹರೀಶ್ ಶೆಟ್ಟಿ, ಶಿರ್ವ

ಸಾಲ , ಪ್ರೀತಿ, ಕನಸು

ಸಾಲ..
ಮೆಲ್ಲನೆ ಕೊಲ್ಲುವ ವಿಷ
ಪ್ರೀತಿ..
ಗೆದ್ದು ಸೋಲುವ ಆಟ
ಕನಸು..
ಮನಸ್ಸಿನ ಇಚ್ಚೆಯ ಸ್ವರೂಪ
by ಹರೀಶ್ ಶೆಟ್ಟಿ, ಶಿರ್ವ

ನಗುವ ಪರಿ

ಈ ನಿನ್ನ ನಗುವ ಪರಿ
ನಿನ್ನ ಮನಸ್ಸಿನ ವೇದನೆ ಅಡಗಿಸಲೆಂದೇ ?
by ಹರೀಶ್ ಶೆಟ್ಟಿ, ಶಿರ್ವ

ಬೇವು ಮರ

ಬೇವಿನ ಮರದಂತೆ ನೀನಾದೆ ?
ಅದರ ಎಲೆಯಂತೆ
ನಿನ್ನ ಸ್ವಭಾವವು ಕಹಿಯೆಂದು ಗೊತ್ತು
ಆದರೆ ಅದರಲ್ಲಿ ಎಲ್ಲರ ಹಿತ ಅಡಗಿತ್ತು

ಬೇವು ಮರ ಬೀರುವ ತಂಗಾಳಿಯಿಂದ
ಅನೇಕರು ರೋಗ ಮುಕ್ತರಾದಂತೆ
ನಿನ್ನ ಪ್ರೇರಣೆಯಿಂದ ಅನೇಕ ಯುವ ಕವಿ ಹುಟ್ಟಿದರು
ಆದರೆ ನಿನ್ನನ್ನೇ ಕಹಿ ಎಂದು ದೂರಿದರು

ಬೇವು ನೀಡುವ ಆರೋಗ್ಯದಂತೆ
ನಿನ್ನಿಂದ ಹಲವರು ಜ್ಞಾನ ಪಡೆದರು
ಹಲವು ಅಯೋಗ್ಯರು ಆದರು ಯೋಗ್ಯ
ಆದರೆ ಕಹಿಯೇ ನಿನ್ನ ಭಾಗ್ಯ

ತನ್ನ ಸರ್ವಸ್ವ ನೀಡಿದ
ನೀ ಒಣಗಿದ ಮರವಾಗಿ ಉಳಿದೆ
ಎಲ್ಲಿಂದ ಪಡೆಯಲಿ ನಿನ್ನಿಂದ ಸಿಗುವ ಲಾಭ
ನಿನ್ನನ್ನು ಮರೆಯುವುದು ಅಷ್ಟಲ್ಲ ಸುಲಭ
by ಹರೀಶ್ ಶೆಟ್ಟಿ, ಶಿರ್ವ

Tuesday, 13 December, 2011

ನೀ ಹೋದ ನಂತರ

ನೀ ಹೋದ ನಂತರವೂ
ಖಾಲಿ ಇಲ್ಲ ಈ ಮನೆ
ಬಾಡಿ ಹೋದ ಮಲ್ಲಿಗೆಯಲ್ಲೂ
ನಿನ್ನದೆ ಸುವಾಸನೆ
by ಹರೀಶ್ ಶೆಟ್ಟಿ, ಶಿರ್ವ

