Wednesday, November 16, 2011

ಜಾತ್ರೆಯಲ್ಲಿ ಜ್ಯೂಸ್

ಶ್ರೀಹರಿ ತನ್ನ ೧೧  ಮಿತ್ರರೊಂದಿಗೆ ಕಾರ್ಕಳದ ಜಾತ್ರೆ ನೋಡಲು ಹೋಗಿದ್ದ. ಅವನ ಮಿತ್ರರಲ್ಲಿ ಒಬ್ಬ ಸಾರನಾಥ್ ಎಂಬ ತುಂಟ ಹುಡುಗನಿದ್ದ.

ಹೀಗೆಯೇ ಎಲ್ಲರೂ ಜಾತ್ರೆಯಲ್ಲಿ ತಿರುಗುತ ಅಲ್ಲಿ ಇದ್ದ ಸಣ್ಣ ಸಣ್ಣ ಅಂಗಡಿಗಳನ್ನು ನೋಡುತ ಬರುವಾಗ, ಸಾರಾನಾಥ್ ಒಮ್ಮೆಲ್ಲೆ " ಬನ್ನಿ ಗೆಳೆಯರೇ, ಆ ಜ್ಯೂಸ್ ಅಂಗಡಿಯಲ್ಲಿ ಹೋಗಿ ಜ್ಯೂಸ್  ಕುಡಿಯೋಣ " .

ಇದಕ್ಕೆ ಸಾರನಾಥನ ಜಿಪುಣ ಸ್ವಭಾವ ಅರಿತ ಶ್ರೀಹರಿಯ ಇನ್ನೊಬ್ಬ ಮಿತ್ರ ಯೋಗೇಶ್ "ಹೇ ...ಕಣ್ಣಯ್ಯ ....ಎಲ್ಲರಿಗೆ ನೀನು ಜ್ಯೂಸ್  ಕುಡಿಸುತಿ ...ಏನೋ "

ಅದಕ್ಕೆ ಸಾರನಾಥ್ ನಗುತ " ಹುಂ....ಹೌದು   ...ಬನ್ನಿ ಎಲ್ಲರೂ ಜ್ಯೂಸ್  ಕುಡಿಯಿರಿ, ನಾನು ಹಣ ಕೊಡುತ್ತೇನೆ, ಆದರೆ ಒಂದು ವಿಷಯ ಜ್ಯೂಸ್ ಕುಡಿದ ನಂತರ ನೀವು ಅಲ್ಲಿ ನಿಲ್ಲ ಬಾರದು, ಕೂಡಲೇ ಅಲ್ಲಿಂದ ಒಬ್ಬೊಬ್ಬರು ಕುಡಿದು ಅಲ್ಲಿಂದ ಹೋಗ ಬೇಕು "ಎಂದು ಹೇಳಿದ.

ಅವನು ಹೇಳಿದ ಮೇಲೆ ಎಲ್ಲ ಮಿತ್ರರು ಗುಂಪಾಗಿ ಹೋಗಿ ಜ್ಯೂಸ್ ಅಂಗಡಿಯವನಿಗೆ "ಜ್ಯೂಸ್  ಕೊಡಿ ಸ್ವಾಮಿ " ಎಂದು ಹೇಳಿ ಒಬ್ಬೊಬ್ಬರಾಗಿ  ಜ್ಯೂಸ್ ಕುಡಿದು ಅಲ್ಲಿಂದ ಪಲಾಯನ ಮಾಡಿದರು.

ಕೊನೆಗೆ ಸಾರನಾಥ್ ಜ್ಯೂಸ್ ಕುಡಿದ ನಂತರ ಜ್ಯೂಸ್ ಅಂಗಡಿಯವನಿಗೆ "ಎಷ್ಟು ಹಣ ಸ್ವಾಮಿ" ಎಂದು ಕೇಳಿದ.