ಅಮ್ಮ

"ಅಮ್ಮ"
ಒಂಬತ್ತು ತಿಂಗಳು ಹೊಟ್ಟೆಯಲ್ಲಿ ನಿನ್ನನ್ನು ಹೊತ್ತು ನೋವು ಪಡೆದೆ
ನಿನ್ನನ್ನು ಸಾಕಿ ಬೆಳೆಸಿ ಮನುಷ್ಯನಾಗಿ ಮಾಡಲು ಅನೇಕ ಕಷ್ಟ ಪಡೆದೆ
ಮದುವೆ ಆದ ಕೂಡಲೇ ನೀನು ನನ್ನನ್ನು  ಬಿಟ್ಟು ಹೊರಟು ಹೋದೆ
______________________
ಒಂಬತ್ತು ತಿಂಗಳು ನಿನ್ನನ್ನು ಹೊತ್ತ ಭಾರ
ನೀನು ಬಿಟ್ಟು ಹೋದ ಈ ಕ್ಷಣಕ್ಕಿಂತ ಹಗುರವಾಗಿತ್ತು
______________________
ನಿನಗೆ ನೋವಾದಾಗ "ಅಮ್ಮ" ಎಂದು ಕರೆ ಕಂದಾ
ನಿನ್ನ ಸ್ವಪ್ನದಲಿ ಬಂದು ನಿನ್ನ ನೋವು ದೂರ ಮಾಡುವೆ
_______________________
ನೀ ಆಟಿಕೆಯಿಂದ ಆಡುವುದನ್ನು ಕಂಡು ನನಗೆ ಸಂತೋಷವಾಗುತ್ತಿತ್ತು
ಇಂದೂ ನೀ ಬಿಟ್ಟು ಹೋದ ನಿನ್ನ ಆಟಿಕೆ ಕಂಡು ನನಗೆ ದುಃಖವಾಗುತ್ತಿದೆ
by ಹರೀಶ್ ಶೆಟ್ಟಿ, ಶಿರ್ವ

Monday, 12 December, 2011

ನುಡಿ ಮುತ್ತು

ಜನರು ಸ್ವತಃ ಬೇರೆಯವರ ಪ್ರತಿ ತನ್ನದೇ ಆದ ತಪ್ಪು ಧಾರಣೆ ಮಾಡಿಕೊಳ್ಳುತ್ತಾರೆ ಹಾಗು ಅವರನ್ನು ನಿರ್ಲಕ್ಷಿಸಿ ಒಬ್ಬ ಒಳ್ಳೆಯ ವ್ಯಕ್ತಿಯ ಮೈತ್ರಿಯನ್ನು ಕಳೆದು ಕೊಳ್ಳುತ್ತಾರೆ......
by ಹರೀಶ್ ಶೆಟ್ಟಿ , ಶಿರ್ವ
____________________
ಭಾಷಾ ರಾಜನೀತಿ ಮಾಡಿ ಈ ಅಖಂಡ ಭಾರತವನ್ನು ವಿಭಾಗಿಸಲು ಪ್ರಯತ್ನಿಸುವುದು ಸರಿಯಲ್ಲ ........ಭಾಷಾ ಅಭಿಮಾನ ಇರಲಿ .........ಆದರೆ ಬೇರೆ ಭಾಷೆಯ ಪ್ರತಿ ಗೌರವವು ಇರಲಿ ....
by ಹರೀಶ್ ಶೆಟ್ಟಿ , ಶಿರ್ವ 

Sunday, 11 December, 2011

ಮೌನ

ನೀನೂ ಮೌನ
ನಾನೂ ಮೌನ
ಮಾತನಾಡುತ್ತಿದೆ ನಯನ
___________
ನನ್ನಿಂದ ಕೋಪವಾಗಿ ನೀನಾದೆ ಮೌನ
ಈಗ ಅಮೃತವೂ ನನಗೆ ವಿಷ ಸಮಾನ
by ಹರೀಶ್ ಶೆಟ್ಟಿ, ಶಿರ್ವ

ಮುಂಜಾನೆಯ ಜಾವ

ಮುಂಜಾನೆಯ ಜಾವದಲಿ
ಬಾನಲ್ಲಿ ಒಂದು ಕೆಂಪು ಚೆಂಡು
ಮುದುಡಿ ಮಲಗಿದ
ಹೂಗಳ ಮೇಲೆ ಮಂಜಿನ ಬಿಂದು

ಗೂಡಲ್ಲಿದ್ದ ಪುಟ್ಟ ಹಕ್ಕಿ ಮರಿಗಳ
ಪ್ರಥಮ ಹಾರಾಟ ಆ ಚೆಂಡು ಹಿಡಿಯಲೆಂದು
ಶಾಂತ ವಾತಾವರಣದಲಿ
ಹರಡಿತು ಹಕ್ಕಿಗಳ ಮಧುರ ಸ್ವರ ಚಿಲಿಪಿಲಿಯೆಂದು

ಹಸಿರು ಹುಲ್ಲುಗಳು
ನಲಿಯಲಾರಂಭಿಸಿದೆ  ಪ್ರಫುಲಿತಗೊಂಡು
ದುಂಬಿಯ ಝೇಂಕಾರ
ಕೇಳುತಿದೆ ಆಹಾರ ಸಿಗಲಿದೆ ಎಂದು
by ಹರೀಶ್ ಶೆಟ್ಟಿ, ಶಿರ್ವ

Saturday, 10 December, 2011

ನೆನಪು


"ನೆನಪು" ನಿನ್ನನ್ನು ಮನಸ್ಸಿನ ಕೋಣೆಯಲಿ ಅಡಗಿಸಲು ಪ್ರಯತ್ನಿಸಿದೆ
ಏಕಾಂತದಲಿ ನೀ ಹೇಳದೆ ಕೇಳದೆ ಮರಳಿ ಬಂದೆ.....
______________
ಹೃದಯ ದುಃಖದ ಸಾಗರದಲಿ ಮುಳುಗಿ ಹೋಯಿತು
ಆದರೆ "ನೆನಪಿನ" ದೋಣಿ ಸಾಗುತ್ತಲೇ ಇತ್ತು
_________________
"ನೆನಪು" ನೀ ಕರೆಯದ ಅತಿಥಿಯ ಹಾಗೆ 
ಹೇಳದೆ ಕೇಳದೆ ಬಂದು ಕೊಡುವುದು ಅನೇಕ ಸಿಹಿ ಕಹಿ ನೋವುಗಳು
_________________
"ನೆನಪು" ನಿನ್ನ ಓಟ ಅಂತ್ಯವಿಲ್ಲದ
ನಿನ್ನನ್ನು ತಡೆಯುವ ,ಮರೆಯುವ ಪ್ರಯತ್ನ ವ್ಯರ್ಥದ
by ಹರೀಶ್ ಶೆಟ್ಟಿ, ಶಿರ್ವ

Friday, 9 December, 2011

ಪ್ರೇಮ

ಪ್ರೇಮಿಯೊಬ್ಬ ಪ್ರೇಮದಲ್ಲಿ ಸೋತು ಮರಣಹೊಂದಿದ.
ಗೋರಿಯಲ್ಲಿ ಬರೆದಿತ್ತು.
"ಅಮರ  ಪ್ರೇಮ "
_________________
ಅವರು ಕತ್ತೆಯ ಮೇಲೆ ಪ್ರೇಮಿಯ ಸವಾರಿ ತೆಗೆದರು .
ಕತ್ತೆ  ಪ್ರೇಮಿಯನ್ನು ನೋಡಿ ಹೇಳಿತು.
"ನೀನೇಕೆ ಪ್ರೇಮದಲಿ ನಾನಾದೆ "
__________________
ಪ್ರೇಮದ ಅರ್ಥ ಹೇಳಿ ಎಂದು ಕೇಳಿದರು
ಅವನು ಒಂದೇ ಪದ ಹೇಳಿದ.
"ಅಮ್ಮ "
___________________
ಅವನು ಪ್ರೇಮದಲಿ ಸೋತು ಸನ್ಯಾಸಿ ಆಗಲು ಬಂದ.
ಗುರುಗಳು ಅವನಿಗೆ ಹೇಳಿದರು
"ಮೊದಲು ಪ್ರೇಮ ಗೆಲ್ಲು , ನಂತರ ಸನ್ಯಾಸಿ ಆಗಲು ಬಾ "
by ಹರೀಶ್ ಶೆಟ್ಟಿ, ಶಿರ್ವ

ಅವಳಿಲ್ಲದೆ

ಅವಳಿಲ್ಲದೆ ಮನೆ ಅಸ್ತವ್ಯಸ್ತ
ನಾನು ಸ್ವಸ್ಥವಾಗಿಯು ಅಸ್ವಸ್ಥ........
by ಹರೀಶ್ ಶೆಟ್ಟಿ, ಶಿರ್ವ

Thursday, 8 December, 2011

ಅಮ್ಮ

ಅವರು ಹೇಳುತ್ತಾರೆ ದೇವರಿಲ್ಲವೆಂದು...
ಹಾಗಾದರೆ "ಅಮ್ಮ" ಅಂದರೆ ಯಾರು ?
by ಹರೀಶ್ ಶೆಟ್ಟಿ, ಶಿರ್ವ