ಜ್ಯೂಸ್ ಅಂಗಡಿಯವ " ೧೨೦ ರೂಪಾಯಿ ಸಾರ್ "

ಅದಕ್ಕೆ ಸಾರನಾಥ್ "ಏನೋ ೧೨೦ ರೂಪಾಯಿ ಅಂತ ಹೇಳುತ್ತಿದ್ದಿಯಲ್ಲ, ನಾನು ಒಂದೇ ಜ್ಯೂಸ್ ಕುಡಿದದ್ದು ಮಹರಾಯ".

ಅದಕ್ಕೆ ಅಂಗಡಿಯವ "ಹೌದು ಸಾರ್, ಒಂದು ಜ್ಯೂಸ್ ಹತ್ತು ರೂಪಾಯಿ, ಒಟ್ಟಿಗೆ ಹನ್ನೆರಡು ಜ್ಯೂಸ್ ೧೨೦ ರೂಪಾಯಿ ಆಗುತ್ತದೆಯಲ್ಲ ಸಾರ್ ".

ಅದಕ್ಕೆ ಸಾರನಾಥ್ "ಏನೋ ಅವರ ಹಣ ನಾನೇಕೆ ಕೊಡಬೇಕು  ಮಹರಾಯ, ಅವರೇನು ನನ್ನ ಮಾವನ ಮಕ್ಕಳ " ಎಂದು ಕೋಪದಿಂದ ನುಡಿದ.

ಅದಕ್ಕೆ ಜ್ಯೂಸ್  ಅಂಗಡಿಯವ "ಏನ್ ಸಾರ್, ಅವರು ನಿಮ್ಮೊಟ್ಟಿಗೆ ಬಂದದ್ದು ಅಲ್ಲವೇ "

ಸಾರನಾಥ್ " ನನ್ನೊಟ್ಟಿಗೆ ಬಂದದ್ದು ಅಂದರೆ ನಾನು ಹಣ ಕೊಡ ಬೇಕೇ, ಏನ್ ನೀವು ಹೇಳುವುದು ಸ್ವಾಮಿ " ಎಂದು ಬುಸುಗುಟ್ಟಿದ.

ಜ್ಯೂಸ್ ಅಂಗಡಿಯವ "ಆಗಲಿ ಸ್ವಾಮಿ , ನಿಮ್ ಹಣ ಕೊಡಿ, ಮೋಸ ಮಾಡಿ ಹೋದರು ಬೇವರ್ಸಿ ಹುಡುಗರು "  ಎಂದು ಕೋಪದಿಂದ ನುಡಿದ.

ಸಾರನಾಥ ತನ್ನ ಒಬ್ಬನ ಹಣ ಕೊಟ್ಟು ನಗು ನಗುತ ಅಲ್ಲಿಂದ ಕಾಲು ತೆಗೆದ.

ಈ ಎಲ್ಲ ವಿಷಯ ಸಾರನಾಥ್ ನಂತರ ಶ್ರೀಹರಿ ಹಾಗು ಅನ್ಯ ಮಿತ್ರರಿಗೆ ಹೇಳಿದ್ದು., ಶ್ರೀಹರಿಗೆ ಏನೋ ಸಾರ ನಾಥ ಮಾಡಿದ್ದು ಸರಿ ಅಲ್ಲ ಎಂದು ಎನಿಸಿದರು ಅವನ ತುಟಿಯಲ್ಲಿ ಒಂದು ಕಿರು ನಗು ಮೂಡಿತು.

by ಹರೀಶ್ ಶೆಟ್ಟಿ, ಶಿರ್ವ

2 comments:

  1. ha ha. Chennagide shetre.. Maklu en madidru adu hudgatikeyinda ashte. Adral ashtenu durbuddi iralla. Angdi avna bad luck ashte

    ReplyDelete
  2. ತುಂಬಾ ಧನ್ಯವಾದಗಳು ಪ್ರಶಸ್ತಿ .....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...