Wednesday, 7 December, 2011

ಮಾತು

ಮಾತು ಮಾತಿಗೆ ಮಾತು ಬೆಳೆಯಿತು
ವಿಷಯ ಅಲ್ಲಿಯೇ ಉಳಿಯಿತು......
by ಹರೀಶ್ ಶೆಟ್ಟಿ, ಶಿರ್ವ

ಕಡೆಗೆ

ಹುಟ್ಟು ನೀ ಅರಮನೆಯಲ್ಲಿ
ಹುಟ್ಟು ನೀ ಜೋಪಡಿಯಲ್ಲಿ
ಕಡೆಗೆ ಸೇರುವೆ ಮಣ್ಣಲಿ

ಎತ್ತರ ಕಟ್ಟಡ ಕಟ್ಟುವೆ ಅಲ್ಲಲ್ಲಿ
ಆಕಾಶ ಇರುವುದು ನಿನ್ನ ತಲೆಯಲಿ
ಕಡೆಗೆ ಮಲಗುವೆ ಆರು ಅಡಿಯ ಜಾಗದಲಿ
  
ತೇಲುತ್ತಲೇ ಇರುವಿ ನೀ ಕನಸಲಿ
ಮುಳುಗುವೆ ಅನೇಕ ಆಸೆಗಳಲ್ಲಿ
ಕಡೆಗೆ ಹೋಗುವೆ ಜಗದಿಂದ ಕೈ ಬಿಸಿ ಖಾಲಿ
by ಹರೀಶ್ ಶೆಟ್ಟಿ, ಶಿರ್ವ

Tuesday, 6 December, 2011

ಮಡೆಸ್ನಾನ

ಧರ್ಮದ ಒಂದು ಆಚರಣೆ
ದೇವರಿಗೆ ನೀಡುವ ಅರ್ಪಣೆ
ತನ್ನ ದುರಹಂಕಾರ, ಕೋಪ,ತಾಪ ತ್ಯಜಿಸಿ
ಎಂಜೆಲೆಲೆ ಮೇಲೆ ಉರುಳಿ
ತನ್ನ ಮನ ಶುದ್ದ ಮಾಡುವ ಕ್ರಿಯೆ, ಸಮಯೋಪಾಯ
ಏಕೆ ನಿಮಗೆ ಇದರಲ್ಲಿ ಅಡ್ಡಿ ,ತಕರಾರು, ಆಪತ್ತು  ?

ಇದು ಮಾಡಿದ ತಪ್ಪಿಗೆ ನೊಂದು
ತನ್ನ ಅಹಂಕಾರವನ್ನು ಕೊಂದು
ನಿಷ್ಕಪಟ ಮನಸ್ಸಿಂದ ಮಾಡುವ ಪ್ರಾಯಶ್ಚಿತ್ತ
ಇದು ಜನ ಸಾಮಾನ್ಯರು ಮಾಡುವ ತಪ್ಪಸ್ಸು
ದೈವ ಭಕ್ತರ ಪಾಪನಿವೇದನೆ
ಏಕೆ ನಿಮಗೆ ಇದರಿಂದ  ವೇಧನೆ ?

ಇದು ಆರ್ಥಿಕ, ದೈಹಿಕ ಹಾಗೂ ಮಾನಸಿಕ ಸ್ಥಿರತೆಕ್ಕಾಗಿ
ದೇವರಿಗೆ ಸಲ್ಲಿಸುವ ಒಂದು ಸೇವೆ
ಇದರಲಿಲ್ಲ ಏನೂ ತೊಂದರೆ ಲುಕ್ಸಾನು
ಇದನ್ನು ನೀಷೆದಿಸುವದರಿಂದ ನಿಮಗೇನು ಲಾಭ ?
ಅನೇಕ  ಕಾಲದಿಂದ  ನಡೆಯುತಿದೆ ಈ ಸಂಪ್ರದಾಯ
ಅದರಲ್ಲೇನಿದೆ ನಿಮಗೆ ಅಪಾಯ ?
by ಹರೀಶ್ ಶೆಟ್ಟಿ, ಶಿರ್ವ

ನಗು

ಈ ನಗು ನನ್ನ ಸ್ವಭಾವ ಅಲ್ಲ
ಇದು ನನ್ನ ದುಃಖ ಅಡಗಿಸುವ ವಿಧಾನ ಕೇವಲ
by ಹರೀಶ್ ಶೆಟ್ಟಿ, ಶಿರ್ವ

Friday, 2 December, 2011

ಹುಡಿಗಿಯರೇ ಸಾವಧಾನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಪ್ರೀತಿಯ ನೆಪದಲಿ
ಹುಡಿಗಿಯರನ್ನು ಮೋಸಿಸುವವರಿಗೆ ದಿಕ್ಕಾರ
ಹುಡುಗಿಯರನ್ನು ತಪ್ಪು ಮಾರ್ಗಕ್ಕೆ ದೂಡುವವರಿಗೆ ದಿಕ್ಕಾರ
ಹುಡುಗಿಯರೇ ಪ್ರೀತಿಯ ಬಲೆಗೆ ಸಿಕ್ಕಿ ಕೊಳ್ಳಬೇಡಿ
ಭಾವುಕತೆಯಲ್ಲಿ ತನ್ನ ಸರ್ವಸ್ವ ಕಳೆದು ಕೊಳ್ಳಬೇಡಿ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಪ್ರೀತಿಯಲ್ಲಿ ಮುಗ್ಧ ಬಾಲೆಯರನ್ನು ವಶಪಡಿಸಿ
ಅವರನ್ನು ತಪ್ಪು ದಾರಿಗೆ ಎಳೆದು
ದೈಹಿಕ ಶೋಷಣೆ ಮಾಡಿ
ಭಯೋತ್ಪಾದನೆ ಚಟುವಟಿಕೆಗಳಲ್ಲಿ ಬಳಸಿ
ವಂಚಿಸುವವರಿಂದ ಸಾವಧಾನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ

ಬೇಡ ಬೇಡ ಈ ಹಾಳು ಪ್ರೀತಿ
ಮರ್ಯಾದೆಯ ಇರಲಿ ಭೀತಿ
ಇದನ್ನು ಕಾಪಾಡುವುದೇ ನಮ್ಮ ರೀತಿ
ವಿಷಭರಿತ ಜಿಹಾದಿಯರಿಂದ ಸಾವಧಾನ
ಹೊಡೆದು ಆಚೆ ತಟ್ಟಿರಿ ಈ ಜಿಹಾದಿಯರನ್ನ

ಹುಡಿಗಿಯರೇ ಸಾವಧಾನ
ಪ್ರೀತಿಯಿಂದ ಸಾವಧಾನ
ಲವ್ ಜಿಹಾದ್ ಬಯಲಾಗಿದೆ
BY ಹರೀಶ್ ಶೆಟ್ಟಿ ,ಶಿರ್ವ

ಮಾರಾಟಕ್ಕಿದೆ

ಮಾರಾಟಕ್ಕಿದೆ ..........
ತುಂಡಾದ ಹೃದಯ 
ನನಸಾಗದ ಕನಸುಗಳು 
ನೊಂದ ಮನಸ್ಸು

ಮಾರಾಟಕ್ಕಿದೆ ........
ಮಾಸದ ನೆನಪುಗಳು 
ವಾಸಿ ಆಗದ ನೋವುಗಳು 
ಸೋತ ನಿರೀಕ್ಷೆಗಳು 

ಮಾರಾಟಕ್ಕಿದೆ .......
ಅಳುವ ಕವನಗಳು  
ಬರಹಗಳ ಹರಿದ ಹಾಳೆಗಳು   
ಭಾವನೆ ಹರಿಯದ ಪೆನ್ನುಗಳು

ಮಾರಾಟಕ್ಕಿದೆ ........
ಜೀವನದ ಸೋಲುಗಳು
ವ್ಯರ್ಥ ಪ್ರಯತ್ನಗಳು
ಮಾಡಿದ ತಪ್ಪುಗಳು
by ಹರೀಶ್ ಶೆಟ್ಟಿ, ಶಿರ್ವ  
  

Thursday, 1 December, 2011

ಅಗಲಿಕೆ

ನಾನು  ಇಲ್ಲಿ,  ನೀನು ಅಲ್ಲಿ
ಜೀವನ ಚಲ್ಲಾ ಪಿಲ್ಲಿ...
______________
ನೀ ಹೋದ ನಂತರ ಮನೆ ಖಾಲಿ ಖಾಲಿ
ಅಡುಗೆ ಮನೆಯಲ್ಲಿ ಮೌನ
ಅಂಗಳದಲ್ಲಿ ಇಲ್ಲ ರಂಗೋಲಿ...
______________
ನನ್ನ ಬಿಟ್ಟು ನೀ ದೂರವಾದೆ
ಈಗ ನಿನ್ನ ಸಂಸಾರ ಬೇರೆ 
ನನಗೆ ಅಗಲಿಕೆಯ ಉಡುಗೊರೆ....  
by ಹರೀಶ್ ಶೆಟ್ಟಿ, ಶಿರ್ವ